
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳಾದರೂ ಇನ್ನೂ ಕೆಲವು ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಪಠಾಣ್ ಅಭಿಮಾನಿಗಳ ಹೃದಯ ಗೆದ್ದಿದೆ. ಶಾರುಖ್ ಅನೇಕ ವರ್ಷಗಳ ಬಳಿಕ ಅಭಿಮಾನಿಗಳ ಮುಂದೆ ಬಂದಿದ್ದು, ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದಾರೆ. ಪಠಾಣ್ ಯಶಸ್ಸು ಶಾರುಖ್ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ. ಪಠಾಣ್ ಸಿನಿಮಾ ನೋಡಲು ಬಿಗ್ ಬಾಸ್ ಸ್ಪರ್ಧಿ ಅಬ್ದು ರೋಝಿಕ್ ಸಂಪೂರ್ಣ ಚಿತ್ರಮಂದಿರವನ್ನೇ ಬುಕ್ ಮಾಡಿದ್ದಾರೆ.
ಭಾನುವಾರ ಮುಂಬೈನಲ್ಲಿ ಸಂಪೂರ್ಣ ಚಿತ್ರಮಂದಿರವನ್ನೇ ಬುಕ್ ಮಾಡಿದ್ದರು ಅಬ್ದು. ಚಿತ್ರಮಂದಿರದಲ್ಲಿ ಅಭಿಮಾನಿಗಳು ಮತ್ತು ಪಾಪರಾಜಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೆಯಲ್ಲ ಪಠಾಣ್ ಟೈಟಲ್ ಹಾಡಿಗೆ ಭರ್ಜರಿ ಡಾನ್ಸ್ ಮಾಡಿದ್ದಾರೆ ಅಬ್ದು. ಸಂಪೂರ್ಣ ಚಿತ್ರಮಂದಿರ ಬುಕ್ ಮಾಡಿ ಅಭಿಮಾನಿಗಳು ಮತ್ತು ಪಾಪರಾಜಿಗಳ ಜೊತೆ ಸಿನಿಮಾ ನೋಡಿದ ಅಬ್ದುಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಬ್ದು, ಪಠಾಣ್ ಸ್ಟಾರ್ ಶಾರುಖ್ ಅವರ ಫ್ಯಾನ್. ಶಾರುಖ್ ಖಾನ್ ಅವರನ್ನು ಭೇಟಿಯಾಗಬೇಕು ಎನ್ನುವುದು ಅವರ ದೊಡ್ಡ ಕನಸು. ಇತ್ತೀಚಿಗಷ್ಟೆ ಶಾರುಖ್ ಹುಟ್ಟುಹಬ್ಬದ ದಿನ ಶಾರುಖ್ ಮನೆ ಮುಂದೆ ಕಾಣಿಸಿಕೊಂಡಿದ್ದರು. ಸಿನಿಮಾ ನೋಡುವ ವೇಳೆಯೂ ಶಾರುಖ್ ಭೇಟಿ ಮಾಡಬೇಕು ಎಂದು ಹೇಳಿದ್ದಾರೆ. ‘ಶಾರುಖ್ ಸರ್ ನಾವು ನಿಮಗಾಗಿ ಕಾಯುತ್ತಿದ್ದೇವೆ. ನಿಮ್ಮನ್ನು ಪಠಾಣ್‌ನಲ್ಲಿ ನೋಡಲು ನಾವು ಇಡೀ ಚಿತ್ರಮಂದಿರವನ್ನು ಬುಕ್ ಮಾಡಿದ್ದೀನಿ’ ಎಂದು ಹೇಳಿದ್ದಾರೆ.
