ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವ ಸುಂದರಿಗೆ 47 ವರ್ಷ ವಯಸ್ಸು. ಎರಡು ಮದುವೆ ಆಗಿರುವ ನಟಿ, ಮೊದಲ ಪತಿಯನ್ನು ಮಕ್ಕಳ ವಿಷ್ಯಕ್ಕೆ ದೂರ ಮಾಡಿದ್ದಳು. ಮಕ್ಕಳಿಗಿಂತ ವೃತ್ತಿ ಮುಖ್ಯ ಎಂಬ ಕಾರಣ ನೀಡಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದರು.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮಕ್ಕಳ ವಿಷ್ಯಕ್ಕೆ ಬೇರೆಯಾಗಿದ್ದಾರೆ ಎನ್ನುವ ಸುದ್ದಿ ಈಗ್ಲೂ ಬಿಸಿಬಿಸಿ ಚರ್ಚೆಯಲ್ಲಿದೆ. ಮಗು ಹಾಗೂ ವಿಚ್ಛೇದನ ಇದು ಈಗಿನದ್ದಲ್ಲ. ಹಿಂದೆ ಕೂಡ ಮಕ್ಕಳಿಗಾಗಿ ಬೇರೆಯಾದ ದಂಪತಿ ಇದ್ದಾರೆ. ಅದಕ್ಕೆ ಬಾಲಿವುಡ್ ಹಿರಿಯ ನಟಿ ಪೂಜಾ ಬಾತ್ರಾ ಉತ್ತಮ ನಿದರ್ಶನ.
ವೃತ್ತಿ ಜೀವನದ ತುತ್ತತುದಿಯಲ್ಲಿದ್ದಾಗ ಮದುವೆ (Marriage) ಯಾಗುವ ಅನೇಕ ನಟಿಯರಿಗೆ ಮಕ್ಕಳ ಕಾರಣಕ್ಕೆ ಮತ್ತೆ ಬಣ್ಣ ಹಚ್ಚೋದು ಕಷ್ಟವಾಗುತ್ತದೆ. ಮಕ್ಕಳಾದ್ರೆ ವೃತ್ತಿ (Career) ಗೆ ಅಡ್ಡಿಯಾಗುತ್ತೆ ಎನ್ನುವ ಕಾರಣಕ್ಕೆ ಮಕ್ಕಳ ಪ್ಲಾನ್ ಮುಂದೂಡುವ ಕಲಾವಿದರಿದ್ದಾರೆ. ಆದ್ರೆ ಪೂಜಾ ಬಾತ್ರಾ (Pooja Batra), ಮಕ್ಕಳ ಕಾರಣಕ್ಕೆ ತನ್ನ ಪತಿಗೆ ವಿಚ್ಛೇದನ ನೀಡಿದ್ದರು. ಪತಿಗೆ ಮಕ್ಕಳನ್ನು ಪಡೆಯುವ ಆಸೆಯಾದರೆ ಪೂಜಾ ಬಾತ್ರಾ ಅವರಿಗೆ ಸಿನಿಮಾದಲ್ಲಿ ನಟಿಸುವ ಆಸೆ ಇತ್ತು. ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲದೆ ಇಬ್ಬರೂ ವಿಚ್ಛೇದನಪಡೆದ್ರು.
ಹಿಂದಿಯ ಗೋವಿಂದ ಅಪ್ಪು ಬಗ್ಗೆ ಏನಂದ್ರು, ಜಗತ್ತಿಗೇ ಗೊತ್ತಿಲ್ಲದ ಸೀಕ್ರೆಟ್ ಒಂದು ಹೊರಬಿತ್ತು!
1993 ರಲ್ಲಿ ಪೂಜಾ ಬಾತ್ರಾ ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಕಿರೀಟವನ್ನು ಗೆದ್ದಿದ್ದರು. ನಂತ್ರ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಪೂಜಾ ಬಾತ್ರಾ, ಆ ಸಮಯದಲ್ಲಿ ವೃತ್ತಿ ಜೀವನದ ಉತ್ತುಂಗದಲ್ಲಿದ್ದರು. ಅವರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಒಂದಾದ್ಮೇಲೆ ಒಂದು ಆಫರ್ ಬರ್ತಿರುವ ಸಮಯದಲ್ಲೇ ಪೂಜಾ, ಡಾಕ್ಟರ್ ಸೋನು ಅಹ್ಲುವಾಲಿಯಾ ಅವರನ್ನು ಮದುವೆಯಾದ್ರು. ನಂತ್ರ ಅಮೆರಿಕಾಕ್ಕೆ ಶಿಫ್ಟ್ ಆಗಿದ್ದರು ನಟಿ.
