ರಾತ್ರಿ ಒಬ್ಬ ನಮ್ಮನೆ ಬಾಲ್ಕನಿಗೆ ಹಾರಿದ ಬಳಿಕ ಅಪ್ಪ ಒಂದು ಷರತ್ತು ಹಾಕಿದ್ರು; ಬಾಲ್ಯದ ಬಗ್ಗೆ ಪ್ರಿಯಾಂಕಾ ಮಾತು

Published : May 03, 2023, 12:22 PM ISTUpdated : May 03, 2023, 12:24 PM IST
ರಾತ್ರಿ ಒಬ್ಬ ನಮ್ಮನೆ ಬಾಲ್ಕನಿಗೆ ಹಾರಿದ ಬಳಿಕ ಅಪ್ಪ ಒಂದು ಷರತ್ತು ಹಾಕಿದ್ರು; ಬಾಲ್ಯದ ಬಗ್ಗೆ ಪ್ರಿಯಾಂಕಾ ಮಾತು

ಸಾರಾಂಶ

ಒಬ್ಬ ವ್ಯಕ್ತಿ ರಾತ್ರಿ ಬಾಲ್ಕನಿಗೆ ಹಾರಿದ್ದ, ನಂತರ ಅಪ್ಪ ಒಂದು ಷರತ್ತು ಹಾಕಿದ್ರು ಎಂದು ಪ್ರಿಯಾಂಕಾ ಚೋಪ್ರಾ ಬಾಲ್ಯದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. 

ಬಾಲಿವುಡ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಅಮೆರಿಕಾದ ಖ್ಯಾತ ಗಾಯಕ ನಿಕ್ ಜೋನಸ್ ಮದುವೆಯಾದ ಬಳಿಕ ಪ್ರಿಯಾಂಕಾ ಅಲ್ಲೇ ಸೆಟ್ಲ್ ಆಗಿದ್ದಾರೆ. ಬಾಲಿವುಡ್ ಸಿನಿಮಾಗಳಿಂದನೂ ಪ್ರಿಯಾಂಕಾ ಅಂತರ ಕಾಯ್ದುಕೊಂಡಿದ್ದಾರೆ. ಹಾಲಿವುಡ್ ಸಿನಿಮಾ ಮತ್ತು ವೆಬ್ ಸೀರಿಸ್‌ಗಳಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಅಂದಹಾಗೆ ಪ್ರಿಯಾಂಕಾ ಈ ಮೊದಲು ಸಹ ಅಮೆರಿಕಾಗೆ ತೆರಳಿದ್ದರು. ಅಂದರೆ ಬಾಲಿವುಡ್ ಸ್ಟಾರ್ ಬಾಲ್ಯವನ್ನು ಸಹ ಅಮೆರಿಕಾದಲ್ಲಿ ಕಳೆದರು. 16ನೇ ವಯಸ್ಸಿನಲ್ಲಿ ಪ್ರಿಯಾಂಕಾ ಭಾರತಕ್ಕೆ ಮರಳಿದಾಗ ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ತಂದೆ ಎಷ್ಟು ಇಷ್ಟಪಡುತ್ತಿದ್ದರು, ಕೇರ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 

ತನ್ನ ಶಾಲಾದಿನಗಳ ಬಗ್ಗೆ ಮಾತನಾಡಿದ ಪ್ರಿಯಾಂಕಾ ಅಮೆರಿಕಾದಿಂದ ಭಾರತಕ್ಕೆ ಪಾವಾಸ್ ಆದಾಗ ರಾತ್ರಿ ಮಲಗಿದ್ದಾಗಾ ವ್ಯಕ್ತಿಯೊಬ್ಬ ಬಾಲ್ಕನಿಗೆ ಹಾರಿದ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ. ಆಗ ತಂದೆ ಅಶೋಕ್ ಚೋಪ್ರಾ ನಡೆದುಕೊಂಡು ರೀತಿ ಹೇಗಿತ್ತು ಎಂದು ಸಹ ಬಹಿರಂಗ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಂಕಾ, 'ನನ್ನ ತಂದೆ ತುಂಬಾ ವ್ಯಾಮೋಹಕ್ಕೊಳಗಾಗಿದ್ದರು. ಯಾಕೆಂದರೆ 12 ವರ್ಷದ ಮಗಳನ್ನು ಅಮೆರಿಕಾಗೆ ಕಳುಹಿಸಿದ್ದರು. ಭಾರತಕ್ಕೆ ಮರಳಿದಾಗ ನನ್ನನ್ನು ಹುಡುಗರು ಹಿಂಬಾಲಿಸುತ್ತಿದ್ದರು. ಮನೆವರೆಗೂ ಬರುತ್ತಿದ್ದರು. ಅದರಲ್ಲಿ ಒಬ್ಬ ರಾತ್ರಿ ನನ್ನ ಮನೆಯ ಬಾಲ್ಕನಿಗೆ ಹಾರಿದ್ದ. ಆಗ ನನ್ನ ತಂದೆ ಭಾರತದ ಉಡುಗೆ ಹಾಕಿದ್ದರೆ ಏನು ಆಗುತ್ತಿರಲಿಲ್ಲ ಎಂದು ಹೇಳಿದರು. ನನ್ನನ್ನು ಎಲ್ಲಾ ಕಡೆ ಕರೆದುಕೊಂಡು ಹೋಗಲು ಒಬ್ಬ ಡ್ರೈವರ್ ಇದ್ದರು. ಬಳಿಕ ನನ್ನ ವೃತ್ತಿ ಜೀವನ ಪ್ರಾರಂಭವಾಯಿತು' ಎಂದು ಹೇಳಿದ್ದಾರೆ.  

