ಶಾರುಖ್ ಖಾನ್ ಅಭಿನಯದ ಸ್ವದೇಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಗಾಯತ್ರಿ ಜೋಶಿ ಅವರು ಇಟಲಿಯಲ್ಲಿ ತಮ್ಮ ಪತಿ, ಉದ್ಯಮಿ ವಿಕಾಸ್ ಒಬೆರಾಯ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾರು ಅಪಘಾತಕ್ಕೊಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.
ಶಾರುಖ್ ಖಾನ್ ಅಭಿನಯದ ಸ್ವದೇಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಗಾಯತ್ರಿ ಜೋಶಿ ಅವರು ಇಟಲಿಯಲ್ಲಿ ತಮ್ಮ ಪತಿ, ಉದ್ಯಮಿ ವಿಕಾಸ್ ಒಬೆರಾಯ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಕಾರು ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದಾರೆ. ಕೂದಲೆಳೆಯ ಅಂತರದಲ್ಲಿ ಭಾರೀ ಗಂಡಾಂತರದಿಂದ ಪಾರಾಗಿದ್ದಾರೆ.
ಇಟಾಲಿಯನ್ ಸೂಪರ್‌ಕಾರ್ ಪ್ರವಾಸದ ಸಮಯದಲ್ಲಿ ತಮ್ಮ ಫೆರಾರಿ ಕಾರಿಗೆ ಲಂಬೋರ್ಗಿ ಡಿಕ್ಕಿ ಹೊಡೆದ ನಂತರ ಭೀಕರ ಅಪಘಾತ ಸಂಭವಿಸಿ ಸ್ವಿಸ್ ದಂಪತಿಗಳನ್ನು ಸಾವನ್ನಪ್ಪಿದ್ಧಾರೆ. ಅಪಘಾತದಲ್ಲಿ ಫೆರಾರಿಗೆ ಬೆಂಕಿ ಹತ್ತಿಕೊಂಡಿತು. ಕಾರಿನ ಒಳಗಿದ್ದ ಸ್ವಿಸ್ ದಂಪತಿ ಮೆಲಿಸ್ಸಾ ಕ್ರೌಟ್ಲಿ (63) ಮತ್ತು ಮಾರ್ಕಸ್ ಕ್ರೌಟ್ಲಿ (67) ಮೃತಪಟ್ಟಿದ್ದಾರೆ. ಅಪಘಾತದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
undefined
ವಿಕಾಸ್ ಮತ್ತು ನಾನು ಇಟಲಿಯಲ್ಲಿದ್ದೇವೆ. ಅಪಘಾತ ನಡೆದಿದೆ. (ಹಲವು ಕಾರು ಸರಣಿ ಡಿಕ್ಕಿ) ದೇವರ ಅನುಗ್ರಹದಿಂದ ನಾವಿಬ್ಬರೂ ಸಂಪೂರ್ಣವಾಗಿ ಚೆನ್ನಾಗಿದ್ದೇವೆ. ಲಂಬೋರ್ಗಿನಿ ಮತ್ತು ಫೆರಾರಿ ಸೇರಿದಂತೆ ಹಲವಾರು ಕಾರುಗಳು ಏಕಕಾಲದಲ್ಲಿ ಕ್ಯಾಂಪರ್ ವ್ಯಾನ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಅಪಘಾತ ಸಂಭವಿಸಿದೆ ಎಂದು ಗಾಯತ್ರಿ ಅವರು ಹೇಳಿಕೆ ನೀಡಿರುವುದು ಹಲವು ಮಾಧ್ಯಮ ವರದಿಗಳು ತಿಳಿಸಿದೆ. ಜೊತೆಗೆ ವಿಡಿಯೋದಲ್ಲಿ ದಾಖಲಾಗಿರುವಂತೆ ನೀಲಿ ಬಣ್ಣದ ಬ್ಲೂ ಲಾಂಬೋರ್ಗಿನಿಯಲ್ಲಿ ಒಬೆರಾಯ್ ದಂಪತಿ ಪ್ರಯಾಣಿಸುತ್ತಿದ್ದರು.
ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ ಶ್ರೀದೇವಿ, ಜಾನ್ವಿ ಕಪೂರ್
ಉದ್ಯಮಿ ವಿಕಾಸ್ ಒಬೆರಾಯ್ ಅವರು ಒಬೆರಾಯ್ ರಿಯಾಲ್ಟಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಸುಮಾರು 30,000 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ವಿಕಾಸ್ ಒಬೆರಾಯ್ (52), 3.5 ಶತಕೋಟಿ (28,000 ಕೋಟಿ ರೂ.ಗಿಂತ ಹೆಚ್ಚು) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಫೋರ್ಬ್ಸ್ ಪ್ರಕಾರ ಅವರು ಪ್ರಸ್ತುತ 65 ನೇ ಶ್ರೀಮಂತ ಭಾರತೀಯರಾಗಿದ್ದಾರೆ.