ಸೋನು, ಮಕ್ಕಳನ್ನು ಪಡೆದು ಕುಟುಂಬ ಮುನ್ನಡೆಸುವ ಆಸೆ ಹೊಂದಿದ್ದರೆ, ಪೂಜಾ ಸಿನಿಮಾರಂಗಕ್ಕೆ ಮರಳುವ ಪ್ಲಾನ್ ಮಾಡಿದ್ದರು. ಇಬ್ಬರಿಗೂ ಇದೇ ವಿಷ್ಯಕ್ಕೆ ಭಿನ್ನಾಭಿಪ್ರಾಯ ಮೂಡಿತ್ತು. ಹಾಗಾಗಿ ಪೂಜಾ, ಪತಿ ಸೋನುಗೆ ವಿಚ್ಛೇದನ ನೀಡಿ ಭಾರತಕ್ಕೆ ವಾಪಸ್ ಬಂದಿದ್ದರು.
ವಿಚ್ಛೇದನ ನಂತ್ರ 2011ರಲ್ಲಿ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಪೂಜಾ ಬಾತ್ರಾ, ಹಮ್ ತುಮ್ ಶಬಾನಾ, ಎಬಿಸಿಡಿ 2, ಕಿಲ್ಲರ್ ಪಂಜಾಬಿ, ಮಿರರ್ ಗೇಮ್, ಸ್ಕ್ವಾಡ್ ಚಿತ್ರಗಳಲ್ಲಿ ನಟಿಸಿದ್ದರು. ಆದ್ರೆ ಈ ಯಾವ ಚಿತ್ರವೂ ಹೆಚ್ಚು ಯಶಸ್ಸು ಕಾಣಲಿಲ್ಲ.
ಎರಡನೇ ಮದುವೆ ಆದ ನಟಿ : ಪೂಜಾ ಬಾತ್ರಾ 2019ರಲ್ಲಿ ನವಾಬ್ ಶಾ ಅವರನ್ನು ಎರಡನೇ ಮದುವೆಯಾಗಿದ್ದಾರೆ. ಪೂಜಾ ಬಾತ್ರಾ ಉತ್ತರ ಪ್ರದೇಶದ ಫೈಜಾಬಾದ್ ಗೆ ಸೇರಿದವರು. ಅವರು ಮಾಡಲಿಂಗ್, ಕ್ರೀಡೆಯಲ್ಲಿ ಮುಂದಿದ್ದರು. ಪೂಜಾ, 2021 ರಲ್ಲಿ ಕೊನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಸ್ಕ್ವಾಡ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ, ಅವಕಾಶ ಸಿಕ್ಕರೆ ಮತ್ತೆ ನಟಿಸೋದಾಗಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪೂಜಾ, ಅಮೆರಿಕಾದಲ್ಲಿ ಬ್ಯುಸಿಯಾಗಿದ್ದೇನೆ. ಆದ್ರೆ ಅವಕಾಶ ಸಿಕ್ಕರೆ ನಟಿಸಲು ಸಿದ್ಧ. ಒಳ್ಳೆ ಅವಕಾಶಕ್ಕೆ ಕಾಯುತ್ತಿದ್ದೇನೆ ಎಂದಿದ್ದಾರೆ.
1995ರಲ್ಲಿ ತೆಲುಗು ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿರುವ ಪೂಜಾ, ಆಸೈ ಚಿತ್ರದಲ್ಲಿ ಖೈದಿ ಪಾತ್ರದಲ್ಲಿ ಮಿಂಚಿದ್ದರು. ಇದರ ನಂತ್ರ ಅವಕಾಶಗಳು ಸಿಗಲು ಶುರುವಾಯ್ತು. ಹಿಂದಿ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಪೂಜಾ ನಟಿಸಿದ್ದಾರೆ. ಅನಿಲ್ ಕಪೂರ್ ಮತ್ತು ಟಬು ಜೊತೆ 1997 ರ ವಿರಾಸತ್ ಹಿಂದಿ ಚಿತ್ರದಲ್ಲಿ ನಟಿಸಿದ್ದರು ಪೂಜಾ ಬಾತ್ರಾ.
ಥೂ ಅಂತ ಬೈಕೊಂಡು ವಿನಯ್ ಗುರೂಜೀ ಆಶ್ರಮಕ್ಕೆ ಹೋಗಿದ್ದೀನಿ: ಮಾಸ್ಟರ್ ಅರುಣ್ ಹರಿಹರನ್
ಈ ಚಿತ್ರ ಸೂಪರ್‌ಹಿಟ್ ಆಯಿತು. ಇದಾದ ನಂತರ ಸುನೀಲ್ ಶೆಟ್ಟಿ ಜೊತೆ ಭಾಯ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಸೀನಾ ಮಾನ್ ಜಾಯೇಗಿ, ದಿಲ್ ನೆ ಫಿರ್ ಯಾದ್ ಕಿಯಾ, ಕಹಿನ್ ಪ್ಯಾರ್ ನ ಹೋ ಜಾಯೆ, ನಾಯಕ್ : ದಿ ರಿಯಲ್ ಹೀರೋ, ತಾಜ್ ಮಹಲ್ : ಆನ್ ಎಟರ್ನಲ್ ಲವ್ ಸ್ಟೋರಿ, ತಲಾಶ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.