ತಂಬಾಕು ಜಾಹೀರಾತು (Tobacco Advertisement) ಕಂಪನಿ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಆಫರ್ ನೀಡಿತ್ತು. ಆದರೆ ಅಲ್ಲು ಅರ್ಜುನ್ ಒಂದು ಕ್ಷಣವೂ ಯೋಚಿಸದೆ ಆ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದಾರೆ. ಕೋಟಿ ಕೋಟಿ ಸಿಗುತ್ತೆ ಎನ್ನುವ ಕಾರಣಕ್ಕೆ ಅಭಿಮಾನಿಗಳನ್ನು ದಾರಿ ತಪ್ಪಿಸಬಾರದು ಎನ್ನುವ ಕಾರಣಕ್ಕೆ ತಂಬಾಕು ಜಾಹಿರಾತು ತಿರಸ್ಕರಿಸಿದ್ದಾರೆ.
ತೆಲುಗು ಸ್ಟಾರ್ ಅಲ್ಲು ಅರ್ಜುನ್(Allu Arjun) ಸದ್ಯ ಪುಷ್ಪ(Pushpa) ಸಿನಿಮಾದ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿ ಹೊರಹೊಮ್ಮಿರುವ ಅಲ್ಲು ಅರ್ಜುನ್ ಬೇಡಿಕೆ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಉತ್ತರ ಭಾರತದಲ್ಲೂ ಅಲ್ಲು ಅರ್ಜುನ್ ಬೇಡಿಗೆ ಹೆಚ್ಚಾಗಿದೆ. ಸಿನಿಮಾ ಮಾತ್ರವಲ್ಲದೆ ಜಾಹೀರಾತು ಕಂಪನಿಗಳು ಸಹ ಅಲ್ಲು ಅರ್ಜುನ್ ಹಿಂದೆ ಬಿದ್ದಿವೆ. ಆದರೆ ಅಲ್ಲು ಅರ್ಜುನ್ ಅಳೆದು ತೂಗಿ ಜಾಹೀರಾತು ಮತ್ತು ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇತ್ತೀಚಿಗೆ ಅಲ್ಲು ಅರ್ಜುನ್ ತಂಬಾಕು ಜಾಹೀರಾತು ರಿಜೆಕ್ಟ್ ಮಾಡಿರುವ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಹೌದು ತಂಬಾಕು ಜಾಹೀರಾತು (Tobacco Advertisement) ಕಂಪನಿ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಆಫರ್ ನೀಡಿತ್ತು. ಆದರೆ ಅಲ್ಲು ಅರ್ಜುನ್ ಒಂದು ಕ್ಷಣವೂ ಯೋಚಿಸದೆ ಆ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದಾರೆ. ಕೋಟಿ ಕೋಟಿ ಸಿಗುತ್ತೆ ಎನ್ನುವ ಕಾರಣಕ್ಕೆ ಅಭಿಮಾನಿಗಳನ್ನು ದಾರಿ ತಪ್ಪಿಸಬಾರದು ಎನ್ನುವ ಕಾರಣಕ್ಕೆ ತಂಬಾಕು ಜಾಹಿರಾತು ತಿರಸ್ಕರಿಸಿದ್ದಾರೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಮತ್ತು ಮತ್ತು ಈ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣಕ್ಕೆ ಅಲ್ಲು ಅರ್ಜುನ್ ಮುಲಾಜಿಲ್ಲದೆ ಈ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ದೊಡ್ಡ ಮಟ್ಟದ ಸಂಭಾವನೆ ಆಫರ್ ಮಾಡಿತ್ತು ಎನ್ನಲಾಗಿದೆ.
