ಇಟಲಿಯಲ್ಲಿ ಪ್ರಭಾಸ್​ಗಿದೆ ಐಷಾರಾಮಿ ವಿಲ್ಲಾ: ತಿಂಗಳ ಬಾಡಿಗೆ ಕೇಳಿ ಸುಸ್ತಾದ ಫ್ಯಾನ್ಸ್​!

Published : Jun 24, 2023, 03:35 PM IST
ಇಟಲಿಯಲ್ಲಿ ಪ್ರಭಾಸ್​ಗಿದೆ ಐಷಾರಾಮಿ ವಿಲ್ಲಾ: ತಿಂಗಳ ಬಾಡಿಗೆ ಕೇಳಿ  ಸುಸ್ತಾದ ಫ್ಯಾನ್ಸ್​!

ಸಾರಾಂಶ

ಆದಿಪುರುಷ್​ ವಿವಾದದಿಂದ ಸುತ್ತುವರೆದಿರುವ ನಟ ಪ್ರಭಾಸ್​ ಈಗ ಇಟಲಿಯ ಐಷಾರಾಮಿ ವಿಲ್ಲಾದಿಂದ ಸುದ್ದಿಯಾಗುತ್ತಿದ್ದಾರೆ. ಏನಿದು ವಿಷ್ಯ?   

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಎಂದೇ ಬಿಂಬಿತವಾಗಿರೋ ಪ್ರಭಾಸ್ (Prabhas)  ಅವರ ಸಿನಿಮಾ ಆಯ್ಕೆ ಇತ್ತೀಚೆಗೆ ಯಾಕೋ ಸರಿಯಾಗುತ್ತಿಲ್ಲ.  ‘ಬಾಹುಬಲಿ 2’ ನಲ್ಲಿ ಅವರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರೂ ಅದರ ಬಳಿಕ ತೆರೆಗೆ ಬಂದ ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸಿನಿಮಾಗಳು ಕೆಟ್ಟ ವಿಮರ್ಶೆ ಪಡೆದವು.  'ಆದಿಪುರುಷ್' ತೀವ್ರ ಟೀಕೆ ಎದುರಿಸುತ್ತಿದ್ದರೂ, ಬಾಕ್ಸಾಫೀಸ್‌ನಲ್ಲಿ ತಕ್ಕ ಮಟ್ಟಿಗೆ ಹಣ ಮಾಡುತ್ತಿದ್ದರೆ ಅದಕ್ಕೆ ಕಾರಣ,  ಪ್ರಭಾಸ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಫ್ಲಾಪ್​ ಚಿತ್ರಗಳನ್ನು ಕೊಡುತ್ತಿದ್ದರೂ ಪ್ರಭಾಸ್​ ಸ್ಟಾರ್‌ಡಮ್ ಏನೂ ಕಮ್ಮಿಯಾಗಿಲ್ಲ. 

ಈ ಮಧ್ಯೆ ಅಚ್ಚರಿಯ ವಿಚಾರ ಒಂದು ಹೊರ ಬಿದ್ದಿದೆ. ಪ್ರಭಾಸ್ ಅವರು ಇಟಲಿಯಲ್ಲಿ ಐಷಾರಾಮಿ ವಿಲ್ಲಾ ಹೊಂದಿರುವ ವಿಷಯವಿದು.  ಇದರಿಂದ ಪ್ರಭಾಸ್​ ಭರ್ಜರಿ ಬಾಡಿಗೆ ಪಡೆಯುತ್ತಿದ್ದಾರೆ. ಈ ಬಾಡಿಗೆ ಮೊತ್ತ ಕೇಳಿ ಫ್ಯಾನ್ಸ್​ ಹುಬ್ಬೆರಿಸುತ್ತಿದ್ದಾರೆ. ಒಂದೆಡೆ ದೇಶದಾದ್ಯಂತ 'ಆದಿಪುರುಷ್' (Adipurush) ಸಿನಿಮಾ ವಿವಾದಕ್ಕೆ ಸಿಕ್ಕಿಕೊಂಡು ಸುದ್ದಿಯಾಗುತ್ತಿದ್ದರೆ, ಮತ್ತೊಂದೆಡೆ  ಪ್ರಭಾಸ್ ಸದ್ಯ ಇಟಲಿಯ ವಿಲ್ಲಾದಿಂದ ಸದ್ದು ಮಾಡುತ್ತಿದ್ದಾರೆ.  'ಬಾಹುಬಲಿ' ಬಳಿಕ ಪ್ರಭಾಸ್ ಜನಪ್ರಿಯತೆ ಹೆಚ್ಚಾದಂತೆ, ಸಂಭಾವನೆ ಕೂಡ ಹೆಚ್ಚಾಗಿದ್ದು,   ದೇಶ ವಿದೇಶದಲ್ಲೆಲ್ಲ ಪ್ರಾಪರ್ಟಿ ಮಾಡಿರುವ ಬಗ್ಗೆ ವರದಿಯಾಗಿತ್ತು.

