ನಟ ಅಕ್ಷಯ್ ಕುಮಾರ್‌ಗೆ ಕೊರೋನಾ ಪಾಸಿಟಿವ್; ಕ್ಯಾನೆಸ್‌ ಫಿಲ್ಮ್ ಫೆಸ್ಟಿವಲ್‌ನಿಂದ ಔಟ್

Published : May 15, 2022, 09:31 AM ISTUpdated : May 15, 2022, 09:40 AM IST
ನಟ ಅಕ್ಷಯ್ ಕುಮಾರ್‌ಗೆ ಕೊರೋನಾ ಪಾಸಿಟಿವ್; ಕ್ಯಾನೆಸ್‌ ಫಿಲ್ಮ್ ಫೆಸ್ಟಿವಲ್‌ನಿಂದ ಔಟ್

ಸಾರಾಂಶ

ಎರಡನೇ ಬಾರಿ ಕೊರೋನಾ ಸೋಂಕು, ಪ್ಯಾನಿಕ್ ಆದ ನಟ ಕ್ಯಾನೆಸ್‌ 2022 ರೆಡ್‌ ಕಾರ್ಪೆಟ್‌ ಸರ್ಮನಿಯಿಂದ ಔಟ್

ಬಾಲಿವುಡ್ (Bollywood) ಹ್ಯಾಂಡ್ಸಮ್ ನಟ ಅಕ್ಷಯ್ ಕುಮಾರ್‌ಗೆ (Akshay Kumar) ಎರಡನೇ ಬಾರಿ ಕೊರೋನಾ ಸೋಂಕು ತಗುಲಿದೆ.  ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡುವ ಮೂಲಕ ಕ್ಯಾನೆಸ್ ಫಿಲ್ಮ್‌ ಫೆಸ್ಟಿವಲ್ (Cannes film festival 2022) ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ತಿಳಿಸಿದ್ದಾರೆ.

ಅಕ್ಷಯ್ ಟ್ವೀಟ್:

ನಮ್ಮ ಸಿನಿಮಾ ಕ್ಯಾನೆಸ್‌ 2022ರ ಇಂಡಿಯನ್ ಪೆವಿಲಿಯನ್‌ನಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದೆ ಆದರೆ ಅಷ್ಟರಲ್ಲಿ ನನಗೆ ಕೊರೋನಾ ಸೋಂಕು ತಗುಲಿರುವುದಾಗಿ ತಿಳಿದು ಬಂತು. ಹೀಗಾಗಿ ವಿಶ್ರಾಂತಿ ಪಡೆಯುವೆ. ನನ್ನ ಚಿತ್ರತಂಡಕ್ಕೆ ಶುಭವಾಗಲಿ, ಅನುರಾಗ್ ಠಾಕೂರ್ (Anurag Takur). ಸಂಪೂರ್ಣ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತೀನಿ' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

 

ಸಂಗೀತ ನಿರ್ದೇಶಕ ರೆಹೆಮಾನ್, ಆರ್ ಮಾದವನ್ (R Madavan), ನವಾಜುದ್ದೀನ್ ಸಿದ್ದಿಕಿ, ನಯನತಾರಾ (Nayanatara), ತಮನ್ನಾ ಭಾಟಿಯಾ, ಶೇಖರ್ ಕಪೂರ್, CBFC ಮುಖ್ಯಸ್ಥ ಪ್ರಸೂನ್ ಜೋಶಿ, ರಿಕಿ ಕೇಜ್ (Ricky Tej) ಮತ್ತು ಇತರರು ಕ್ಯಾನೆಸ್‌ 2022 ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. 

ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಯಶ್ ರಾಜ್ ಫಿಲ್ಮಸ್‌ (Yash Raj films) ನಿರ್ಮಾಣ ಮಾಡುತ್ತಿರುವ ಪೀರಿಯಡ್‌ ಡ್ರಾಮ ಪೃಥ್ವಿರಾಜ್ (Prithviraj) ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದೆ ಏಪ್ರಿಲ್ ತಿಂಗಳಿನಲ್ಲೂ ಅಕ್ಷಯ್ ಕುಮಾರ್‌ಗೆ ಕೊರೋನಾ ಸೊಂಕು ತಗುಲಿತ್ತು. 

