ಬೇಡರ ಕಣ್ಣಪ್ಪ'ನ ಕಥೆಯಲ್ಲಿ ಶಿವ ಮತ್ತು ಪಾರ್ವತಿಯ ಪಾತ್ರ ತುಂಬಾ ಮುಖ್ಯ. ಕಣ್ಣಪ್ಪ ಶಿವನ ನಿಷ್ಠಾವಂತ ಭಕ್ತ. ಹಾಗಾಗಿ ಸಿನಿಮಾದ ಕಥೆಯ ತಿರುವಿಗೆ ಶಿವ- ಪಾರ್ವತಿಯರ ಪಾತ್ರ ಬಹಳ ಮಹತ್ವ ಪಡೆದುಕೊಳ್ಳುತ್ತದೆ...
ತೆಲುಗಿನ 'ಬಾಹುಬಲಿ' ಸಿನಿಮಾದ ನಂತರ ಸಾಲು ಸಾಲು ಸೋಲು ಕಂಡಿದ್ದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ 'ಸಲಾರ್' ಸಿನಿಮಾದ ಮೂಲಕ ಮತ್ತೆ ಯಶಸ್ಸಿನ ಶಿಖರವೇರಿದ್ದಾರೆ. ಇದೇ ಜೋಷ್‌ನಲ್ಲಿ ಪೌರಾಣಿಕ ಸಿನಿಮಾ 'ಕಣ್ಣಪ್ಪ' ಚಿತ್ರಕ್ಕೆ ಪ್ರಭಾಸ್ ಸಜ್ಜಾಗುತ್ತಿದ್ದಾರೆ. ವಿಷ್ಣು ಮಂಚು ನಿರ್ಮಾಣದ 'ಕಣ್ಣಪ್ಪ' ಸಿನಿಮಾದಲ್ಲಿ ಪ್ರಭಾಸ್ ಶಿವನ ರೋಲ್ ಮಾಡ್ತಾರೆ ಅನ್ನೋದು ಲೆಟೆಸ್ಟ್ ವಿಷಯ..
ತೆಲುಗಿನಲ್ಲಿ ಸಿದ್ಧವಾಗುತ್ತಿರೋ ಕಣ್ಣಪ್ಪ ಸಿನಿಮಾ ಬಗ್ಗೆ ಹೇಳಿದ್ರೆ ನಮ್ಮ ಕಣ್ಣ ಮುಂದೆ ಬರೋದು ಡಾಕ್ಟರ್ ರಾಜ್‌ಕುಮಾರ್ ನಟನೆಯ ಬೇಡರ ಕಣ್ಣಪ್ಪ ಚಿತ್ರ. ಅದೇ ಸಿನಿಮಾ ತೆಲುಗು ವರ್ಷನ್‌ನಲ್ಲಿ ಕೂಡ ರಾಜ್‌ಕುಮಾರ್ ನಟಿಸಿದ್ದರು. ಆದರೆ, ಅದೇ ಸಿನಿಮಾ ತಮಿಳಿಗೆ ಡಬ್ ಆಗಿತ್ತು. ಆ ಕಾಲದಲ್ಲಿ ಅದು ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿತ್ತು.
ಕನ್ನಡದ 'ಕಿಸ್' ಚೆಲುವೆಗೆ ಕೂಡಿ ಬಂತಾ ಕಂಕಣ ಭಾಗ್ಯ; ಸ್ಟಾರ್ ಕುಟುಂಬಕ್ಕೆ ಸೊಸೆಯಾಗ್ತಾರಾ ಶ್ರೀಲೀಲಾ?
ಬೇಡರ ಕಣ್ಣಪ್ಪ'ನ ಕಥೆಯಲ್ಲಿ ಶಿವ ಮತ್ತು ಪಾರ್ವತಿಯ ಪಾತ್ರ ತುಂಬಾ ಮುಖ್ಯ. ಕಣ್ಣಪ್ಪ ಶಿವನ ನಿಷ್ಠಾವಂತ ಭಕ್ತ. ಹಾಗಾಗಿ ಸಿನಿಮಾದ ಕಥೆಯ ತಿರುವಿಗೆ ಶಿವ- ಪಾರ್ವತಿಯರ ಪಾತ್ರ ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಈಗ ಟಾಲಿವುಡ್ನಲ್ಲಿ ಸಿದ್ಧವಾಗುತ್ತಿರೋ ಹೊಸ ಕಣ್ಣಪ್ಪನ ಕತೆಯಲ್ಲಿ ಪ್ರಭಾಸ್ ಶಿವನಾಗುತ್ತಿದ್ದಾರೆ. ಆದ್ರೆ ಪಾರ್ವತಿ ಕ್ಯಾರೆಕ್ಟರ್ ಮಾಡೋದು ಯಾರು ಅನ್ನೋ ಟಾಕ್ಗೆ ಈಗ ಕಂಗನಾ ರಣಾವತ್ ಹೆಸ್ರು ಕೇಳಿ ಬರುತ್ತಿದೆ.
ನಟ ವಿನೋದ್ ರಾಜ್ ಮದುವೆ ಗುಟ್ಟಾಗಿ ಇಟ್ಟಿದ್ದು ಯಾಕೆ; ಸ್ಪಷ್ಟ ಉತ್ತರ ಇಲ್ಲಿದೆ ನೋಡಿ!
ಪ್ರಭಾಸ್ ನಟನೆಯ ಮುಂಬರುವ ಬೇಡರ ಕಣ್ಣಪ್ಪ ಚಿತ್ರದಲ್ಲಿ ಕಂಗನಾ ರಣಾವತ್ ಏನಾದ್ರೂ ಪಾರ್ವತಿಯಾಗಿ ನಟಿಸಿದ್ರೆ 16 ವರ್ಷಗಳ ಬಳಿಕ ಪ್ರಭಾಸ್ ಸಿನಿಮಾದಲ್ಲಿ ಕಂಗನಾ ಮತ್ತೆ ನಟಿಸಿದಂತೆ ಆಗುತ್ತದೆ. ಪ್ರಭಾಸ್ ಜತೆ ಕಂಗನಾ 16 ವರ್ಷಗಳ ಹಿಂದೆಯೇ ಬಣ್ಣ ಹಚ್ಚಿದ್ದಾರೆ. ಪ್ರಭಾಸ್ ಹಾಗೂ ಕಂಗನಾ ಈ ಹಿಂದೆ 'ಏಕ್ ನಿರಂಜನ್' ಅನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ರು. 'ಕಣ್ಣಪ್ಪ' ಸಿನಿಮಾವನ್ನು ಮುಕೇಶ್ ಕುಮಾರ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಸನೋನ್ ಸಹೋದರಿ ನೂಪುರ್ ಸನೋನ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ನಟ ರಾಜ್‌ಕುಮಾರ್ 'ಡಾ ರಾಜ್‌ಕುಮಾರ್' ಆದಾಗ ಅವ್ರು ಹೇಳಿದ್ದೇನು; ಹೀಗಂದಿದ್ರಾ ಅಣ್ಣವ್ರು!