ಮೇಲುಡುಗೆ ಧರಿಸದೇ ಬಂದು ಕುಳಿತ ಅನನ್ಯಾ ಅಕ್ಕ;  ಕ್ಲಾಸ್ ತೆಗೆದುಕೊಂಡ ಅಪ್ಪ ಪಾಂಡೆ

By Mahmad Rafik  |  First Published Oct 9, 2024, 10:42 AM IST

ಬಾಲಿವುಡ್ ನಟಿ ಅನನ್ಯಾ ಪಾಂಡೆ ಸೋದರಿ ಅಲಾನಾ ಪಾಂಡೆ ಧರಿಸಿದ್ದ ಉಡುಪಿನ ಬಗ್ಗೆ ತಂದೆ ಚಿಕ್ಕಿ ಪಾಂಡೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಮಗಳ ಉಡುಗೆ ವಿಚಾರವಾಗಿ ತಂದೆ ಮಗಳು ನಡುವೆ ಮಾತಿನ ಚಕಮಕಿ ನಡೆದಿದೆ.


ಮುಂಬೈ: ಬಾಲಿವುಡ್ ನಟಿ ಅನನ್ಯಾ ಪಾಂಡೆ ಸೋದರಿ ಅಲಾನಾ ಪಾಂಡೆ ಯುಟ್ಯೂಬರ್ ಆಗಿದ್ದು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡದ್ದಾರೆ. ಮಂಗಳವಾರದಿಂದ ಅಲಾನಾ ಕುರಿತ ವಿಡಿಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದೆಡೆ ಅಲಾನಾ ಪಾಂಡೆ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ' ದಿ ಟ್ರೈಬ್' ಶೋ ಮೂಲಕ ಡೆಬ್ಯೂ ಮಾಡುತ್ತಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಯಂಗ್‌ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಗಳು ಲಾಸ್‌ ಏಂಜಲಿನ್ಸ್‌ನಲ್ಲಿ ಹೇಗೆ ಉಳಿದುಕೊಳ್ಳುತ್ತಾರೆ ಎಂಬುದಾಗಿದೆ. ಇದೀಗ ಅಲಾನಾ ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. 

ಅಲಾನಾ ಹಂಚಿಕೊಂಡಿರುವ ಈ ವಿಡಿಯೋ ತಮ್ಮ ಶೋಗೆ ಸಂಬಂಧಿಸಿದ್ದಾಗಿದೆ. ಈ ವಿಡಿಯೋದಲ್ಲಿ ತಂದೆ-ತಾಯಿ ಹಾಗೂ ಕುಟುಂಬಸ್ಥರ ಜೊತೆ ಕಾಣಿಸಿಕೊಂಡಿದೆ. ಅಲಾನಾ ಧರಿಸಿದ್ದ ಉಡುಪಿನ ಬಗ್ಗ ಚಿಕ್ಕಿ ಪಾಂಡೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಡಿಯೋ ಹಲ್‌-ಚಲ್ ಸೃಷ್ಟಿಸಿದೆ. 

Tap to resize

Latest Videos

undefined

ಮೇಲುಡುಗೆ ಧರಿಸೋದನ್ನು ಮರೆತಿದ್ದೀಯಾ? 
ಈ ವಿಡಿಯೋದಲ್ಲಿ ಪಾಂಡೆ ಕುಟುಂಬಸ್ಥರು ಇರೋದನ್ನು ನೋಡಬಹುದಾಗಿದೆ. ಈ ವೇಳೆ ಅಲ್ಲಿಗೆ ಅಲಾನಾ ಬರುತ್ತಾರೆ. ಮಗಳು ಧರಿಸಿದ್ದ ಬಟ್ಟೆಗೆ ಚಿಕ್ಕಿ ಪಾಂಡೆ ಕೋಪಗೊಳ್ಳುತ್ತಾರೆ. "ಅಲಾನಾ, ಯಾವುದಾದರೂ ಕಾರಣಕ್ಕೆ ಮೇಲುಡುಗೆ ಧರಿಸೋದನ್ನು ಮರೆತಿದ್ದೀಯಾ? ಏನಿದು ಡ್ರೆಸ್?" ಎಂದು ಕೇಳುತ್ತಾರೆ. ತಂದೆಯ ಮಾತುಗಳನ್ನು ಕೇಳಿದ್ದ ಅಲಾನಾ ಒಂದು ಕ್ಷಣ ಶಾಕ್ ಆಗತ್ತಾರೆ. 

