ಮಲಯಾಳಂನಂಥ ಸಣ್ಣ ಸಿನಿಉದ್ಯಮದಲ್ಲಿ ನಟಿಸುತ್ತಿದ್ದ ತಾವು ಸಲಾರ್ ಸಿನಿಮಾಗೆ ಆಯ್ಕೆಯಾಗಿ ನಟಿಸಿದ್ದು ಒಂದು ಪವಾಡ ಎಂದೇ ತಾವು ಭಾವಿಸುವುದಾಗಿ ನಟ ಪ್ರಥ್ವಿರಾಜ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಮಲಯಾಳಂ ನಟ ಪ್ರಥ್ವಿರಾಜ್ ಸುಕುಮಾರನ್ (Prithviraj Sukumaran)ಸಂದರ್ಶನವೊಂದರಲ್ಲಿ ಮಾತನಾಡುತ್ತ 'ಸಲಾರ್ (Salaar)' ಸಿನಿಮಾದ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ. ನಿರೂಪಕಿ 'ನೀವು ಸಲಾರ್ 2' ಬಗ್ಗೆ ಏನಾದ್ರೂ ಹೇಳಬಹುದಾ' ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸುತ್ತ ನಟ ಪ್ರಥ್ವಿರಾಜ್ 'ಖಂಡಿತ ನಾನು ಸಲಾರ್ ಪಾರ್ಟ್-2 ಬಗ್ಗೆ ಹೇಳಲಾರೆ 'ಎಂದಿದ್ದಾರೆ. ಅದಕ್ಕೆ ಸಂದರ್ಶಕಿ 'ಬೇರೆ ಕಡೆ ಈಗಾಗಲೇ ನೀವು ಹೇಳಿದ್ದನ್ನಾದರೂ ಹೇಳಬಹುದೇ' ಎಂಬ ಪ್ರಶ್ನೆ ಕೇಳಿದಾಗ 'ಖಂಡಿತ, ಸಲಾರ್ ಸಿನಿಮಾದ ಪಾರ್ಟ್ 2 ಬಂದರೆ, ಅದು ದೇವಾ ಕಥೆ ಬಗ್ಗೆ ಆಗಿರುತ್ತದೆ ಎಂದಿದ್ದಾರೆ.
ಮುಂದುವರೆದು ಮಾತನಾಡುತ್ತ ನಟ ಪ್ರಥ್ವಿರಾಜ್ 'ಸಲಾರ್ ಪಾರ್ಟ್ 2 ಸಿನಿಮಾ ಒಮ್ಮೆ ಸೆಟ್ಟೇರಿದರೆ ಅದರಲ್ಲಿ ದೇವಾ ಪಾತ್ರದ ಕಥೆ ಕಂಡಿತ ಬರುತ್ತದೆ. ಅದರಲ್ಲೂ ಮುಖ್ಯವಾಗಿ ಖಾನ್ಸಾರ್ ಬಗ್ಗೆ ಆ ಸಿನಿಮಾದಲ್ಲಿ ಹೆಚ್ಚಿನ ಮಾಹಿತಿ ದೊರೆಯಲಿದೆ. ಖಾನ್ಸಾರ್ ಕಿಂಗ್‌ಡಮ್‌ನಲ್ಲಿ ಏನೇನಿದೆ? ಆ ಜಾಗದ ಮಹತ್ವ ಹಾಗು ಖಾನ್ಸಾರ್ ಬಗೆಗಿನ ಹೆಚ್ಚಿನ ಡೀಟೇಲ್ಸ್ ಮುಂಬರುವ ಸಲಾರ್ 2 ಚಿತ್ರದಲ್ಲಿ ದೊರೆಯಲಿದೆ. ಸಲಾರ್ ಚಿತ್ರದ ಹೀರೋ ಹಾಗು ವಿಲನ್ ಬಗ್ಗೆ ಸಲಾರ್ 2 ಚಿತ್ರದಲ್ಲಿ ಹೈಲೈಟ್ ಆಗಲಿದ್ದು, ಒಳ್ಳೆಯ ಸ್ನೇಹಿತರು ಯಾವ ರೀತಿಯಲ್ಲಿ ಬದ್ಧ ವೈರಿಗಳು ಆಗಬಹುದು ಎಂಬುದನ್ನು ನೀವು ನೋಡಬಹುದು' ಎಂದಿದ್ದಾರೆ ನಟ ಪ್ರಥ್ವಿರಾಜ್.
