Intimate Scene ಮಾಡಲ್ಲ ಅಂದ್ಲು ಪಿಸಿ, ಸ್ಟಾರ್​ ನಟನಾಗಿದ್ರೆ ವಯಸ್ಸೂ ಅಡ್ಡ ಬರಲ್ಲ!

By Suvarna NewsFirst Published Feb 20, 2023, 4:11 PM IST
Highlights

ಪ್ರಿಯಾಂಕಾ ಚೋಪ್ರಾ ತಮ್ಮ ಜೊತೆ ಇಂಟಿಮೇಟ್​ ಸೀನ್​ ಮಾಡಲು ಒಪ್ಪಿರಲಿಲ್ಲ ಎಂದು ತಿಳಿಸಿದ ಅನ್ನು ಕಪೂರ್​ ಇದಕ್ಕೆ ಕೊಟ್ಟ ಕಾರಣವೇನು? 
 

ಪಠಾಣ್​ ಚಿತ್ರದಲ್ಲಿ 57 ವರ್ಷದ ಶಾರುಖ್​ ಖಾನ್​ ಜೊತೆ 37 ವರ್ಷದ ದೀಪಿಕಾ ಪಡುಕೋಣೆ (Deepika Padukone) ಬಿಂದಾಸ್​ ಆಗಿಇಂಟಿಮೇಟ್​  ಮಾಡಿದ್ದಾರೆ. ಇದರಿಂದ ಶಾರುಖ್​ ಖಾನ್​ ವಿರೋಧಿಗಳು ಟ್ರೋಲ್​ ಮಾಡಿದ್ದೂ ಉಂಟು. ಅಪ್ಪನ ಪಾತ್ರ ಮಾಡುವುದನ್ನು ಬಿಟ್ಟು, ಚಿಕ್ಕ ವಯಸ್ಸಿನವಳ ಜೊತೆ ಈ ಪರಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಎಷ್ಟು ಸರಿ ಎಂದು ಟ್ರೋಲಿಗರು ಪ್ರಶ್ನಿಸಿದ್ದೂ ಉಂಟು. ಆದರೆ ಚಿತ್ರರಂಗದಲ್ಲಿ ಇದೆಲ್ಲಾ ಮಾಮೂಲು. ಒಮ್ಮೆ ನಟನಾಗಿ ಗುರುತಿಸಿಕೊಂಡ ಮೇಲೆ ಅವರು ವಯಸ್ಸು ಎಷ್ಟೇ ಆದರೂ ಬೇರೆ ರೋಲ್​ಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವೇ. ಅದೇ ರೀತಿ ನಾಯಕ ಫೇಮಸ್​ ಇದ್ದರೆ ನಾಯಕಿ ಕೂಡ ಎಷ್ಟೇ ಚಿಕ್ಕ ವಯಸ್ಸಿನವಳಾದರೂ ಆತನ ಜೊತೆ ಯಾವುದೇ ಪಾತ್ರಕ್ಕೂ ಸಿದ್ಧಳಾಗುತ್ತಾಳೆ. 