ತಂದೆ ಪ್ರಶ್ನೆಗೆ ಉತ್ತರಿಸುವ ಅಲಾನಾ, ನೀವು ಸೀರಿಯಸ್‌ ಆಗಿದ್ದೀರಾ? ಈ ಔಟ್‌ಫಿಟ್‌ನಲ್ಲಿ ಏನು ತಪ್ಪು ಕಾಣಿಸುತ್ತಿದೆ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಚಕ್ಕಿ ಪಾಂಡೆ, ನಿನಗೆ ಇದರ ಮೇಲೊಂದು ಶರ್ಟ್ ಧರಿಸಬೇಕು ಎಂದು ನಿಜವಾಗಿಯೂ ಅನ್ನಿಸುತ್ತಿಲ್ಲವೇ? ಎಂದು ಕೇಳುತ್ತಾರೆ. ಇದಕ್ಕೆ ಮಗಳು, ಇದು ಶರ್ಟ್ ಅಲ್ಲವೇ? ಎಂದು ತನ್ನ ಡ್ರೆಸ್ ತೋರಿಸುತ್ತಾರೆ.

ಐಶ್ವರ್ಯಾ-ಕತ್ರಿನಾ ಅಲ್ಲ, ಈ ನಟಿಯೊಂದಿಗೆ ಸಲ್ಮಾನ್ ಖಾನ್ ತುಟಿಗೆ ತುಟಿ ಸೇರಿಸಿದ್ದು!

ಇದರಿಂದ ಮತ್ತಷ್ಟು ಕೋಪಗೊಂಡ ಚಕ್ಕಿ ಪಾಂಡೆ, ಇದು ಲಾಸ್ ಏಂಜಲಿಸ್ ಅಲ್ಲ, ನಾವಿರೋದು ಮುಂಬೈ ಬಾಂದ್ರಾದಲ್ಲಿ ಎಂದು ಮಗಳನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಾರೆ. ನೀನು ಧರಿಸಿರೋದು ಬ್ರಾ. ಇದನ್ನು ಕವರ್ ಮಾಡಿಕೊಳ್ಳಲು ಮೇಲೆ ಟಾಪ್/ಶರ್ಟ್ ಧರಿಸಬೇಕು ಅಂತ ನನಗೆ ಅನ್ನಿಸುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಆದ್ರೆ ಅಲಾನಾ ಇದುವೇ ಟಾಪ್ ಎಂದು ಹೇಳಿ ಸಮ್ಮುನೆ ಕುಳಿತುಕೊಳ್ಳುತ್ತಾರೆ. 

ಕಳೆದ ಕೆಲವು ವರ್ಷಗಳಿಂದ ಅಲಾನಾ ತಮ್ಮ ರಿಲೇಶನ್‌ಶಿಪ್ ಸುದ್ದಿಗಳಿಂದ ಸುದ್ದಿಯಲ್ಲದ್ದರು. 2023ರಲ್ಲಿ ಮಾರ್ಚ್ 16ರಂದು ಅಮೆರಿಕ ಮೂಲದ ಸಿನಿಮಾ ನಿರ್ಮಾಪಕ ಐವರ್ ಮ್ಯಾಕ್ರಿ ಎಂಬವರನ್ನು ಅಲಾನಾ ಮದುವೆಯಾಗಿದ್ದಾರೆ. ಅಲಾನಾ ಮದುವೆಗೆ ಶಾರೂಖ್ ಖಾನ್ ಕುಟುಂಬಸ್ಥರ ಸಮೇತರಾಗಿ ತೆರಳಿ ನವಜೋಡಿಗೆ ಶುಭ ಹಾರೈಸಿದ್ದರು. 2024ರಲ್ಲಿ ಐವರ್ ಮ್ಯಾಕ್ರಿ ಮತ್ತು ಅಲಾನಮಾ ಮುದ್ದಾದ ಗಂಡು ಮಗುವಿನ ಪೋಷಕರಾಗಿದ್ದಾರೆ. ಅಲಾನಾ ಅನನ್ಯಾಳ ಸೋದರಸಂಬಂಧಿ.

ಪವರ್ ಸ್ಟಾರ್ ಅಪ್ಪು ಜೊತೆಯಲ್ಲಿಯೂ ನಟಿಸಿದ್ದಾರೆ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ

click me!