ನನಗೆ ಮಕ್ಕಳು ಬೇಕು... ಆದರೆ... ದಾಂಪತ್ಯದ ರಹಸ್ಯ ಹೇಳಿದ ನಟಿ ಪೂಜಾ ಭಟ್​

Published : Jun 24, 2023, 03:33 PM IST
ನನಗೆ ಮಕ್ಕಳು ಬೇಕು... ಆದರೆ...  ದಾಂಪತ್ಯದ ರಹಸ್ಯ ಹೇಳಿದ ನಟಿ ಪೂಜಾ ಭಟ್​

ಸಾರಾಂಶ

ನಟಿ ಪೂಜಾ ಭಟ್​ ಮದುವೆಯಾಗಿ 11 ವರ್ಷವಾದರೂ ತಮಗೆ ಏಕೆ ಮಕ್ಕಳಾಗಲಿಲ್ಲ ಎನ್ನುವ ಕುರಿತು ಬಿಗ್​ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ.   

ನಟಿ ಪೂಜಾ ಭಟ್​, ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಸಕತ್​ ಸುದ್ದಿ ಮಾಡಿದ ನಟಿ. ನಿರ್ದೇಶಕಿಯೂ  ಆಗಿರುವ ಪೂಜಾ, ಹಿಂದಿಯ ‘ಬಿಗ್ ಬಾಸ್ ಓಟಿಟಿ 2’ ಕಾರ್ಯಕ್ರಮದಲ್ಲಿ  ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ.  ‘ಬಿಗ್ ಬಾಸ್’ ಮನೆಯಲ್ಲಿ ತಮ್ಮ ಅಂತರಾಳವನ್ನ ಪೂಜಾ ಭಟ್ ಹೊರಹಾಕಿದ್ದಾರೆ. ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿಯಾಗಿರುವ ಪೂಜಾ  ಭಟ್ (Pooja Bhatt) ಭಾವುಕರಾಗಿ ಮಾತನಾಡಿದ್ದಾರೆ.  ತಮ್ಮ ವೈವಾಹಿಕ ಬದುಕಿನ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ತಮಗೆ ಏಕೆ ಮಕ್ಕಳಾಗಲಿಲ್ಲ ಎನ್ನುವ ಬಗ್ಗೆ ಮನಬಿಚ್ಚಿ ನಟಿ ಮಾತನಾಡಿದ್ದಾರೆ. ಅಂದಹಾಗೆ ನಟಿ ಆಲಿಯಾ ಭಟ್​ ಪೂಜಾ ಭಟ್​ ಅವರ ತಂಗಿ ಅಂದರೆ ಅಪ್ಪನ ಎರಡನೆಯ ಪತ್ನಿಯಿಂದ ಹುಟ್ಟಿದ ಮಗಳು. 31 ನೇ ವಯಸ್ಸಿನಲ್ಲಿ ಆಲಿಯಾ ಭಟ್  ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಆದರೆ 41 ವರ್ಷದ ಪೂಜಾ ಅವರಿಗೆ ಇದುವರೆಗೂ ಮಕ್ಕಳಾಗಲಿಲ್ಲ. ಈ ಕುರಿತು ಸ್ವತಃ ಅವರು ಬಿಗ್​ಬಾಸ್​ನಲ್ಲಿ ನೋವನ್ನು ತೋಡಿಕೊಂಡಿದ್ದಾರೆ.

 ಪೂಜಾ ಭಟ್ 2003ರಲ್ಲಿ ಮನೀಶ್ ಮಖಿಜಾ ಅವರನ್ನು ವಿವಾಹವಾದರು. ಆ ಸಮಯದಲ್ಲಿ ಮನೀಶ್ ಮಖಿಜಾ ವಿಡಿಯೋ ಜಾಕಿಯಾಗಿದ್ದರು. ಮದುವೆಯಾದ 11 ವರ್ಷಗಳ ನಂತರ ಇಬ್ಬರೂ ಬೇರೆಯಾಗಿದ್ದಾರೆ.  ಈ ಪ್ರತ್ಯೇಕತೆಯ ನಂತರವೂ ಪೂಜಾ ಭಟ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಹೃದಯವನ್ನು ತೆರೆದಿಟ್ಟಿದ್ದರು. ಇವರದ್ದು ಪ್ರೇಮ ವಿವಾಹ (Love Marriage). ಪೂಜಾ ಭಟ್ ಅವರನ್ನ ಮದುವೆಯಾಗುವ ಮುನ್ನ ನೇಹಾ ಗುಪ್ತಾ ಎಂಬುವರನ್ನ ಮನೀಶ್ ಮಖಿಜಾ ವಿವಾಹವಾಗಿದ್ದರು. ‘ಪಾಪ್’ (Pop) ಸಿನಿಮಾದ ಚಿತ್ರೀಕರಣದ ವೇಳೆ ಮನೀಶ್ ಮಖಿಜಾ ಮತ್ತು ಪೂಜಾ ಭಟ್ ಮಧ್ಯೆ ಲವ್​ ಶುರುವಾಗಿತ್ತು. ಬಳಿಕ  ವಿವಾಹವಾದರು. 2014ರಲ್ಲಿ ಮನೀಶ್ ಮಖಿಜಾ ಮತ್ತು ಪೂಜಾ ಭಟ್ ವಿಚ್ಛೇದನ ಪಡೆದು ದೂರಾದರು. 

