ಕಿರಣ್ ರಾವ್ ಅವರಿಂದ ಡಿವೋರ್ಸ್ ಪಡೆದ ಬಳಿಕ ನಟ ಆಮೀರ್ ಖಾನ್, ಪತಿಯಾಗಿ ನನ್ನಲ್ಲಿ ಏನು ಕೊರತೆಯಿತ್ತು ಎಂದು ಪ್ರಶ್ನಿಸಿದ್ದಾಗ, ಕಿರಣ್ ರಾವ್ ಹೇಳಿದ್ದೇನು?
ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದಿರುವ ಆಮೀರ್ ಖಾನ್ ಅವರು, ಕೆಲವು ಬಾಲಿವುಡ್ ನಟರಂತೆ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇವರ ಇಬ್ಬರು ಪತ್ನಿಯರೂ ಹಿಂದೂಗಳೇ ಎನ್ನುವುದು ವಿಶೇಷ, ಈಗ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್ 2005ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ಕಳೆದ ಡಿಸೆಂಬರ್ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್ ಅವರ ಮದುವೆ ಸಮಾರಂಭಕ್ಕೆ ಕಿರಣ್ ಅವರು ಕೂಡ ಹಾಜರಿದ್ದುದು ಇದಕ್ಕೆ ಸಾಕ್ಷಿ.
ಇದರ ನಡುವೆಯೇ, Laapataa ಎಂಬ ಚಿತ್ರದಲ್ಲಿ ಆಮೀರ್ ಖಾನ್ ಮತ್ತು ಕಿರಣ್ ಅವರು ಒಟ್ಟಿಗೇ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ ಚಿತ್ರವು ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ರದರ್ಶನಗೊಂಡಿತು. 15 ವರ್ಷಗಳ ದಾಂಪತ್ಯದ ಬಳಿಕ ಆಮೀರ್ ಮತ್ತು ಕಿರಣ್ ಬೇರೆ ಬೇರೆಯಾದವರು. ಇದೀಗ ಡಿವೋರ್ಸ್ ಬಳಿಕ ಮತ್ತೆ ಪತಿ-ಪತ್ನಿ ಒಂದೇ ಕಡೆ ಕೆಲಸ ಮಾಡುತ್ತಿರುವುದನ್ನು ಕಂಡ ಹಲವರು ಹುಬ್ಬೇರಿಸಿದ್ದಾರೆ. ಆದ್ದರಿಂದ ವಿಚ್ಛೇದನದ ಬಳಿಕ ಒಟ್ಟಿಗೆ ಅದ್ಹೇಗೆ ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆ ಆಮೀರ್ ಖಾನ್ ಅವರಿಗೆ ಎದುರಾಗುತ್ತಿದ್ದಂತೆಯೇ, ಆಮೀರ್ ಸ್ವಲ್ಪ ಗರಂ ಆದರು. ಪಾಪರಾಜಿಗಳು ಈ ಪ್ರಶ್ನೆ ಕೇಳಿದಾಗ ಸ್ವಲ್ಪ ಸಿಟ್ಟುಕೊಂಡರೂ ಸುಧಾರಿಸಿಕೊಂಡ ಆಮೀರ್ ಖಾನ್, ಯಾಕೆ ಪತಿ-ಪತ್ನಿ ದೂರದೂರವಾದ ಮೇಲೆ ಒಟ್ಟಿಗೇ ಕೆಲಸ ಮಾಡಬಾರದು ಎಂದು ಯಾವುದಾದ್ರೂ ಡಾಕ್ಟರ್ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದರು.