ಕೆಜಿಎಫ್ ಹೀರೋ ಯಶ್ ಮಾತು ಕೇಳಿ ಶಾಕ್ ಆಗ್ಬೇಡಿ; ಟೀಮ್ ಬಗ್ಗೆ ಹೀಗೆ ಹೇಳಿದ್ರು ರಾಕಿಂಗ್ ಸ್ಟಾರ್!
ನಟ ಪ್ರಥ್ವಿರಾಜ್ ಮಲಯಾಳಂ ಸಿನಿಮಾರಂಗವನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ 'ಸಲಾರ್'ನಂಥ ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಭಾಸ್ ಅವರಂಥ ಸ್ಟಾರ್ ನಟನ ಜತೆ ತೆರೆ ಹಂಚಿಕೊಂಡಿರುವ ನಟ ಪ್ರಥ್ವಿರಾಜ್ ತಾವು ಇಂಥ ದೊಡ್ಡ ಅವಕಾಶದ ಕನಸು ಕೂಡ ಕಂಡಿರಲಿಲ್ಲ ಎಂದಿದ್ದಾರೆ. ಮಲಯಾಳಂನಂಥ ಸಣ್ಣ ಸಿನಿಉದ್ಯಮದಲ್ಲಿ ನಟಿಸುತ್ತಿದ್ದ ತಾವು ಸಲಾರ್ ಸಿನಿಮಾಗೆ ಆಯ್ಕೆಯಾಗಿ ನಟಿಸಿದ್ದು ಒಂದು ಪವಾಡ ಎಂದೇ ತಾವು ಭಾವಿಸುವುದಾಗಿ ನಟ ಪ್ರಥ್ವಿರಾಜ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಹುಡುಗಿ ಪಕ್ಕದಲ್ಲಿ ನಿಂತು ಸ್ಮೋಕಿಂಗ್ ಮಾಡಿದ ಶಾರುಖ್ ಖಾನ್; ವಿಡಿಯೋ ವೈರಲ್, ಜನ ಗರಂ!
ಅಂದಹಾಗೆ, ನಟ ಪ್ರಥ್ವಿರಾಜ್ ಅವರು ಸಲಾರ್ ಚಿತ್ರದಲ್ಲಿ ನಟ ಡಾರ್ಲಿಂಗ್ ಪ್ರಭಾಸ್ ಅವರ ಎದುರು ವಿಲನ್ ಆಗಿ ಅಬ್ಬರಿಸಿದ್ದಾರೆ. ಸಲಾರ್ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು ಸಾಕಷ್ಟು ಸೌಂಡ್ ಮಾಡುವುದರ ಜೊತೆಗೆ, 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಬಾಹುಬಲಿ ಬಳಿಕ ಮೂರು ಸಿನಿಮಾಗಳ ಸತತ ಸೋಲಿನಿಂದ ಕಂಗೆಟ್ಟಿದ್ದ ನಟ ಪ್ರಭಾಸ್, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ನಟ ಪ್ರಥ್ವಿರಾಜ್ ಸುಕುಮಾರನ್ ಅವರು ಸಲಾರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿ ಖ್ಯಾತಿ ಹೊಂದಿದ್ದಾರೆ.
ಮಹಾಲಿಂಗ ಭಾಗವತರ್ ನನ್ನ ಪತಿಯಲ್ಲ, ಗಾಡ್ ಫಾದರ್ ಅಷ್ಟೇ; ಆಪ್ತರ ಬಳಿ ಹೇಳಿದ್ರಂತೆ ನಟಿ ಲೀಲಾವತಿ!