ಅಲ್ಲು ಅರ್ಜುನ್ 'ಪುಷ್ಪ-2'ನಲ್ಲಿ ಸಾಯಿ ಪಲ್ಲವಿ: ನಿರ್ಮಾಪಕ ಹೇಳಿದ್ದೇನು?

Published : Sep 09, 2022, 01:36 PM IST
 ಅಲ್ಲು ಅರ್ಜುನ್ 'ಪುಷ್ಪ-2'ನಲ್ಲಿ ಸಾಯಿ ಪಲ್ಲವಿ: ನಿರ್ಮಾಪಕ ಹೇಳಿದ್ದೇನು?

ಸಾರಾಂಶ

ಸೌತ್ ಸ್ಟಾರ್ ಸಾಯಿ ಪಲ್ಲವಿ ಕೂಡ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸಿನಿಮಾದ ನರ್ಮಾಪಕ ಪ್ರತಿಕ್ರಿಯೆ ನೀಡಿದ್ದು ವದಂತಿಗೆ ಬ್ರೇಕ್ ಹಾಕಿದ್ದಾರೆ. 

ತೆಲುಗು ಸ್ಟಾರ್ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಕಳೆದ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಸಿನಿಮಾಗೆ ಎಲ್ಲಾ ಭಾಷೆಯ ಪ್ರೇಕ್ಷಕರು ಬಹುಪರಾಕ್ ಹೇಳಿದ್ದರು. ಈಗ ಅದರ ಸೀಕ್ವೆಲ್​ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಮುಹೂರ್ತ ನೆರವೇರಿದ್ದು ಶೂಟಿಂಗ್ಗೆ ಹೊರಡಲು ಸಿನಿಮಾ ತಂಡ ಸಜ್ಜಾಗಿದೆ.  ಈ ನಡುವೆ ‘ಪುಷ್ಪ 2’ ಸಿನಿಮಾ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಈ ಬಹುನಿರೀಕ್ಷೆಯ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಸೌತ್ ಸ್ಟಾರ್ ಸಾಯಿ ಪಲ್ಲವಿ ಕೂಡ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ಕೇಳಿ ಅಲ್ಲು ಅರ್ಜುನ್ ಮತ್ತು ಸಾಯಿ ಪಲ್ಲವಿ ಅವರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ಸಿನಿಮಾದ ನಿರ್ಮಾಪಕರು ಹೇಳಿದ  ಮಾತು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಬಗ್ಗೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದು, ಸಾಯಿ ಪಲ್ಲವಿ ನಟಿಸುವ ಬಗ್ಗೆ ಹಬ್ಬಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. 

ಸಾಯಿ ಪಲ್ಲವಿ ಸೌತ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಪ್ರತಿಭಾವಂತ, ಸರಳ ಸುಂದರ ನಟಿ ಸಾಯಿ ಪಲ್ಲವಿ ಜೊತೆ ನಟಿಸಲು ಅನೇಕ ಸ್ಟಾರ್ಸ್ ಕೂಡ ಕಾಯುತ್ತಿದ್ದಾರೆ.  ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸಾಯಿ ಪಲ್ಲವಿ ಇತ್ತೀಚಿಗೆ ನಟಿಸಿದ ವಿರಾಟ ಪರ್ವಂ ಮತ್ತು ಗಾರ್ಗಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದ್ದರು. ಈ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ತಂದುಕೊಟ್ಟಿಲ್ಲ. ಆದರೆ ಸಾಯಿ ಪಲ್ಲವಿ ನಟನೆ ಮಾತ್ರ ಅಭಿಮಾನಿಗಳ ಹೃದಯ ಗೆದ್ದಿತ್ತು. ಈ ಚಿತ್ರಗಳು ಥಿಯೇಟರ್​ನಲ್ಲಿ ಸೋತಿದ್ದರೂ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಸೂಪರ್ ಹಿಟ್​ ಆಗಿವೆ. ಹಾಗಾಗಿ ಸಾಯಿ ಪಲ್ಲವಿ ಅವರನ್ನು ಸಿನಿಮಾಗೆ ಆಯ್ಕೆ ಮಾಡಿಕೊಂಡರೆ ಖಂಡಿತ ನಷ್ಟ ಇಲ್ಲ ಎಂಬ ಟಾಕ್​ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ಭಾರಿ ಬೇಡಿಕೆಯ ನಟಿ ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಆಂಗ್ಲ ಮಾಧ್ಯಮ ಪಿಂಕ್​ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕ ವೈ. ರವಿಶಂಕರ್​ ಪ್ರಿತಿಕ್ರಿಯೆ ನೀಡಿ, 'ಆ ಸುದ್ದಿ ನಿಜವಲ್ಲ' ಎಂದು ಹೇಳಿದ್ದಾರೆ.  

ಸಾಯಿ ಪಲ್ಲವಿ ನೋಡಿದ ಮೊದಲ ಕನ್ನಡ ಸಿನಿಮಾ ಯಾವುದು? ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡ 'ಪ್ರೇಮಂ' ಬ್ಯೂಟಿ

ಪುಷ್ಪ-2 ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರಿಗೆ ಬುಡಕಟ್ಟು ಜನಾಂಗದ ಹುಡುಗಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ನಟಿಸುವ ಸಾಯಿ ಪಲ್ಲವಿ ಪುಷ್ಪ-2 ಸಿನಿಮಾದಲ್ಲೂ ಡಿ ಗ್ಲಾಮ್ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಅಭಿಮಾನಿಗಳು ಸಹ ಕಾತರದಿಂದ ಕಾದಿದ್ದರು. ಆದರೀಗ ನಿರ್ಮಾಪಕ ಹೇಳಿಕೆ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಮದ್ವೆಯಾಗ್ತೀನಿ ಎಂದ ರಾಜಕಾರಣಿ ಪುತ್ರನಿಗೆ ಸಾಯಿ ಪಲ್ಲವಿ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್‌ ಶಾಕ್

ಪುಷ್ಪ 2 ಬಗ್ಗೆ 

ಪುಷ್ಪ-2 ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿಷ್ಠಿತ ಮೈತ್ರಿ ಮೂವೀ ಮೇಕರ್ಸ್​ ಸಂಸ್ಥೆ ಮೂಲಕ ಈ ಸಿನಿಮಾ ಮೂಡಿಬರುತ್ತಿದೆ. ಈ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಪಾರ್ಟ್-2ನಲ್ಲಿ ಫಹಾದ್​ ಫಾಸಿಲ್​ ಕೂಡ ಹೆಚಾಗಿ ತೆರೆಮೇಲೆ ಅಬ್ಬರಿಸಲಿದ್ದಾರೆ. ಇನ್ನು ಯಾರೆಲ್ಲ ಇರಲಿದ್ದಾರೆ ಎಂದು ಕಾದು ನೋಡಬೇಕಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