ಈಗ ಈ ವಿಷಯ ಮುನ್ನೆಲೆಗೆ ಬರಲು ಕಾರಣವೇನೆಂದರೆ ನಟ ಅನ್ನು ಕಪೂರ್​ ಅವರು ನಟಿ ಪ್ರಿಯಾಂಕಾ ಚೋಪ್ರಾ ಕುರಿತು ಹೇಳಿರುವ ಹೇಳಿಕೆಯಿಂದಾಗಿ. 67 ವರ್ಷದ ಅನ್ನು ಕಪೂರ್​ ತಮ್ಮ ಸಿನಿ ಪಯಣದ ಕೆಲವೊಂದು ರೋಚಕ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲಿ ಒಂದು ಪ್ರಿಯಾಂಕಾ ಚೋಪ್ರಾ ಕುರಿತು. ಅಸಲಿಗೆ ಪ್ರಿಯಾಂಕಾ ಅವರಿಗೆ ಈಗ 40 ವರ್ಷ. ಅರ್ಥಾತ್​ ಅನ್ನು ಕಪೂರ್​ (Annu Kapoor) ಅವರಿಗಿಂತ 27 ವರ್ಷ ಚಿಕ್ಕವರು. ಆದರೆ ಅದೊಂದು ಚಿತ್ರದಲ್ಲಿ ಚಿತ್ರಕ್ಕೆ ಪೂರಕವಾಗಿ ಪ್ರಿಯಾಂಕಾ ಚೋಪ್ರಾ ಅನ್ನು ಕಪೂರ್​ ಅವರ ಜೊತೆಇಂಟಿಮೇಟ್​  ಸೀನ್​ನಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಚಿತ್ರದಲ್ಲಿ ಪ್ರಿಯಾಂಕಾ ಅವರ ಪತಿಗಾಗಿ ಅನ್ನು ಕಪೂರ್​ ನಟಿಸುತ್ತಿದ್ದರು. ಚಿತ್ರದಲ್ಲಿ ಕೂಡ ಪ್ರಿಯಾಂಕಾ ಚಿಕ್ಕವರೇ, ಆದರೆ ದೊಡ್ಡವರ ಜೊತೆ ಮದುವೆಯಾಗಿತ್ತು. ಇದರ ಹೊರತಾಗಿಯೂ ಚಿಕ್ಕ ಇಂಟಿಮೇಟ್​  ಸೀನ್​ ಮಾಡಲು ಪ್ರಿಯಾಂಕಾ ಒಪ್ಪಿರಲಿಲ್ಲ. ಈ ಬಗ್ಗೆ ಅನ್ನು ಕಪೂರ್​ ಈಗ ಬಹಿರಂಗಪಡಿಸಿದ್ದಾರೆ.  ಈಗಿನ ತಾರೆಯರು, ಸ್ಟಾರ್​ ನಟರ ಜೊತೆ ಮಾತ್ರ ವಯಸ್ಸಿನಲ್ಲಿ ತೀರಾ ದೊಡ್ಡವರಾದವರೂ ಚಿಂತಿಸದೇ  ಯಾವ ದೃಶ್ಯಗಳಲ್ಲಿ ಬೇಕಾದರೂ  ನಟಿಸುತ್ತಾರೆ ಎನ್ನುವುದನ್ನು ಪರೋಕ್ಷವಾಗಿ ಅನ್ನು ಕಪೂರ್​ ಹೇಳಿದ್ದಾರೆ. 

Latest Videos

Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!

ಇನ್ನು ತಮ್ಮ ಚಿತ್ರದ ಬಗ್ಗೆ ಅವರು ಹೇಳಿದ್ದು,  'ಸಾತ್ ಖೂನ್ ಮಾಫ್' ಚಿತ್ರ. 2011ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ  ಪ್ರಿಯಾಂಕಾ ಚೋಪ್ರಾ ಅವರಿಗೆ ಏಳು ಮಂದಿ ಗಂಡಂದಿರು. ಅದರಲ್ಲಿ ಐದನೇ ಗಂಡ ಕೀಮಾ ಲಾಲ್​ (Keema Laal) ಪಾತ್ರವನ್ನು  ಅನ್ನು  ಕಪೂರ್ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಅನ್ನು  ಕಪೂರ್ ನಡುವೆ ತೀರಾ ಆತ್ಮೀಯ ಎನಿಸುವ ಸೀನ್​ (Intemate scene) ಮಾಡಬೇಕಿತ್ತು.  ಆದರೆ ಪ್ರಿಯಾಂಕಾ ಆ ದೃಶ್ಯವನ್ನು ಮಾಡಲು ನಿರಾಕರಿಸಿದರು. ಇದಕ್ಕೆ ಕಾರಣವನ್ನು ವಿವರಿಸಿದ ಅನ್ನು ಕಪೂರ್​,  'ಬಹುಶಃ ನಾನು ನೋಡಲು ಚೆನ್ನಾಗಿಲ್ಲ ಎಂದು ಹೀಗೆ ಮಾಡಿರಬೇಕು. ನಾನು ಫಿಟ್ ಹೀರೋ ಆಗಿರಲಿಲ್ಲವಲ್ಲ. ಸ್ಟಾರ್​ ನಟನೂ ಆಗಿರಲಿಲ್ಲ. ಸ್ಟಾರ್​ ನಟನಾಗಿದ್ರೆ ಅವರಿಗೆಲ್ಲಾ ವಯಸ್ಸು ಅಡ್ಡ ಬರಲ್ಲ' ಎಂದಿದ್ದಾರೆ. ಈ ಮೂಲಕ ಸೂಚ್ಯವಾಗಿ ಸ್ಟಾರ್ ನಟರ ಜೊತೆ ಪಾತ್ರಕ್ಕೆ ಅಗತ್ಯವಿಲ್ಲದಿದ್ದರೂ ನಟಿಯರು ವಯಸ್ಸಿನ ಮಿತಿ ನೋಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ಹೀರೋ ಆಗಿದ್ದರೆ ಬಹುಶಃ ಪ್ರಿಯಾಂಕಾ ಚೋಪ್ರಾ ಈ ದೃಶ್ಯಕ್ಕೆ ಒಪ್ಪಿಕೊಳ್ಳುತ್ತಿದ್ದರು ಎಂದೂ ಅನ್ನು ಕಪೂರ್​ ಬೇಸರದಿಂದ ನುಡಿದರು.  ಈ ದೃಶ್ಯದಿಂದಾಗಿ ಪ್ರಿಯಾಂಕಾ ಮತ್ತು ಅನ್ನು  ಕಪೂರ್ ನಡುವೆ ವೈಮನಸ್ಸು ಕೂಡ ಉಂಟಾಗಿತ್ತು. 66 ವರ್ಷದ ಅನ್ನು  ಕಪೂರ್ ಅವರು ಆಲ್ಟ್ ಬಾಲಾಜಿ ಅವರ ವೆಬ್ ಸರಣಿ 'ಪೌರುಷಪುರ'ದಲ್ಲಿ ತನಗಿಂತ ಹಲವು ವರ್ಷ ಚಿಕ್ಕವರಾದ ನಟಿ ಅಶ್ಮಿತಾ ಭಕ್ಷಿ ಅವರೊಂದಿಗೆ ಇಂಟಿಮೇಟ್​  ದೃಶ್ಯದಲ್ಲಿ (Intemate scene)ಕಾಣಿಸಿಕೊಂಡಿದ್ದಾರೆ. 

