priyanka chopra : ಹೀಗ್ ಬಂದ್ ಹಾಗ್ ಹೋದ ಪ್ರಿಯಾಂಕ.. ರಾಯಲ್ ಲುಕ್ ನಲ್ಲಿ ಪಿಗ್ಗಿ ಮಿಂಚಿಂಗ್

By Roopa Hegde  |  First Published Aug 24, 2024, 11:21 AM IST

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಇಂಡಿಯನ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಸಹೋದರ ಸಿದ್ಧಾರ್ಥ್ ಚೋಪ್ರಾ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಪಿಗ್ಗಿ ಸಾರಿ ಸ್ಟೈಲ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
 


ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Desi girl Priyanka Chopra) ಸೀರೆಯಲ್ಲಿ ಮಿಂಚಿದ್ದಾರೆ. ಪಿಗ್ಗಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದಾ ತಮ್ಮ ಸ್ಟೈಲ್ ಹಾಗೂ ಆತ್ಮವಿಶ್ವಾಸಕ್ಕೆ ಹೆಸರುವಾಸಿಯಾಗಿರುವ ನಟಿ, ಈ ಬಾರಿ ಭಾರತಕ್ಕೆ ಬಂದಾಗ್ಲೂ ತಮ್ಮ ವಿಶೇಷ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಒಂದು ದಿನದ ಮಟ್ಟಿಗೆ ಇಂಡಿಯಾ (India)ಕ್ಕೆ ಬಂದಿದ್ದ ಪ್ರಿಯಾಂಕಾ, ಬೆಳಿಗ್ಗೆ ಬಂದು ತಡರಾತ್ರಿ ಫ್ಲೈಟ್ ಹತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ, ಬ್ರದರ್ ಸಿದ್ಧಾರ್ಥ್ ಚೋಪ್ರಾ (Siddharth Chopra), ಪ್ರೀ ವೆಡ್ಡಿಂಗ್ (Pre Wedding) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದರು. 

ಪ್ರಿಯಾಂಕಾ ಚೋಪ್ರಾ ಏಕೈಕ ಸಹೋದರ ಸಿದ್ಧಾರ್ಥ್ ಚೋಪ್ರಾ ಶೀಘ್ರದಲ್ಲೇ ನೀಲಂ ಉಪಾಧ್ಯಾಯ ಅವರನ್ನು ಮದುವೆಯಾಗಲಿದ್ದಾರೆ. ಪ್ರಿಯಾಂಕಾ ಚೋಪ್ರಾ, ಸಹೋದರನ ವಿವಾಹಪೂರ್ವ ಕಾರ್ಯಕ್ರಮ ನಡೆಯುತ್ತಿದೆ. ಆಗಸ್ಟ್ 23ರಂದು ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಿಯಾಂಕಾ, ಮೆಜೆಂಟಾ ಬಣ್ಣದ ಸೀರೆಯಲ್ಲಿ ಬಾರ್ಬಿ ಗೊಂಬೆಯಂತೆ ಮಿಂಚಿದ್ದಾರೆ. 

Tap to resize

Latest Videos

undefined

Saptami Gowda: ಕುದುರೆ ಏರಿ ಸವಾರಿ ಹೊರಟ ಸಪ್ತಮಿ ಗೌಡ

ಮೆಜೆಂಟಾ ಕಲರ್ ಸೀರೆ ಧರಿಸಿದ್ದ ಪ್ರಿಯಾಂಕ, ಮುತ್ತಿನ ಕಿವಿಯೋಲೆ ಜೊತೆ ಅದಕ್ಕೆ ಹೊಂದುವ ಲೇಯರ್ಡ್ ಪರ್ಲ್ ಚೋಕರ್ ನೆಕ್ಲೇಸ್ ಧರಿಸಿದ್ದರು. ಇದಕ್ಕೆ ತಕ್ಕಂತೆ ಕೂದಲನ್ನು ಬನ್ ನಿಂದ ಕಟ್ಟಿದ್ದ ಪ್ರಿಯಾಂಕ, ದಪ್ಪ ಕೆಂಪು ಲಿಪ್‌ಸ್ಟಿಕ್ ಮತ್ತು ಸ್ಮೋಕಿ ಐನೊಂದಿಗೆ ತನ್ನ ಮೇಕ್ಅಪ್ ಅನ್ನು ಕ್ಲಾಸಿಕ್ ಮಾಡಿದ್ರು. ಒಟ್ಟಾರೆ ಅವರ ನೋಟಕ್ಕೆ ರಾಯಲ್ ಟಚ್ ಸಿಕ್ಕಿತ್ತು. 

