ದಳಪತಿ ವಿಜಯ್ ಜೊತೆ ನಟಿಸಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತರೂ ಅಮ್ಮ ಕೇಳಲಿಲ್ವಂತೆ! ಕುತೂಹಲದ ಮಾಹಿತಿ ರಿವೀಲ್. ಆಗಿದ್ದೇನು?
ದಳಪತಿ ವಿಜಯ್ (Thalapathy Vijay) ಸಿನಿಮಾ ಹಾಗೂ ಪಾಲಿಟಿಕ್ಸ್ ಎರಡರಲ್ಲೂ ಫುಲ್ ಬ್ಯುಸಿ ಆಗಿದ್ದಾರೆ. ಇತ್ತ ಪ್ರಿಯಾಂಕಾ ಚೋಪ್ರಾ ಸದ್ಯ ಬಾಲಿವುಡ್ ಸಹವಾಸವೇ ಬೇಡ ಎಂದು ಹಾಲಿವುಡ್ಗೆ ಹಾರಿದ್ದು, ಪತಿ ಮತ್ತು ಮಗಳ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಇದರ ನಡುವೆಯೇ ಇಂಟರೆಸ್ಟಿಂಗ್ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಅದೇನೆಂದರೆ ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲ್ಲ ಎಂದು ಹಿಂದೊಮ್ಮೆ ಬಿಕ್ಕಿ ಬಿಕ್ಕಿ ಅತ್ತಿದ್ರಂತೆ ಪ್ರಿಯಾಂಕಾ ಚೋಪ್ರಾ! ಹೌದು. ಈ ವಿಷಯವನ್ನು ಖುದ್ದು ಅವರ ಅಮ್ಮ ಮಧು ಇದೀಗ ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ನಟ ದಳಪತಿ ವಿಜಯ್ ಅವರು ಎಂಥ ಸೂಪರ್ಸ್ಟಾರ್ ಎಂದರೆ, ಅವರ ಜೊತೆ ನಟಿಸಲು ದೊಡ್ಡ ದೊಡ್ಡ ನಟಿಯರೇ ಪಟ್ಟು ಹಿಡಿಯುತ್ತಾರೆ. ಅಂಥದ್ದರಲ್ಲಿ ಪ್ರಿಯಾಂಕಾಗೆ ಅದೇನಾಗಿತ್ತು ಎನ್ನುವ ಕುತೂಹಲದ ವಿಷಯವನ್ನು ಮಧು ಅವರು ಇದೀಗ ತೆರೆದಿಟ್ಟಾರೆ.
ಅಷ್ಟಕ್ಕೂ ಇದು ನಡೆದದ್ದು 2002ರಲ್ಲಿ. ಅಂದು ಏನಾಯಿತು, ಹಾಗೂ ತಾವು ವಿಜಯ್ ಜೊತೆ ನಟಿಸಲು ಹೇಗೆ ಮಗಳ ಮನವೊಲಿಸಿದೆ ಎಂಬ ಬಗ್ಗೆ ಮಧು ಅವರು ಈಗ ಹೇಳಿದ್ದಾರೆ. 2000ನೇ ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡರು. ಅವರಿಗೆ ಕೂಡಲೇ ತಮಿಳು ಚಿತ್ರರಂಗದಿಂದ ಆಫರ್ ಬಂತು. ದಳಪತಿ ವಿಜಯ್ ನಟನೆಯ ‘ತಮಿಳನ್’ ಸಿನಿಮಾಗೆ ನಾಯಕಿ ಆಗುವಂತೆ ಆಫರ್ ನೀಡಲಾಗಿತ್ತು. ಆದರೆ ಪ್ರಿಯಾಂಕಾ ಇದುದ ಸಾಧ್ಯವಿಲ್ಲ ಎಂದು ಅತ್ತಿದ್ದರಂತೆ. ಅಷ್ಟಕ್ಕೂ ಅವರಿಗೇನು ದಳಪತಿ ವಿಜಯ್ ಜೊತೆ ಮುನಿಸಾಗಲೀ, ಇನ್ನೇನೋ ಇರಲಿಲ್ಲ. ಬದಲಿಗೆ ಸಿನಿಮಾದಲ್ಲಿ ನಟಿಸಲು ಅವರಿಗೆ ಇಷ್ಟವಿರಲಿಲ್ಲ ಅಷ್ಟೇ.
