ಕೈಯಲ್ಲಿದ್ದ ಒಂದು ಹಿಂದಿ ಸಿನಿಮಾದಿಂದನೂ ಔಟ್; ಬಾಲಿವುಡ್‌ನಿಂದ ಸಂಪೂರ್ಣ ಹೊರ ನಡೆದ್ರಾ ಪ್ರಿಯಾಂಕಾ?

Published : Jul 01, 2023, 01:18 PM IST
ಕೈಯಲ್ಲಿದ್ದ ಒಂದು ಹಿಂದಿ ಸಿನಿಮಾದಿಂದನೂ ಔಟ್; ಬಾಲಿವುಡ್‌ನಿಂದ ಸಂಪೂರ್ಣ ಹೊರ ನಡೆದ್ರಾ ಪ್ರಿಯಾಂಕಾ?

ಸಾರಾಂಶ

ಕೈಯಲ್ಲಿದ್ದ ಒಂದು ಹಿಂದಿ ಸಿನಿಮಾದಿಂದನೂ ಪ್ರಿಯಾಂಕಾ ಔಟ್ ಆಗಿದ್ದಾರೆ. ಬಾಲಿವುಡ್‌ನಿಂದ ಸಂಪೂರ್ಣ ಹೊರ ನಡೆದ್ರಾ ಪ್ರಿಯಾಂಕಾ ಎನ್ನುವ ಮೂಡಿಸಿದೆ. 

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಗಿದ್ದಾರೆ. ಹಿಂದಿ ಸಿನಿಮಾರಂಗದಿಂದ ದೂರ ಆಗಿ ಪ್ರಿಯಾಂಕಾ ಅನೇಕ ವರ್ಷಗಳೇ ಆಗಿವೆ. ಪ್ರಿಯಾಂಕಾ ಮತ್ತೆ ಯಾವಾಗ ಹಿಂದಿ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆ ಕುತೂಹಲಕ್ಕೆ ಫರ್ಹಾನ್ ಅಖ್ತರ್ ಅವರ ಜೀ ಲೆ ಜರಾ ಚಿತ್ರ ಬ್ರೇಕ್ ಹಾಕಿತ್ತು. ಪ್ರಿಯಾಂಕಾ ಅನೇಕ ವರ್ಷಗಳ ಬಳಿಕ ಜೀ ಲೆ ಜರಾ ಮೂಲಕ ಹಿಂದಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದರು. ಆದರೀಗ ಆ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. 

ತನ್ನ ಕೈಯಲ್ಲಿದ್ದ ಒಂದು ಹಿಂದಿ ಸಿನಿಮಾದಿಂದ ಪ್ರಿಯಾಂಕಾ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ. ಅಂದಹಾಗೆ ಜೀ ಲೆ ಜರಾ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ಕತ್ರಿನಾ ಕೈಫ್ ಮತ್ತು ಅಲಿಯಾ ಭಟ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಆದರೀಗ ಪ್ರಿಯಾಂಕಾ ಸಿನಿಮಾದಿಂದ ಹೊರಬರುವ ಮೂಲಕ ಶಾಕ್ ನೀಡಿದ್ದಾರೆ. ಫರ್ಹಾನ್ ಅಖ್ತರ್ ಈ ಸಿನಿಮಾ ಆಗಾಗಲೇ ತುಂಬಾ ತಡವಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಸೆಟ್ಟೇರಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ ಸಿನಿಮಾ ಸೆಟ್ಟೇರುವ ಮೊದಲೇ ಪ್ರಿಯಾಂಕಾ ಹೊರಹೋಗಿದ್ದಾರೆ. 

ಪ್ರಿಯಾಂಕಾ ಹೊರಹಾಕಿದ್ದಾರೆ ಎನ್ನುವ ವಿಚಾರವನ್ನು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಪ್ರಿಯಾಂಕಾ ಪಾತ್ರಕ್ಕೆ ಬಾಲಿವುಡ್‌ನ ಮತ್ತೋರ್ವ ನಟಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅದು ಮತ್ಯಾರು ಅಲ್ಲ ಕಿಯಾರಾ ಅಡ್ವಾನಿ. ಹೌದು ಸದ್ಯ ಹಿಂದಿ ಸಿನಿಮಾರಂಗದಲ್ಲಿ ಭಾರಿ ಬೇಡಿಕೆ ಇರುವ ನಟಿ ಎಂದರೆ ಕಿಯಾರಾ. ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಕಿಯಾರಾ ಇದೀಗ ಜೀ ಲೆ ಜರಾ ಸಿನಿಮಾತಂಡ ಸೇರುಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿನಿಮಾತಂಡದ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

ಮಗಳ ಜೊತೆ ಹೇಗಿರ್ತಾರೆ ಪ್ರಿಯಾಂಕಾ? ಮಾಲ್ತಿ ಕ್ಯೂಟ್ ಫೋಟೋ ವೈರಲ್

ಪ್ರಿಯಾಂಕಾ ಚೋಪ್ರಾ ಔಟ್ ಆಗುತ್ತಿದ್ದಂತೆ ಆ ಜಾಗಕ್ಕೆ ಯಾವ ನಟಿ ಉತ್ತಮ ಎಂದು ಅಭಿಮಾನಿಗಳ ಸಹ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ದೀಪಿಕಾ ಹೆಸರು ಹೇಳುತ್ತಿದ್ದಾರೆ, ಇನ್ನೂ ಕೆಲವರು ಅನುಷ್ಕಾ ಶರ್ಮಾ ಹೆಸರು ಹೇಳುತ್ತಿದ್ದಾರೆ. ಆದರೆ ಕಿಯಾನಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ವಿರುದ್ಧ ಗುಡುಗಿದ ಬೆನ್ನಲ್ಲೇ ಕರಣ್ ಜೋಹರ್ ತಬ್ಬಿ ಅಭಿನಂದಿಸಿದ ಪ್ರಿಯಾಂಕಾ; ವಿಡಿಯೋ ವೈರಲ್

ಪ್ರಿಯಾಂಕಾ ಚೋಪ್ರಾ ಈ ಮೊದಲು ಬಾಲಿವುಡ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು. ಬಾಲಿವುಡ್ನ ಕರಾಳ ಮುಖ ಬಿಚ್ಚಿಟ್ಟಿದ್ದರು. ತನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಹೇಳಿದ್ದರು. ಬಾಲಿವುಡ್ ಬಿಡಲು ಕಾರಣವೇನೆಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. 'ನಾನು ಇಂಡಸ್ಟ್ರಿಯಲ್ಲಿ (ಬಾಲಿವುಡ್) ಮೂಲೆಗೆ ತಳ್ಳಲ್ಪಟ್ಟಿದ್ದೆ, ನನ್ನನ್ನು ಯಾವುದೇ ಸಿನಿಮಾಗೆ ಆಯ್ಕೆ ಮಾಡುತ್ತಿರಲಿಲ್ಲ. ನಾನು ಬಾಲಿವುಡ್ ಜನರ ಜೊತೆ ಗೋಮಾಂಸ ತಿಂದಿದ್ದೇನೆ. ನನಗೆ ಆ ಆಟದಲ್ಲಿ ಆಡಲು ಇಷ್ಟವಿರಲ್ಲ. ಆ ರಾಜಕೀಯದಿಂದ ಬೇಸತ್ತಿದ್ದೆ ಮತ್ತು ನನಗೆ ಬ್ರೇಕ್ ಬೇಕಿತ್ತು' ಎಂದು ಬಹಿರಂಗ ಪಡಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?