ಮಲೈಕಾ ಅರೋರಾ ತಾಯಿ ಮತ್ತು ನಟಿಯ ಮಾಜಿ ಪತಿ ಅರ್ಬಾಜ್ ಖಾನ್ ಅಪ್ಪ ಸಲೀಂ ಖಾನ್ ಒಂದೇ ಕಾರಲ್ಲಿ ಕಾಣಿಸಿಕೊಂಡಿದ್ದು, ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ಬಾಲಿವುಡ್ ನಟಿ ಮಲೈಕಾ ಅರೋರಾ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ.
ಅದೇ ಇನ್ನೊಂದೆಡೆ, ನಟ ಸಲ್ಮಾನ್ ಖಾನ್ ಸಹೋದರ, ನಟಿ ಮಲೈಕಾ ಶರಾವತ್ ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್ ಇನ್ ಪಾರ್ಟನರ್ ಅರ್ಬಾಜ್ ಖಾನ್ ಕಳೆದ ಡಿಸೆಂಬರ್ 25ರಂದು ಮದುವೆಯಾದರು. 56 ವರ್ಷದ ಅರ್ಬಾಜ್ ಖಾನ್ ಅವರು 33 ವರ್ಷದ ಶುರಾ ಖಾನ್ ಅವರ ಕೈಹಿಡಿದು ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಮದುವೆಯಲ್ಲಿ ಮಲೈಕಾ ಪುತ್ರ ಅರ್ಹಾನ್ ಖಾನ್ ಕೂಡ ಆಗಮಿಸಿ ಸಂಗೀತ, ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಅಪ್ಪನ ಮದ್ವೆಗೆ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದು ವಿಶೇಷವಾಗಿತ್ತು. ಆದರೆ ಮಲೈಕಾ ಶರಾವತ್ ಮಾತ್ರ ಮಾಜಿ ಪತಿಯ ಮದ್ವೆಗೆ ಹೋಗಿರಲಿಲ್ಲ. ಮದುವೆಯಾಗುತ್ತಿದ್ದಂತೆಯೇ ಅರ್ಬಾಜ್, ಮಲೈಕಾ ಅರೋರಾ ಅವರನ್ನು ಸೋಷಿಯಲ್ ಮೀಡಿಯಾ ಖಾತೆಯಿಂದ ಅನ್ಫಾಲೋ ಮಾಡಿಯೂ ಆಗಿದೆ.
ಪತ್ನಿಯೂ ಬಿಟ್ಟಳು, ಗರ್ಲ್ಫ್ರೆಂಡೂ ಕೈಕೊಟ್ಟಳು... ಮಲೈಕಾ ಅರೋರಾ ಮಾಜಿ ಪತಿಗೆ ಕೊನೆಗೂ ಸಿಕ್ಕಳೀ ಹೊಸ ಬೆಡಗಿ?
ಇವೆಲ್ಲವುಗಳ ನಡುವೆ ಇದೀಗ ಕುತೂಹಲದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದೇನೆಂದರೆ ಮಲೈಕಾ ಅವರ ತಾಯಿ ಜಾಯ್ಸ್ ಪಾಲಿಕಾರ್ಪ್ (Joyce Polycarp) , ಅರ್ಬಾಜ್ ಖಾನ್ ತಂದೆ ಸಲೀಂ ಖಾನ್ ಜೊತೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಸಲೀಂ ಖಾನ್ ಇಳಿಯುತ್ತಿದ್ದಂತೆಯೇ ಪಾಪರಾಜಿಗಳು ಫೋಟೋ ಕ್ಲಿಕ್ಕಿಸಲು ಮುಂದಾದಾಗ ಖುದ್ದು ಶಾಕ್ ಆದರು. ಏಕೆಂದರೆ ಅದೇ ಕಾರಿನಲ್ಲಿ, ಮಲೈಕಾ ಅವರ ತಾಯಿಯೂ ಇದ್ದು, ಇದರ ವಿಡಿಯೋಗೆ ಥರಹೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಮಗನಿಗೆ ಮಲೈಕಾ ಕೈಕೊಟ್ಟಿದ್ದಕ್ಕೆ ಅವಳ ಅಮ್ಮನ ಮೇಲೆ ಸೇಡು ತೀರಿಸಿಕೊಳ್ತಿದ್ದಾರಾ ಸಲೀಂ ಎಂದು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು.
ಅಷ್ಟಕ್ಕೂ ಅವರೇನೂ ಸುಮ್ಮನೇ ಒಟ್ಟಿಗೇ ಹೋಗಿದ್ದಲ್ಲ. ಮಲೈಕಾ ಮತ್ತು ಅರ್ಬಾಜ್ ಖಾನ್ ಪುತ್ರ ಅರ್ಹಾನ್ ಖಾನ್ ಹುಟ್ಟುಹಬ್ಬವನ್ನು ಆಯೋಜಿಸಲಾಗಿತ್ತು. ಗ್ರ್ಯಾಂಡ್ ಪಾರ್ಟಿ ನಡೆದಿತ್ತು. ಆ ಸಂದರ್ಭದಲ್ಲಿ ಅರ್ಬಾಜ್ ಖಾನ್ ಅವರ ತಂದೆಯೂ ಹೋಗಿದ್ದಾರೆ, ಮಲೈಕಾ ಅಮ್ಮನೂ ಹೋಗಿದ್ದಾರೆ. ಅದರೆ ಒಂದೇ ಕಾರಿನಲ್ಲಿ ಹೋದದ್ದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಈ ವೈರಲ್ ವಿಡಿಯೋದಲ್ಲಿ ಅರ್ಬಾಜ್ ಖಾನ್ ಅವರ ತಂದೆ ಸಲೀಂ ಖಾನ್ ತಮ್ಮ ಕಾರಿನಿಂದ ಇಳಿಯುತ್ತಿರುವುದು ಕಾಣಬಹುದು. ಅದೇ ಕಾರಿನಲ್ಲಿ ಜಾಯ್ಸ್ ಪಾಲಿಕಾರ್ಪ್ ಕೂಡ ಇದ್ದದ್ದು, ನೆಟ್ಟಿಗರು ಏನೋ ಮಿಸ್ ಹೊಡೀತಿದೆ ಅಂತಿದ್ದಾರೆ.
ಮಾಜಿ ಪತಿಯ ಮದ್ವೆ ಆಗ್ತಿದ್ದಂತೆಯೇ, ನಾಯಿ ಜೊತೆ ಪಾರ್ಟಿಗೆ ಹೋದ ಮಲೈಕಾ ಅರೋರಾ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?