Hansika Motwani: ದೊಡ್ಡವಳಂತೆ ಕಾಣಲು ಇಂಜೆಕ್ಷನ್​ ಪಡೆದುಕೊಂಡಿದ್ರಾ?
 
ಒಂದು ಕುತೂಹಲದ ವಿಷಯ ಏನೆಂದರೆ ಅನ್ನು ಕಪೂರ್  ಅವರ ನಿಜವಾದ ಹೆಸರು ಅನಿಲ್ ಕಪೂರ್. ಆದರೆ ಬಾಲಿವುಡ್‌ನಲ್ಲಿ ಈಗಾಗಲೇ ಈ ಹೆಸರಿನ ನಟರಿದ್ದರು, ಆದ್ದರಿಂದ ಅವರು ತಮ್ಮ ಹೆಸರನ್ನು ಅನ್ನು  ಎಂದು ಬದಲಾಯಿಸಿದರು. ಓಂ ಪುರಿ ಅವರು ಅನ್ನು  ಕಪೂರ್ ಅವರ ಸೋದರ ಮಾವ. ಅನ್ನು ಕಪೂರ್​,  1992 ರಲ್ಲಿ ಅನುಪಮಾ ಪಟೇಲ್ ಅವರನ್ನು ವಿವಾಹವಾದರು. ಆದರೆ, ಒಂದು ವರ್ಷದ ನಂತರ 1993ರಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ದಂಪತಿ ಪರಸ್ಪರ ವಿಚ್ಛೇದನ ಪಡೆದರು. ಇದರ ನಂತರ, ಅನ್ನು ಕಪೂರ್ 1995 ರಲ್ಲಿ ಅರುಣಿತಾ ಮುಖರ್ಜಿ ಅವರನ್ನು ವಿವಾಹವಾದರು. ಅನ್ನು  ಕಪೂರ್ ಅವರಿಗೆ ಎರಡು ಮದುವೆಗಳಿಂದ 4 ಮಕ್ಕಳಿದ್ದಾರೆ. ಎರಡನೇ ಪತ್ನಿಗೂ ವಿಚ್ಛೇದನ ನೀಡಿದ ನಂತರ ಅವರು ಮತ್ತೊಮ್ಮೆ ಮೊದಲ ಪತ್ನಿ ಅನುಪಮಾಗೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ. 2008ರಿಂದ ಇಬ್ಬರೂ ಮತ್ತೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ ಮತ್ತು ಮದುವೆಯಾಗಿದ್ದಾರೆ. 
 

click me!