ಇಬ್ಬರು ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿದ್ದ ಯುಟ್ಯೂಬರ್ ಅರ್ಮಾನ್ ಮಲಿಕ್ ಅವರ ಎರಡನೆಯ ಪತ್ನಿ ಈಗ ಗಂಡ ಮಗುವಿಗೆ ಜನ್ಮ ನೀಡಿದ್ದಾರೆ.
ಪ್ರಸಿದ್ಧ ಯೂಟ್ಯೂಬರ್ ಅರ್ಮಾನ್ ಮಲಿಕ್ (Armaan Malik) ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಇಬ್ಬರು ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿ ಸುದ್ದಿಯಾದವರು ಅರ್ಮಾನ್. ತಮ್ಮ ಪತ್ನಿಯರ ನಡುವೆ ಜಗಳ ಮಾಡಿಸುವ ನಾಟಕವಾಡಿಸಿ, ಅದನ್ನು ನಿಜವೆಂಬಂತೆ ಬಿಂಬಿಸಿ ಯೂಟ್ಯೂಬ್ನಲ್ಲಿ ಲಕ್ಷಾಂತರ ವ್ಯೂಸ್ಗಳನ್ನು ಪಡೆದುಕೊಳ್ಳುವಲ್ಲಿ ಇವರು ನಿಸ್ಸೀಮರು. ಇವರ ಇಬ್ಬರು ಪತ್ನಿಯರು ಕೂಡ ತಾವು ನಿಜವಾಗಿಯೂ ಜಗಳವಾಡುತ್ತಿರುವಂತೆ ಪೋಸ್ ಕೊಡುವಲ್ಲಿ ಗಂಡನನ್ನು ಮೀರಿಸುತ್ತಾರೆ. ಕೆಲವೊಂದು ವಿಡಿಯೋಗಳಲ್ಲಿ ತಾವು ಮಾಡಿದ್ದ ತಮಾಷೆ ಎಂದು ಕೊನೆಯಲ್ಲಿ ಹೇಳಿದರೂ, ಹಲವು ವಿಡಿಯೋಗಳಲ್ಲಿ ಇವರ ಫ್ಯಾನ್ಸ್ ಇದು ನಿಜವೇ ಎಂದು ನಂಬಿ ಇಬ್ಬರು ಪತ್ನಿಯರ ಜಗಳದ ಮಜ ತೆಗೆದುಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಥಹರೇವಾರಿ ಕಮೆಂಟ್ ಹಾಕುತ್ತಾರೆ. ಇವೆಲ್ಲಾ ಸುಳ್ಳೆ ಆಗಿದ್ದರೂ ಇಬ್ಬರೂ ಪತ್ನಿಯರಂತೂ ಒಟ್ಟಿಗೇ ಗರ್ಭಿಣಿಯಾಗಿರುವ (Pregnant) ವಿಷಯ ಸತ್ಯವಾಗಿದೆ. ಅದರ ಫಲವಾಗಿ ಇದೀಗ ಎರಡನೆಯ ಪತ್ನಿ ಕೃತಿಕಾ ಮಲಿಕ್ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.
ಅರ್ಮಾನ್ ಮಲಿಕ್ ಅವರು ಆಸ್ಪತ್ರೆಯೊಂದರಿಂದ ತಾನು ಮತ್ತು ಅವನ ಕುಟುಂಬದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಕುಟುಂಬಸ್ಥರು ತಮ್ಮ ಮಗುವಿನ ಆಗಮನವನ್ನು ಆನಂದಿಸುತ್ತಿರುವುದನ್ನು ನೋಡಬಹುದು. ವೀಡಿಯೊದಲ್ಲಿ, ಅರ್ಮಾನ್ ತನ್ನ ಗಂಡು ಮಗುವನ್ನು ತೋರಿಸುತ್ತಾ, "ಜಚ್ಚಾ ಬಚಾ ದೋನೋ ಸಾಹಿ ಹೈ (ತಾಯಿ ಮತ್ತು ಮಗು ಚೆನ್ನಾಗಿದ್ದಾರೆ)" ಎಂದು ಹೇಳಿದ್ದಾರೆ. ಅರ್ಮಾನ್, ಅವರ ಮೊದಲ ಪತ್ನಿ ಪಾಯಲ್ (Payal) ಮತ್ತು ಇತರ ಕುಟುಂಬ ಸದಸ್ಯರು ಹೆರಿಗೆಯ ನಂತರ ಮಗನ ಜನನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಅನುಯಾಯಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಹಲವು ಅಭಿಮಾನಿಗಳು ಈ ಇಬ್ಬರು ಸವತಿಯರು ಜಗಳವಾಡುವುದನ್ನು ನಿಜ ಎಂದು ತಿಳಿದುಕೊಂಡಿದ್ದು, ಇನ್ನು ಮುಂದೆ ಜಗಳವಾಡಬೇಡಿ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಎಂದು ಸಂದೇಶ ಕಳಿಸುತ್ತಿದ್ದಾರೆ. ವಿಶ್ರಾಂತಿ ಮತ್ತು ಮಾತೃತ್ವವನ್ನು ಆನಂದಿಸಿ ಎಂದು ಬರೆದಿದ್ದಾರೆ.
Armaan Malik ಇಬ್ಬರ ಪತ್ನಿಯರೂ ಗರ್ಭಿಣಿ, ಕಾಲೆಳೆಯುತ್ತಲೇ ಇದ್ದಾರೆ ನೆಟ್ಟಿಗರು!
