
ಬಿ-ಟೌನ್‌ನ ಹೊಸ ಪೇರೆಂಟ್ ರಣಬೀರ್ ಕಪೂರ್ ಮತ್ತು ಆಲಿಯಾ ಬಟ್ ತಮ್ಮ ಮುದ್ದಾದ ಮಗಳು ರಾಹಾಳನ್ನು ಮೀಡಿಯಾದಿಂದ ದೂರು ಇರಿಸಿದ್ದಾರೆ. ನವೆಂಬರ್ 2022ರಲ್ಲಿ ಮಗಳು ಜನಿಸುತ್ತಿದ್ದಂತೆ ಪ್ಯಾಪರಾಜಿಗಳಿಗೆ ಪತ್ರ ಬರೆದು ಪೋಟೋ ಮತ್ತು ವಿಡಿಯೋ ಕ್ಲಿಕ್ ಮಾಡದಂತೆ ಮನವಿ ಮಾಡಿಕೊಂಡರು. ಒಂದು ದಿನ ಮನೆಯಲ್ಲಿ ವಿಶೇಷ ಭೋಜನ ವ್ಯವಸ್ಥೆ ಮಾಡಿ ಮಗಳನ್ನು ಪ್ಯಾಪರಾಜಿಗಳಿಗೆ ತೋರಿಸಿ ಕ್ಲಿಕ್ ಮಾಡದಂತೆ ಮತ್ತೊಮ್ಮೆ ಮನವಿ ಮಾಡಿಕೊಂಡರು. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ರಣಬೀರ್ ಕಪೂರ್ ತಮ್ಮ ಪುತ್ರಿ ಮತ್ತು ಪತ್ನಿ ಆಲಿಯಾ ಭಟ್ ಬಗ್ಗೆ ಮಾತನಾಡಿದ್ದಾರೆ.
'ಪೋಷಕರಾಗಿ ನಾವು ನಮ್ಮ ಮಗಳು ರಾಹಾಳ ಪ್ರೈವಸಿಯನ್ನು ಕಾಪಾಡುತ್ತೀವಿ. ಸಾಮಾನ್ಯರಂತೆ ಆಕೆಯೂ ಜೀವನ ಮಾಡಬೇಕು ಅನ್ನೋದು ನಮ್ಮ ಅಭಿಪ್ರಾಯ. ಶಾಲೆಗೆ ಹೋಗಬೇಕು, ಸ್ಪೇಷಲ್ ಕಿಡ್ ರೀತಿ ಸೌಲಭ್ಯಗಳು ಸಿಗಬಾರದು ಎಲ್ಲರಲ್ಲೂ ಅವಳು ಒಬ್ಬಳಾಗಿ ಬೆಳೆಯಬೇಕು. ತುಂಬಾ ನಾರ್ಮಲ್ ಲೈಫ್ ಬದುಕಬೇಕು. ಇದು ಹೊರತು ಪಡಿಸಿ ನಾವು ಆಕೆಗೆ ಯಾವ ರೂಲ್ಸ್ ಹಾಕುತ್ತಿಲ್ಲ. ರಾಹಾ ದೊಡ್ಡವಳಾಗಿ 4-5ವರ್ಷಗಳ ನಂತರ ಬಂದು ಯಾಕೆ ಯಾರೂ ನನ್ನ ಫೋಟೋ ಕ್ಲಿಕ್ ಮಾಡುತ್ತಿಲ್ಲ ಎಂದು ಕೇಳಬಾರದು. ಈ ರೀತಿ ಪ್ರಶ್ನೆನೂ ಆಕೆ ಕೇಳಬಹುದು ಎಂದು ನಾವು ಯೋಚನೆ ಮಾಡಿದ್ದೀವಿ. ಬೇಕಿದ್ದರೆ ಒಂದು ದಿನ ಆಕೆ ಬಂದು ಅಪ್ಪ ನೀವು ಜೇ ಮತ್ತು ತೈಮೂರ್‌ನ ನೋಡಿಲ್ವಾ ಅವರ ಫೋಟೋ ಎಷ್ಟು ಕ್ಲಿಕ್ ಮಾಡುತ್ತಾರೆ ಆದರೆ ಯಾರೂ ನನ್ನ ಫೋಟೋ ಕ್ಲಿಕ್ ಮಾಡುತ್ತಿಲ್ಲ ಅಂದ್ರೆ ಏನು ಹೇಳಬೇಕು' ಎಂದು ಕರೀನಾ ಕಪೂರ್ ಚಾಟ್ ಶೋನಲ್ಲಿ ರಣಬೀರ್ ಮಾತನಾಡಿದ್ದಾರೆ.
