Divya Khosla Kumar: ಶೂಟಿಂಗ್​ ವೇಳೆ ಅವಘಡ- ಬಾಲಿವುಡ್​ ನಟಿಗೆ ಗಾಯ

By Suvarna NewsFirst Published Mar 15, 2023, 5:42 PM IST
Highlights

ಯಾರಿಯಾನ್ 2 ಚಿತ್ರದ ಶೂಟಿಂಗ್​ ಸಮಯದಲ್ಲಿ ನಟಿ-ನಿರ್ದೇಶಕಿ ದಿವ್ಯಾ ಖೋಸ್ಲಾ ಕುಮಾರ್ ಅವರಿಗೆ ಗಾಯಗಳಾಗಿದ್ದು, ಅದರ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 

ನಟಿ-ನಿರ್ದೇಶಕಿ ದಿವ್ಯಾ ಖೋಸ್ಲಾ ಕುಮಾರ್ (Divya Khosla Kumar) ಬಾಲಿವುಡ್‌ನಲ್ಲಿ ಬಹಳ ಪ್ರಸಿದ್ಧವಾದ ಹೆಸರು. ಅವರು ಅನೇಕ ಆಲ್ಬಂಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದ್ಯ, ದಿವ್ಯಾ ತಮ್ಮ ಮುಂಬರುವ ಪ್ರಾಜೆಕ್ಟ್‌ನ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ನಡುವೆ ದಿವ್ಯಾ ತಮ್ಮ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದು ಅಭಿಮಾನಿಗಳು ಶಾಕ್​ ಆಗಿದ್ದಾರೆ. ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ  ಗಾಯಗಳೊಂದಿಗೆ ಅನೇಕ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಫೋಟೋದಲ್ಲಿ ಅವರ ಮುಖದ ಮೇಲೆ ಗಾಯದ ಗುರುತುಗಳನ್ನು ಕಾಣಬಹುದು. ಅವರ ಮುಖದ ಮೇಲೆ ಗಾಯದಿಂದಾಗಿ, ಸಾಕಷ್ಟು ಕೆಂಪು ಗುರುತು ಇದೆ. ಒಂದು ಚಿತ್ರದಲ್ಲಿ, ಅವರ ಕಣ್ಣುಗಳು ಸಹ ತೇವವಾಗಿ ಕಾಣುತ್ತವೆ. ಈ ಫೋಟೋಗಳನ್ನು ಹಂಚಿಕೊಂಡ ದಿವ್ಯಾ, "ನನ್ನ ಮುಂಬರುವ ಪ್ರಾಜೆಕ್ಟ್‌ಗಾಗಿ ಆಕ್ಷನ್ ಸೀಕ್ವೆನ್ಸ್ ಯಾರಿಯಾನ್​ 2 ಚಿತ್ರೀಕರಣ ಮಾಡುವಾಗ ನಾನು ತೀವ್ರವಾಗಿ ಗಾಯಗೊಂಡಿದ್ದೇನೆ. ಆದರೆ ಪ್ರದರ್ಶನ ಮುಂದುವರಿಯಬೇಕು. ನಿಮ್ಮೆಲ್ಲರ ಆಶೀರ್ವಾದ ಮತ್ತು ಗುಣಪಡಿಸುವ ಶಕ್ತಿ ಬೇಕು. ದಿವ್ಯಾ ಅವರ ಈ ಚಿತ್ರಗಳು ವೈರಲ್ ಆದ ನಂತರ, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ಇನ್ನು ಕೆಲವರು ಇದೇನು ಅಂಥ ದೊಡ್ಡ ಗಾಯವಲ್ಲ ಬಿಡಿ ಎಂದಿದ್ದಾರೆ. 

ಇತ್ತೀಚೆಗೆ ದಿವ್ಯಾ ಖೋಸ್ಲಾ ಕುಮಾರ್ ಅವರು ತಮ್ಮ ಬಹು ನಿರೀಕ್ಷಿತ ಸೀಕ್ವೆಲ್ 'ಯಾರಿಯನ್ 2' (Yaariyan 2) ಚಿತ್ರೀಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಚಿತ್ರವನ್ನು ಲಂಡನ್​ನಲ್ಲಿ  ಚಿತ್ರೀಕರಿಸಲಾಗುವುದು ಎಂದು ಬರೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವಾಸ್ತವ್ಯದ ಫೋಟೋವನ್ನು ಹಂಚಿಕೊಂಡ ಅವರು, 'ನನ್ನ ಬಗ್ಗೆ ಎಲ್ಲವನ್ನೂ ತಿಳಿದಿರುವ ಅದ್ಭುತ ಅನುಯಾಯಿಗಳನ್ನು ನಾನು ಹೊಂದಿದ್ದೇನೆ. ನನ್ನ ಕೊನೆಯ ಪೋಸ್ಟ್‌ ಹಾಕಿದ್ದಾಗ ಹಲವರು ನಾನು ಎಲ್ಲಿದ್ದೇನೆ ಎಂದು ಕೇಳಿದ್ದರು. ಅವರಿಗಾಗಿ ಈಗ ಬರೆಯುತ್ತಿದ್ದೇನೆ' ಎಂದಿರುವ ನಟಿ,  ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಚಿತ್ರಕ್ಕಾಗಿ ನಾನು ಇಂಗ್ಲೆಂಡ್​ನಲ್ಲಿ ಇದ್ದೇನೆ.  ಇದಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು ಎಂದಿದ್ದಾರೆ.

