ಬಹು ನಿರೀಕ್ಷಿತ ವಿವಾದಿತ ಪಠಾಣ್ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಚಿತ್ರದ ವಿಲನ್ ಯಾರು ಎಂಬ ಕ್ಲೈಮ್ಯಾಕ್ಸ್ ಒಂದು ಬಹಿರಂಗಗೊಂಡಿದೆ, ಏನದು?
ಬಿಡುಗಡೆಗೂ ಮುನ್ನವೇ ಭಾರಿ ಕೋಲಾಹಲ ಸೃಷ್ಟಿಸಿ ಬೈಕಾಟ್ (Boycott) ಬಿಸಿ ಅನುಭವಿಸುತ್ತಿರುವ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ಪಠಾಣ್' ಚಿತ್ರದ ಟ್ರೈಲರ್ ಕಳೆದ ವಾರ ಬಿಡುಗಡೆಯಾಗಿ ಈಗ ಎಲ್ಲರೂ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ತಯಾರಾದ ಈ ಚಿತ್ರವು ಇದೇ 25 ರಂದು ಬಿಡುಗಡೆಯಾಗಲಿದೆ. ಹೇಗಾದರೂ ಮಾಡಿ ಬೈಕಾಟ್ ಬಿಸಿಯಿಂದ ತಪ್ಪಿಸಿಕೊಳ್ಳಲು ಚಿತ್ರತಂಡ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿರುವ ಬೆನ್ನಲ್ಲೇ ಇದೀಗ ಚಿತ್ರದ ಬಿಡುಗಡೆಗೂ ಮುನ್ನ ಚಿತ್ರದ ಕ್ಲೈಮ್ಯಾಕ್ಸ್ (Climax) ಬಹಿರಂಗಗೊಂಡಿದೆ.
ದೀಪಿಕಾ ಪಡುಕೋಣೆಯವರ ಕೇಸರಿ ಬಿಕಿನಿಯ (Orange Bikini) ವಿವಾದದಿಂದಾಗಿ ಬಿಕಿನಿಯ ಬದಲು ದೀಪಿಕಾ ಕೇಸರಿ ಲುಂಗಿ ತೊಟ್ಟು ನರ್ತಿಸಿರುವುದು ಟ್ರೈಲರ್ನಲ್ಲಿ ತಿಳಿದುಬಂದಿದೆ. ಇದೀಗ ಇನ್ನೊಂದು ಕುತೂಹಲದ ವಿಷಯವೀಗ ಬಹಿರಂಗಗೊಂಡಿದೆ. ಅದೇನೆಂದರೆ, ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ, ಜಾನ್ ಅಬ್ರಹಾಂ ಚಿತ್ರದಲ್ಲಿ ವಿಲನ್ ಅಲ್ಲ ಎಂಬುದು. ಚಿತ್ರದ ಟ್ರೈಲರ್ ನೋಡಿದರೆ ಅಥವಾ ಪೋಸ್ಟರ್ ನೋಡಿದಾಗ ಚಿತ್ರದ ವಿಲನ್ ಜಾನ್ ಅಬ್ರಹಾಂ (John Abrahim) ಎಂದೇ ಅನ್ನಿಸುವುದು ಉಂಟು. ಆದರೆ ಚಿತ್ರದ ವಿಲನ್ ಅವರಲ್ಲ, ಬೇರೆಯವರು ಎಂದು ಸುದ್ದಿಯಾಗಿದೆ. ಯಶ್ ರಾಜ್ ಫಿಲ್ಮ್ಸ್ (Yash Raj films) ಬ್ಯಾನರ್ ಅಡಿಯಲ್ಲಿ ತಯಾರಾದ 'ಪಠಾಣ್' ಚಿತ್ರದ ಕ್ಲೈಮ್ಯಾಕ್ಸ್ ಹೇಗಿರುತ್ತದೆ ಎಂಬ ಬಗ್ಗೆ ಇದೀಗ ಕುತೂಹಲದ ವಿಷಯ ವೈರಲ್ ಆಗಿದೆ.