ಮಾಜಿ ಪತ್ನಿ ಜೊತೆ ಕೆಲ್ಸ ಮಾಡ್ಬಾರ್ದಂತ ಯಾವುದಾದ್ರೂ ಡಾಕ್ಟರ್ ಹೇಳಿದ್ದಾರಾ? ಆಮೀರ್ ಖಾನ್ ಗರಂ
ಇದೀಗ ಇನ್ನೊಂದು ವಿಷಯ ಬೆಳಕಿಗೆ ಬಂದಿದೆ. ಅದೇನೆಂದರೆ ಕಿರಣ್ ರಾವ್ ಜೊತೆಗೆ ಡಿವೋರ್ಸ್ ಆದ ಬಳಿಕ ಆಮೀರ್ ಖಾನ್, ಕಿರಣ್ಗೆ ಪತಿಯಾಗಿ ನನ್ನಲ್ಲಿದ್ದ ಕೊರತೆಗಳೇನು? ಅವುಗಳನ್ನು ಭವಿಷ್ಯದಲ್ಲಿ ಹೇಗೆ ಸರಿಪಡಿಸಿಕೊಳ್ಳಬಹುದು ಎಂದು ಪ್ರಶ್ನಿಸಿದ್ದರಂತೆ! ಎಬಿಪಿಯ ಐಡಿಯಾಸ್ ಆಫ್ ಇಂಡಿಯಾ ಶೃಂಗಸಭೆಯಲ್ಲಿ ಅಮೀರ್ ತಮ್ಮ ವಿಚ್ಛೇದನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಸಂದರ್ಭದಲ್ಲಿ ತಾವು ಡಿವೋರ್ಸ್ ಬಳಿಕ, ಕಿರಣ್ ಅವರಿಗೆ ಈ ಪ್ರಶ್ನೆಯನ್ನು ಕೇಳಿದ್ದುದಾಗಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಆಮೀರ್ ಖಾನ್, ನಾನು ಕಿರಣ್ ರಾವ್ಳಿಂದ ಆಗಷ್ಟೇ ತಲಾಖ್ ಪಡೆದಿದ್ದೆ. ಒಂದು ಸಾಯಂಕಾಲ ಕಿರಣ್ ಸಿಕ್ಕಿದ್ದಳು. ಆಕೆಯ ಜೊತೆ ಕೂತ ಸಂದರ್ಭದಲ್ಲಿ ಗಂಡನಾದ ನನ್ನಲ್ಲಿ ಏನು ಕೊರತೆ? ನನ್ನ ಬಗ್ಗೆ ನಾನು ಏನು ಸುಧಾರಿಸಿಕೊಳ್ಳಬಹುದು? ನಾನು ಜೀವನದಲ್ಲಿ ಹೇಗೆ ಮುನ್ನಡೆಯಬಹುದು ಎಂದು ಪ್ರಶ್ನಿಸಿದ್ದೆ. ಆಗ ಕಿರಣ್, ದೊಡ್ಡ ಪಟ್ಟಿಯನ್ನೇ ಮಾಡಿದ್ದಳು. ನನ್ನಲ್ಲಿರುವ ಕೊರತೆಯ ಕುರಿತು ಬರೆಯಲು ಶುರು ಮಾಡಿದಳು. ಅದರ ಪೈಕಿ ಕೆಲವೊಂದು ಹೇಳುವುದಾದರೆ, ನೀವು ತುಂಬಾ ಮಾತನಾಡುತ್ತೀರಿ. ನೀವು ಯಾರನ್ನೂ ಮಾತನಾಡಲು ಬಿಡುವುದಿಲ್ಲ. ತಮ್ಮದೇ ಆದ ಅಂಶದ ಮೇಲೆ ಕೇಂದ್ರೀಕರಿಸುತ್ತಿರುತ್ತೀರಿ ಎಂದೆಲ್ಲಾ ಪಟ್ಟಿ ಮಾಡಿದ್ದಳು. ಅವಳು ಮಾಡಿದ ಪಟ್ಟಿ 15 ರಿಂದ 20 ಆದ್ರೂ ಇದ್ದವು ಎಂದಿದ್ದಾರೆ ಆಮೀರ್. ಡಿವೋರ್ಸ್ಗೂ ಮುನ್ನವೇ ಇದನ್ನು ಕೇಳಿದ್ದರೆ ಅವರ ಜೊತೆಗೆ ದಾಂಪತ್ಯ ಜೀವನದ ಮುಂದುವರೆಸಬಹುದಿತ್ತಲ್ಲ, ಈಗ ಕೇಳಿ ಏನು ಪ್ರಯೋಜನ ಎನ್ನುತ್ತಿದ್ದಾರೆ ನೆಟ್ಟಿಗರು.
ಹುಟ್ಟುಹಬ್ಬದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ನಟಿ ಊರ್ವಶಿ ರೌಟೇಲಾ: ವಿಷ್ಯ ಕೇಳಿದ್ರೆ ಬೇಸ್ತು ಬೀಳ್ತಿರಾ!