ಅಷ್ಟಕ್ಕೂ ಅರ್ಮನ್ ಮಲಿಕ್ ಅವರ ಇತಿಹಾಸ ಕುತೂಹಲಕಾರಿಯಾಗಿದೆ. ಅದೇನೆಂದರೆ, ಅಸಲಿಗೆ ಗಾಯಕ ಅರ್ಮಾನ್ ಮಲಿಕ್ ಮೂಲತಃ ಹಿಂದೂ ವ್ಯಕ್ತಿ. ಹೆಸರು ಸಂದೀಪ್ (Sandeep) ಎಂದು. ಆದರೆ ಮೊದಲ ಹೆಂಡತಿ ಇರುವಾಗಲೇ ಇನ್ನೊಂದು ಮದುವೆಯಾದರು. ಹಿಂದೂ ಸಂಪ್ರದಾಯದಲ್ಲಿ ಎರಡು ಮದುವೆಗೆ ಅವಕಾಶ ಇಲ್ಲದ ಕಾರಣ, ಇಸ್ಲಾಂಗೆ ಮತಾಂತರಗೊಂಡರು. ಈಗ ಅವರು ಕಾನೂನುಬದ್ಧವಾಗಿ ಎರಡು ಪತ್ನಿಯನ್ನು (two wives) ಪಡೆದಂತಾಗಿದೆ. ಮೊದಲ ಪತ್ನಿಯಿಂದ ಒಂದು ಗಂಡು ಮಗುವನ್ನು ಹೊಂದಿರುವ ಅವರು, ಈಗ ಇಬ್ಬರೂ ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿದ್ದಾರೆ.
ಈ ಹಿಂದೆ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರು ಈ ಯೂಟ್ಯೂಬರ್ ಕುರಿತು ಕೆಂಡಾಮಂಡಲವಾಗಿದ್ದರು. ಮದುವೆಯಾಗುವ ಸಲುವಾಗಿ ಮತಾಂತರಗೊಂಡು ಇಬ್ಬರನ್ನೂ ಗರ್ಭಿಣಿ ಮಾಡಿರುವ ಸುದ್ದಿ ಬಹಳ ಸದ್ದು ಮಾಡುತ್ತಲೇ, ನಿಜವಾದ ಅರ್ಮಾನ್ ಮಲಿಕ್ ಅರ್ಥಾತ್ ಗಾಯಕನಿಗೆ ಇದನ್ನು ಸಹಿಸಲು ಆಗಿರಲಿಲ್ಲ. ತಮ್ಮದೇ ಹೆಸರು ಇಟ್ಟುಕೊಂಡು ಹೇಸಿಗೆ ಕೃತ್ಯ ಮಾಡುವ ವಿಷಯ ದಿನನಿತ್ಯ ನೋಡಿ ಅಸಹ್ಯ ಹುಟ್ಟಿದೆ. ದಯವಿಟ್ಟು ಯಾರೂ ಅವರನ್ನು ನನ್ನ ಹೆಸರಿನಲ್ಲಿ ಕರೆಯಬೇಡಿ. ಬದಲಿಗೆ ಅವರ ಅಸಲಿ ಹೆಸರು ಸಂದೀಪ್ ಎಂದು ಕರೆಯಿರಿ ಎಂದು ಅರ್ಮನ್ ಮನವಿ ಮಾಡಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಯುಟ್ಯೂಬರ್, ಇದಕ್ಕೆ ಯೂಟ್ಯೂಬರ್ ಅರ್ಮಾನ್ ಅವರ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಗಾಯಕನನ್ನು ಕೆಣಕುತ್ತಾ, ಅವರು, ಜಗತ್ತಿನಲ್ಲಿ ಒಂದೇ ಹೆಸರಿನೊಂದಿಗೆ ಲಕ್ಷಾಂತರ ಜನರು ಇರುತ್ತಾರೆ. ಅದಕ್ಕೆ ನಿಮ್ಮ ಹೆಸರೇನು ಮೇಲಿನಿಂದ ಇಳಿದು ಬಂದಿರುವುದಲ್ಲ, ಯಾರು ಬೇಕಾದರೂ ಏನಾದರೂ ಹೆಸರು ಇಟ್ಟುಕೊಳ್ಳಬಹುದು ಎಂದಿದ್ದಾರೆ. ಯೂಟ್ಯೂಬರ್ ಅರ್ಮಾನ್ ಮಲಿಕ್ ಕೂಡ ಉತ್ತರ ನೀಡಿದ್ದು, ನಾನು ಯಾರ ಹೆಸರನ್ನೂ ನಕಲು ಮಾಡಿಲ್ಲ. ಜಗತ್ತಿನಲ್ಲಿ ಒಂದೇ ಹೆಸರಿನ ಅನೇಕ ಜನರಿರಬಹುದು. ಹೆಸರಿನ ಮೇಲೆ ಯಾರಿಗೂ ಪೇಟೆಂಟ್ ಇಲ್ಲ ಎಂದಿದ್ದಾರೆ. ನೀವು ಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ನೀವು ಪ್ರಸಿದ್ಧರಾಗಿದ್ದೀರಿ, ಆದರೆ ನಾನು ಯೂಟ್ಯೂಬರ್ ಆಗಿ ಸ್ವಂತ ಬಲದ ಮೇಲೆ ಹೆಸರು ಮಾಡಿರುವವನು. ಅದನ್ನು ಕೇಳಲು ನೀವು ಯಾರು ಎಂದಿದ್ದರು.
Bhavana Ramanna: ದನಿ, ನಗು ಕೇಳಿ, ರೂಪ ನೋಡಿ ಛೇ ಎಲ್ಲಿಂದ ಕರ್ಕೊಂಡು ಬಂದ್ರಿ ಇವ್ಳನ್ನ ಅಂದಿದ್ರು...