KGF ಗಾಯಕಿ ನೇಹಾ ಪತಿಯ ದುಬಾರಿ ಫೋನ್, ಚಿನ್ನ, ನಗದನ್ನು ದೋಚಿದ ಖದೀಮರು; ದೂರು ದಾಖಲು

By Shruiti G Krishna  |  First Published May 15, 2022, 10:37 AM IST

ಜನಪ್ರಿಯ ಗಾಯಕಿ, ಕೆಜಿಎಫ್ ಸಿನಿಮಾ ಗಲಿ ಗಲಿ ಮೇ ಹಾಡಿನ ಮಾಡಿನ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದ ನೇಹಾ ಕಕ್ಕರ್ ಅವರ ಪತಿ, ಗಾಯಕ ರೋಹಾನ್ ಪ್ರೀತ್ ಸಿಂಗ್ ಅವರ ಬಳಿ ಇದ್ದ ದುಬಾರಿ ವಸ್ತುಗಳನ್ನು ಕಳ್ಳಲು ದೋಚಿ ಪರಾರಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯದಲ್ಲಿರುವ ಹೋಟೆಲ್ ನಲ್ಲಿ ಈ ಘಟನೆ ಸಂಭವಿಸಿದೆ. ರೋಹನ್ ಪ್ರೀತ್ ಸಿಂಗ್ ಹಿಮಾಚಲ ಪ್ರದೇಶದ ಹೋಟೆಲ್ ನಲ್ಲಿ ತಂಗಿದ್ದರು. ಆಗ ಈ ಘಟನೆ ಸಂಭವಿಸಿದೆ ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೇಹಾ ಕಕ್ಕರ್ ಪತಿ ರೋಹನ್ ಪ್ರೀತ್ ಸಿಂಗ್ ಬಳಿ ಇದ್ದ ದುಬಾರಿ ಫೋನ್, ವಜ್ರದ ಉಂಗುರ, ಬೆಲೆಬಾಳುವ ವಸ್ತುಗಳು ಮತ್ತು ನಗದನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಆದರೆ ಈ ಬಗ್ಗೆ ಗಾಯಕ ರೋಹನ್ ಪ್ರೀತ್ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಹಿಮಾಚಲ ಪ್ರದೇಶದ ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ಮಾಹಿತಿ ನೀಡಿದ್ದಾರೆ. ಇದೀಗ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

ಇತ್ತೀಚಿಗಷ್ಟೆ ನೇಹಾ ಕಕ್ಕರ್ ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ ನಲ್ಲಿ ತನ್ನ ಪತಿ ರೋಹನ್ ಜೊತೆಗಿನ ವಿಡಿಯೋನ್ನು ಶೇರ್ ಮಾಡಿದ್ದರು. ಈ ವಿಡಿಯೋ ಹಿಮಾಚಲ್ ಪ್ರದೇಶದ ಮಂಡಿ ಹೋಟೆಲ್‌ನ ವಿಡಿಯೋವಾಗಿದೆ. ಈ ಹೋಟೆಲ್‌ನಲ್ಲಿ ಇಬ್ಬರು ಬೆಳಗಿನ ಚಹಾ ಸವಿಯುತ್ತಿದ್ದಾರೆ. ರಜೆಯ ಮಜೆಯಲ್ಲಿರುವ ನೇಹಾ ದಂಪತಿಗೆ ಖದೀಮರು ಶಾಕ್ ನೀಡುವ ಮೂಲಕ ಸಂಭ್ರಮವನ್ನು ಹಾಳು ಮಾಡಿದ್ದಾರೆ.

ಜಸ್ಟ್ ಬಾತ್ ಟವಲ್‌ನಲ್ಲಿ ಕೆಜಿಎಫ್ ಸಿಂಗರ್: ನೇಹಾ ಗಂಡನ ರಿಯಾಕ್ಷನ್ ಹೀಗಿತ್ತು

ನೇಹಾ ಕಕ್ಕರ್ 2020ರಲ್ಲಿ ಪಂಜಾಬಿ ಗಾಯಕ ರೋಹನ್ ಪ್ರೀತ್ ಸಿಂಗ್ ಜೊತೆ ಮದುವೆಯಾದರು. ಇಬ್ಬರು ಒಂದು ಮ್ಯೂಸಿಕ್ ವಿಡಿಯೋ ಮೂಲಕ ಮೊದಲು ಭೇಟಿಯಾದರು. ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದರು. ಇಬ್ಬರ ಪ್ರೀತಿ ಬಳಿಕ ಪತಿ-ಪತ್ನಿಯರನ್ನಾಗಿ ಮಾಡಿದೆ. ಕುಟುಂಬದವರ ಒಪ್ಪಿಗೆಯ ಮೇರೆಗೆ ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇಬ್ಬರು ಹಸೆಮಣೆ ಏರಿದರು.

ರಿಯಾಲಿಟಿ ಶೋಗಳು ಬೋಗಸ್; 'ಇಂಡಿಯನ್ ಐಡಲ್‌'ನೇ ಟಾರ್ಗೆಟ್ ಮಾಡುತ್ತಿರುವುದೇಕೆ?

ಅಂದಹಾಗೆ ನೇಹಾ ಕಕ್ಕರ್ ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಗಾಯನದ ಜೊತೆಗೆ ಕಿರುತೆರೆಯಲ್ಲೂ ಪ್ರಸಿದ್ಧಿ ಗಳಿಸಿದ್ದಾರೆ. ಕೊನೆಯದಾಗಿ ನೇಹಾ ಇಂಡಿಯಲ್ ಐಡಲ್ ಸೀಸನ್ 12ರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಇಂಡಿಯನ್ ಐಡಲ್ ನ ಅನೇಕ ಸೀಸನ್ ಗಳಲ್ಲಿ ನೇಹಾ ಜಡ್ಜ್ ಆಗಿದ್ದರು. ರೋಹನ್ ಕೂಡ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದರು. ಇನ್ನು ನೇಹಾ ಮತ್ತು ರೋಹನ್ ಇಬ್ಬರು ಇತ್ತೀಚಿಗಷ್ಟೆ ಲಾ ಲಾ.. ಹಾಜನ್ನು ಬಿಡುಗಡೆ ಮಾಡಿದ್ದರು. ಹೊಸ ಟ್ರ್ಯಾಕ್ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

click me!