ನಾಲ್ಕು ತಿಂಗಳ ಮಗುವಿಗೆ 30 ಶೂಸ್ಗಳು: ಮಗಳ ಗುಟ್ಟೊಂದು ಹೇಳಿದ ನಟ ರಣಬೀರ್ ಕಪೂರ್
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂರ್ ಹುಟ್ಟಿದ ಕ್ಷಣದಿಂದ ಈವರೆಗೂ ಬಾಲಿವುಡ್ ಸ್ಟಾರ್ ಮಕ್ಕಳ ಪಟ್ಟೆಯಲ್ಲಿ ಯಾರೂ ಪಡೆಯದಷ್ಟು ಮೀಡಿಯಾ ಅಟೆನ್ಶನ್ ಪಡೆದಿದ್ದಾನೆ ಎಂದು ರಣಬೀರ್ ಹೇಳಿದ್ದಾರೆ. ಆಲಿಯಾ ಮತ್ತು ರಣಬೀರ್ ಇಬ್ಬರೂ ಸೆಲೆಬ್ರಿಟಿಗಳಾದ ಕಾರಣ ಜನರಿಗೆ ನಮ್ಮ ಪರ್ಸನಲ್ ಲೈಫ್ ತುಂಬಾನೇ ಇಷ್ಟವಾಗುತ್ತದೆ ನಾವು ಕಿರೀಟದ ಮೇಲೆ ಕುಳಿತುಕೊಂಡು ನೀವು ಫೋಟೋ ಕ್ಲಿಕ್ ಮಾಡಬೇಡಿ ಎಂದು ಆರ್ಡರ್ ಮಾಡಲಾಗದ ನಮ್ಮ ಗುಣವನ್ನು ತಪ್ಪಾಗಿ ನೋಡುತ್ತಾರೆಂದು ರಣಬೀರ್ ಹೇಳಿದ್ದಾರೆ.
'ಆಲಿಯಾ ಮಗು ನೋಡಿಕೊಳ್ಳುವ ವಿಚಾರದಲ್ಲಿ ಅತಿ ಹೆಚ್ಚು ಒತ್ತಡ ತೆಗೆದುಕೊಳ್ಳುತ್ತಾಳೆ. ಹೀಗಾಗಿ ನಾನು ತಾಳ್ಮೆಯಿಂದ ವರ್ತಿಸಬೇಕು. ನಾವು ಮಕ್ಕಳ ವಿಚಾರದಲ್ಲಿ ಓವರ್ ಆಗಿ ಕಾಪಾಡಿಕೊಳ್ಳಲು ಹೋಗಬಾರದು.ಹೀಗೆ ಮಾಡಬೇಡ ಅದನ್ನು ಮುಟ್ಟಬೇಡ ಇದನ್ನು ತಿನ್ನಬೇಡ ಅನ್ನೋದು ಕಡಿಮೆ ಮಾಡಬೇಕು ಏಕೆಂದರೆ ನನ್ನ ಪ್ರಕಾರ ಮನುಷ್ಯರು ಮತ್ತೊಬ್ಬರ ಜೊತೆ ಬೆರೆತರೆ ಮಾತ್ರ ಪ್ರಪಂಚ ಅರ್ಥವಾಗುವುದು ಹಾಗೇ ಮಕ್ಕಳು ಚೆನ್ನಾಗಿ ಆಟವಾಡಬೇಕು ಆಗ ಅವರ ಇಮ್ಯೂನಿಟಿ ಹೆಚ್ಚಾಗುತ್ತದೆ. ಯಾವ ಔಷಧಿನೂ ಬೇಡ. ಲೆಕ್ಕಾಚಾರ ಹಾಕಿ ಮಕ್ಕಳ ಬದುಕು ಕಟ್ಟಲು ಹೋದರೆ ನಾವು ಅವರ ಭವಿಷ್ಯಕ್ಕೆ ತೊಂದರೆ ತಂದಂತೆ....ಹೀಗಾಗಿ ನಾನು ಕೂಲ್ ತಂದೆ' ಎಂದಿದ್ದಾರೆ ರಣಬೀರ್.
ಮಗಳು 25 ವರ್ಷದವರೆಗೆ ಹೀಗಿರಬೇಕು ಎಂದಿದ್ದಾರೆ ನಟಿ Alia Bhatt!
ಮೊದಲ ಸಲ ಮಗುವನ್ನು ಎತ್ತಿಕೊಂಡ ಕ್ಷಣ ಹೇಗಿತ್ತು ಎಂದು ಕರೀನಾ ಪ್ರಶ್ನೆ ಮಾಡಿದ್ದಾರೆ. 'ಮಗು ಹೊರ ಬರುತ್ತಿದ್ದಂತೆ ಆಕೆಯ ಕರುಳ ಬಳಿಯನ್ನು ಕಟ್ ಮಾಡಲಾಗಿತ್ತು. ಕಟ್ ಮಾಡಿದ ಕ್ಷಣವೇ ನನ್ನ ಕೈಗೆ ರಾಹಾಳನ್ನು ಕೊಟ್ಟರು. ನನ್ನ ಜನ್ಮ ಪೂರ್ತಿ ಈ ಕ್ಷಣವನ್ನು ನೆನಪು ಇಟ್ಟಿಕೊಳ್ಳುವೆ. 7000 ಸಾವಿರ ನಕ್ಷತ್ರಗಳು ನನ್ನ ಕೈಯಲ್ಲಿದ್ದ ಕ್ಷಣ' ಎಂದು ರಣಬೀರ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.