ಇಂಡೋನೇಷಿಯಾದ ಬಾಲಿ ಪ್ರವಾಸದಲ್ಲಿರುವ ನಟಿ ಸಮಂತಾ ರುತ್ ಪ್ರಭು ಅವರ ಸನ್‌ಗ್ಲಾಸ್ ಕೋತಿ ತೆಗೆದುಕೊಂಡು ಎಸ್ಕೇಪ್ ಆಗಿದ್ದರೆ, ಇನ್ನೊಂದೆಡೆ ನಟಿ ಮೈನಸ್ 4 ಡಿಗ್ರಿಯಲ್ಲಿ ಐಸ್ನೀರಿನಲ್ಲಿ ಸ್ನಾನ ಮಾಡಿದ್ದಾರೆ.
ನಟಿ ಸಮಂತಾ ರುತ್ ಪ್ರಭು, (Samantha Ruth Prabhu) ಇಂಡೋನೇಷಿಯಾದ ಬಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅವರು ಅಲ್ಲಿನ ಸುಂದರ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬಾಲಿ ಪ್ರವಾಸದ ಸಮಯದಲ್ಲಿ, ಸಮಂತಾ ಅಲ್ಲಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಉಲುವಾಟು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಸನ್‌ಗ್ಲಾಸ್ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ. ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ ಆ ಫೋಟೋಶೂಟ್ ಮಾಡಿರುವ ಸಮಯದಲ್ಲಿ ಅವರ ಹಿಂಭಾಗದಲ್ಲಿ ಒಂದು ಕೋತಿಯನ್ನು ನೋಡಬಹುದು. ದುಬಾರಿ ಸನ್‌ಗ್ಲಾಸ್ ಜೊತೆ ಫೋಟೋಶೂಟ್ ಮಾಡಿಸುತ್ತಿದ್ದಂತೆಯೇ ಅದನ್ನು ಕೋತಿ ಕದ್ದುಕೊಂಡು ಎಸ್ಕೇಪ್ ಆಗಿದೆ ಎಂದು ನಟಿ ಹೇಳಿದ್ದಾರೆ. ಇದಕ್ಕೂ ಮುನ್ನ ಕೋತಿಯ ಜೊತೆ ಸಮಂತಾ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅದನ್ನು ಶೇರ್ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಕೋತಿ ತಮ್ಮ ಸನ್ಗ್ಲಾಸ್ನೊಂದಿಗೆ ಪರಾರಿಯಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
ಅಮೆಜಾನ್ಗೆ ಬಿಗ್ಶಾಕ್ ನೀಡಿದ ಪ್ರಿಯಾಂಕಾ ಚೋಪ್ರಾ! ಸಮಂತಾಗೂ ಶುರುವಾಯ್ತು ಸಂಕಟ
ಕೋತಿ ಸನ್‌ಗ್ಲಾಸ್ ಒಯ್ಯುವುದಕ್ಕಿಂತ ಮುಂಚೆ ನಟಿ, ಮಂಗನ (Monkey) ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟಿರುವುದನ್ನು ನೋಡಬಹುದುದ. ಮಂಗನನ್ನು ಭುಜದ ಮೇಲೆ ಕೂರಿಸಿಕೊಂಡು ಗಾಗಲ್ಸ್ ಹಾಕಿ ಫನ್ನಿಯಾಗಿ ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭ ನಟಿ ವೈಟ್ ಕ್ಯಾಪ್ ಕೂಡ ಧರಿಸಿಕೊಂಡಿದ್ದರು. ಇನ್ನೊಂದು