ಸೆಲ್ಫಿ ತೆಗೆದುಕೊಳ್ಳಲು ಬಂದಾಕೆ ನಟ ಪ್ರಭಾಸ್​ ಕೆನ್ನೆಗೆ ಹೊಡೆಯೋದಾ? ವಿಡಿಯೋ ವೈರಲ್​!

By Suvarna News  |  First Published Oct 4, 2023, 12:08 PM IST

ನಟ ಪ್ರಭಾಸ್​ ಅವರ ಜೊತೆ ಸೆಲ್ಫಿ ಕೇಳಿದ ಯುವತಿಯೊಬ್ಬಳು ಸೆಲ್ಫಿ ಪಡೆದ ಬಳಿಕ ಅವರ ಕೆನ್ನೆಗೆ ಹೊಡೆದು ಹೋಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. 
 


‘ಬಾಹುಬಲಿ’  ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ನಟ ಪ್ರಭಾಸ್​. ಅವರ ಆದಿಪುರುಷ್​ ಸಿನಿಮಾ ವಿವಾದದಲ್ಲಿಯೇ ಮುಳುಗಿದರೂ ಪ್ರಭಾಸ್​ ಅವರಿಗೆ ದೇಶದ ಆಚೆಯೂ ಅಭಿಮಾನಿಗಳು ಇರುವುದು ಸುಳ್ಳಲ್ಲ. ಟಾಲಿವುಡ್ ಯಂಗ್​ ರೆಬೆಲ್​ ಸ್ಟಾರ್​ ಎಂದೇ ಖ್ಯಾತಿ ಪಡೆದಿರುವ ಪ್ರಭಾಸ್ ಅವರಿಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚು ಎಂದೇ ಹೇಳಬಹುದು. ಯಾವುದೇ ಯಂಗ್​ ನಟ ಅಥವಾ ಫೇಮಸ್​ ಆಗಿರೋರನ್ನು ಎಲ್ಲಿಯಾದರೂ ಕಂಡರೆ ಅವರ ಹಲವು ಅಭಿಮಾನಿಗಳು ಹುಚ್ಚರಂತೆ ವರ್ತಿಸುವುದು ಸಾಮಾನ್ಯ. ಅವರ ಜೊತೆ ಒಂದು ಸೆಲ್ಫಿ ತೆಗೆದುಕೊಂಡರೆ ಬದುಕಿದ್ದು ಸಾರ್ಥಕವಾಯ್ತು ಎನ್ನುವಂಥ ಮನೋಭಾವ. ಇದೇ ಕಾರಣಕ್ಕೆ ಜೀವವನ್ನೂ ಲೆಕ್ಕಿಸದೇ ತಮ್ಮ ನೆಚ್ಚಿನ ನಾಯಕ-ನಾಯಕಿಯನ್ನು ನೋಡಲು ಹಾತೊರೆಯುವುದೂ ಇದೆ. ಇನ್ನು ಪ್ರಭಾಸ್​ ಅವರ ವಿಷಯಕ್ಕೆ ಬಂದರೆ ಮೊದಲೇ ಹೇಳಿದಂತೆ ಇವರನ್ನು ಕಂಡರೆ ಹಲವು ಹೆಣ್ಣುಮಕ್ಕಳಿಗೆ ಕ್ರಷ್​.

ಈಗ ಅಂಥದ್ದೇ ಒಬ್ಬ ಮಹಿಳಾ ಫ್ಯಾನ್​ನ ವಿಡಿಯೋ ಒಂದು ವೈರಲ್​ ಆಗಿದೆ. ಆದರೆ ಸೆಲ್ಫಿಗೆ ಪೋಸ್​ ಕೊಟ್ಟ ಪ್ರಭಾಸ್​ ಅವರ ಕೆನ್ನೆಗೇ ಹೊಡೆದು ಹೋಗಿದ್ದಾಳೆ ಈ ಯುವತಿ! ಅಷ್ಟಕ್ಕೂ ಆಗಿದ್ದೇನೆಂದರೆ, ಪ್ರಭಾಸ್   ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನ ನೋಡಿದ ಯುವತಿಯೊಬ್ಬಳು ಎಕ್ಸೈಟ್​ ಆಗಿದ್ದಾಳೆ.. ಪ್ರಭಾಸ್ ಜೊತೆ ಅವರು ಫೋಟೋ ಮತ್ತು ಸೆಲ್ಫಿ ತೆಗೆದುಕೊಂಡಿದ್ದಾಳೆ. ಖುಷಿಯಿಂದ ಕುಣಿದು ಕುಪ್ಪಳಿಸಿದ ಯುವತಿ ಸೆಲ್ಫಿ ಪಡೆದಿದ್ದಾಳೆ. ತನ್ನ ಜನ್ಮ ಸಾರ್ಥಕ ಆಯ್ತು ಅನ್ನೋ ಮನೋಭಾವ ಆಕೆಯ ಮುಖದಲ್ಲಿ ಕಾಣಬಹುದು. ನಟನ ಜೊತೆ ಸೆಲ್ಫಿ ಸಿಕ್ಕ ಖುಷಿಗೆ ಆಕೆಗೆ ಏನು ಮಾಡಬೇಕು ಎಂದು ತಿಳಿಯದೇ ಜಿಗಿಜಿಗಿದು  ಪ್ರಭಾಸ್ ಅವರ ಕೆನ್ನೆಗೆ ಬಾರಿಸಿ ಓಡಿ ಹೋಗಿದ್ದಾಳೆ. ಅತ್ತ ಹೋಗಿ ಮತ್ತೆ ಕುಣಿದಾಡಿದ್ದಾಳೆ.

