ಸಮಂತಾ ಕೂಡ ಇಷ್ಟೇ ಬೋಲ್ಡ್ ಆಗ್ತಾರಾ, ಹೇಗಿರಲಿದೆ 'ಸಿಟಾಡೆಲ್‌' ಸೀರಿಸ್?

Published : Apr 07, 2023, 12:15 PM IST
ಸಮಂತಾ ಕೂಡ ಇಷ್ಟೇ ಬೋಲ್ಡ್ ಆಗ್ತಾರಾ, ಹೇಗಿರಲಿದೆ 'ಸಿಟಾಡೆಲ್‌' ಸೀರಿಸ್?

ಸಾರಾಂಶ

ಸಿಟಾಡೆಲ್ ವೆಬ್ ಸಿರೀಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೆ ಸಮಂತಾ ಕೂಡ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಸೌತ್ ಸ್ಟಾರ್ ಸಮಂತಾ ಸದ್ಯ ಶಾಕುಂತಲಂ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾ ಇದೇ ತಿಂಗಳು ರಿಲೀಸ್ ಆಗಲಿದೆ. ಶಾಕುಂತಲಂ ಪ್ರಮೋಷನ್  ಜೊತೆಗೆ ಸಮಂತಾ ಸಿಟಾಡೆಲ್ ಭಾರತದ ವರ್ಷನ್ ವೆಬ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಇದು ಪ್ರಿಯಾಂಕಾ ಚೋಪ್ರಾ ನಟನೆಯ ಸಿಟಾಡೆಲ್ ಹಾಲಿವುಡ್ ಸೀರಿಸ್‌ನ ಭಾರತದ ರಿಮೇಕ್ ಆಗಿದೆ. ಇದರಲ್ಲಿ ಸಮಂತಾ ಮತ್ತು ಬಾಲಿವುಡ್ ನಟ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅವರ ಸಿಟಾಡೆಲ್ ವೆಬ್ ಸೀರಿಸ್ ಏಪ್ರಿಲ್ 28ರಂದು ಭಾರತದಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿದೆ. ಟೀಸರ್ ‌ನಲ್ಲಿ ನಟಿ ಪ್ರಿಯಾಂಕಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಲವು ದೃಶ್ಯಗಳಲ್ಲಿ ಪ್ರಿಯಾಂಕಾ ಸಖತ್ ಹಾಟ್ ಆಗಿದ್ದಾರೆ. ಮೈ ಮೇಲೆ ಬಟ್ಟೆ ಇಲ್ಲದೆಯೇ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಇದು ಸಮಂತಾ ಅಭಿಮಾನಿಗಳ ನಿದ್ದೆಗೆಡಿಸಿದೆ. ಯಾಕೆಂದರೆ ಸಮಂತಾ ಕೂಡ ಇಷ್ಟೇ ಬೋಲ್ಡ್ ಆಗಿ ತೆರೆಮೇಲೆ ಬರ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಎದುರಾಗಿದೆ. 

ದಿ ಪ್ಯಾಮಿಲಿ ಮ್ಯಾನ್ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಹಾಗಂತ ಪ್ರಿಯಾಂಕಾ ಅಷ್ಟಲ್ಲ. ಆದರೆ ಸಿಟಾಡೆಲ್‌ನಲ್ಲಿ ಪ್ರಿಯಾಂಕಾ ನೋಡಿದ ಮೇಲೆ ಸಮಂತಾ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸಮಂತಾ ಇಷ್ಟೇ ಬೋಲ್ಡ್ ಆಗಿ ಕಾಣಿಸಿಕೊಂಡರೂ ಅಚ್ಚರಿ ಇಲ್ಲ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. 

ಕೆಜಿಎಫ್ ಸ್ಟಾರ್ ಯಶ್ ಹಾಗೆ 'ರೈಸ್ ಅಪ್ ಬೇಬಿ...' ಅಂತಿರೋದೇಕೆ ಸಮಂತಾ: ಸ್ಯಾಮ್ ಹೊಸ ಪೋಸ್ಟ್ ವೈರಲ್

ಅಂದಹಾಗೆ ಸಿಟಾಡೆಲ್‌ ಸಿಕ್ಕಾಪಟ್ಟೆ ಆಕ್ಷನ್ ದೃಶ್ಯಗಳನ್ನು ಹೊಂದಿದ ವೆಬ್ ಸೀರಿಸ್ ಆಗಿದೆ. ಹಾಗಾಗಿ ಸಮಂತಾ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಸಮಂತಾ ಅವರನ್ನು ಆಕ್ಷನ್ ದೃಶ್ಯಗಳಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ -2ನಲ್ಲಿ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ ಸಮಂತಾ ಅವರನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಹಾಗಾಗಿ ಸಿಟಾಡೆಲ್ ಕೂಡ ಇಷ್ಟ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದರ ಜೊತೆಗೆ ಬೋಲ್ಡ್ ದೃಶ್ಯಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ, ಭಾರತದ ವರ್ಷನ್‌ನಲ್ಲಿ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕಲಾಗುತ್ತಾ ಕಾದು ನೋಡಬೇಕಿದೆ.    

ಮಾಜಿ ಪತಿ ನಾಗ ಚೈತನ್ಯ ಬಗ್ಗೆ ನಾನು ಹಾಗೆ ಹೇಳಿಯೇ ಇಲ್ಲ; ನಟಿ ಸಮಂತಾ ಸ್ಪಷ್ಟನೆ

ಈಗಾಗಲೇ ಸಿಟಾಡೆಲ್ ವೆಬ್ ಸೀರಿಸ್ ಶೂಟಿಂಗ್ ಪ್ರಾರಂಭವಾಗಿದ್ದು ಸಮಂತಾ ಮತ್ತು ವರುಣ್ ಧವನ್ ಇಬ್ಬರೂ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಕೆಲವು ದೃಶ್ಯಗಳ ಚಿತ್ರೀಕಣ ಕೂಡ ಮುಗಿಸಿದ್ದಾರೆ. ಸದ್ಯ ಶಾಕುಂತಲಂನಲ್ಲಿ ಬ್ಯುಸಿಯಾಗಿರುವ ಸಮಂತಾ ಸಿನಿಮಾ ರಿಲೀಸ್ ಆದ ಬಳಿಕ ಮತ್ತೆ ವೆಬ್ ಸೀರಿಸ್ ಶೂಟಿಂಗ್ ಆರಂಭಿಸಲಿದ್ದಾರೆ. ಅಂದಹಾಗೆ ಈ ಸೀರಿಸ್‌ಗೆ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್‌ನಲ್ಲಿ ಸಮಂತಾ ಜೊತೆ ಕೆಲಸ ಮಾಡಿದ್ದ ರಾಜ್ ಮತ್ತು ಡಿಕೆ ಸಿಟಾಡೆಲ್‌ ಮೂಲಕ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿರಿಕ್ ಕಿಲಾಡಿ ಉತ್ತರ ಕೊಟ್ಟ ದೀಪಿಕಾ ಪಡುಕೋಣೆ; ಶಾಕಿಂಗ್‌ ಮೂಡ್‌ಗೆ ನೆಟ್ಟಿಗರನ್ನು ದೂಡಿದ ಸ್ಟಾರ್ ನಟಿ!
ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