ಶಾರುಖ್ ಜೊತೆ ಒಂದೇ ಸಿನೆಮಾ ಮಾಡಿ ಎಲ್ಲವನ್ನೂ ತೊರೆದು ಫೋರ್ಬ್ಸ್ ಶ್ರೀಮಂತನ ಮದುವೆಯಾದ ಜನಪ್ರಿಯ ಮಾಡೆಲ್
ಗಾಯತ್ರಿ ಜೋಶಿ 1977 ರಲ್ಲಿ ನಾಗ್ಪುರದಲ್ಲಿ ಜನಿಸಿದರು ಮತ್ತು ಅವರು ತಮ್ಮ ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ವೃತ್ತಿಯನ್ನು ಪ್ರಾರಂಭಿಸಿದರು. ಶಾರುಖ್ ಖಾನ್ ಅವರೊಂದಿಗೆ ನಟಿಸುವ ಮೊದಲು, ಗಾಯತ್ರಿ ಜೋಶಿ ಗೋದ್ರೇಜ್, ಎಲ್ಜಿ, ಪಾಂಡ್ಸ್, ಬಾಂಬೆ ಡೈಯಿಂಗ್, ಸನ್‌ಸಿಲ್ಕ್ ಮತ್ತು ಫಿಲಿಪ್ಸ್‌ನಂತಹ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.
ಗಾಯತ್ರಿ ಜೋಶಿ ಆ ಕಾಲದ ಅತ್ಯಂತ ಜನಪ್ರಿಯ ಮಾಡೆಲ್‌ಗಳಲ್ಲಿ ಒಬ್ಬರಾಗಿದ್ದರು ಮತ್ತು 1999 ರಲ್ಲಿ ಮಿಸ್ ಇಂಡಿಯಾದಲ್ಲಿ ಭಾಗವಹಿಸಿದರು. ಜೊತೆಗೆ ಐದು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ನಂತರದ ವರ್ಷ, ಅವರು ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಕಿರೀಟವನ್ನು ಪಡೆದರು ಮತ್ತು ಜಪಾನ್‌ನಲ್ಲಿ ನಡೆದ ಮಿಸ್ ಇಂಟರ್ನ್ಯಾಷನಲ್ 2000 ನಲ್ಲಿ ದೇಶವನ್ನು ಪ್ರತಿನಿಧಿಸಿದರು.
1977 ರಲ್ಲಿ ನಾಗ್ಪುರದಲ್ಲಿ ಜನಿಸಿದ ಗಾಯತ್ರಿ ಜೋಶಿ ಅವರು ಮುಂಬೈನಲ್ಲಿ ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್ ವೃತ್ತಿಯನ್ನು ಪ್ರಾರಂಭಿಸಿದರು. ಗೋದ್ರೇಜ್, ಎಲ್ಜಿ, ಪಾಂಡ್ಸ್, ಬಾಂಬೆ ಡೈಯಿಂಗ್, ಸನ್‌ಸಿಲ್ಕ್ ಮತ್ತು ಫಿಲಿಪ್ಸ್‌ನಂತಹ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡರು. ಅವರು ಹ್ಯುಂಡೈ ಜಾಹೀರಾತಿನಲ್ಲಿ ತಮ್ಮ ಭವಿಷ್ಯದ ಸಹ-ನಟ ಶಾರುಖ್ ಖಾನ್ ಅವರೊಂದಿಗೆ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು.
1999 ರಲ್ಲಿ, ಗಾಯತ್ರಿ ಜೋಶಿ ಮಿಸ್ ಇಂಡಿಯಾದಲ್ಲಿ ಭಾಗವಹಿಸಿದರು ಮತ್ತು ಐದು ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಮುಂದಿನ ವರ್ಷ, ಅವರು ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಕಿರೀಟವನ್ನು ಪಡೆದರು ಮತ್ತು ಜಪಾನ್ನಲ್ಲಿ ಮಿಸ್ ಇಂಟರ್ನ್ಯಾಷನಲ್ 2000 ನಲ್ಲಿ ದೇಶವನ್ನು ಪ್ರತಿನಿಧಿಸಿದರು.
2004 ರಲ್ಲಿ, ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ಅವರು ಶಾರುಖ್ ಖಾನ್ ಜೊತೆಗೆ ಗಾಯತ್ರಿ ಅವರನ್ನು ಸ್ವದೇಸ್ ಚಿತ್ರದಲ್ಲಿ ಜೋಡಿ ಮಾಡಿದರು. ಇದು NRI NASA ಇಂಜಿನಿಯರ್ ಭಾರತದಲ್ಲಿ ತನ್ನ ಬೇರುಗಳಿಗೆ ಮರಳುವ ಮಣ್ಣಿನ ಕಥೆಯಾಗಿದೆ. ಚಿತ್ರವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು ಮತ್ತು ಗಾಯತ್ರಿ ಜೋಶಿ ಅವರ 'ಪ್ರಬುದ್ಧ' ಅಭಿನಯಕ್ಕಾಗಿ ಪ್ರಶಂಸೆಯನ್ನು ಗಳಿಸಿತು. ಇದುವೇ ಗಾಯತ್ರಿ ಜೋಶಿ ಅವರ ಮೊದಲ ಮತ್ತಿಉ ಕೊನೆಯ ಸಿನೆಮಾವಾಗಿದೆ. ಚಿತ್ರ ಬಿಡುಗಡೆಯಾದ ಸ್ವಲ್ಪ ಸಮಯದಲ್ಲಿ ಶ್ರೀಮಂತ ಉದ್ಯಮಿ ವಿಕಾಸ್ ಒಬೆರಾಯ್ ಅವರನ್ನು ಮದುವೆಯಾದರು.
Two deaths on a Ferrari in Sardina, Italy pic.twitter.com/skT3CaXg0T
— Globe Clips (@globeclip)