ನೋ ಉಪ್ಪು ನೋ ಶುಗರ್, ಸಿಕ್ಕಾಪಟ್ಟೆ ವರ್ಕೌಟ್: ನಟ ಸೂರ್ಯ ಫಿಟ್ನೆಸ್ ಸೀಕ್ರೆಟ್ ರಿವೀಲ್

Published : Jul 01, 2023, 12:05 PM IST
ನೋ ಉಪ್ಪು ನೋ ಶುಗರ್, ಸಿಕ್ಕಾಪಟ್ಟೆ ವರ್ಕೌಟ್: ನಟ ಸೂರ್ಯ ಫಿಟ್ನೆಸ್ ಸೀಕ್ರೆಟ್ ರಿವೀಲ್

ಸಾರಾಂಶ

ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರ ಫಿಟ್ನೆಸ್ ಸೀಕ್ರೆಟ್ ರಿವೀಲ್ ಆಗಿದೆ. ನೋ ಉಪ್ಪು, ಶುಗರ್, ಸಿಕ್ಕಾಪಟ್ಟೆ ವರ್ಕೌಟ್. ಪ್ರತಿದಿನ ಜಿಮ್‌ನಲ್ಲಿ ಸೂರ್ಯ 2 ಗಂಟೆ ಬೆವರಿಳಿಸುತ್ತಾರೆ ನಟ ಸೂರ್ಯ. 

ಕಾಲಿವುಡ್ ಸ್ಟಾರ್ ಸೂರ್ಯ ಎಲ್ಲಾ ವಿಚಾರದಲ್ಲೂ ಕಟ್ಟುನಿಟ್ಟು. ಸಿನಿಮಾ, ಸಮಯ ಪಾಲನೆ, ಜೀವನ ಶೈಲಿ ಹೀಗೆ ಎಲ್ಲಾ ವಿಚಾರದಲ್ಲೂ ಸಿಕ್ಕಾಪಟ್ಟೆ ಡೆಡಿಕೇಶನ್. ಕಲಾವಿದರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಟಾಸ್ಕ್. ಸದಾ ಫಿಟ್ ಆಂಡ್ ಫೈನ್ ಆಗಿರಬೇಕು. ಸ್ವಲ್ಪಾ ಹೆಚ್ಚು ಕಮ್ಮಿ ಆದರೂ ತೆರೆಮೇಲೆ ಸುಂದರವಾಗಿ ಕಾಣುವಿದಿಲ್ಲ. ಹಾಗಾಗಿ ಬಹುತೇಕ ಕಲಾವಿದರು ಫಿಟ್ನೆಸ್ ಕಡೆ ಹೆಚ್ಚು ಒತ್ತು ನೀಡುತ್ತಾರೆ. ನಟ ಸೂರ್ಯ ಕೂಡ ಫಿಟ್ನೆಸ್ ಅನ್ನು ಕಟ್ಟುನಿಟ್ಟಾಗಿ ಫಾಲೋ ಮಾಡುತ್ತಾರೆ. 47ನೇ ವಯಸ್ಸಿನಲ್ಲೂ ಸೂರ್ಯ ಸಖತ್ ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸೂರ್ಯ ಅವರ ಫಿಟ್ನೆಸ್ ಸೀಕ್ರೆಟ್ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. 

ಕಠಿಣ ಪರಿಶ್ರಮವೇ ಸ್ಟಾರ್ ನಟನ ಫಿಟ್‌ನೆಸ್ ಮಂತ್ರ. ಮಿಸ್ ಮಾಡದೆ ಪ್ರತಿದಿನ ವರ್ಕೌಟ್ ಮಾಡುವುದು ಡಯಟ್ ಫಾಲೋ ಮಾಡುವುದು ತುಂಬಾ ಮುಖ್ಯ. ಬಿಡುವಿಲ್ಲದ ಶೂಟ್ ಶೆಡ್ಯೂಲ್‌ಗಳಲ್ಲಿಯೂ ವರ್ಕೌಟ್ ಮಾಡುವುದನ್ನ ನಟ ಸೂರ್ಯ ನಿಲ್ಲಿಸಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ವರ್ಕೌಟ್ ಹಾಗೂ ಡಯಟ್ ತುಂಬಾ ಮುಖ್ಯವಾಗುತ್ತದೆ. ಅದನ್ನು ಅಷ್ಟೇ ಕಟ್ಟುನಿಟ್ಟಾಗಿ ಸೂರ್ಯ ಅನುಸರಿಸುತ್ತಾರೆ. 