ಮದ್ವೆ ಆದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಹನ್ಸಿಕಾ?

ಪೂಜಾ ಭಟ್ - ಮನೀಶ್ ಮಖಿಜಾ (Maneesh Makhija) ದಂಪತಿಗೆ ಮಕ್ಕಳಿಲ್ಲ. ಬಿಗ್​ಬಾಸ್​ ಮನೆಯಲ್ಲಿ ಪತಿಯ ಕುರಿತು ಹೇಳಿಕೊಂಡಿರುವ ಪೂಜಾ, ತಮ್ಮ ಪತಿ ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.  ನಮ್ಮ ನಡುವೆ ಎಲ್ಲವೂ ಚೆನ್ನಾಗಿತ್ತು. ಆದರೆ ಇನ್ನೂ ಏನೋ ಕೊರತೆಯಿದೆ ಎನ್ನಿಸಲು ಶುರುವಾಯಿತು. ನಂತರ ಏನೋ ಸರಿಯಿಲ್ಲ ಎಂದು ಇಬ್ಬರೂ ಒಟ್ಟಾಗಿ ನಿರ್ಧಾರಕ್ಕೆ ಬಂದೆವು. ಸುಳ್ಳು ಹೇಳಿಕೊಂಡು ಬದುಕುವುದು ಹೇಗೆ ಎಂದು ತಿಳಿಯಲಿಲ್ಲ. ಇದು ರಿಹರ್ಸಲ್ ಅಲ್ಲ, ನಿಜ ಜೀವನ ಅಲ್ವಾ ಅದಕ್ಕಾಗಿ ಒಟ್ಟಿಗೆ ಇರಲು ಸಾಧ್ಯವಿಲ್ಲದ ಮೇಲೆ ದೂರವಾಗಲು ನಿರ್ಧರಿಸಿದೆವು ಎಂದಿದ್ದಾರೆ.
 
ಇನ್ನು, ತಮಗೆ ಮಕ್ಕಳಾಗದ ಬಗ್ಗೆ ಹೇಳಿಕೊಂಡ ಪೂಜಾ,  ‘11 ವರ್ಷ ದಾಂಪತ್ಯ ಜೀವನ ನಡೆಸಿದ್ವಿ. ಮನೀಶ್ ಎಂಟರ್‌ಟೇನ್‌ಮೆಂಟ್‌ ಇಂಡಸ್ಟ್ರಿಯಲ್ಲೇ (Entertainment industry) ಇದ್ದರು. ತುಂಬಾ ಒಳ್ಳೆಯ ಮನುಷ್ಯ. ಆದರೆ  ಆ ಸಮಯದಲ್ಲಿ ಮಕ್ಕಳನ್ನ ಮಾಡಿಕೊಳ್ಳಲು ನಾನು ತಯಾರಿರಲಿಲ್ಲ. ಅದಕ್ಕಾಗಿ ಮಕ್ಕಳಾಗಲಿಲ್ಲ. ನನಗೆ ಮಕ್ಕಳು ಬೇಕು ಎನ್ನಿಸುತ್ತಿದೆ. ಮಕ್ಕಳೆಂದರೆ ನನಗೆ ಇಷ್ಟ. ಆದರೆ, ಆ ಸಮಯದಲ್ಲಿ ನನಗೆ ಮಕ್ಕಳು ಬೇಕಿರಲಿಲ್ಲ ಎಂದು ಮಕ್ಕಳಾಗದ ಕುರಿತು ಹೇಳಿಕೊಂಡಿದ್ದಾರೆ. ಒಂದು ಹಂತದವರೆಗೂ ಎಲ್ಲವೂ ಚೆನ್ನಾಗಿತ್ತು. ಘನತೆ ಇದ್ದವರೆಗೂ ನಾವಿಬ್ಬರೂ ಜೊತೆಗಿದ್ವಿ. ಆಮೇಲೆ ಒಳ್ಳೆಯ ರೀತಿಯಲ್ಲಿ ಬೇರೆಯಾದ್ವಿ. ಆಗ ಮಕ್ಕಳ ಬೇಕು ಎನಿಸಿದರೂ ಮಾಡಿಕೊಳ್ಳುವಂತೆ ಇರಲಿಲ್ಲ ಅಂತ ನಟಿ ಪೂಜಾ ಭಟ್ ಹೇಳಿದ್ದಾರೆ. 

ದೀಪಿಕಾ ಪಡುಕೋಣೆ ಇದ್ಯಾವ ಯೋಗದ ಪೋಸ್ ಅಂತ​ ಕೇಳಿದ್ರೆ ನೆಟ್ಟಿಗರು ಹೀಗೆಲ್ಲಾ ಹೇಳೋದಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!