
ಸೋಷಿಯಲ್ ಮೀಡಿಯಾಗಳು (Social Media) ಇತ್ತೀಚೆಗೆ ಮಾಡುತ್ತಿರುವ ಅವಾಂತರಗಳು ಒಂದೆರಡಲ್ಲ. ಯಾವುದೇ ಒಂದು ಸಂಗತಿಯನ್ನು ಸೆನ್ಸೇಷನ್ ಮಾಡುವುದು, ಯಾರನ್ನೋ ಟಾರ್ಗೆಟ್ ಮಾಡಿ ತುಂಬಾ ಮೇಲೇರಿಸಲು ಪ್ರಯತ್ನ ಪಡುವುದು. ಅಥವಾ, ಯಾರನ್ನೋ ಕೆಳಗೆ ತಳ್ಳಿ ತುಳುಯಲು ಯತ್ನಿಸುವುದು. ಇನ್ನೂ ಕೆಲವೊಮ್ಮೆ ಯಾರೋ ಒಬ್ಬರನ್ನು ಮೇಲೇರಿಸಿ ಮತ್ತೆ ಕೆಳಗಿಳಿಸಿ ಮಜಾ ತೆಗೆದುಕೊಳ್ಳುವುದು. ಹೀಗೆ ಸೋಷಿಯಲ್ ಮೀಡಿಯಾ ಆಟಗಳು ಒಂದೆರಡಲ್ಲ.
ಇತ್ತೀಚಿನ ಹಲವು ವರ್ಷಗಳಲ್ಲಿ ನಡೆದ ಬದಲಾವಣೆಯನ್ನೇ ಗಮನಸಿದರೆ ಅದು ಯಾರಿಗಾದರೂ ಅರ್ಥವಾಗುತ್ತದೆ. 'ಹಳ್ಳಿ ಹೈದ ಪ್ಯಾಟೆಗ್ ಬಂದ' ರಿಯಾಲಿಟಿ ಶೋ ಇರಬಹುದು ಅಥವಾ ಪ್ಯಾಟೆ ಮಂದಿ ಕಾಡಿಗ್ ಹೋದ್ರು' ಶೋ ಇರಲಿ, ಅಲ್ಲೆಲ್ಲಾ ಗೆದ್ದವರ ಕಥೆ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತು. ಹಳ್ಳಿ ಹೈದ ರಾಜೇಶ್ (ಜಂಗಲ್ ಜಾಕಿ) ತನ್ನ ತಲೆಯ ಮೇಲೆ ಬಿದ್ದ ಭಾರವನ್ನು ತಡೆಯಲಾಗದೇ ಡಿಪ್ರೆಶನ್‌ನಿಂದ ಸತ್ತೇ ಹೋದ. ಇನ್ನುಳಿದವರ ಪಾಡು ಆರಕ್ಕೇರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬಂತಾಯ್ತು.
ಮಹಾಕುಂಭ ಮೇಳದಲ್ಲಿ ಭಾಗಿಯಾದ ಸಾಧುಸಂತರ ಬಗ್ಗೆ 'ಹೀಗೆ' ವೈರಲ್ ಆಗ್ತಿದೆ!
'ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್‌ನ ಫೋಟೋ ಒಂದು ಓಡಾಡುತ್ತಿದೆ.
ಜಂಗಲ್ ಜಾಕಿ ರಾಜೇಶ್ ಸತ್ತೋದ..
ಕಚ್ಚಾ ಬದಾಮ್ ಅಂಕಲ್ ಎಲ್ಲೋದ್ರೋ ಗೊತ್ತಿಲ್ಲ..
ತೇರಿ ಮೇರಿ ಹಾಡಿದ ರಾನು ಮಂಡಲ್ ಆಂಟಿ ಕೂಡ ಸುದ್ದಿಲಿ ಇಲ್ಲ..
ಕಾಫಿ ನಾಡು ಚಂದು ಮರೆಯಾದ.. ಹುಚ್ಚ ವೆಂಕಟ್‌ಗೆ ಹುಚ್ಚು ಹಿಡಿತು..
ಈಗ ನೋಡಿ, ಮೊನಾಲಿಸಾ ಸರದಿ....!
ಶ್ರಮ ಇಲ್ದೇ ರಾತ್ರೋ ರಾತ್ರಿ ಬಂದೋರು, ಸ್ವಲ್ಪ ಕಾಲದ ಬಳಿಕ ರಾತ್ರೋ ರಾತ್ರಿನೇ ಮರೆಯಾಗ್ತಾರೆ.. ಪಾಪ ನಮ್ ಹುಡುಗ್ರು ಸಹಜ ಸುಂದರಿ ಅಂತ ಹೊಗಳ್ತ ಇದ್ರೆ ಆ ಪೆಕ್ರು ಹೋಗಿ ಬ್ಯೂಟಿ ಪಾರ್ಲರ್‌ನಲ್ಲಿ ಕುಂತೈತೆ..' ಎಂದು ಸ್ಟೇಟ್‌ಮೆಂಟ್ ಫೋಟೋ ಸ್ಟೋರಿ ಒಂದನ್ನು 'ಸುರಸುಂದ್ರ ಅವಿನಾಶ್ (Surasundra Avinash) ಅವರು ತಮ್ಮ ಸೋಷಿಯಲ್ ಮೀಡಿಯಾ, ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಣಿಸರ ಮಾರುತ್ತಿದ್ದ ಸುಂದರಿ ಮೊನಾಲಿಸಾ ಮುಂದಿನ ಭವಿಷ್ಯವೇನು?
