ಆರ್ ಸಿ ಬಿ ತಂಡ ರಾಕಿ ಭಾಯ್ ನನ್ನು ತೆರೆಮೇಲೆ ನೋಡಿ ಎಂಜಾಯ್ ಮಾಡಿದೆ. ಆರ್ ಸಿ ಬಿ ತಂಡ ಸಿನಿಮಾ ವೀಕ್ಷಿಸಿದ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ಇಡೀ ತಂಡ ಸಿನಿಮಾ ವೀಕ್ಷಿಸಿದೆ ಆದರೆ ವಿರಾಟ್ ಕೊಹ್ಲಿ ಮಾತ್ರ ಕಾಣೆಯಾಗಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು 'ವಿರಾಟ್ ಕೊಹ್ಲಿ ಎಲ್ಲಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. '
ರಾಕಿಂಗ್ ಸ್ಟಾರ್ ಯಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬಂದ ಕೆಜಿಎಫ್-2 ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಈಗಾಗಲೇ ಅನೇಕ ದಾಖಲೆ ಬರೆದಿರುವ ಈ ಸಿನಿಮಾ ಏಪ್ರಿಲ್ 14 ರಂದು ಅದ್ದೂರಿಯಾಗಿ ತೆರೆಗೆ ಬಂದಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿರುವ ಕೆಜಿಎಫ್-2 ಚಿತ್ರಕ್ಕೆ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಕೆಜಿಫ್-2 ಸಿನಿಮಾವನ್ನು ಆರ್ ಸಿ ಬಿ ಆಟಗಾರರು ವೀಕ್ಷಿಸಿದ್ದಾರೆ. ನಾಯಕ ಫಾಫ್ ಡುಪ್ಲೆಸಿಸ್, ಮ್ಯಾಕ್ಸ್ ವೆಲ್, ಹರ್ಷಲ್ ಪಟೇಲ್ ಸೇರಿದಂತೆ ಇಡೀ ಆರ್ ಸಿ ಬಿ ತಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಅಂದಹಾಗೆ ಕೆಲವು ದಿನಗಳ ಹಿಂದೆ ಸಿನಿಮಾ ಬಿಡುಗಡೆಗೂ ಮೊದಲು ಸ್ಯಾಂಡಲ್ ವುಡ್ ನ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಆರ್ ಸಿ ಬಿ ಜೊತೆ ಕೈಜೋಡಿಸುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಮೊದಲ ಬಾರಿಗೆ ಕ್ರಿಕೆಟ್ ತಂಡದ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಕೈಜೋಡಿಸಿ ವಿಭಿನ್ನ ರೀತಿಯಲ್ಲಿ ಸಿಿಮಾ ಪ್ರಮೋಷನ್ ಗೆ ಮುಂದಾಗಿತ್ತು. ಕೆಜಿಎಫ್-2 ಟ್ರೈಲರ್ ನಲ್ಲಿ ಆರ್ ಸಿ ಬಿ ಆಟಗಾರನ್ನು ಸೇರಿಸಿ ಹೊಸ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು. ಟ್ರೈಲರ್ ನಲ್ಲಿ ಕೆಜಿಎಫ್2 ಪಾತ್ರಕ್ಕೆ ಆರ್ ಸಿ ಬಿ ಆಟಗಾರರನ್ನು ಹೋಲಿಸಲಾಗಿತ್ತು. ಈ ಪ್ರೋಮೋಗೆ ಮನರಂಜನೆಯ ಹೊಸ ಯುಗಕ್ಕೆ ನಾಂದಿ ಹಾಡೋಣ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿತ್ತು.