Met Gala 2023: ಜಗಮಗ ಫ್ಯಾಷನ್ ಈವೆಂಟ್‌ಲ್ಲಿ ಬಾಲಿವುಡ್ ಸ್ಟಾರ್ಸ್; ದೀಪಿಕಾ, ಅಲಿಯಾ, ಪ್ರಿಯಾಂಕಾ ಮಿಂಚಿಂಗ್

'ಆ ದಿನ ನನ್ನ ಮಲಗುವ ರೂಮಿನ ಹೊರಗೆ ಯಾರೋ ಇದ್ದರು. ಆತ ನನ್ನ ಬಾಲ್ಕನಿಯಲ್ಲಿದ್ದ. ನಾನು ಅವನನ್ನು ನೋಡಿದೆ, ಮತ್ತು ನಾನು ಕಿರುಚುತ್ತಾ ನನ್ನ ತಂದೆಯ ಬಳಿಗೆ ಹೋದೆ. ನನ್ನ ತಂದೆ ಬಂದರು, ಆಗ ಆತ ಹಾರಿ ಹೋದ. ಮರುದಿನ ನನ್ನ ತಂದೆ, 'ನಿಮಗೆ ಒಂದಿಷ್ಟು ನಿಯಮಗಳು ಹಾಕಬೇಕು' ಎಂದು ಹೇಳಿದರು. ನನ್ನ ಜೀವನದ ಆ ಎರಡು ವರ್ಷಗಳು ತುಂಬಾ ವ್ಯರ್ಥವಾಗಿತ್ತು. ವಿಶೇಷವಾಗಿ ನಾನು ಭಾರತಕ್ಕೆ ಹಿಂತಿರುಗಿದಾಗ. ಅಮೆರಿಕಾದಿಂದ ಬಂದ ನನಗೆ ಹುಡುಗಿಯರು ಹೆದರಿಸುತ್ತಿದ್ದರು' ಎಂದು ಹೇಳಿದ್ದಾರೆ. 

ಬಾತ್​ರೂಮಲ್ಲಿ ಕದ್ದುಮುಚ್ಚಿ ಊಟ ಮಾಡಿದ ದಿನ ನೆನಪಿಸಿಕೊಂಡ Priyanka Chopra

ಪ್ರಿಯಾಂಕಾ ಚೋಪ್ರಾ ಸದ್ಯ ಸಿಟಾಡೆಲ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸೀರಿಸ್‌ನ ಭಾರತದ ವರ್ಷನ್ ಕೂಡ ತಯಾರುಗುತ್ತಿದೆ. ಭಾರತದಲ್ಲಿ ಸಮಂತಾ ರುತ್ ಪ್ರಭು ಮತ್ತು ಬಾಲಿವುಡ್ ನಟಿ ವರುಣ್ ಧವನ್ ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಸೀರಿಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಮೊನ್ನೆಯಷ್ಟೆ ಮೆಟ್ ಗಾಲಾ 2023 ಫ್ಯಾಷನ್ ಈವೆಂಟ್ ನಲ್ಲಿ ಭಾಗಿಯಾಗಿದ್ದರು. ಕಪ್ಪು ಬಣ್ಣದ ಹೈ ಸ್ಲಿಟ್ ಗೌನ್ ಧರಿಸಿ ಮಿಂಚಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!