ಫ್ಯಾಷನ್ ಷೋ ಒಂದರಲ್ಲಿ ಕಿಯಾರಳಿಗೆ ಸಪೋರ್ಟ್ ಮಾಡಿದ ಅತ್ತೆಯಿಂದ ಸ್ವೀಟ್ ಕಿಸ್: ಅತ್ತೆ-ಸೊಸೆ ಹೀಗಿರ್ಬೇಕು ಅಂತಿದ್ದಾರೆ ಫ್ಯಾನ್ಸ್
ಕೆಲ ತಿಂಗಳ ಹಿಂದೆ ಮದುವೆಯಾಗಿರೋ ನಟಿ ಕಿಯಾರಾ ಅಡ್ವಾಣಿ ಸದ್ಯ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ 2021ರಿಂದ ಡೇಟಿಂಗ್ (Dating) ಮಾಡಲು ಪ್ರಾರಂಭಿಸಿದ್ದ ನಟಿ, ಕಳೆದ ಫೆಬ್ರವರಿ 7 ರಂದು ರಾಜಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಕೈಯಲ್ಲಿ ಕೆಲವೊಂದು ಚಿತ್ರಗಳಿದ್ದರೂ ಅತ್ತೆ ಮನೆಯಲ್ಲಿ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ನಟಿ ಕಿಯಾರಾ. ಇತ್ತೀಚೆಗೆ ಅವರು, ಅತ್ತೆಯನ್ನು ಇಂಪ್ರೆಸ್ ಮಾಡಲು ತಾವು ಏನು ಮಾಡಿದ್ದು ಎಂದು ಹೇಳಿಕೊಂಡಿದ್ದರು. ಅತ್ತೆಯನ್ನು ಇಂಪ್ರೆಸ್ ಮಾಡಲು ಅತ್ತೆ ಅರ್ಥಾತ್ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ತಾಯಿಗೆ ಪಾನಿ ಪುರಿ ಮಾಡಿಕೊಟ್ಟಿದ್ದರಂತೆ. ಸಿದ್ಧಾರ್ಥ್ ಅವರ ತಾಯಿಗೆ ಪಾನಿ ಪುರಿ (Pani Puri) ತುಂಬಾ ಇಷ್ಟವಂತೆ. ಈ ವಿಷ್ಯ ತಿಳಿದಿದ್ದ ಕಿಯಾರಾ ಅಡ್ವಾಣಿ, ಅತ್ತೆಯನ್ನು ಮೆಚ್ಚಿಸಲು ಪಾನಿಪುರಿಯನ್ನು ತಾವೇ ರೆಡಿ ಮಾಡಿ ನೀಡಿದ್ದರಂತೆ. ಮದುವೆಯಲ್ಲಿ ಪಾನಿಪುರಿ ಪ್ರತ್ಯೇಕ ಸ್ಟಾಲ್ ಕೂಡ ಇಡಲಾಗಿತ್ತು ಎನ್ನುವ ಕಿಯಾರಾ, ಅತ್ತೆ ಮುಂಬೈಗೆ ಬಂದಾಗೆಲ್ಲ ಪಾನಿಪುರಿ ತಿನ್ನಿಸದೆ ಕಳಿಸೋದಿಲ್ಲ ಎಂದಿದ್ದರು. ಅತ್ತೆ ಮುಂಬೈಗೆ ಬಂದ ಮೊದಲ ದಿನ ಅವರು ಪಾನಿಪುರಿ ತಿನ್ನಲೇಬೇಕು. ಅವರಿಗೆ ಯಾವ ಸ್ಟ್ರೀಟ್ ಫುಡ್ ಇಷ್ಟ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ ಎಂದಿದ್ದರು.