ಆದಿಪುರುಷ್​ ಪಾರ್ಟ್​-2! ರಾಮ, ಸೀತೆಯಾಗಿ ಮಿಂಚುತಿರೋ ಯಶ್​- ರಾಧಿಕಾ ಜೋಡಿ

ಈಗ ಇಟಲಿಗೆ ಅವರು ಹೋಗಿ ಬರುವ ಹಿಂದಿನ ಸತ್ಯ ಹೊರಬಿದ್ದಿದೆ. ಹಾಗಂತೆ, ಸೆಲೆಬ್ರಿಟಿಗಳು (Celebrities)   ವಿದೇಶ ಪ್ರಯಾಣ ಮಾಡುವುದು ಹೊಸ ವಿಷಯವೇನಲ್ಲ.  ಕೆಲ ನಟ-ನಟಿಯರಿಗೆ ಅವರದ್ದೇ ಆದ ಫೇವರಿಟ್ ಜಾಗಗಳು ಇರುತ್ತವೆ.  ಅಂಥ ಜಾಗಗಳಲ್ಲಿ ಬಂಗಲೆ ಖರೀದಿ ಮಾಡೋದು ಮಾಮೂಲು. ಅದೇ ರೀತಿ  ಪ್ರಭಾಸ್ ಕೂಡ ಇಟಲಿಯಲ್ಲಿ ವಿಲ್ಲಾ ಹೊಂದಿದ್ದಾರೆ. ಅದಕ್ಕೆ 48 ಕೋಟಿ ರೂಪಾಯಿ ಬಾಡಿಗೆ ಇದೆ! ಹೌದು. ವರ್ಷಕ್ಕೆ 48 ಕೋಟಿ ರೂಪಾಯಿ ಬಾಡಿಗೆಯನ್ನು ಈ ವಿಲ್ಲಾದಿಂದ ಪಡೆಯುತ್ತಿದ್ದಾರೆ. ಇದರರ್ಥ  ತಿಂಗಳಿಗೆ ಮನೆ ಬಾಡಿಗೆ 40 ಲಕ್ಷ ರೂಪಾಯಿಗಳು.  

ಪ್ರಭಾಸ್​ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಅವರ ಸ್ಟಾರ್​ಡಮ್​ ಹೆಚ್ಚಿದಂತೆ ಸಂಭಾವನೆ ಏರಿಸಿಕೊಂಡಿರುವ ಅವರು, ಇತ್ತೀಚೆಗೆ ತೆರೆಕಂಡಿರೋ 'ಆದಿಪುರುಷ್' ಸಿನಿಮಾಗೆ ಪಡೆದ ಸಂಭಾವನೆಯೇ 150 ಕೋಟಿ ರೂ. ಎಂದು ವರದಿಯಾಗಿದೆ.  ಆದರೆ ಆದಿಪುರುಷ್​ಗಿಂತ ಮೊದಲೇ ಅಂದರೆ  ಕೆಲ ವರ್ಷಗಳ ಹಿಂದೆಯೇ ಇಟಲಿಯಲ್ಲಿನ (Italy) ವಿಲ್ಲಾ ಖರೀದಿ ಮಾಡಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಾಗ ಅವರು ಇಟಲಿಗೆ ಭೇಟಿ ನೀಡುತ್ತಾರೆ. ಆಗ ಅವರು ಇಲ್ಲಿ ಉಳಿದುಕೊಳ್ಳುತ್ತಾರೆ. ಅವರು ಅಲ್ಲಿ ಇಲ್ಲದ ಸಮಯದಲ್ಲಿ  ಬರುವ ಪ್ರವಾಸಿಗರಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಹೀಗೆ ಬಾಡಿಗೆಯಿಂದ ಅವರಿಗೆ ತಿಂಗಳಿಗೆ ಏನಿಲ್ಲವೆಂದರೂ 40 ಲಕ್ಷ ರೂಪಾಯಿ ಬಾಡಿಗೆ ಬರುತ್ತಿದೆ ಎನ್ನಲಾಗುತ್ತಿದೆ.  ಆದರೆ, ಅಧಿಕೃತವಾಗಿ ಪ್ರಭಾಸ್ ಕಡೆಯಿಂದ ಮಾಹಿತಿ ಸಿಕ್ಕಿಲ್ಲ.

Adipurush ನೋಡಲು 5,500 ಕಿ.ಮೀ ಪ್ರಯಾಣಿಸಿದ ಲೇಡಿ ಫ್ಯಾನ್​ ಹೀಗಂದ್ರು...
 
ಸದ್ಯ  ‘ಆದಿಪುರುಷ್’ ವಿವಾದದಿಂದ ಸುತ್ತುವರೆದಿರುವ ಪ್ರಭಾಸ್​ ಅವರ ಕೈಯಲ್ಲಿ  ‘ಸಲಾರ್’ ಸಿನಿಮಾವಿದೆ. ಅದು ಸೆಪ್ಟೆಂಬರ್​ನಲ್ಲಿ ತೆರೆಗೆ ಬರುತ್ತಿದ್ದು ಈ ಚಿತ್ರದ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಹಾಗೇ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ (Amitabh Bachchan) ಜೊತೆ ನಟಿಸುತ್ತಿರುವ 'ಪ್ರಾಜೆಕ್ಟ್ ಕೆ' ಶೂಟಿಂಗ್ ನಡೆಯುತ್ತಿದೆ. ಅಲ್ಲದೆ 'ರಾಜಾ ಡಿಲಕ್ಸ್' ಹಾಗೂ 'ಸ್ಪಿರಿಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?