ಅಜಯ್ ದೇವಗನ್ ಗೆ ಅಕ್ಷಯ್ ಕುಮಾರ್ ಸಾಥ್; ಗುಟ್ಕಾ ಗ್ಯಾಂಗ್ ಎಂದು ಕಾಲೆಳೆದ ನೆಟ್ಟಿಗರು

'ಬೆಳ್ಳಂಬೆಳಗ್ಗೆ ನಿಮ್ಮೆಲ್ಲರಿಗೂ ನಾನು ಒಂದು ವಿಚಾರ ತಿಳಿಸಲು ಇಷ್ಟ ಪಡುತ್ತೀನಿ, ನನಗೆ  ಕೋವಿಡ್19 ಪಾಸಿಟಿವ್ ಅಗಿದೆ. ವೈದ್ಯರು ಕೊಟ್ಟಿರುವ ಎಲ್ಲಾ ಕ್ರಮಗಳನ್ನು ಪಾಲಿಸುತ್ತಿರುವೆ. ನಮ್ಮ ನಿವಾಸದಲ್ಲಿ ಐಸೋಲೇಟ್ (Isolate) ಆಗಿದ್ದೀನಿ ಹಾಗೇ ನಿಗಧಿ ಮಾಡಿರುವ ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ (Home Quarantine) ಒಳಗಾಗುತ್ತೀನಿ. ನನ್ನ ಸಂಪರ್ಕದಲ್ಲಿ ಇದ್ದ ಪ್ರತಿಯೊಬ್ಬರು ದಯವಿಟ್ಟು ಕೋವಿಡ್ ಟೆಸ್ಟ್‌ ಮಾಡಿಸಿಕೊಳ್ಳಬೇಕು. ಶೀಘ್ರದಲ್ಲಿ ಬ್ಯಾಕ್‌ ಇನ್ ಆಕ್ಷನ್‌' ಎಂದು ಅಕ್ಷಯ್ ಬರೆದುಕೊಂಡಿದ್ದರು.

ಏಪ್ರಿಲ್ ತಿಂಗಳಿನಲ್ಲಿ ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅಕ್ಷಯ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದರು. 'ನಿಮ್ಮೆರಲ್ಲ ಪ್ರೀತಿ ಮತ್ತು ಹಾರೈಕೆಗೆ ಧನ್ಯವಾದಗಳು. ನಾನು ಈಗ ಆರೋಗ್ಯವಾಗಿದ್ದೀನಿ. ವೈದ್ಯರು ಕೊಟ್ಟ ಸಲಹೆ ಮೇಲೆ ನಾನು ಆಸ್ಪತ್ರೆಗೆ ದಾಖಲಾದೆ. ಶೀಘ್ರದಲ್ಲಿ ಡಿಸ್ಚಾರ್ಜ್‌ ಆಗಿ ಮನೆ ಸೇರುವೆ' ಎಂದು ಅಕ್ಷಯ್ ಕೇಳಿದ್ದರು. 

'ಸೂರರೈ ಪೋಟ್ರು' ಹಿಂದಿ ರಿಮೇಕ್; ಟೈಟಲ್ ಸೂಚಿಸಿ ಎಂದ ಅಕ್ಷಯ್ ಕುಮಾರ್

 

ಅಕ್ಷಯ್ ಸಿನಿಮಾಗಳು:

ಮಿಸ್ ವರ್ಲ್ಡ್‌ (Miss world) 2017 ವಿಜೇತೆ ಮಾನುಷಿ ಚಿಲ್ಲರ್ (Manushi Chillar) ಜೊತೆ ಅಕ್ಷಯ್ ಕುಮಾರ್ ಪೃಥ್ವಿರಾಜ್‌ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಯಶ್ ರಾಜ್‌ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಚಂದ್ರಪ್ರಕಾಶ್‌ ದ್ವೀವೇದಿ ನಿರ್ದೇಶನ ಮಾಡುತ್ತಿದ್ದಾರೆ. ಚೌಹಾಣ್ ರಾಜವಂಶದ ರಾಜ ಪೃಥ್ವಿರಾಜ್ ಚೌಹಾಣ್ ಅವರ ಶೀರ್ಷಿಕೆ ಪಾತ್ರದಲ್ಲಿ ಅಕ್ಷಯ್ ನಟಿಸುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ಸೋನು ಸೂದ್ (Sonu Sood) ಮತ್ತು ಸಂಜಯ್ ದತ್ (Sanjay Dutt) ಕೂಡ ಅಭಿನಯಿಸುತ್ತಿದ್ದಾರೆ. ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ಜ್ಯೂನ್ 3ರಂದು ಬಿಡುಗಡೆ ಆಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್