ಸಿಕ್ಕಾಪಟ್ಟೆ ವರ್ಕೌಟ್ ಜೊತೆಗೆ ಸೂರ್ಯ ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಾರೆ. ಜಿಮ್‌ನಲ್ಲಿ ಬಿವರಿಳಿಸಿದ ನಂತರ ದೇಹಕ್ಕಿ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳು ಆಗತ್ಯವಾಗುತ್ತದೆ. ನಟ ಸೂರ್ಯ ಕರಿದ ಪದಾರ್ಥಗಳು, ಉಪ್ಪು ಮತ್ತು ಸಕ್ಕರೆ ಇಲ್ಲದ ಅಹಾರವನ್ನು ಸೇವಿಸುತ್ತಾರೆ. ಕೊಬ್ಬಿನಾಂಶ ಇರುವ ಆಹಾರದಿಂದ ದೂರ ಇರುತ್ತಾರೆ. ಬೇಕರಿ ತಿನಿಸನ್ನು ತಿನ್ನುವುದಿಲ್ಲ. ಆರೋಗ್ಯಕರವಾದ ಆಹಾರ ಪದ್ದತಿಯನ್ನು ಅನುಸರಿಸುತ್ತಾರೆ. ಹಾಗಾಗಿಯೇ ಇಷ್ಟು ಕಟ್ಟುಮಸ್ತಾದ ದೇಹವನ್ನು ಹೊಂದಿದ್ದಾರೆ ಸೂರ್ಯ.

Kanguva: ಕುತೂಹಲ ಹೆಚ್ಚಿಸಿದ ಸೂರ್ಯ ನಟನೆಯ ಹೊಸ ಸಿನಿಮಾದ ಟೈಟಲ್; ಟೀಸರ್ ವೈರಲ್

ನಟ ಸೂರ್ಯ ಬೆಳಗ್ಗೆಯ ತಿಂಡಿಗೆ, ಪ್ರೋಟೀನ್-ಭರಿತ ಆಹಾರವನ್ನು ಸೇವಿಸುತ್ತಾರೆ.  ಮೊಟ್ಟಯ ಬಿಳಿಯ ಭಾಗ ಮತ್ತು ಹಾಲನ್ನು ತೆಗೆದುಕೊಳ್ಳುತ್ತಾರೆ. ಮಾಧ್ಯಾಹ್ನ ಊಟಕ್ಕೆ ಚಿಕನ್ ಮತ್ತು ಅನ್ನ ಸೇವಿಸುತ್ತಾರೆ. ಹಣ್ಣುಗಳನ್ನು ಸೇವಿಸುತ್ತಾರೆ.

23 ವರ್ಷದ ಬಳಿಕ ಬಾಲಿವುಡ್‌ಗೆ ನಟಿ ಜ್ಯೋತಿಕಾ; ಸ್ಟಾರ್ ನಟನಿಗೆ ಜೋಡಿಯಾದ ಸೂರ್ಯ ಪತ್ನಿ

ಅಂದಹಾಗೆ ನಟ ಸೂರ್ಯ ಅವರ ಫಿಟ್ನೆಸ್ಗೆ ಸ್ಫೂರ್ತಿ ಬಾಲಿವುಡ್ ಸ್ಟಾರ್ ಅಮೀರ್ ಖಾನ್. ಈ ಬಗ್ಗೆ ಸೂರ್ಯ ಈ ಹಿಂದೆ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದರು. ಸಿಕ್ಸ್ ಪ್ಯಾಕ್ ಆಬ್ಸ್ಗೆ ಅಮೀರ್ ಖಾನ್ ಪ್ರೇರಣೆ ಎಂದು ಹೇಳಿದ್ದರು. ಪ್ರತಿದಿನ ಜಿಮ್‌ನಲ್ಲಿ 2 ಗಂಟೆ ವರ್ಕೌಟ್ ಮಾಡುತ್ತಾರೆ. ಅಷ್ಟೆಯಲ್ಲದೇ ಒತ್ತಡ ನಿವಾರಣೆಗಾಗಿ ಯೋಗ ಮತ್ತು ಧ್ಯಾನ ಮಾಡುತ್ತಾರೆ. ಜಾಗಿಂಗ್ ಎಂದರೆ ತುಂಬಾ ಇಷ್ಟಪಡುತ್ತಾರೆ ಸೂರ್ಯ. ಇದೀಗ ಪತಿಯ ಹಾಗೆ ಪತ್ನಿ ಜ್ಯೂತಿಕಾ ಕೂಡ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜ್ಯೋತಿಕಾ ಫಿಟ್ ಅಂಡ್ ಫೈನ್ ಆಗಿರಲು ವರ್ಕೌಟ್ ಪ್ರಾರಂಭಿಸಿದ್ದಾರೆ. ಜ್ಯೋತಿಕಾ ವರ್ಕೌಟ್ ವಿಡಿಯೋ ಕೂಡ ವೈರಲ್ ಆಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Katrina Kaif: ತಾಯಿಯಾದ ಬಳಿಕ ಮೊದಲ ಹೋಳಿ: ಪತಿ ವಿಕ್ಕಿ ಜೊತೆ ಬಣ್ಣದೋಕುಳಿ ಆಡಿದ ಕತ್ರಿನಾ ಕೈಫ್
Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?