ಡಾರ್ಲಿಂಗ್ ಪ್ರಭಾಸ್ ನಾಯಕತ್ವ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಭಾರೀ ಗಮನಸೆಳೆದಿದ್ದರು ಮಲಯಾಳಂ ನಟ ಪ್ರಥ್ವಿರಾಜ್ ಸುಕುಮಾರನ್. ಇದೀಗ, ಆಡುಜೀವಿತಂ ಚಿತ್ರದ ಮೂಲಕ ಪ್ರಥ್ವಿರಾಜ್ ಅವರು ನಾಯಕರಾಗಿ ಮಿಂಚುತ್ತಿದ್ದಾರೆ.
ಮಲಯಾಳಂ ಸಿನಿಮಾಗಳು ಸಿನೀರಸಿಕರ ಗಮನ ಸೆಳೆಯೋದೇ ಈ ಕಾರಣಕ್ಕೆ. ಆ ಚಿತ್ರಗಳ ಕತೆಯೇ ಆ ಸಿನಿಮಾಗಳ ನಿಜವಾದ ಜೀವಾಳ.. ಸದ್ಯ ಶುಕ್ರವಾರ ರಿಲೀಸ್ ಆಗಿರೋ ಈ ಮಲಯಾಳಂ ಸಿನಿಮಾ ಬುಕ್ ಮೈಶೋ ನಲ್ಲಿ 9.5 ರೇಟಿಂಗ್ ಪಡೆದಿದೆ. ಸಲಾರ್ ಖ್ಯಾತಿಯ ನಟ ಪ್ರಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯ 'ಆಡುಜೀವಿತಂ' (Aadujeevitham)ಸಿನಿಮಾ ಮಾರ್ಚ್ 28ರಂದು ರಿಲೀಸ್ ಆಯಿತು. ಮೊದಲ ದಿನ ಸಿನಿಮಾ 7.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನ ಚಿತ್ರದ ಗಳಿಕೆ 6.50 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 14.10 ಕೋಟಿ ರೂಪಾಯಿ ದಾಟಿದೆ.
'ಆಡುಜೀವಿತಂ' ಸಿನಿಮಾ ನೈಜ ಘಟನೆ ಆಧರಿಸಿದೆ. ಕೇರಳ ಮೂಲದ ವ್ಯಕ್ತಿ ಕೆಲಸಕ್ಕಾಗಿ ಸೌದಿ ಅರೇಬಿಯಾ ತೆರಳುತ್ತಾರೆ. ಸೂಪರ್ ಮಾರ್ಕೆಟ್ನಲ್ಲಿ ಮಾಡೋ ಕೆಲಸ ಎಂದು ಆತನ ಕರೆದುಕೊಂಡು ಹೋಗುತ್ತಾರೆ. ಆ ಬಳಿಕ ಅದು ಮೋಸ ಅನ್ನೋದು ಗೊತ್ತಾಗುತ್ತದೆ. ಆತನಿಗೆ ಮರಳುಗಾಡಿನಲ್ಲಿ ಕುರಿ ಕಾಯುವ ಕೆಲಸ ಸಿಗುತ್ತದೆ. ಹಲವು ವರ್ಷ ಅಲ್ಲಿಯೇ ಟ್ರ್ಯಾಪ್ ಆಗೋ ಆ ವ್ಯಕ್ತಿ ನಂತರ ಮರಳಿ ಬರುತ್ತಾರೆ. ‘ಆಡುಜೀವಿತಂ’ ಚಿತ್ರವನ್ನು ಬ್ಲೆಸ್ಸಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪೃಥ್ವಿರಾಜ್, ಅಮಲಾ ಪೌಲ್ ಮೊದಲಾದವರು ಸಿನಿಮಾದಲ್ಲಿ ಇದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.
ನಾನೇನೂ ಹೇಳಲ್ಲ ಅಂತ ಹೇಳಿ 'ಸಲಾರ್ 2' ಕಥೆ ಸೀಕ್ರೆಟ್ ಎಲ್ಲಾನೂ ಹೇಳ್ಬಿಟ್ರಾ ಪ್ರಥ್ವಿರಾಜ್ ಸುಕುಮಾರನ್?
'ಆಡುಜೀವಿತಂ' ಸಿನಿಮಾ ಮಾರ್ಚ್ 28ರಂದು ರಿಲೀಸ್ ಆಗಿ, ಮೊದಲ ದಿನ ಸಿನಿಮಾ 7.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನ ಚಿತ್ರದ ಗಳಿಕೆ 6.50 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 14.10 ಕೋಟಿ ರೂಪಾಯಿ ದಾಟಿದೆ. ಮಲಯಾಳಂ ಚಿತ್ರರಂಗದಿಂದಲೇ 11.82 ಕೋಟಿ ರೂಪಾಯಿ ಗಳಿಕೆ ಆಗಿದೆ. ಕನ್ನಡದಿಂದ 90 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಹಂಚಿಕೆ ಮಾಡಿದೆ. ಮಾರ್ಚ್ 30 ಹಾಗೂ ಮಾರ್ಚ್ 31ರಂದು ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚೋ ಸಾಧ್ಯತೆ ಇದೆ.
ಕೆಜಿಎಫ್ ಹೀರೋ ಯಶ್ ಮಾತು ಕೇಳಿ ಶಾಕ್ ಆಗ್ಬೇಡಿ; ಟೀಮ್ ಬಗ್ಗೆ ಹೀಗೆ ಹೇಳಿದ್ರು ರಾಕಿಂಗ್ ಸ್ಟಾರ್!
ಒಟ್ಟಿನಲ್ಲಿ, ಡಾರ್ಲಿಂಗ್ ಪ್ರಭಾಸ್ ನಾಯಕತ್ವ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಭಾರೀ ಗಮನಸೆಳೆದಿದ್ದರು ಮಲಯಾಳಂ ನಟ ಪ್ರಥ್ವಿರಾಜ್ ಸುಕುಮಾರನ್. ಇದೀಗ, ಆಡುಜೀವಿತಂ ಚಿತ್ರದ ಮೂಲಕ ಪ್ರಥ್ವಿರಾಜ್ ಅವರು ನಾಯಕರಾಗಿ ಮಿಂಚುತ್ತಿದ್ದಾರೆ. ಮಲಯಾಳಂ ಸಿನಿರಂಗದಲ್ಲಿ ನಾಯಕರಾಗಿ ಚಿರಪರಿಚಿತರಾಗಿರುವ ನಟ ಪ್ರಥ್ವಿರಾಜ್ ಸುಕುಮಾರನ್ ಅವರು ಈಗ ಸಲಾರ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಖ್ಯಾತಿ ಹೊಂದಿದ್ದಾರೆ.
ಮಹಾಲಿಂಗ ಭಾಗವತರ್ ನನ್ನ ಪತಿಯಲ್ಲ, ಗಾಡ್ ಫಾದರ್ ಅಷ್ಟೇ; ಆಪ್ತರ ಬಳಿ ಹೇಳಿದ್ರಂತೆ ನಟಿ ಲೀಲಾವತಿ!