Queen Elizabeth-II Death; ಬಾಲಿವುಡ್ ಗಣ್ಯರಿಂದ ಸಂತಾಪ

Published : Sep 09, 2022, 11:43 AM IST
Queen Elizabeth-II Death; ಬಾಲಿವುಡ್ ಗಣ್ಯರಿಂದ ಸಂತಾಪ

ಸಾರಾಂಶ

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್​ನ ರಾಣಿ ಎರಡನೇ ಎಲಿಜಬೆತ್ ನಿಧನ ಹೊಂದಿದ್ದಾರೆ. ನಿನ್ನೆ (ಸೆಪ್ಟಂಬರ್ 8) ರಂದು ಕ್ವೀನ್ ಎಲಿಜಬೆತ್ ಕೊನೆಯುಸಿರೆಳೆದಿದ್ದಾರೆ. ಕರೀನಾ ಕಪೂರ್, ನೀತು ಕಪೂರ್, ಶಿಲ್ಪಾ ಶೆಟ್ಟಿ, ಸುಶ್ಮಿತಾ ಸೇನ್, ಗೀತಾ ಬಾಸ್ರಾ, ರಿತೇಶ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.   

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್​ನ ರಾಣಿ ಎರಡನೇ ಎಲಿಜಬೆತ್ ನಿಧನ ಹೊಂದಿದ್ದಾರೆ. ನಿನ್ನೆ (ಸೆಪ್ಟಂಬರ್ 8) ರಂದು ಕ್ವೀನ್ ಎಲಿಜಬೆತ್ ಕೊನೆಯುಸಿರೆಳೆದಿದ್ದಾರೆ. ಕ್ವೀನ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. 96 ವರ್ಷ ಎರಡನೇ ಎಲಿಜಬೆತ್ ನಿಧನ ಸುದ್ದಿಯನ್ನು ಬಂಕಿಂಗ್ ಹ್ಯಾಮ್ ಅರಮನೆ ಖಚಿತಪಡಿಸಿದೆ. ಎರಡನೇ ಎಲಿಜಬೆತ್​ ಬ್ರಿಟನ್​ ಅನ್ನು ಏಳು ದಶಕಗಳ ಕಾಲ ಆಳಿದ್ದರು ಎನ್ನುವುದೇ ವಿಶೇಷ. ಎಲಿಜಬೆತ್ 1952ರಲ್ಲಿ ಕ್ವೀನ್ ಪಟ್ಟಕ್ಕೆ ಏರಿದರು. ತಂದೆ ಕಿಂಗ್ ಜಾರ್ಜ್​ VI ನಿಧನದ ನಂತರದಲ್ಲಿ ಅವರಿಗೆ ಅಧಿಕಾರ ಸಿಕ್ಕಿತು. ನಂತರ 70 ವರ್ಷಗಳ ಕಾಲ ಎಡನೇ ಎಲಿಜಬೆತ್ ಈ ಸ್ಥಾನದಲ್ಲಿದ್ದರು.

ಗುರುವಾರ ಎರಡನೇ ಎಲಿಜಬೆತ್ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿರು. ಬ್ರಿಟನ್​ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ದೇಶದ ಗಣ್ಯರು ಎಲಿಜಬೇತ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ರಾಜಕೀಯ ಗಣ್ಯರು ಮಾತ್ರವಲ್ಲದೇ ಸಿನಿಮಾ ಗಣ್ಯರು ಸಹ ಕ್ವೀನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಂತಾಪ ಸೂಚಿಸಿ ಪೋಸ್ಟ್ ಮಾಡುತ್ತಿದ್ದಾರೆ. ಕರೀನಾ ಕಪೂರ್, ನೀತು ಕಪೂರ್, ಶಿಲ್ಪಾ ಶೆಟ್ಟಿ, ಸುಶ್ಮಿತಾ ಸೇನ್, ಗೀತಾ ಬಾಸ್ರಾ, ರಿತೇಶ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 

ನಟಿ ಸುಶ್ಮಿತಾ ಸೇನ್ ಪ್ರತಿಕ್ರಿಯೆ ನೀಡಿ,  ಎಂಥ ಜೀವನ, ಅಸಾಧ್ಯ. ಪ್ರತಿಬಣ್ಣವನ್ನು ಪ್ರೀತಿಸುತ್ತಿದ್ದರು. ಅದರ ಪ್ರತಿಯೊಂದು ಶೇಡ್‌ಗಳನ್ನು ಜೀವಿಸಿದ್ದಾರೆ. ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ವೀಟ್ ಮಾಡಿದ್ದಾರೆ.

 ನಟ ರಿತೇಶ್ ದೇಶಮುಖ್ ಪ್ರತಿಕ್ರಿಯೆ ನೀಡಿ, ಯುಗ ಅಂತ್ಯ. ಎಂಥ ಕಠಿಣ ಸಮಯದಲ್ಲೂ ತನ್ನ ಘನತೆ ಬಿಟ್ಟುಕೊಟ್ಟಿಲ್ಲ. ಇದು ನಿಜಕ್ಕೂ ದುಃಖದ ವಿಚಾರ. ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ವೀಟ್ ಮಾಡಿದ್ದಾರೆ.

ನಟಿ ಗೀತಾ ಬಸ್ರಾ ಟ್ವೀಟ್ ಮಾಡಿ, 'ನಿಜಕ್ಕೂ ದುಃಖದ ವಿಚಾರ. ಯುಗ ಅಂತ್ಯ. ಎಂಥ ಜೀವನ, ಎಂಥ ಮಹಿಳೆ' ಎಂದು ಬಣ್ಣಿಸಿದ್ದಾರೆ.

ಇನ್ನು ನಟಿ   ಶಿಲ್ಪಾ ಶೆಟ್ಟಿ, ಕರೀನಾ ಕಪೂರ್, ನೀತು ಕಪೂರ್ ಸೇರಿದಂತೆ ಅನೇಕರು ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿ ಸಂತಾಪ ಸೂಚಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!