ಮಕ್ಕಳಿಬ್ಬರಿಗೆ ತನ್ನ ಸಿನಿಮಾಗಳನ್ನು ನೋಡಲು ಬಿಡ್ತಿರ್ಲಿಲ್ವಂತೆ ಶ್ರೀದೇವಿ : ನಟಿಗಿದ್ದ ಭಯವೇನು?

Published : Jan 22, 2025, 06:15 PM ISTUpdated : Jan 23, 2025, 10:31 AM IST
ಮಕ್ಕಳಿಬ್ಬರಿಗೆ ತನ್ನ ಸಿನಿಮಾಗಳನ್ನು ನೋಡಲು ಬಿಡ್ತಿರ್ಲಿಲ್ವಂತೆ ಶ್ರೀದೇವಿ : ನಟಿಗಿದ್ದ ಭಯವೇನು?

ಸಾರಾಂಶ

ಶ್ರೀದೇವಿ ತಮ್ಮ ಮಕ್ಕಳಾದ ಖುಷಿ ಮತ್ತು ಜಾನ್ವಿಗೆ ತಮ್ಮ ಸಿನಿಮಾಗಳನ್ನು ನೋಡಲು ಬಿಡುತ್ತಿರಲಿಲ್ಲ ಎಂದು ಖುಷಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 

ದೇಶದೆಲ್ಲೆಡೆ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿರುವ ಜಗದೇಕ ಸುಂದರಿ ಶ್ರೀದೇವಿ ಆರೂವರೆ ವರ್ಷಗಳೇ ಕಳೆದಿವೆ. ಆದರೆ ಶ್ರೀದೇವಿಯ ಪ್ರೀತಿಯ ಕುಟುಂಬಕ್ಕಾಗಲಿ ಅವರ ಅಭಿಮಾನಿಗಳಿಗಾಗಲಿ ಅವರನ್ನು ಮರೆಯಲಾಗುತ್ತಿಲ್ಲ, ಕಲಾಸರಸ್ವತಿಯ ಪುತ್ರಿಯನ್ನು ಅಭಿಮಾನಿಗಳು ಮರೆತಿಲ್ಲ, ಆಕೆಯ ಅದ್ಭುತವಾದ ಕಲಾ ಸೇವೆಗಳು ಇದಕ್ಕೆ ಕಾರಣ ಹೀಗಿರುವಾಗ ಶ್ರೀದೇವಿ ಪುತ್ರಿಯರಾದ ಖುಷಿ ಕಪೂರ್ ಹಾಗೂ ಜಾನ್ವಿ ಕಪೂರ್ ತಮ್ಮ ಪ್ರೀತಿಯ ಅಮ್ಮನನ್ನು ಆಗಾಗ ನೆನಪು ಮಾಡಿಕೊಂಡು ಅವರ ಬಗ್ಗೆ ಹೇಳಿಕೊಂಡು ಭಾವುಕರಾಗುತ್ತಾರೆ. ಅದೇ ರೀತಿ ಈಗ ಮಕ್ಕಳು ಶ್ರೀದೇವಿಗೆ ತಮ್ಮ ಮಕ್ಕಳು ತಾನು ನಟಿಸಿದ ಸಿನಿಮಾಗಳನ್ನು ನೋಡುವ ಬಗ್ಗೆ ಯಾವ ರೀತಿಯ ಅಭಿಪ್ರಾಯವಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. 

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೀದೇವಿ ಕಿರಿಯ ಪುತ್ರಿ ಖುಷಿ ಕಪೂರ್‌, ತಮ್ಮ ತಾಯಿಯನ್ನು ನೆನಪು ಮಾಡಿಕೊಂಡಿದ್ದು, ನಟಿ ಶ್ರೀದೇವಿ ತನ್ನ ನಟನೆಯ ಸಿನಿಮಾಗಳನ್ನು ನೋಡುವುದಕ್ಕೆ ಎಂದಿಗೂ ಮಕ್ಕಳಿಗೆ ಬಿಡುತ್ತಿರಲಿಲ್ಲವಂತೆ, ಮಕ್ಕಳಾದ ಖುಷಿ ಕಪೂರ್ ಹಾಗೂ ಜಾನ್ವಿ ಕಪೂರ್‌ಗೆ ತಮ್ಮ ಸಿನಿಮಾಗಳನ್ನು ನೋಡುವುದಕ್ಕೆ ಯಾವತ್ತೂ ಅವಕಾಶವನ್ನೇ ಕೊಟ್ಟಿರಲಿಲ್ಲವಂತೆ, ಬಚ್ಚಿಟ್ಟಷ್ಟು ಕುತೂಹಲ ಜಾಸ್ತಿ, ಪರಿಣಾಮ ಖುಷಿ ಕಪೂರ್ ಹಾಗೂ ಜಾನ್ವಿ ಕಪೂರ್ ಶ್ರೀದೇವಿ ನಟನೆಯ ಸಿನಿಮಾಗಳನ್ನು ಖುಷಿ ಕಪೂರ್ ಹಾಗೂ ಜಾನ್ವಿ ಕಪೂರ್ ಅಮ್ಮನಿಗೆ ತಿಳಿಯದಂತೆ ಕದ್ದು ಕದ್ದು ನೋಡುತ್ತಿದ್ದರಂತೆ. 