ಈ ಬರಹ ತಮಾಷೆಗಾಗಿ ಎನಿಸಿದರೂ ಅದರಲ್ಲಿ ಸತ್ಯವಾಗಿಯೂ ಶುದ್ಧವಾದ ಸತ್ಯವಿದೆ ಎನ್ನಬಹುದು. ಅದೆಷ್ಟೋ ಬಾರಿ, ಎಲ್ಲರಂತೆ ಇಲ್ಲದ, ಕೆಲವೊಮ್ಮೆ ಸಮಸ್ಯೆ ಇದ್ದವರನ್ನು, ಇನ್ನೂ ಕೆಲವೊಮ್ಮೆ ಹಳ್ಳಿಯವರು ಎಂದೋ, ಮುಗ್ಧರು ಎಂದೋ ಒಟ್ಟಿನಲ್ಲಿ ಜನಸಾಮಾನ್ಯರಲ್ಲಿ ವಿಶೇಷ ಎನ್ನಿಸುವಂಥವರನ್ನು ಅಟ್ಟಕ್ಕೇರಿಸಿ ಬಳಿಕ ಚಟ್ಟಕ್ಕೆ ಸಾಗಿಸುತ್ತಾರೆ.
ಇಂದಿನ ಸೋಷಿಯಲ್ ಮೀಡಿಯಾ ಜನಸಾಮಾನ್ಯರ ಕೈಗೆ ಸಿಕ್ಕಿ ಏನೇನೋ ಅವಾಂತರಗಳು ಆಗುತ್ತಿವೆ. ಇಲ್ಲಿ ಯಾರ ಬಗ್ಗೆ ಬೇಕಾದ್ರೂ ಮಾತನ್ನಾಡಬಹುದು, ಯಾರು ಬೇಕಾದ್ರೂ ಮಾತನ್ನಾಡಬಹುದು. ಯಾರನ್ನು ಯಾವಾಗ ಬೇಕಾದರೂ ನೆನಪಿಸಿಕೊಂಡು ಯಾವಾಗಬೇಕಾದ್ರೂ ಮೂಲೆಗೆ ತಳ್ಳಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕ್ರಿಯಾಶೀಲರಾಗಿರುವ ಜನರ ಇಂಥ ಮೆಂಟಾಲಿಟಿಯನ್ನು ಸಹಿಸಿಕೊಳ್ಳಲಾಗದೇ ಅದೆಷ್ಟೋ ಮಂದಿ ತಮ್ಮಜೀವನಕ್ಕೇ ಅಂತ್ಯ ಹಾಡಿದ್ದಾರೆ.
ಭಾರೀ ಬಿಗ್ ಡೀಲ್‌ಗೆ ಕೈ ಹಾಕಿರೋ ಕಿಚ್ಚ ಸುದೀಪ್, ಸದ್ಯದಲ್ಲೇ ಅದು ರಿವೀಲ್!
ಸದ್ಯ ಮಹಾಕುಂಭ ಮೇಳದಲ್ಲಿ ಭಾರೀ ಸೆನ್ಸೇಷನಲ್ ಆಗಿದ್ದಾರೆ ಮೊನಾಲಿಸಾ ಹಾಗೂ ಅಭಯ್ ಸಿಂಗ್. ಆ ಇಬ್ಬರು ವ್ಯಕ್ತಿಗಳನ್ನು ಕಂಡಾಗ, ಸ್ವಲ್ಪ ಬುದ್ಧಿ ಇರುವವರಿಗೆ, ಸೋಷಿಯಲ್ ಮೀಡಿಯಾಗಳ ಪರಿಣಾಮ, ಭವಿಷ್ಯ ಗೊತ್ತಿರುವವರಿಗೆ 'ಅಯ್ಯೋ ಪಾಪ' ಎನ್ನಿಸದೇ ಇರದು. ಕಾರಣ, ಯಾರೋ ಅನಾಮಿಕರು ಸುದ್ದಿಯ ಮೂಲಕ ಅಟ್ಟಕ್ಕೆ ಏರಿಸಿದರೆ, ನಾವು ನಿಜವಾಗಿಯೂ ಅಲ್ಲೇ ಹೋಗಿ ಕುಳಿತುಕೊಳ್ಳಬಾರದು ಎಂಬ ಅರಿವು ಇಂದಿನ ಟೈಮಲ್ಲಿ ಎಲ್ಲರಿಗೂ ಇರಬೇಕು. ಇಲ್ಲದಿದ್ದರೆ, ರಾನು ಮಂಡಲ್, ಹುಚ್ಚ ವೆಂಕಟ್ ಹಾಗೂ ಜಂಗಲ್ ಜಾಕಿ ಅಂಥವರ ಸಂಖ್ಯೆ ಹೆಚ್ಚುತ್ತಲೇ ಹೋಗುವುದು ಖಂಡಿತ, ಏನಂತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.