ಆಸ್ಪತ್ರೆ ಸೇರಿದ್ದ ಜಾಹ್ನವಿ ಕಪೂರ್​ಗೆ ಭಾವಿ ಅತ್ತೆಯ ಆರೈಕೆ! ಶ್ರೀದೇವಿ ಪುತ್ರಿಯ ಮದ್ವೆ ಫಿಕ್ಸ್​ ಆಗೋಯ್ತಾ?

Published : Jul 31, 2024, 05:38 PM IST
ಆಸ್ಪತ್ರೆ ಸೇರಿದ್ದ ಜಾಹ್ನವಿ ಕಪೂರ್​ಗೆ ಭಾವಿ ಅತ್ತೆಯ ಆರೈಕೆ! ಶ್ರೀದೇವಿ ಪುತ್ರಿಯ ಮದ್ವೆ ಫಿಕ್ಸ್​ ಆಗೋಯ್ತಾ?

ಸಾರಾಂಶ

ವಿಷಪೂರಿತ ಆಹಾರ ಸೇವನೆ ಮಾಡಿ ಆಸ್ಪತ್ರೆ ಸೇರಿದ್ದ ನಟಿ ಜಾಹ್ನವಿ ಕಪೂರ್​ರನ್ನು ರಾತ್ರಿಯಿಡೀ ನೋಡಿಕೊಂಡಿದ್ದು ಅವರ ಭಾವಿ ಅತ್ತೆ! ಏನಿದು ವಿಷಯ?  

ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್​ ಮತ್ತು ಅವರ ಬಾಯ್​ಫ್ರೆಂಡ್​ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್​ ಪಹರಿಯಾ (Shikhar Pahariya) ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು.  ಏಕೆಂದರೆ, ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು  ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.  ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್​ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್​ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.  

ಕೆಲ ದಿನಗಳ ಹಿಂದೆ ಈ ಸಂಬಂಧ ನಿಜ ಎಂಬುದಾಗಿ ಪರೋಕ್ಷವಾಗಿಯೇ ಹೇಳಿದ್ದಾರೆ ಜಾಹ್ನವಿ ಕಪೂರ್​ ತಂದೆ, ಶ್ರೀದೇವಿ ಪತಿ ಬೋನಿ ಕಪೋರ್​. ಜೂಮ್​ಗೆ ನೀಡಿದ ಸಂದರ್ಶನದಲ್ಲಿ ಅವರು,  ‘ನನಗೆ ಶಿಖರ್ ಅಂದರೆ ಪ್ರೀತಿ. ಜಾಹ್ನವಿ ಶಿಖರ್​ ಜೊತೆ  ಕಾಣಿಸಿಕೊಳ್ಳುವುದಕ್ಕಿಂತಲೂ ಅಂದರೆ ಓಡಾಡ ಶುರು ಮಾಡುವುದಕ್ಕಿಂತಲೂ ಮೊದಲು  ನನಗೆ ಅವನ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಅವನು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಆತ ಯಾವಾಗಲೂ ಓಡಿ ಬರುತ್ತಾನೆ. ಅವನು ನನ್ನೊಂದಿಗೆ, ಜಾಹ್ನವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ ಎಂದಿದ್ದಾರೆ. ಈ ಮೂಲಕ ಮಗಳು ಮತ್ತು ಶಿಖರ್​ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. 

ಬಟ್ಟೆ ಸರಿದಿದೆ... ಕಿವಿಯೋಲೆ ಅಡ್ಡಾದಿಡ್ಡಿಯಾಗಿದೆ... ಮಂಚದಿಂದ ಎದ್ದು ಬಂದ್ಯಾ? ಜಾಹ್ನವಿ ಕಪೂರ್​ ಟ್ರೋಲಿಗರ ಪ್ರಶ್ನೆ

ಅದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಎಂಬಂತೆ, ಕೆಲ ದಿನಗಳ ಹಿಂದೆ ಜಾಹ್ನವಿ ಕಪೂರ್​ ಫುಡ್​ ಪಾಯ್ಸನ್​ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಟ್ರೀಟ್​ಮೆಂಟ್​ ಬಳಿಕ ಅವರನ್ನು ಡಿಸ್​ಚಾರ್ಜ್ ಮಾಡಲಾಗಿತ್ತು. ಅಂಬಾನಿ ಮದ್ವೆಯಲ್ಲಿ ನಟಿಗೆ ಫುಡ್​ ಪಾಯ್ಸನ್​ ಆಗಿದೆ ಎಂಬ ಸುದ್ದಿ ಹರಡಿತ್ತು. ನಂತರ ತಂದೆ ಬೋನಿ ಕಪೂರ್​ ವಿಮಾನ ನಿಲ್ದಾಣದ ಒಳಗಿರುವ ಆಹಾರ ಸೇವಿಸಿ ಮಗಳಿಗೆ ಹೀಗೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಕುತೂಹಲ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ಜಾಹ್ನವಿ ಕಪೂರ್​ ಆಸ್ಪತ್ರೆಗೆ ಸೇರಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಬೇರೆ ಊರಿಗೆ ಹೋಗಿದ್ದರು. ಆದ್ದರಿಂದ ಆಸ್ಪತ್ರೆಯಲ್ಲಿ  ನಟಿಯನ್ನು ಶಿಖರ್​ ಪಹರಿಯಾ ಅಮ್ಮನೇ ನೋಡಿಕೊಂಡಿರುವುದಾಗಿ ವರದಿಯಾಗಿದೆ. ರಾತ್ರಿಯಿಡೀ ಭಾವಿ ಸೊಸೆಯನ್ನು ಶಿಖರ್​ ಅವರ ತಾಯಿ ಸ್ಮೃತಿ ಶಿಂಧೆ ಉಪಚರಿಸಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಜಾಹ್ನವಿ ಮತ್ತು ಶಿಖರ್​ ಮದುವೆಯಾಗುವುದು ಬಹುತೇಕ ನಿಶ್ಚಿತವಾಗಿದೆ ಎಂದು ಬಿ-ಟೌನ್​ ಮೂಲಗಳು ತಿಳಿಸುತ್ತಿವೆ. 

  ಅಂದಹಾಗೆ,  ಶ್ರೀದೇವಿ ಪುತ್ರಿ  ಜಾಹ್ನವಿ ಕಪೂರ್​ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಆದರೆ ಕೆಲ ವರ್ಷಗಳಿಂದ  ಈಕೆ ಉದ್ಯಮಿ ಶಿಖರ್​ ಪಹರಿಯಾ ಜೊತೆ ಸುತ್ತಾಟ ಮಾಡುತ್ತಿದ್ದಾರೆ. ದೇಶ-ವಿದೇಶ ತಿರುಗುತ್ತಿದ್ದಾರೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್​ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್​  ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ.  ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್​ ಫ್ರೆಂಡ್​ (Boy Friend) ಜೊತೆ ಟ್ರಿಪ್​ಗೆ ಹೋಗಿರುವ ಫೋಟೋಗಳು ವೈರಲ್​ ಆಗಿದ್ದವು.  

ದಿಲ್​ ದಿವಾನಾ ಬಿನ್​ ಸಜನಾಕೆ... 35 ವರ್ಷಗಳ ಬಳಿಕ ಮೈನೆ ಪ್ಯಾರ್​ ಕಿಯಾ ಹಾಡಿಗೆ ಭಾಗ್ಯಶ್ರೀ ಸ್ಟೆಪ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?