ಅಣ್ಣ ಎಂದು ಕರೆದ ಪತ್ನಿ; ವೈರಲ್ ಟ್ವೀಟ್‌ಗೆ ಕೊನೆಗೂ ಮೌನ ಮುರಿದ ನಟಿ ಸ್ವರಾ ಭಾಸ್ಕರ್ ಪತಿ ಫಹಾದ್

Published : Feb 20, 2023, 03:52 PM IST
ಅಣ್ಣ ಎಂದು ಕರೆದ ಪತ್ನಿ; ವೈರಲ್ ಟ್ವೀಟ್‌ಗೆ ಕೊನೆಗೂ ಮೌನ ಮುರಿದ ನಟಿ ಸ್ವರಾ ಭಾಸ್ಕರ್ ಪತಿ ಫಹಾದ್

ಸಾರಾಂಶ

ಸ್ವರಾ ಭಾಸ್ಕರ್ ಪತಿಗೆ ಅಣ್ಣ ಎಂದು ಕರೆದಿದ್ದರು. ಪತ್ನಿಯ ವೈರಲ್ ಟ್ವೀಟ್ ಗೆ  ಕೊನೆಗೂ ಪತಿ ಫಹಾದ್ ಪ್ರತಿಕ್ರಿಯೆ ನೀಡಿದ್ದಾರೆ.  

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಫೆಬ್ರವರಿ 17  ಗುರುವಾರ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ  ಶಾಕ್ ನೀಡಿದರು. ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿರುವ ಫಹಾದ್ ಅಹ್ಮದ್ ಮತ್ತು ನಟಿ ಸ್ವರಾ ಭಾಸ್ಕರ್ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ರ್ಯಾಲಿಯಲ್ಲಿ ಭೇಟಿಯಾಗಿದ್ದರು ಬಳಿಕ ಸ್ನೇಹಿತರಾಗಿ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಿಸಿದ್ದಾರೆ. 

ಇಬ್ಬರ ಮದುವೆ ಸುದ್ದಿ ರಿವೀಲ್ ಆಗುತ್ತಿದ್ದಂತೆ ಸ್ವರಾ ಭಾಸ್ಕರ್ ಹಳೆಯ ಟ್ವೀಟ್ ವೈರಲ್ ಆಗಿದೆ. ಮದುವೆಗೂ ಕೆಲವೇ ದಿನಗಳ ಮೊದಲು ಸ್ವರಾ ಭಾಸ್ಕರ್ ಪತಿಗೆ ಅಣ್ಣ ಎಂದು ಕರೆದಿದ್ದರು. ಈ ಟ್ವೀಟ್ ಸದ್ಯ ವೈರಲ್ ಆಗಿದ್ದಲ್ಲದೆ ಸ್ವರಾ ದಂಪತಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಕೊನೆಗೂ ಈ ಬಗ್ಗೆ ಸ್ವರಾ ಪತಿ ಫಹಾದ್ ಪ್ರತಿಕ್ರಿಯೆ ನೀಡಿದ್ದಾರೆ. 

ಜೋಕ್ ಎಂದು ಬರೆದುಕೊಂಡಿರುವ ಫಹಾದ್, 'ಹಿಂದೂ-ಮುಸ್ಲಿಂ ಸಹೋದರರು ಮತ್ತು ಸಹೋದರಿಯರಾಗಬಹುದು ಎಂದು ಸಂಘಿಗಳು ಒಪ್ಪಿಕೊಂಡಿದ್ದಾರೆ. ಈಗ ಪತಿ ಮತ್ತು ಪತ್ನಿ ತಮಾಷೆ ಮಾಡಬಹುದು ಎಂದು ಒಪ್ಪಿಕೊಳ್ಳುತ್ತಾರೆ' ಎಂದು ಹೇಳಿದ್ದಾರೆ. ಪತಿ ಫಹಾದ್ ಪೋಸ್ಟ್ ಅನ್ನು ಸ್ವರಾ ಭಾಸ್ಕರ್ ರೀ ಟ್ವೀಟ್ ಮಾಡಿದ್ದಾರೆ. 

ಪತಿಗೆ ಸಹೋದರ ಎಂದು ಟ್ವೀಟ್ ಮಾಡಿದ್ದ ಸ್ವರಾ 

ಸ್ವರಾ ಪತಿಯನ್ನು ಅಣ್ಣ (ಭಾಯ್) ಎಂದು ಕರೆದಿದ್ದ ಹಳೆಯ ಟ್ವೀಟ್ ವೈರಲ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಹ್ಮದ್‌ಗೆ ಹುಟ್ಟುಹಬ್ಬದ ವಿಶ್ ಮಾಡಿದ್ದರು. 'ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ' ಎಂದು ಹೇಳಿದ್ದರು. ನೀವು ಈಗ ಮದುವೆಯಾಗಿ, ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದರು. 

ಆಗ ಅಣ್ಣ ಈಗ ಪತಿ; ಸಹೋದರ ಎಂದವನ ಜೊತೆಯೇ ಮದುವೆಯಾದ ನಟಿ ಸ್ವರಾ ಭಾಸ್ಕರ್ ಸಖತ್ ಟ್ರೋಲ್

ಸ್ವರಾ ದಂಪತಿ ಟ್ರೋಲ್ 

ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಸ್ವರಾ ಭಾಸ್ಕರ್ ಕಾಲೆಳೆಯುತ್ತಿದ್ದಾರೆ. ಸಹೋದರ ಮತ್ತು ಸಹೋದರಿ ಇಬ್ಬರಿಗೂ ಸಂತೋಷದ ವೈವಾಹಿಕ' ಎಂದು ಒಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಕೇವಲ 13 ದಿನಗಳಲ್ಲಿ ಅಣ್ಣ ಪತಿಯಾಗಿದ್ದಾನೆ ಎಂದು ಹೇಳಿದ್ದಾರೆ. 'ಒಮ್ಮೆ ಅಣ್ಣ ಮತ್ತೊಮ್ಮ ಪ್ರೇಮಿ' ಎಂದು ಮತ್ತೋರ್ವ ಹೇಳಿದ್ದಾರೆ.

ಆಲಿಗಢ ವಿವಿ ಆವರಣದಲ್ಲಿ ಸ್ವರ ಭಾಸ್ಕರ್‌ ದಾವತ್‌, 'ತುಕ್ಡೆ ತುಕ್ಡೆ ಗ್ಯಾಂಗ್‌ ಬಂದ್ರೆ ಸುಮ್ನಿರಲ್ಲ' ಎಂದ ವಿದ್ಯಾರ್ಥಿಗಳು!

ಜನವರಿ 6, 2023 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.  ಸ್ವರಾ ತಮ್ಮ  ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದಾರೆ.  ಫೋಟೋ ಜೊತೆಗೆ ಸ್ವರಾ, 'ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರೆಲ್ಲೋ ಹುಡುಕುತ್ತೇವೆ. ಆದರೆ ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ' ಎಂದು ಹೇಳಿದ್ದಾರೆ. ತಮ್ಮಿಬ್ಬರ ಸ್ನೇಹವು ಹಲವಾರು ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮೂಲಕ ಆಗಿದೆ ಎಂದು ಫಹಾದ್​ ಕೂಡ ತಿಳಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