
ಇದೀಗ ಎಲ್ಲಾ ಕಡೆ ಕೆಜಿಎಫ್-2 (KGF 2) ಸಿನಿಮಾದ್ದೆ ಹವಾ. ರಾಕಿಂಗ್ ಯಶ್(Yash) ಮತ್ತು ಪ್ರಶಾಂತ್ ನೀಲ್(Prashanth Neel) ಕಾಂಬಿನೇಷನ್ ನಲ್ಲಿ ಬಂದ ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಭಾರತೀಯ ಸಿನಿಮಾರಂಗದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಕೆಜಿಎಫ್-2 ವಿಶ್ವಮಟ್ಟದಲ್ಲೂ ಸದ್ದು ಮಾಡಿದೆ. ಸಿನಿಮಾ ಬಿಡುಗಡೆಯಾಗಿ ತಿಂಗಳ ಮೇಲಾದರೂ ಸಿನಿ ಪ್ರಿಯರು ಮುಗಿಬಿದ್ದು ಚಿತ್ರವೀಕ್ಷಿಸುತ್ತಿದ್ದಾರೆ. ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ 2ನೇ ಸಿನಿಮಾವಾಗಿ ಹೊರಹೊಮ್ಮಿದೆ ಕೆಜಿಎಫ್-2. ಬಾಹುಬಲಿ-2 ದಾಖಲೆ ಮುರಿಯಲು ಇನ್ನು ಕೆಲವೇ ಕೋಟಿ ಅಂತರದಲ್ಲಿದೆ.
ವಿಶ್ವಮಟ್ಟದಲ್ಲೂ 3ನೇ ಸ್ಥಾನದಲ್ಲಿದೆ ಕೆಜಿಎಫ್-2. ರಾಕಿಂಗ್ ಸ್ಟಾರ್ ಅಬ್ಬರಕ್ಕೆ ಭಾರತೀಯ ಸಿನಿಮಾರಂಗವೇ ಮಂಕಾಗಿದೆ. ಕೆಜಿಎಫ್-2 ಆರ್ಭಟ ಹಿಂದಿ ಮಂದಿಗೆ ಆಘಾತ ತಂದಿದೆ. ಎಲ್ಲಿ ನೋಡಿದ್ರು ಕೆಜಿಎಫ್-2 ಸಿನಿಮಾದೆ ಸದ್ದು. ಈ ನಡುವೆ ಇದೀಗ ಕೆಜಿಎಫ್-3(KGF 3) ಸಿನಿಮಾ ಸದ್ದು ಮಾಡುತ್ತಿದೆ. ಸದ್ಯದಲ್ಲೇ ಅಂದರೆ ಡಿಸೆಂಬರ್ ತಿಂಗಳಲ್ಲಿ ಕೆಜಿಎಫ್-3 ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು(Vijay Kiragandur) ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ.
ಕೆಜಿಎಫ್-2 ನೋಡಿ ಫುಲ್ ಖುಷ್ ಆಗಿದ್ದ ಅಭಿಮಾನಿಗಳು ಕೆಜಿಎಫ್-3ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೀಗ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ(karthik Gowda) ಸ್ಪಷ್ಟನೆ ನೀಡಿದ್ದಾರೆ. ಹೌದು, ಈ ಬಗ್ಗೆ ಕಾರ್ತಿಕ್ ಗೌಡ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 'ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು. ನಾವು ಈಗ ಅನೇಕ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೀವಿ. ಹೊಂಬಾಳೆ ಫಿಲ್ಮ್ಸ್ ಸದ್ಯದಲ್ಲೇ ಕೆಜಿಎಫ್-3 ಪ್ರಾರಂಭ ಮಾಡುವುದಿಲ್ಲ. ನಾವು ಕೆಜಿಎಫ್-3 ಪ್ರಾರಂಭ ಮಾಡಿದಾಗ ಮಾಹಿತಿ ನೀಡುತ್ತೇವೆ' ಎಂದು ಹೇಳಿದ್ದಾರೆ.
ಡಿಸೆಂಬರ್‌ನಿಂದ ಶೂಟಿಂಗ್ ಆರಂಭ; KGF 3 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ವಿಜಯ್ ಕಿರಗಂದೂರು
ಈ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಕೆಜಿಎಫ್-3 ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಮಾತು ಭಾರಿ ನಿರಾಸೆ ಮೂಡಿಸಿದೆ. ಅಂದಹಾಗೆ ವೆಬ್ ಸೈಟ್ ಒಂದು ವರದಿ ಮಾಡಿದೆ ಎಂದು ವಿಜಯ್ ಕಿರಗಂದೂರು ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಿರ್ಮಾಪಕರು ಬಹುನಿರೀಕ್ಷೆಯ ಕೆಜಿಎಫ್ 3 ಸಿನಿಮಾದ ಬಗ್ಗೆ, 'ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸದ್ಯ 30ರಿಂದ 35ರಷ್ಟು ಮುಕ್ತಾಯವಾಗಿದೆ. ಮುಂದಿನ ಶೆಡ್ಯೂಲ್ ಮುಂದಿನ ವಾರ ಪ್ರಾರಂಭವಾಗಲಿದೆ. ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಚಿತ್ರೀಕರಣ ಮುಗಿಯಲಿದೆ. ಬಳಿಕ ಕೆಜಿಎಫ್-3 ಪ್ರಾರಂಭವಾಗಲಿದೆ. 2024ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಮಾಡಿದ್ದೇವೆ' ಎಂದು ನಿರ್ಮಾಪಕರು ಹೇಳಿದ್ದಾರೆ ಎನ್ನುವ ಸುದ್ದಿ ಕಳೆದ ಎರಡು ದಿನಗಳಿಂದ ಹರಿದಾಡುತ್ತಿದೆ.
KGF 2; ಚಿತ್ರೀಕರಣ ವೇಳೆ ಪ್ರಶಾಂತ್ ನೀಲ್ ಕಾಲೆಳೆದ ರವೀನಾ ಟಂಡನ್; ಮೇಕಿಂಗ್ ವಿಡಿಯೋ ವೈರಲ್
ಆದರೀಗ ಈ ಬಗ್ಗೆ ಕಾರ್ತಿಕ್ ಗೌಡ ಸ್ಪಷ್ಟನೆ ನೀಡುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಇನ್ನು ಏಪ್ರಿಲ್ 14ರಂದು ತೆರೆಗೆ ಬಂದ ಕೆಜಿಎಫ್-2 ಸಿನಿಮಾ ಭರ್ಜರಿ ಒಪನಿಂಗ್ ಪಡೆದುಕೊಂಡಿತ್ತು. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಹಿಂದಿಯಲ್ಲಿ ಸಿನಿಮಾ ಬರೋಬ್ಬರಿ 420 ಕೋಟಿ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.