Pathaan Trailer; ದುಬೈನಲ್ಲಿ ಶಾರುಖ್ ಸಿನಿಮಾ ಪ್ರಚಾರ; ಬುರ್ಜ್ ಖಲೀಫ ಮೇಲೆ ರಾರಾಜಿಸಿದ ಪಠಾಣ್ ಟ್ರೈಲರ್
ಹಾಗಿದ್ದರೆ ಚಿತ್ರದ ವಿಲನ್ ಯಾರು ಎಂಬ ಪ್ರಶ್ನೆಗೆ ಅಚ್ಚರಿಯ ಮಾಹಿತಿಯೊಂದು ವೈರಲ್ ಆಗುತ್ತಿದೆ. ಅದೇನೆಂದರೆ ಚಿತ್ರದಲ್ಲಿ ಅದ್ಭುತವಾದ ಸಾಹಸ ದೃಶ್ಯಗಳನ್ನು ಮಾಡಿರುವ ದೀಪಿಕಾ ಪಡುಕೋಣೆ (Deepika Padukone) ಚಿತ್ರದ ವಿಲನ್ ಎಂಬ ಸುದ್ದಿ ಹರಿದಾಡುತ್ತಿದೆ. 'ಪಠಾಣ್' ಟ್ರೈಲರ್ ಶಾರುಖ್ ಖಾನ್ (Shahrukh Khan) ಅವರ ಚಿತ್ರದಲ್ಲಿ ಜಾನ್ ಅಬ್ರಹಾಂ ಖಳನಾಯಕನಾಗಿ ಕಾಣಿಸಿಕೊಂಡರೆ, ದೀಪಿಕಾ ಪಡುಕೋಣೆ ಅವರ ಪ್ರೇಮಿಯಾಗಿ (lovers) ತೋರಿಸಲಾಗಿದೆ. ಆದರೆ, ಇದರಲ್ಲಿ ದೊಡ್ಡ ಟ್ವಿಸ್ಟ್ ಇದೆ ಎಂದು ಅನೇಕ ನೆಟಿಜನ್‌ಗಳು ನಂಬಿದ್ದಾರೆ. ದೀಪಿಕಾ ಪಠಾಣ್‌ನ ಪ್ರಮುಖ ಖಳನಾಯಕಿ, ಜಾನ್ ಅಲ್ಲ ಎಂದೇ ಹೇಳಲಾಗುತ್ತಿದೆ. ಚಿತ್ರದ ಟ್ರೈಲರ್ (Trailer) ನೋಡಿದ ಜನರು ಇದನ್ನು ಊಹಿಸಿದ್ದಾರೆ.
ಇದು ನಿಜವೇ ಆಗಿದ್ದರೆ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಡುವೆ ಪ್ರಚಂಡ ಸಾಹಸ ದೃಶ್ಯಗಳು ಕಾಣಿಸಲಿವೆ. ಈ ವರದಿಗಳನ್ನು ನಂಬುವುದಾದರೆ, ಇಬ್ಬರೂ ಪರಸ್ಪರ ಘರ್ಷಣೆ ಮಾಡುತ್ತಿರುವುದು ಇದೇ ಮೊದಲು. ಆದರೆ, ಚಿತ್ರದ ನಿಜವಾದ ಕ್ಲೈಮ್ಯಾಕ್ಸ್ ಏನು ಅನ್ನೋದು ಸಿನಿಮಾ ನೋಡಿದ ನಂತರವೇ ಗೊತ್ತಾಗಲಿದೆ.
ಪಠಾಣ್ ಎದುರಿಗೆ ಬಂದ ಗಾಂಧಿ- ಗೋಡ್ಸೆ! ಚಿತ್ರತಂಡಕ್ಕೆ ಮತ್ತೊಂದು ಶಾಕ್
ಅಂದಹಾಗೆ, ಶಾರುಖ್ ಖಾನ್ ಸುಮಾರು 5 ವರ್ಷಗಳ ನಂತರ 'ಪಠಾಣ್' ಚಿತ್ರದ ಮೂಲಕ ಕಮ್ ಬ್ಯಾಕ್ (Come Back)ಮಾಡುತ್ತಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದ ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ. ಬೈಕಾಟ್ ಬಿಸಿ ಹೊರತಾಗಿಯೂ ಚಿತ್ರವು ಮೊದಲ ದಿನದಲ್ಲಿ ಸುಮಾರು 30 ರಿಂದ 35 ಕೋಟಿಗಳೊಂದಿಗೆ ತೆರೆಕಾಣಲಿದೆ ಎಂದು ವ್ಯಾಪಾರ ವಿಶ್ಲೇಷಕರು ನಂಬುತ್ತಾರೆ.
'ಪಠಾಣ್' ಅವರ ಮುಂಗಡ ಬುಕ್ಕಿಂಗ್ (Pre booking) ಕೂಡ ಭರ್ಜರಿಯಾಗುತ್ತಿದೆ. ಬುಕ್ಕಿಂಗ್ ಬಗ್ಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಕ್ರೇಜ್ ಕಾಣುತ್ತಿದೆ. ಯುಎಇ, ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ ಮುಂಗಡ ಬುಕ್ಕಿಂಗ್‌ನಿಂದ ಚಿತ್ರವು ಕೋಟ್ಯಂತರ ರೂಪಾಯಿ ಗಳಿಸಿದೆ. ವರದಿಗಳನ್ನು ನಂಬುವುದಾದರೆ, ಜರ್ಮನಿಯಲ್ಲೂ ಆರಂಭಿಕ ವಾರಾಂತ್ಯಕ್ಕೆ 8500 ಟಿಕೆಟ್‌ಗಳು ಮಾರಾಟವಾಗಿವೆ.