ಇದೀಗ ಆರ್ ಸಿ ಬಿ ತಂಡ ರಾಕಿ ಭಾಯ್ ನನ್ನು ತೆರೆಮೇಲೆ ನೋಡಿ ಎಂಜಾಯ್ ಮಾಡಿದೆ. ದೆಹಲಿ ಟೀಂ ವಿರುದ್ಧ ರೋಚಕ ಗೆಲವು ದಾಖಲಿಸಿದ ಆರ್ ಸಿ ಬಿ ದೇ ಖುಷಿಯಲ್ಲಿ ಕೆಜಿಎಫ್-2 ವೀಕ್ಷಿಸಿದೆ. ಆಟಗಾರರು ತಂಗಿರುವ ಹೋಟೆಲ್ ನಲ್ಲೇ ಪ್ರತ್ಯೇಕ ಶೋ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ಒಟ್ಟಿಗೆ ಸಿನಿಮಾ ವೀಕ್ಷಿಸಿದ ವಿಡಿಯೋ ವೈರಲ್ ಆಗದೆ. ಹರ್ಷಲ್ ಪಟೇಲ್ ಮತ್ತು ನಾಯಕ ಫಾಫ್ ರಾಕಿ ಭಾಯ್ ಮಿಷಿನ್ ಗನ್ ಹಿಡಿದು ಪೋಸ್ ನೀಡಿದ್ದಾರೆ.
KGF 2 ಎಡಿಟರ್ 19 ವರ್ಷದ ಉಜ್ವಲ್ ಅನ್ನು ಪ್ರಶಾಂತ್ ಆಯ್ಕೆ ಮಾಡಿದ್ದೇಗೆ; ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
ವಿರಾಟ್ ಕೊಹ್ಲಿ ಎಲ್ಲಿ?
ಆರ್ ಸಿ ಬಿ ತಂಡ ಸಿನಿಮಾ ವೀಕ್ಷಿಸಿದ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ಅಂದಹಾಗೆ ಇಡೀ ತಂಡ ಸಿನಿಮಾ ವೀಕ್ಷಿಸಿದೆ ಆದರೆ ವಿರಾಟ್ ಕೊಹ್ಲಿ ಮಾತ್ರ ಕಾಣೆಯಾಗಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು 'ವಿರಾಟ್ ಕೊಹ್ಲಿ ಎಲ್ಲಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. 'ಎಲ್ಲರೂ ಸಿನಿಮಾ ವೀಕ್ಷಿಸಿದ್ದಾರೆ ಕೊಹ್ಲಿ ಯಾಕೆ ನೋಡಿಲ್ಲ' ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು 'ಪತ್ನಿ ಇದ್ರೆ ಮಾತ್ರನಾ ವಿರಾಟ್ ಕೊಹ್ಲಿ ಬರೋದು' ಎಂದು ಕೇಳಿದ್ದಾರೆೆ. ಕೆಲವರು ವಿರಾಟ್ ಕೊಹ್ಲಿ ಕಿಜೆಎಫ್-2 ಬದಲಿಗೆ ಪತ್ನಿಯ ವೆಬ್ ಸೀರಿಸ್ ನೋಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ವಿರಾಟ್ ಕೊಹ್ಲಿ ಬಿಟ್ಟು ಉಳಿದೆಲ್ಲ ಆಟಗಾರರು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಈ ನಡುವೆ ಕ್ರಿಕೆಟ್ ಆಟಗಾರರು ಸಹ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.
An evening to remember. 🤩🎥
Hopefully one on the field today! 👊🏼 pic.twitter.com/YWyM4ZqNTo
KGF 2 ಆರ್ಭಟಕ್ಕೆ ಮಂಕಾದ ಬಾಲಿವುಡ್; ಹಿಂದಿಯಲ್ಲಿ 193 ಕೋಟಿ ರೂ. ಬಾಚಿದ ರಾಕಿ ಭಾಯ್
ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ಭರ್ಜರಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸಿನಿಮಾ 4ದಿನಗಳಲ್ಲಿ 546 ಕೋಟಿ ರೂಪಾಯಿ ಬಾಚಿಕೊಂಡಿದೆ. ಬಾಲಿವುಡ್ ನಲ್ಲೂ ರಾಕಿ ಭಾಯ್ ಅಬ್ಬರಿಸುತ್ತಿದ್ದು ಕನ್ನಡ ಸಿನಿಮಾ ಆರ್ಭಟಕ್ಕೆ ಹಿಂದಿ ಮಂದಿ ಮಂಕಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ಉತ್ತಮ ಕಮಾಯಿ ಮಾಡುತ್ತಿರುವ ರೀತಿಗೆ ಬೆಚ್ಚಿಬಿದ್ದಿದ್ದಾರೆ. ಯಾವ ರೀತಿಯ ಸಿನಿಮಾಗಳನ್ನು ನೀಡಬೇಕೆಂದು ತಲೆಕೆಡಿಸಿಕೊಂಡಿದ್ದಾರೆ.