ಇದೀಗ ಈ ಅತ್ತೆ-ಸೊಸೆಯ ಇನ್ನೊಂದು ವಿಡಿಯೋ ಸಕತ್ ವೈರಲ್ ಆಗಿದೆ. ಇದರಲ್ಲಿ ನಟಿ ಕಿಯಾರಾ, ದೆಹಲಿಯಲ್ಲಿ ನಡೆದ ಇಂಡಿಯಾ ಕೌಚರ್ ವೀಕ್‌ನಲ್ಲಿ ಡಿಸೈನರ್‌ಗಳಾದ ಫಲ್ಗುಣಿ ಮತ್ತು ಶೇನ್ ಪೀಕಾಕ್ ಜೊತೆ ಫ್ಯಾಷನ್ ಷೋನಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಆಕೆಯ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಬರಲಿಲ್ಲ. ಆದರೆ ಅತ್ತೆ ರಿಮ್ಮಾ ಮಲ್ಹೋತ್ರಾ (Rimma Malhotra) ಸೊಸೆಯನ್ನು ಹುರಿದುಂಬಿಸಲು ಫ್ಯಾಷನ್ ಷೋಗೆ ಬಂದಿದ್ದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ರೀಮಾ ತಮ್ಮ ಸುಂದರ ಸೊಸೆಗೆ ಮುತ್ತು ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅತ್ತೆಯನ್ನು ಇಂಪ್ರೆಸ್ ಮಾಡೋದು ಹೇಗೆ? ಮೊನ್ನೆ ಮೊನ್ನೆ ಮದ್ವೆಯಾದ ಕಿಯಾರಾ ಆಡ್ವಾಣಿ ಹೇಳ್ತಾರೆ!
ಪಾಪರಾಜೋ ವೈರಲ್ ಭಯಾನಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಕಿಯಾರಾ ಅವರು ಫ್ಯಾಷನ್ ಶೋ ಮುಗಿಸಿ ಹೊರಡುವಾಗ ಅತ್ತೆಯನ್ನು ತಬ್ಬಿಕೊಳ್ಳುತ್ತಿರುವುದನ್ನು ನೋಡಬಹುದು. ಕಿಯಾರಾ, ಗುಲಾಬಿ ಬಣ್ಣದ ಮಿನುಗುವ ಸ್ಲಿಟ್ ಸ್ಕರ್ಟ್ ಧರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅತ್ತೆ-ಸೊಸೆಯ ಈ ಬಾಂಧವ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಅತ್ತೆ-ಸೊಸೆ ಎಂದರೆ ಹೀಗಿರಬೇಕು ಎಂದು ಹಲವರು ಹೇಳುತ್ತಿದ್ದರೆ, ಕಿಯಾರಾ ಅವರ ಬಟ್ಟೆಯನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಅತ್ತೆಯ ಮುಂದೆ ಈ ರೀತಿಯ ಬಟ್ಟೆ ಧರಿಸಿಕೊಂಡು ಹೋಗಿರುವುದು ಸರಿಯಾದುದಲ್ಲ ಎಂದಿದ್ದಾರೆ.
ಸದ್ಯ ಕಿಯಾರಾ ಅವರ ಚಿತ್ರದ ವಿಷಯ ಮಾತನಾಡುವುದಾರೆ, ಕಿಯಾರಾ ಕೊನೆಯದಾಗಿ ಕಾರ್ತಿಕ್ ಆರ್ಯನ್ ಜೊತೆಗೆ ಸತ್ಯಪ್ರೇಮ್ ಕಿ ಕಥಾದಲ್ಲಿ ಕಾಣಿಸಿಕೊಂಡರು. ಸಮೀರ್ ವಿದ್ವಾನ್ಸ್ ನಿರ್ದೇಶನದ ಈ ಚಿತ್ರವು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದೆ. ಮುಂದೆ, ನಟಿ ರಾಮ್ ಚರಣ್ ಎದುರು ಗೇಮ್ ಚೇಂಜರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬರುವ ರಾಜಕೀಯ ಆಕ್ಷನ್ ಥ್ರಿಲ್ಲರ್ ಅನ್ನು ಎಸ್ ಶಂಕರ್ ನಿರ್ದೇಶಿಸಿದ್ದಾರೆ.
Satyaprem Ki Katha: ಕಿಯಾರಾ-ಕಾರ್ತಿಕ್ ರೊಮ್ಯಾನ್ಸ್ ನೋಡಿ ಪತಿ ಸಿದ್ಧಾರ್ಥ್ ಹೇಳಿದ್ದೇನು?