ಜಾಹೀರಾತು ಮಾಡುವಲ್ಲಿ ಅಲ್ಲು ಅರ್ಜುನ್ ತುಂಬಾ ಜಾಗರೂಕರಾಗಿ ಇರುತ್ತಾರೆ. ಆರೋಗ್ಯಕ್ಕೆ ಹಾನಿ ಮಾಡುವ, ತಪ್ಪು ಸಂದೇಶಗಳನ್ನು ನೀಡುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಅಲ್ಲು ಅರ್ಜುನ್ ಇಷ್ಟಪಡುವುದಿಲ್ಲ. ಹಾಗಾಗಿ ಎಷ್ಟೇ ಕೋಟಿ ಕೊಟ್ಟರು ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಲ್ಲು ನಿರ್ಧರಿಸಿದ್ದಾರೆ. ಅಲ್ಲದೆ ಅಲ್ಲು ಅರ್ಜುನ್ ಸಹ ತಂಬಾಕು ಸೇವಿಸುವುದಿಲ್ಲ. ಹಾಗಾಗಿ ಅಭಿಮಾನಿಗಳಿಗೂ ಸ್ಫೂರ್ತಿ ಪಡೆಯುವಂತೆ ಮಾಡಲು ಇಷ್ಟಪಡುವುದಿಲ್ಲ. ಅಂದಹಾಗೆ ಅನೇಕ ಸ್ಟಾರ್ ಕಲಾವಿದರು ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ರಿಜೆಕ್ಟ್ ಮಾಡುವ ಮೂಲಕ ಜವಾಬ್ದಾರಿಯುತ ನಟ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ರೋಡ್‌ಗಿಳಿದರೆ ರೂಲ್ಸ್ ಬ್ರೇಕ್ ಮಾಡುವ ಸ್ಟಾರ್‌ಗಳಿಗೆ ಬಿಸಿ ಮುಟ್ಟಿಸಿದ ಹೈದರಾಬಾದ್ ಟ್ರಾಫಿಕ್ ಪೊಲೀಸರು
ಇನ್ನು ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕೂಡ ಕೋಟಿ ಕೋಟಿ ಜಾಹೀರಾತು ಆಫರ್ ರಿಜೆಕ್ಟ್ ಮಾಡಿ ಸುದ್ದಿಯಾಗಿದ್ದರು. ಮುಖ ಕಾಂತಿ ಹೆಚ್ಚಿಸುವ ಫೇರ್ ನೆಸ್ ಕ್ರೀಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಸಾಯಿ ಪಲ್ಲವಿ ಹಿಂದೇಟು ಹಾಕಿದ್ದರು. ಇದರಿಂದ ಯಾವುದೇ ಪ್ರಯೋಜನವಿಲ್ಲ ಹಾಗಾಗಿ ಅಭಿಮಾನಿಗಳಿಗೂ ಇದನ್ನು ಮಾಡಿ ಎಂದು ಹೇಳುವುದಿಲ್ಲ ಎನ್ನುವ ಕಾರಣಕ್ಕೆ ಜಾಹೀರಾತು ರಿಜೆಕ್ಟ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದರು.
ಯಶ್ ವಿರುದ್ಧ ತೆಲುಗು ಮಾಧ್ಯಮ ಗರಂ; ಅಲ್ಲು ಅರ್ಜುನ್ ಗಾಗಿದ್ದ ಅವಮಾನಕ್ಕೆ ಸೇಡು ತೀರಿಸಿಕೊಂಡ್ರಾ?
ಅಲ್ಲು ಅರ್ಜುನ್ ಸದ್ಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಅಲ್ಲು ಅರ್ಜುನ್ ಸರ್ಬಿಯಾಗೆ ತೆರಳಿದ್ದರು.ಸದ್ಯ ಭಾರತಕ್ಕೆ ವಾಪಾಸ್ ಆಗಿರುವ ಅಲ್ಲು ಅರ್ಜುನ್ ಪುಷ್ಪ-2 ನಲ್ಲಿ ಭಾಗಿಯಾಗಿದ್ದಾರೆ. ಮೊದಲ ಭಾಗ ಸೂಪರ್ ಹಿಟ್ ಆದ ಹಿನ್ನಲೆ 2 ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಲು ಅಲ್ಲು ಅರ್ಜುನ್ ಕೆಲಸ ಮಾಡಲು ಮಾತುಕತೆ ನಡೆಸುತ್ತಿದ್ದಾರೆ.