ಬಾಲಿವುಡ್ನಿಂದ ಬೇಸತ್ತು ಹಾಲಿವುಡ್ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ಅವಕಾಶ ಕಳೆದುಕೊಂಡದ್ದೇಕೆ ಎಂಬ ಬಗ್ಗೆ ಅವರ ತಾಯಿ ಮಧು ಚೋಪ್ರಾ ಹೇಳಿದ್ದೇನು?
ಸದ್ಯ ಬಾಲಿವುಡ್ಗೆ ಬೈಬೈ ಹೇಳಿ ಹಾಲಿವುಡ್ ಆರಿಸಿಕೊಳ್ಳುವ ನಿರ್ಧರಿಸಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಬಿ-ಟೌನ್ನಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ನನ್ನನ್ನ ಮೂಲೆಗುಂಪು ಮಾಡಲಾಗಿತ್ತು. ಹಿಂದಿ ಚಿತ್ರರಂಗದಲ್ಲಿನ ರಾಜಕೀಯದಿಂದ ನಾನು ಬೇಸೆತ್ತಿದ್ದೆ ಎಂಬ ಸತ್ಯವನ್ನು ಇದೀಗ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.ನಟಿಸಲು ನನಗೆ ಅವಕಾಶ ನೀಡುತ್ತಿರಲಿಲ್ಲ. ಕೆಲವರ ವಿರೋಧವನ್ನು ಕಟ್ಟಿಕೊಂಡಿದ್ದೆ. ಹೀಗಾಗಿ, ನನಗೆ ಪಾತ್ರಗಳು ಸಿಗುತ್ತಿರಲಿಲ್ಲ. ಕೆಲವರೊಂದಿಗೆ ನಾನು ಕಿತ್ತಾಡಿಕೊಂಡಿದ್ದೆ. ಚಿತ್ರರಂಗದಲ್ಲಿನ ರಾಜಕೀಯದಿಂದ ನಾನು ಬೇಸೆತ್ತಿದ್ದೆ. ಹೀಗಾಗಿ ನನಗೆ ಒಂದು ಬ್ರೇಕ್‌ನ ಅವಶ್ಯಕತೆ ಇತ್ತು ಎಂದಿರುವ ಪ್ರಿಯಾಂಕಾ ಬಾಲಿವುಡ್‌ನಲ್ಲಿ ದೊಡ್ಡ ಹಂಗಾಮ ಸೃಷ್ಟಿಸಿದ್ದಾರೆ. ನನ್ನನ್ನು ಸಿನಿಮಾದಲ್ಲಿ ಸೇರಿಸಲು ಇಷ್ಟಪಡದ ಜನರು ನನ್ನ ಸುತ್ತಮುತ್ತ ಇದ್ದರು. ಅಲ್ಲಿನ ರಾಜಕೀಯದಿಂದ ಬೇಸತ್ತಿದ್ದೆ. ಹಾಗಾಗಿ ನನಗೆ ಬ್ರೇಕ್ ಬೇಕಾಗಿತ್ತು ಎಂದಿದ್ದಾರೆ ನಟಿ.ಪ್ರಿಯಾಂಕಾ ಚೋಪ್ರಾ ಕೊಟ್ಟ ಈ ಹೇಳಿಕೆ ವೈರಲ್ ಆಗಿತ್ತು. ನಟಿ ಕರಣ್ ಜೋಹರ್ ಅವರ ಹೆಸರು ಹೇಳದೆ ಅವರ ಬಗ್ಗೆಯೇ ಮಾತನಾಡಿದ್ದರು.