Tap to resize

Latest Videos

ಬಿಗ್​ಬಾಸ್​ ಸ್ಪರ್ಧಿಗಳ ಆಯ್ಕೆ ಮಾನದಂಡದ ಕುರಿತ ಪ್ರಶ್ನೆಗೆ ಸುದೀಪ್​ ಗರಂ: ಏನ್​ ಹೇಳಿದ್ರು ಕೇಳಿ

ಅಷ್ಟಕ್ಕೂ ಹೀಗೆ ಮಾಡಿದ್ದು ತಮಾಷೆಗೆ. ಇದನ್ನು ನೋಡಿ ಅಲ್ಲಿದ್ದವರೆಲ್ಲಾ ನಕ್ಕಿದ್ದಾರೆ. ನಂತರ ಪ್ರಭಾಸ್​ ಅವರು ಏನೋ ಹೇಳಿ ಕೆನ್ನೆಯನ್ನು ಕೈಯಿಂದ ಸವರಿಕೊಂಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು 2019ರಲ್ಲಿ. ಅದರ ವಿಡಿಯೋ ಈಗ ವೈರಲ್​ ಆಗಿದ್ದು, ಪ್ರಭಾಸ್ ಅಭಿಮಾನಿಗಳ ವಲಯದಲ್ಲಿ ಶೇರ್​ ಆಗುತ್ತಿದೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿದ್ದು, ಕೂಲ್​ ನಟ ಎನ್ನುತ್ತಿದ್ದಾರೆ.


ಇನ್ನು ಪ್ರಭಾಸ್​ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ‘ಬಾಹುಬಲಿ’ ನಂತರ ಬಂದ ‘ಸಾಹೋ’, ‘ರಾಧೆ ಶ್ಯಾಮ್’, ಹಾಗೂ ‘ಆದಿ ಪುರುಷ್’ ಚಿತ್ರಗಳು ಕೊಂಚ ನಿರಾಸೆ ಮೂಡಿಸಿದರೂ ಪ್ರಭಾಸ್ ಕ್ರೇಜ್ ಕಡಿಮೆ ಆಗಿಲ್ಲ. ಸದ್ಯ ಪ್ರಭಾಸ್ ಸದ್ಯ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದಿಪುರುಷ ನಂತರ ಪ್ರಭಾಸ್ ಪ್ರಶಾಂತ್ ನೀಲ್ ಜೊತೆ ಸಲಾರ್ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸಲಾರ್​ ಸಿನಿಮಾ ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ.  ‘ಆದಿಪುರುಷ್’ ಸೋತ ಬಳಿಕ ಪ್ರಭಾಸ್ ‘ಸಲಾರ್’ ಚಿತ್ರದ ಬಗ್ಗೆ ಗಮನ ಹರಿಸಿದರು. ಡಿಸೆಂಬರ್ 22 ರಂದು ಸಲಾರ್ ಸಿನಿಮಾ ತೆರೆಮೇಲೆ ಬರಲಿದೆ. ಸಲಾರ್‌ನ ಅಧಿಕೃತ ಟ್ರೇಲರ್ ಪ್ರಭಾಸ್ ಅವರ ಹುಟ್ಟುಹಬ್ಬದಂದು ಅಂದರೆ ಅದೇ 23 ರಂದು ಬಿಡುಗಡೆಯಾಗಲಿದೆ.  ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಈ ಸಿನಿಮಾಗೆ ಇದೆ. ರವಿ ಬ್ರಸೂರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜಗಪತಿ ಬಾಬು, ಟೀನು ಆನಂದ್, ಈಶ್ವರಿ ರಾವ್, ಶ್ರೇಯಾ ರೆಡ್ಡಿ, ಮಧು ಗುರುಸ್ವಾಮಿ, ಜೆಮಿನಿ ಸುರೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  

ಕಾಂಗ್ರೆಸ್​ ಮುಖಂಡೆ ‘ಮಿಸ್‌ ಬಿಕಿನಿ ಇಂಡಿಯಾ’ ಅರ್ಚನಾಗೆ ಪಕ್ಷದ ಕಚೇರಿಗೆ ನೋ ಎಂಟ್ರಿ! ತೀವ್ರ ಹಲ್ಲೆ

click me!