ಮತ್ತೆ ತಂದೆಯಾದ ಸಂಭ್ರಮದಲ್ಲಿ ಪ್ರಭುದೇವ: ಹೆಣ್ಣು ಮಗುವಿಗೆ ಜನ್ಮ ನೀಡಿದ 2ನೇ ಪತ್ನಿ ಹಿಮಾನಿ ಸಿಂಗ್

Published : Jun 12, 2023, 04:03 PM IST
ಮತ್ತೆ ತಂದೆಯಾದ ಸಂಭ್ರಮದಲ್ಲಿ ಪ್ರಭುದೇವ: ಹೆಣ್ಣು ಮಗುವಿಗೆ ಜನ್ಮ ನೀಡಿದ 2ನೇ ಪತ್ನಿ ಹಿಮಾನಿ ಸಿಂಗ್

ಸಾರಾಂಶ

ಮತ್ತೆ ತಂದೆಯಾದ ಸಂಭ್ರಮದಲ್ಲಿದ್ದಾರೆ ಪ್ರಭುದೇವ. 2ನೇ ಪತ್ನಿ ಹಿಮಾನಿ ಸಿಂಗ್  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ನಟ, ನಿರ್ದೇಶಕ, ಡಾನ್ಸರ್ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ. 50 ವರ್ಷದ ಪ್ರಭುದೇವ ನೇ ಬಾರಿಗೆ ತಂದೆಯಾಗಿದ್ದಾರೆ. ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಭುದೇವ ಕುಟುಂಬಕ್ಕೆ ಮೊದಲ ಹೆಣ್ಣು ಮಗು ಆಗಮಿಸಿದ್ದು ಇಡೀ ಕುಟುಂಬ ಸಂಭ್ರಮದಲ್ಲಿದೆ. ಮೂರನೇ ಮಗು ಕಳೆದುಕೊಂಡಿದ್ದ ಪ್ರಭುದೇವ ಅವರಿಗೆ ಮಗಳು ಬೆಳಕಾಗಿ ಬಂದಿದ್ದಾಳೆ. 

ಈ ಬಗ್ಗೆ ಸ್ವತಃ ಪ್ರಭುದೇವ ಅವರೇ ಅಧಿಕೃತಗೊಳಿಸಿದ್ದಾರೆ. 'ಎಸ್ ಇದು ನಿಜ. ನಾನು ಮತ್ತೆ ತಂದೆ ಆಗಿದ್ದೀನಿ 50ನೇ ವಯಸ್ಸಿಗೆ. ನನಗೆ ತುಂಬಾ ಖುಷಿಯಾಗುತ್ತಿದೆ' ಎಂದು ಹೇಳಿದ್ದಾರೆ. ಈ ಮೂಲಕ ಪ್ರಭುದೇವ ಅವರಿಗೆ ಈಗ ಮೂವರು ಮಕ್ಕಳು.  

 ಪ್ರಭುದೇವ 1995ರಲ್ಲಿ ರಾಮಲತಾ ಜೊತೆ ಮದುವೆಯಾದರು. ಪ್ರಭುದೇವ ಮತ್ತು ರಾಮಲತಾ ದಂಪತಿಗೆ ಮೂವರು ಮಕ್ಕಳು. ಮೊದಲ ಮಗ ವಿಶಾಲ್, 2ನೇ ಮಗ ರಿಷಿ ರಾಘವೇಂದ್ರ ದೇವ ಮತ್ತು ಅದಿತ್ ದೇವ. ಆದರೆ ಮೊದಲ ದುರದೃಷ್ಟವಶಾತ್ ವಿಶಾಲ್‌ನನ್ನು ಕಳೆದುಕೊಂಡರು ಪ್ರಭುದೇವ. ಪುಟ್ಟ ಬಾಲಕ ವಿಶಾಲ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ವಿಶಾಲ್ ನಿಧನವೊಂದುವ ಮೊದಲು 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸಿ 2008ರಲ್ಲಿ ವಿಶಾಲ್ ಕೊನೆಯುಸಿರೆಳೆದರು. 

ಮಗನ ಸಾವು ನೆನೆದು ಭಾವುಕರಾದ ಪ್ರಭುದೇವ; ಈ ಬಗ್ಗೆ ಮಾತಾಡಲು ನಿರಾಕರಿಸಿದ ಡಾನ್ಸರ್

ಮಗನ ಸಾವು ಪ್ರಭುದೇವ ಅವರಿಗೆ ದೊಡ್ಡ ಅಘಾತ ನೀಡಿತು. ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಪ್ರಭುದೇವ ಅವರಿಗೆ ಸಾಂತ್ವನ ಹೇಳಿದ್ದರು. ಮಗನನ್ನು ಕಳೆದುಕೊಂಡು ಅನೇಕ ವರ್ಷಗಳಾಗಿದ್ದರೂ ಇಂದಿಗೂ ನೆನೆದು ಪ್ರಭುದೇವ ಭಾವುಕರಾಗುತ್ತಾರೆ.  ಇತ್ತೀಚಿಗಷ್ಟೆ ಪ್ರಭುದೇವ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೂ ಮಗನ ಸಾವು ನೆನೆದು ಭಾವುಕರಾಗಿದ್ದರು. 

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರಭುದೇವ ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದರು. ಬಾಲ್ಯ, ಕುಟುಂಬ, ಸ್ನೇಹಿತರ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಪ್ರಭುದೇವ ತನ್ನ ಮಗನ ವಿಚಾರ ಬಂದಾಗ ಭಾವುಕರಾಗಿದ್ದರು. ಕಳೆದುಕೊಂಡ ಮಗನ ಜೊತೆಗಿನ ಫೋಟೋ ನೋಡಿ ಸೈಲೆಂಟ್ ಆದರು, ಆದರೆ ಕಣ್ಣಂಚಲ್ಲಿ ನೀರು ಜಿನುಗಿತ್ತು. ಪ್ರಭುದೇವ ಅವರ ಬಗ್ಗೆ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ ಮಗನನ್ನು ಕಳೆದುಕೊಂಡಾಗ ಜೊತೆಯಲ್ಲೇ ಇದ್ದೆ ಎಂದು ಹೇಳಿದ್ದರು. 

ಪ್ರಭುದೇವ ನೆಚ್ಚಿನ ಕನ್ನಡ ಹೀರೋ ಇವರೆ: ವೀಕೆಂಡ್ ಕಾರ್ಯಕ್ರಮದಲ್ಲಿ ಇಂಟ್ರಸ್ಟಿಂಗ್ ವಿಚಾರ ಬಹಿರಂಗ

2011ರಲ್ಲಿ ಮೊದಲ ಪತ್ನಿಯಿಂದ ದೂರಾಗಿದ್ದ ಪ್ರಭುದೇವ 2020ರಲ್ಲಿ ಹಿಮಾನಿ ಸಿಂಗ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಈ ಬಗ್ಗೆ ಪ್ರಭುದೇವ ಅಧಿಕೃತವಾಗಿ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ವಿಕೇಂಡ್ ವಿತ್ ರಮೇಶ್ ನಲ್ಲಿ ಹಿಮಾನಿ ಸಿಂಗ್ ಪ್ರಭುದೇವ ಬಗ್ಗೆ ಮಾತನಾಡುವ ಮೂಲಕ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಇದೀಗ ಮೊದಲ ಮಗುವಿಗೆ ಜನ್ಮ ನೀಡಿರುವ ಹಿಮಾನಿ ಸಿಂಗ್ ಸಂತಸದಲ್ಲಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ
ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?