ಈ ಹಿಂದೆ ಕಪ್ಪು ಚರ್ಮದಿಂದ ತಮಗೆ ಬಾಡಿಷೇಮ್ ಮಾಡಿದ್ದನ್ನೂ ಅವರು ಮಾತನಾಡಿದ್ದರು. 'ನನ್ನನ್ನು ಅನೇಕರು ಬ್ಲ್ಯಾಕ್ ಕ್ಯಾಟ್ (ಕರಿ ಬೆಕ್ಕು Black Cat) ಎಂದು ಕರೆಯುತ್ತಿದ್ದರು. ನನ್ನ ಚರ್ಮದ ಬಣ್ಣವನ್ನು ಟೀಕಿಸುತ್ತಿದ್ದರು. ಬಣ್ಣದ ಬಗೆಗಿನ ಗೀಳು ಭಾರತಕ್ಕೆ ಬಂದಿದ್ದು ಬ್ರಿಟಿಷರಿಂದ. ಅವರು ಬಿಟ್ಟು ಹೋದರೂ ಬಣ್ಣದ ಗೀಳು ಕಡಿಮೆ ಆಗಿಲ್ಲ' ಎಂದಿದ್ದಾರೆ. ಮೈಬಣ್ಣದ ಆಧಾರದಮೇಲೆ ಗುಣಮಟ್ಟವನ್ನು ಅಳೆಯಬಾರದು. ಇದು ಬದಲಾಗಬೇಕು ಎಂದು ಅವರು ವೇದಿಕೆಯಲ್ಲಿ ಹೇಳಿದ್ದರು.
ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ
ಇದರ ನಡುವೆಯೇ ಇದೀಗ ಪ್ರಿಯಾಂಕಾ ಹೇಗೆ ಕೆಲವೊಂದು ಸಿನಿಮಾಗಳನ್ನು ಕಳೆದುಕೊಂಡಿದ್ದರು ಎಂಬ ಬಗ್ಗೆ ಕುತೂಹಲದ ಮಾಹಿತಿ ಶೇರ್ ಮಾಡಿದ್ದಾರೆ ಅವರ ತಾಯಿ ಮಧು ಚೋಪ್ರಾ. ಈ ಹಿಂದೆ ಪ್ರಿಯಾಂಕಾ ಬಾಡಿಗೆ ತಾಯ್ತನದ (surrogacy) ಮೂಲಕ ಮಗುವನ್ನು ಪಡೆದಾಗ ಅದರ ಬಗ್ಗೆ ಅವರು ಹೇಳಿಕೊಂಡಿದ್ದರು. ತಾವು 30ನೇ ವಯಸ್ಸಿನಲ್ಲಿಯೇ ಅಂಡಾಣು ಶೇಖರಣೆ ಮಾಡುತ್ತಿದ್ದ ಬಗ್ಗೆ ಹೇಳಿಕೊಂಡಿದ್ದರು. ಇದಕ್ಕೆ ಕಾರಣ, ತಮ್ಮ ತಾಯಿ ಮಧು ಎಂದೂ ಅವರು ಹೇಳಿದ್ದರು. ಏಕೆಂದರೆ, ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಗೈನಕಾಲಜಿಸ್ಟ್. ಪ್ರಸೂತಿ ತಜ್ಞೆಯಾಗಿ ಅನೇಕ ವರ್ಷಗಳಿಂದ ಕೆಲಸ ಮಾಡ್ತಿದ್ದಾರೆ. ಆಕೆ ತನ್ನ ಮಗಳ ಆರೋಗ್ಯದ ಬಗ್ಗೆಯೂ ಸಾಕಷ್ಟು ಚಿಂತಿಸಿದ್ದರು. ಪ್ರಿಯಾಂಕಾಗೆ ಇರುವ ಸ್ಟ್ರೆಸ್ ಡಿಸಾರ್ಡರ್ ಬಗ್ಗೆ ಅವರ ತಾಯಿಗೆ ತಿಳಿದಿತ್ತು. ಇಂಥಾ ಸಮಸ್ಯೆಯಲ್ಲಿ ಗರ್ಭ ಕಟ್ಟಿದರೂ ಅಬಾರ್ಶನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕೆ ಇಂಥಾ ಸಮಸ್ಯೆ ಇದ್ದಾಗ ಹೆಚ್ಚಿನವರು ಐವಿಎಫ್ ಮೂಲಕ ಮಗು ಪಡೆಯೋದುಂಟು. ಇನ್ನೂ ಸೌಕರ್ಯ ಇದ್ದವರು ಸರೋಗಸಿ ಮೊರೆ ಹೋಗುವ ಕಾರಣ, ಹಾಗೆ ಹೇಳಿರುವುದಾಗಿ ಹೇಳಿದ್ದರು. ನಂತರ ತಮ್ಮ ಆರೋಗ್ಯ ಸಮಸ್ಯೆಯಿಂದ ಮಗುವನ್ನು ತಾವೇ ಹೆರಲು ಕಷ್ಟವಾಯಿತು ಎಂದೂ ಹೇಳಿದ್ದರು.