ನಿನ್ನೆ ಬೆಳಿಗ್ಗೆ ಪ್ರಿಯಾಂಕ ಮುಂಬೈಗೆ ಬಂದಿಳಿದಿದ್ದರು. ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದರು. ಫೋಟೋಕ್ಕೆ ಫೋಸ್ ನೀಡಿದ್ದ ಪಿಗ್ಗಿ ಏಕಾಂಗಿಯಾಗಿ ಭಾರತಕ್ಕೆ ಬಂದಿದ್ದರು. ನಿಕ್ ಜೊನಾಸ್ ಹಾಗೂ ಮಗಳನ್ನು ಬಿಟ್ಟು ಒಬ್ಬರೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ ತಡರಾತ್ರಿ ಮತ್ತೆ ಫ್ಲೈಟ್ ಹತ್ತಿದ್ದಾರೆ.

ಕಾರ್ಯಕ್ರಮದಿಂದ ಹೊರ ಬರ್ತಿದ್ದಂತೆ ಪಾಪರಾಜಿಗಳಿಗೆ ಗಡಿಬಿಡಿಯಲ್ಲಿಯೇ ಫೋಸ್ ನೀಡಿದ ಪ್ರಿಯಾಂಕ, ತಡವಾಗ್ತಿದೆ, ಬೇಗ ತೆಗೆಯಿರಿ ಎಂದ್ರು. ಮತ್ತೆ ಸಿಗ್ತೇನೆ ಎನ್ನುತ್ತ ಕಾರ್ ಹತ್ತಿದ್ರು. ಪ್ರಿಯಾಂಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ಲುಕ್ ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ.

ಡಿಸೆಂಬರ್ 1, 2018ರಂದು ನಿಕ್ ಜೊನಾಸ್ ಕೈ ಹಿಡಿದಿರುವ ಪ್ರಿಯಾಂಕ, ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ. ಅವರಿಗೆ ಮುದ್ದಾದ  ಬಾಲಿವುಡ್ ನಂತ್ರ ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ಪಿಗ್ಗಿ. ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮುಂಬರುವ ಚಿತ್ರ ದಿ ಬ್ಲಫ್ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಶೂಟಿಂಗ್ ಅನೇಕ ದಿನಗಳಿಂದ ನಡೆಯುತ್ತಿದ್ದು, ಪ್ರಿಯಾಂಕ ಆಸ್ಟ್ರೇಲಿಯಾದಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಪ್ರಿಯಾಂಕ, ಸಿನಿಮಾ ಹಾಗೂ ತಮ್ಮ ವೈಯಕ್ತಿಕ ಜೀವನದ ಅನೇಕ ಫೋಟೋಗಳನ್ನು ಹಂಚಿಕೊಳ್ತಿರುತ್ತಾರೆ. ಅವರು ಪತಿ ನಿಕ್ ಜೊನಾಸ್ ಹಾಗೂ ಮಗಳು ಮಾಲತಿ ಮೇರಿ ಜೊತೆ  ಕಳೆದ ಸುಂದರ ಕ್ಷಣಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಪ್ರಿಯಾಂಕಾ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದಿದ್ದು, ಈ ವಿಷ್ಯವನ್ನು ಅವರು ಸ್ಪಷ್ಟಪಡಿಸಿದ್ದರು.  

Kolkata rape and murder case: ಕೊಲ್ಕತ್ತಾ ಪ್ರಕರಣದ ನಂತ್ರ 6 ವರ್ಷದ ಮಗಳನ್ನು ನೆನೆದು ಒಂದು ಗಂಟೆ ಕಣ್ಣೀರಿಟ್ಟ ನಟ

ನಟಿ ಪ್ರಿಯಾಂಕ, ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದರು. ಪ್ರಿಯಾಂಕಾ ಕುಟುಂಬ ಭಾರತದಲ್ಲಿರುವ ಕಾರಣ ಅವರು ಆಗಾಗ ಭಾರತಕ್ಕೆ ಬರ್ತಿರುತ್ತಾರೆ. ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ, ನಟನೆ ಜೊತೆ  ಚಲನಚಿತ್ರ ನಿರ್ಮಾಪಕಿಯಾಗಿ ಕೆಲಸ ಮಾಡ್ತಿದ್ದಾರೆ. ಈಗ ಮರಾಠಿ ಚಿತ್ರ ಪಾನಿಯನ್ನು ಅವರ ನಿರ್ಮಾಣ ಸಂಸ್ಥೆ ಪರ್ಪಲ್ ಪೆಬಲ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಪಾನಿ ಇದೇ ಅಕ್ಟೋಬರ್ 18ರಂದು ತೆರೆಗೆ ಬರಲಿದೆ.  

 
 
 
 
 
 
 
 
 
 
 
 
 
 
 

A post shared by Voompla (@voompla)

click me!