ಭಾರತೀಯರನ್ನು ಮರಿಬೇಡಿ; 'ಬಿಗ್ ಬ್ರದರ್'ಗೆ ಹೊರಟ ಬಿಗ್ ಬಾಸ್ ಅಬ್ದು ಕಾಲೆಳೆದ ಸಲ್ಮಾನ್ ಖಾನ್
ಅಬ್ದು ಬಗ್ಗೆ
ಅಬ್ದು ಹಿಂದಿ ಬಿಗ್ ಬಾಸ್ ಸೀಸನ್ 16ರಲ್ಲಿ ಭಾಗಿಯಾಗಿದ್ದರು. ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದರು ಹಾಗೂ ಎಲ್ಲರ ಗಮನ ಸೆಳೆದ ಸ್ಪರ್ಧಿ. ಹಿಂದಿ ಬಿಗ್ ಬಾಸ್ ಮುಗಿಸಿರುವ ಅಬ್ದು ಸದ್ಯ ಅಬ್ದು ಪ್ರಸಿದ್ಧ ಬಿಗ್ ಬ್ರದರ್ ಶೋಗೆ ಎಂಟ್ರಿ ಕೊಡುತ್ತಿದ್ದಾರೆ. ಅತೀ ದೊಡ್ಡ ಅಂತಾರಾಷ್ಟ್ರೀಯ ಪ್ರಾಜೆಕ್ಟ್ ಗೆ ಅಬ್ದು ಸಹಿ ಮಾಡಿರುವುದು ಅವರ ಸ್ನೇಹಿತರಿಗೆ ಖುಷಿಯ ವಿಚಾರವಾಗಿದೆ. ಅಂದಹಾಗೆ ಬಿಗ್ ಬ್ರದರ್ ರಿಯಾಲಿಟಿ ಶೋ 5 ವರ್ಷಗಳ ಬಳಿಕ ಬರ್ತಿದೆ. ಹಾಗಾಗಿ ಈ ಶೋ ಮೇಲೆ ಬಾರಿ ನಿರೀಕ್ಷೆ ಸೃಷ್ಟಿಯಾಗಿದೆ. ಇದೀಗ ಬಿಗ್ ಬಾಸ್ ಹಿಂದಿ ಖ್ಯಾತಿಯ ಅಬ್ದು ಬಿಗ್ ಬ್ರದರ್ ಶೋ ಒಪ್ಪಿಕೊಂಡಿರುವುದು ಭಾರತೀಯರಿಗೂ ವಿಶೇಷವಾಗಿದೆ. ಜೂನ್ ಅಥವಾ ಜುಲೈನಲ್ಲಿ ಪ್ರಾರಂಭವಾಗುತ್ತಿರುವ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಆಯ್ತು ಈಗ UK ಬಿಗ್ ಬ್ರದರ್‌ನಲ್ಲಿ ಛೋಟಾ ಅಬ್ದು ರೋಝಿಕ್; ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ
ಅಬ್ದು ತನ್ನ ಹಾಡುಗಳ ಮೂಲಕವೇ ಖ್ಯಾತಗಳಿಸಿದವರು. ಸೋಶಿಲಯ್ ಮೀಡಿಯಾ ಸೆನ್ಸೇಷನ್ ಅಬ್ದು ಇನ್ಸ್ಟಾಗ್ರಾಮ್ ನಲ್ಲಿ 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಬಿಗ್ ಬಾಸ್ ನಲ್ಲಿ ಅವರು ಶಿವ ಠಾಕರೆ, ಸಾಜಿದ್ ಖಾನ್, ಎಸ್ ಸ್ಟಾನ್, ಸುಂಬುಲ್ ತೌಕೀರ್ ಮತ್ತು ನಿಮೃತ್ ಕೌರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅಬ್ದು ತನ್ನ ಕಾಮಿಡಿ ಮೂಲಕವೂ ಪ್ರೇಕ್ಷಕರನ್ನು ಸೆಳೆದಿದ್ದರು. ಅಂದಹಾಗೆ ಅಬ್ದು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಳಿಕ ಅಬ್ದು ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಗ್ ಬ್ರದರ್ ಶೋ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ರೆಡಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.