ಒಹೊ... ಮೂರೂ ಬಿಟ್ಟವರಿಗೆ ಇದು ಬೇರೆ ಗೊತ್ತಾಗತ್ತಾ? ಜಾಹ್ನವಿ ಕಪೂರ್ ಮಾತಿಗೆ ಇನ್ನಿಲ್ಲದ ಟ್ರೋಲ್
ಈ ಕುರಿತು ಮಧು ಅವರು ಹೇಳಿದ್ದೇನೆಂದರೆ, ಸಿನಿಮಾಗಳಲ್ಲಿ ನಟಿಸುವುದು ಪ್ರಿಯಾಂಕಾಗೆ ಇಷ್ಟವಿರಲಿಲ್ಲ. ಮಿಸ್ ವರ್ಲ್ಡ್ ಆಗುತ್ತಿದ್ದಂತೆಯೇ ದಕ್ಷಿಣ ಭಾರತದ ಸಿನಿಮಾ ಆಫರ್ ಸಿಕ್ಕಿತು. ಆ ಬಗ್ಗೆ ನಾನು ಆಕೆಗೆ ಹೇಳಿದಾಗ ಅಳಲು ಆರಂಭಿಸಿದಳು. ಸಿನಿಮಾಗಳಲ್ಲಿ ನಟಿಸಲು ತನಗೆ ಇಷ್ಟ ಇಲ್ಲ ಎಂದಳು. ಆದರೆ ಒಪ್ಪಿಕೋ ಎಂದು ನಾನು ತುಂಬಾ ಬಲವಂತ ಮಾಡಿದೆ. ಅವಳಿಗೆ ನಟಿಯಾಗುವ ಇಷ್ಟವೇ ಇರಲಿಲ್ಲ. ನನ್ನ ಬಲವಂತಕ್ಕೆ ಅವರು ಆ ಚಿತ್ರಕ್ಕೆ ಸಹಿ ಮಾಡಿದಳು ಎಂದು ಮಧು ಚೋಪ್ರಾ ಹೇಳಿದ್ದಾರೆ. ಆದರೆ ಇದು ಪ್ರಿಯಾಂಕಾ ಅವರ ಸಿನಿ ಪಯಣದಲ್ಲಿ ದೊಡ್ಡ ಬ್ರೇಕ್ ಆಯಿತು. ಆ ಸಿನಿಮಾದ ಬಳಿಕ ಪ್ರಿಯಾಂಕಾ ಅವರಿಗೆ ಬಾಲಿವುಡ್ನಿಂದ ಆಫರ್ ಬರಲು ಆರಂಭ ಆಯಿತು.
‘ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲು ಆರಂಭಿಸಿದಾಗ ಪ್ರಿಯಾಂಕಾಗೆ ಅದು ಇಷ್ಟ ಆಯಿತು. ತಮಿಳು ಭಾಷೆ ಬರದಿದ್ದರೂ ಕೂಡ ಆಕೆ ಶೂಟಿಂಗ್ ಎಂಜಾಯ್ ಮಾಡಿದಳು. ಚಿತ್ರತಂಡದವರು ಆಕೆಯನ್ನು ಗೌರವದಿಂದ ನೋಡಿಕೊಂಡರು. ವಿಜಯ್ ಅವರು ಜಂಟಲ್ಮನ್. ಹಾಡಿಗೆ ರಾಜು ಸುಂದರಂ ಕೊರಿಯೋಗ್ರಫಿ ಮಾಡಿದರು. ಆರಂಭದಲ್ಲಿ ವಿಜಯ್ ಜೊತೆ ಡ್ಯಾನ್ಸ್ ಸ್ಟೆಪ್ ಮ್ಯಾಚ್ ಮಾಡಲು ಪ್ರಿಯಾಂಕಾಗೆ ಸಾಧ್ಯವಾಗಲಿಲ್ಲ. ನಂತರ ಕೊರಿಯೋಗ್ರಾಫರ್ ಜೊತೆ ಅಭ್ಯಾಸ ಮಾಡಿ ಶೂಟಿಂಗ್ನಲ್ಲಿ ಭಾಗಿಯಾದಳು’ ಎಂದು ಅಂದಿನ ದಿನವನ್ನು ನೆನಪಿಸಿಕೊಂಡಿದ್ದಾರೆ ಮಧು ಚೋಪ್ರಾ.
ಅದೆಷ್ಟೂ ಅಂತ ಕೂದಲು ಕಿತ್ಕೋತಿಯಾ ತಾಯಿ? ಕೈಮೇಲೆ ಮಾಡಿ ಏನ್ ತೋರಿಸ್ತಿದ್ದಿಯಾ ಕೇಳ್ತಿದ್ದಾರೆ ಫ್ಯಾನ್ಸ್