Brahmastra Twitter Review: ರಣಬೀರ್-ಆಲಿಯಾ ಚಿತ್ರಕ್ಕೆ ಡಿಸಾಸ್ಟರ್, ಹಾರಿಬಲ್ ಎಂದ ನೆಟ್ಟಿಗರು

Published : Sep 09, 2022, 01:04 PM IST
Brahmastra Twitter Review: ರಣಬೀರ್-ಆಲಿಯಾ ಚಿತ್ರಕ್ಕೆ ಡಿಸಾಸ್ಟರ್, ಹಾರಿಬಲ್ ಎಂದ ನೆಟ್ಟಿಗರು

ಸಾರಾಂಶ

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಇಂದು (ಸೆಪ್ಟಂಬರ್ 9) ಅದ್ದೂರಿಯಾಗಿ ತೆರೆಗೆ ಬಂದಿದೆ. ಭಾರಿ ನಿರೀಕ್ಷೆ ಮತ್ತು ಕುತೂಹಲದಿಂದ ತೆರೆಗೆ ಬಂದ ಬ್ರಹ್ಮಾಸ್ತ್ರ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. 

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಇಂದು (ಸೆಪ್ಟಂಬರ್ 9) ಅದ್ದೂರಿಯಾಗಿ ತೆರೆಗೆ ಬಂದಿದೆ. ಭಾರಿ ನಿರೀಕ್ಷೆ ಮತ್ತು ಕುತೂಹಲದಿಂದ ತೆರೆಗೆ ಬಂದ ಬ್ರಹ್ಮಾಸ್ತ್ರ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಬ್ರಹ್ಮಾಸ್ತ್ರ ಸಿನಿಮಾ ವೀಕ್ಷಿಸಿದ ಸಿನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಡಿಸಾಸ್ಟರ್, ಹಾರಿಬಲ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 5 ಕ್ಕೆ ಕೇವಲ ಒಂದು, ಎರಡು ಸ್ಟಾರ್ ಮಾತ್ರ ನೀಡುತ್ತಿದ್ದಾರೆ. ಬಿಗ್ ಬಜೆಟ್ ನಲ್ಲಿ ತಯಾರಾಗಿದ್ದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಾಣುವ ಸುಳಿವು ನೀಡಿದೆ. ಅಯಾನ್ ಮುಖರ್ಜಿ ಸಾರಥ್ಯದಲ್ಲಿ ಬಂದ ಬ್ರಹ್ಮಾಸ್ತ್ರ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ  ಬಜೆಟ್ ನಲ್ಲಿ ತಯಾರಾಗಿದೆ. 

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಜೊತೆಗೆ ಅಮಿತಾಭ್, ಮೌನಿ ರಾಯ್, ಸೌತ್ ಸ್ಟಾರ್ ನಾಗಾರ್ಜುನ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿತ್ತು. ಭಾರಿ ನಿರೀಕ್ಷೆಯೊಂದಿಗೆ ಬಂದ ಸಿನಿಮಾ ನಿರಾಸೆ ಮೂಡಿಸಿರುವುದು ಬೇಸರ ತಂದಿದೆ. ಇನ್ನು ಈ ಸಿನಿಮಾ ರಿಲೀಸ್ ಗೂ ಮೊದಲೇ ಬಾಯ್ಕಟ್ ಸಮಸ್ಯೆಗೆ ಗುರಿಯಾಗಿತ್ತು. ಬಾಯ್ಕಟ್ ಬ್ರಹ್ಮಾಸ್ತ್ರ ಎಂದು ಟ್ರೆಂಡ್ ಮಾಡಲಾಗಿತ್ತು. ರಣಬೀರ್ ಕಪೂರ್ ಗೋಮಾಂಸ ಹೇಳಿಕೆ ಹಾಗೂ ಅಲಿಯಾ ಭಟ್ ಹೇಳಿಕೆಯಿಂದ ಸಿನಿಮಾ ರಿಲೀಸ್‌ಗೂ ಮೊದಲೇ ಭಾರಿ ಸಮಸ್ಯೆ ಎದುರಿಸಿತ್ತು. ಆದರೆ ರಿಲೀಸ್ ಆದ ಬಳಿಕ ಸಿನಿಮಾ ನಿರಾಸೆ ಮೂಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡುತ್ತಿದ್ದಾರೆ.     

'ಕೊನೆಗೂ ಸಿನಿಮಾ ನೋಡಿದೆ. ಇಂಥ ಕೆಟ್ಟ ಮಟ್ಟದ ಚಿತ್ರಕಥೆಯನ್ನು ನಿರೀಕ್ಷಿಸಿರಲಿಲ್ಲ. ಕಥೆಯು ಹೇಳಿಕೊಳ್ಳುವಂತಿಲ್ಲ. ಶಾರುಖ್ ಅತಿಥಿ ಪಾತ್ರ ಮುಖ್ಯ. ಸಿನಿಮಾದ ಅವಧಿಯವನ್ನು ಕಡಿಮೆ ಮಾಡಬಹುದ್ದಿತ್ತು' ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೋರ್ವ ಟ್ವೀಟ್ ಮಾಡಿ ಸಿನಿಮಾ ನೋಡುವುದನ್ನು ನಿಲ್ಲಿಸಿ ಹಣ ಉಳಿಸಿ ಎಂದು ಟ್ವೀಟ್ ಮಾಡಿದ್ದಾರೆ. ಒಂದೇ ವರ್ಡ್‌ನಲ್ಲಿ ಹೇಳಬೇಕೆಂದರೆ ಪ್ಯಾಥಟಿಕ್ ಎಂದು ಹೇಳಿದ್ದಾರೆ.

ಇನ್ನು ಸಿನಿಮಾ ವಿಮರ್ಷಕ ತರಣ್ ಆದರ್ಶ್ ಟ್ವೀಟ್ ಮಾಡಿ, ಬ್ರಹ್ಮಾಸ್ತ್ರ ಭಾರಿ ನಿರಾಸೆ ಮೂಡಿಸಿದೆ ಎಂದು ಕೇವಲ ಎರಡು ಸ್ಟಾರ್ ನೀಡಿದ್ದಾರೆ. 'ಕಂಟೆಂಟ್ ಗಿಂತ ವಿಎಫ್‌ಎಕ್ಸ್ ಜಾಸ್ತಿ ಇದೆ. ಇದರಲ್ಲಿ ಆತ್ಮನೆ ಇಲ್ಲ' ಎಂದು ಜರಿದಿದ್ದಾರೆ.

ರಣಬೀರ್‌ಗೆ ಕಂಟಕವಾದ ಗೋಮಾಂಸ ಹೇಳಿಕೆ; ಉಜ್ಜಯಿನಿ ದೇವಸ್ಥಾನ ಪ್ರವೇಶಿಸದಂತೆ ತಡೆದ ಬಜರಂಗದಳ ಕಾರ್ಯಕರ್ತರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?