ನಿಮ್ಮ ಅಮ್ಮನ ಸಿನಿಮಾಗಳ ಬಗ್ಗೆ ಹೇಳುವುದಾದರೆ ನೀವು ಆಕೆಯ ಬಹುತೇಕ ಸಿನಿಮಾಗಳನ್ನು ನೋಡಿರುತ್ತಿರಿ ಎಂದು ಖಚಿತವಾಗಿ ಅನಿಸುತ್ತಿದೆ ಎಂದು ಸಂದರ್ಶಕರು ಕೇಳಿದಾಗ ಪ್ರತಿಕ್ರಿಯಿಸಿದ ಖುಷಿ ಕಪೂರ್, ನಿಜವಾಗಿಯೂ ಹೇಳಬೇಕೆಂದರೆ ಆಕೆ ನಮಗೆ ಆಕೆಯ ಸಿನಿಮಾಗಳನ್ನು ಮನೆಯಲ್ಲಿ ನೋಡುವುದಕ್ಕೆ ಬಿಡುತ್ತಲೇ ಇರಲಿಲ್ಲ, ಹೀಗಾಗಿ ಆಕೆಯ ಎಲ್ಲಾ ಸಿನಿಮಾಗಳನ್ನು ನೋಡಿರುವುದು ಕಷ್ಟ ಎಂದು ಖುಷಿ ಕಪೂರ್ ಉತ್ತರಿಸಿದ್ದಾರೆ. ಏಕೆಂದರೆ ಆಕೆ ಸ್ವಲ್ಪ ನಾಚಿಕೆ ಸ್ವಭಾವದವಳು, ಹೀಗಾಗಿ ನಾನು ಹಾಗೂ ಜಾನ್ವಿ ಆಕೆಯ ಸಿನಿಮಾಗಳನ್ನು ಆಕೆಗೆ ತಿಳಿಯದಂತೆ ರೂಮ್‌ಗಳಲ್ಲಿ ರಹಸ್ಯವಾಗಿ ನಮ್ಮಷ್ಟಕ್ಕೆ ನಾವೇ ನೋಡುತ್ತಿದ್ದೆವು, ಆದರೂ ಆಕೆಯ ಎಲ್ಲಾ ಸಿನಿಮಾಗಳನ್ನು ನಾವಿನ್ನೂ ನೋಡಿಲ್ಲ, ಕೆಲವೊಂದು ಸಿನಿಮಾಗಳನ್ನಷ್ಟೇ ನಾವು ನೋಡಿದ್ದೇವೆ. ಆದರೆ ನೋಡುವಾಗಲೆಲ್ಲಾ ರಹಸ್ಯವಾಗಿ ಅಮ್ಮನಿಗೆ ತಿಳಿಯದಂತೆ ನೋಡುತ್ತಿದ್ದೆವು ಎಂದು ಖುಷಿ ಕಪೂರ್ ಹೇಳಿದ್ದಾರೆ. 

ಶ್ರೀದೇವಿಯವರು 2018ರ ಫೆಬ್ರವರಿ 24ರಂದು ದುಬೈಗೆ ಹೋಗಿದ್ದ ವೇಳೆ ಅಲ್ಲಿ ಬಾತ್‌ಟಾಬ್‌ನಲ್ಲಿ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಇದಾದ ನಂತರ ಮಕ್ಕಳಾದ ಖುಷಿ ಕಪೂರ್ ಹಾಗೂ ಜಾನ್ವಿ ಕಪೂರ್ ಅವರು ಸಿನಿರಂಗ ಪ್ರವೇಶಿಸಿದ್ದು, ಅದರಲ್ಲೂ ಜಾನ್ವಿ ಕಪೂರ್ ಅವರು ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಖುಷಿ ಕಪೂರ್ ದಿ ಅರ್ಕಿಸ್ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಪ್ರಸ್ತುತ ಖುಷಿ ಜುನೈದ್ ಖಾನ್ ನಟನೆಯ ಲವ್‌ಯಪದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಧರ್ಮ ಪ್ರೊಡಕ್ಷನ್‌ನ ನಾದನಿಯನ್ ಸಿನಿಮಾದಲ್ಲಿ ಇಬ್ರಾಹಿಂ ಅಲಿಖಾನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್