ಚಿತ್ರದಲ್ಲಿ ಮಂಗ ತಾನೆ ಮೊಬೈಲ್ ಹಿಡಿದುಕೊಂಡು ಸೆಲ್ಫಿ ಕ್ಲಿಕ್ ಮಾಡಿದೆ. ಅದಕ್ಕೆ ಸಮಂತಾ ಸಕತ್ ಪೋಸ್ ಕೊಟ್ಟಿದ್ದರೆ, ಮಂಗ ಕೂಡಾ ಕ್ಯಾಮೆರಾ ಬಟನ್ ಕ್ಲಿಕ್ ಮಾಡುತ್ತಾ ಬಾಯ್ತೆರೆದುಕೊಂಡು ಪೋಸ್ ಕೊಟ್ಟಿದೆ. ಇದಾದ ಬಳಿಕ, ಸನ್ಗ್ಲಾಸ್ನೊಂದಿಗೆ ಎಸ್ಕೇಪ್ ಆಗಿದೆ. ಇತ್ತಿಚೆಗೆ ಸಮಂತಾ ಏನು ಮಾಡಿದರೂ ಟ್ರೆಂಡಿಂಗ್ ಆಗಿತ್ತಿದೆ. ಈ ವೇಳೆ ಮಂಗಗಳೂ ಆಕೆಗೆ ತೊಂದರೆ ನೀಡಿದ ಘಟನೆಯನ್ನು ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಾಲಿ (Bali) ಬಳಿಯ ಉಲುವಾಟುಗೆ ಭೇಟಿ ಈ ಬಾರಿ ಬಹಳ ಆಶ್ಚರ್ಯಕರವಾಗಿತ್ತು ಎಂದಿರುವ ನಟಿ, ಈ ಪ್ರವಾಸದಲ್ಲಿ ಫೋಟೋಗೆ ಪೋಸ್ ನೀಡುತ್ತಿದ್ದಾಗ ಪಕ್ಕದಲ್ಲಿದ್ದ ಮಂಗವೊಂದು ಅವರ ಕೂಲಿಂಗ್ ಗ್ಲಾಸ್ ಹಿಡಿದಿತ್ತು. ಕೂಲಿಂಗ್ ಗ್ಲಾಸ್‌ನೊಂದಿಗೆ ಹಂಚಿಕೊಂಡ ಫೋಟೋದಲ್ಲಿ ತಮಾಷೆಯ ಕೋತಿ ಕೂಡ ಕಾಣಿಸಿಕೊಂಡಿದೆ. ಕೋತಿಗಳ ಗುಂಪೊಂದು ಸದ್ದು ಮಾಡುತ್ತಿರುವ ವಿಡಿಯೋವನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಕೋತಿಯಿಂದ ಸಮಂತಾ ಸನ್‌ಗ್ಲಾಸ್‌ಗಳನ್ನು ಪಡೆಯಲು ವಿಫಲ ಪ್ರಯತ್ನವನ್ನು ತೋರಿಸುತ್ತದೆ.
ಇದಾದ ಬಳಿಕ, ನಟಿ ಕೊರೆಯುವ ಚಳಿಯಲ್ಲಿ ಮೈನ್ 4 ಡಿಗ್ರಿಯಲ್ಲಿ ಆರು ನಿಮಿಷಗಳ (Six Minutes ) ಕಾಲ ಕುಳಿತಿದ್ದು, ಅದರ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ಇದು ಐಸ್ ಸ್ನಾನವಾಗಿದೆ. ಸ್ನಾಯು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ. ಇದೇ ಕಾರಣಕ್ಕೆ ಸಮಂತಾ ಐಸ್ ಬಾತ್ ತೆಗೆದುಕೊಂಡಿದ್ದಾರೆ. ಆರು ನಿಮಿಷಗಳ ಕಾಲ ಮೈನಸ್ 4 ಡಿಗ್ರಿಯಿರುವ ಐಸ್ ನೀರಿನಲ್ಲಿ ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಇನ್ನು ಇವರ ಮುಂಬರುವ ಚಿತ್ರದ ಬಗ್ಗೆ ಹೇಳುವುದಾದರೆ, ಸಮಂತಾ ಮುಂದೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಅವರು ವರುಣ್ ಧವನ್ ಜೊತೆಗೆ ಜಾಗತಿಕ ಸ್ಪೈ ಥ್ರಿಲ್ಲರ್ ಸರಣಿ ಸಿಟಾಡೆಲ್‌ನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.