Latest Videos

Amitabh Bachchan: ಪಕ್ಕೆಲುಬಿನ ಕಾರ್ಟಿಲೆಜ್ ಮುರಿದು ನೋವಾಗ್ತಿದೆ: ಆರೋಗ್ಯದ ಬಗ್ಗೆ ಅಮಿತಾಭ್​ ಹೇಳಿದ್ದೇನು?
 
'ಯಾರಿಯನ್ 2' ಮೂಲಕ ಏಳು ವರ್ಷಗಳ ನಂತರ ದಿವ್ಯಾ ಮತ್ತೆ ಮರಳುತ್ತಿದ್ದಾರೆ. Yaariyan 2 ಈ ವರ್ಷ 20 ಅಕ್ಟೋಬರ್ 2023 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ದಿವ್ಯಾ ಖೋಸ್ಲಾ ಏಳು ವರ್ಷಗಳ ನಂತರ ನಿರ್ದೇಶಕಿಯಾಗಿ ಪುನರಾಗಮನ ಮಾಡುತ್ತಿದ್ದಾರೆ. ಅವರ ಕೊನೆಯ ನಿರ್ದೇಶನದ ಚಿತ್ರ 'ಸನಮ್ ರೇ' (2016). ಪುಲ್ಕಿತ್ ಸಾಮ್ರಾಟ್, ಯಾಮಿ ಗೌತಮ್ ಮತ್ತು ಊರ್ವಶಿ ರೌಟೇಲಾ (Urvashi Routela) ಈ ಚಿತ್ರದಲ್ಲಿ ನಟಿಸಿದ್ದಾರೆ.  'ಯಾರಿಯನ್ 2' ಚಿತ್ರದ ತಾರಾ ಬಳಗದ ಬಗ್ಗೆ ಹೇಳುವುದಾದರೆ,  ಈ ಚಿತ್ರದಲ್ಲಿ ಮೀಜಾನ್ ಜಾಫ್ರಿ, ವಾರಿನಾ ಹುಸೇನ್, ಅನಸ್ವರ ರಾಜನ್, ಪರ್ಲ್ ವಿ ಪುರಿ ನಟಿಸಿದ್ದಾರೆ. ಇವರ ಜೊತೆ  ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ ನಟಿ  ಪ್ರಿಯಾ ಪ್ರಕಾಶ್ ವಾರಿಯರ್. ಚಿತ್ರದ ನಿರ್ಮಾಪಕರು ಭೂಷಣ್ ಕುಮಾರ್, ಕೃಷ್ಣ ಕುಮಾರ್, ದಿವ್ಯ ಕುಮಾರ್ ಖೋಸ್ಲಾ ಮತ್ತು ಆಯುಷ್ ಮಲ್ಹೋತ್ರಾ.

ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಳ್ಳುವವ ಸಂಖ್ಯೆ ಹೆಚ್ಚುತ್ತಿದೆ. ಬಾಲಿವುಡ್ ಬಿಗ್​ ಬಿ ಅಮಿತಾಭ್ ಬಚ್ಚನ್ (Amitabh Bachchan) ಇದೇ 6ರಂದು ಶೂಟಿಂಗ್ ವೇಳೆ ಗಾಯಗೊಂಡಿದ್ದು, ಇನ್ನೂ ರೆಸ್ಟ್​ನಲ್ಲಿದ್ದಾರೆ.  ಪ್ರಭಾಸ್ ಮತ್ತು ದೀಪಿಕಾ ನಟನೆಯ 'ಪ್ರಾಜೆಕ್ಟ್ ಕೆ' (Projeck K) ಸಿನಿಮಾದ ನಿಮಿತ್ತ ಹೈದರಾಬಾದ್ ನಲ್ಲಿ ಶೂಟಿಂಗ್​ನಲ್ಲಿ  ಅಮಿತಾಭ್  ಭಾಗಿಯಾಗಿದ್ದರು. ಚಿತ್ರೀಕಕಣದ ಆಕ್ಷನ್ ದೃಶ್ಯದ ಚಿತ್ರೀಕರಣ ವೇಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಅವರೇ ತಮ್ಮ ಬ್ಲಾಕ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಪಕ್ಕೆಲುಬಿಗೆ ಬಲವಾಗಿ ಏಟು ಬಿದ್ದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅಮಿತಾಭ್ ಹೈದರಾಬಾದ್‌ನಿಂದ ಮುಂಬೈಗೆ ತೆರಳಿದ್ದು ಜಲ್ಸಾ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ, 'ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದಲ್ಲಿ, ಆಕ್ಷನ್ ಶಾಟ್ ಸಮಯದಲ್ಲಿ, ನಾನು ಗಾಯಗೊಂಡಿದ್ದೇನೆ, ಹೈದರಾಬಾದ್‌ನಲ್ಲಿ. ಮನೆಗೆ ಹಿಂತಿರುಗಿದ್ದೇನೆ. ಸ್ಟ್ರಾಪಿಂಗ್ ಮಾಡಲಾಗಿದೆ ಸದ್ಯ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ' ಎಂದು ಬರೆದುಕೊಂಡಿದ್ದರು. 

Pawan Kalyan ಡೇಲಿ ಇಷ್ಟು ದುಡೀತಾರಾ? ಮಾತು ಕೇಳಿ ಫ್ಯಾನ್ಸ್​ ಶಾಕ್​!

 

click me!