ಇದೀಗ ಮಧು ಅವರು, ತಮ್ಮ ಮಗಳು ಹೇಗೆ ಕೆಲವೊಂದು ಪ್ರಾಜೆಕ್ಟ್ಗಳಿಂದ ತಪ್ಪಿಸಿಕೊಂಡರು ಎಂಬ ಬಗ್ಗೆ ಮಾತನಾಡಿದ್ದಾರೆ. ಮಗಳ ಸಿನಿಮಾ ಪಯಣ ಹಾಗೂ ಹೇಗೆ ಆಕೆ ಕೆಲವೊಂದು ಸಿನಿಮಾ ಅವಕಾಶಗಳನ್ನು ಕಳೆದುಕೊಂಡರು ಎಂಬ ಬಗ್ಗೆ ತಿಳಿಸಿದ್ದಾರೆ. ತನಗೆ ಕಂಫರ್ಟಬಲ್ ಅಲ್ಲ ಅನಿಸುವುದನ್ನು ಯಾವುದನ್ನೂ ಮಾಡುತ್ತಿರಲಿಲ್ಲ. ಪ್ರಿಯಾಂಕಾ ಚೋಪ್ರಾ ಸಿನಿಮಾ ಮಾಡುತ್ತಲೆ ಯಾವಾಗಲೂ ಅಗತ್ಯಬಿದ್ದರೆ ಬೇರೆ ಉದ್ಯೋಗ, ಕೆರಿಯರ್ನಲ್ಲಿ ತೊಡಗಿಸಿಕೊಳ್ಳಲು ರೆಡಿಯಾಗಿದ್ದಳು. ಅವರಿಗೆ ಇಷ್ಟವಿಲ್ಲದ ದೃಶ್ಯಗಳನ್ನು ಆಕೆಗೆ ಮಾಡಬೇಕಾಗಿ ಬಂದರೆ ಚಿತ್ರವನ್ನೇ ರಿಜೆಕ್ಟ್ ಮಾಡುತ್ತಿದ್ದಳು. ಹಾಗಾಗಿ ಹಲವಾರು ಸಿನಿಮಾ ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ. ನಾನು ಅವಳೊಂದಿಗೆ ಎಲ್ಲಾ ಕಡೆಗಳಿಗೂ ಹೋಗುತ್ತಿದ್ದೆ. ಮೀಟಿಂಗ್, ನರೇಷನ್ ಎಲ್ಲವನ್ನೂ ಅಟೆಂಡ್ ಮಾಡುತ್ತಿದ್ದೆ. ಒಂದು ದಿನ ಇಬ್ಬರೂ ನಿರ್ಧಾರ ಮಾಡಿ ಇಂದು ಯಾವುದೇ ಮೀಟಿಂಗ್ನಲ್ಲಿ ಭಾಗವಹಿಸುವುದಿಲ್ಲ. ಎಲ್ಲಿಗೂ ಹೋಗುವುದಿಲ್ಲ ಎಂಬ ತೀರ್ಮಾನ ಮಾಡಿದ್ದೆವು. ಪ್ರಿಯಾಂಕಾ ಈ ತೀರ್ಮಾನಕ್ಕೆ ಬದ್ಧಳಾಗಿ ನಿಂತಿದ್ದಳು. ಇದರಿಂದ ಆಕೆ ಹಲವಾರು ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು ಎಂದರು.
Priyanka Chopra: ನಿಕ್ ಜೊತೆ ಡೇಟಿಂಗ್ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!
ಪ್ರಿಯಾಂಕಾ ಚೋಪ್ರಾ ತಮಿಳು ಸಿನಿಮಾ ತಮಿಳನ್ (2002)ರ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. 2000ದಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ನಂತರ ಪ್ರಿಯಾಂಕ ಸಿನಿಮಾ ಅವಕಾಶವನ್ನು ಪಡೆದರು. ಬಾಲಿವುಡ್‌ನಲ್ಲಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಎಂಬ ಸಿನಿಮಾದ (2003) ಮೂಲಕ ಸಿನಿಮಾ ಜರ್ನಿಯನ್ನು ಶುರು ಮಾಡಿದರು..ಸದ್ಯ ಪ್ರಿಯಾಂಕಾ ಅವರು ತಮ್ಮ ಸಿನಿಮಾ ಸಿಟೆಡಾಲ್ನ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ.