ನಾನೀಗ ವಿವಾಹಿತೆ... ದೂರ ನಿಲ್ಲಪ್ಪಾ... ಅಭಿಮಾನಿಗಳಿಗೆ ಹೀಗೆಂದ ರಾಖಿ ಸಾವಂತ್

By Suvarna News  |  First Published Jan 16, 2023, 6:31 PM IST

ರಾಖಿ ಸಾವಂತ್​ ಮತ್ತು ನಟ ಆದಿಲ್​ ಖಾನ್​ ಮದುವೆಯ ವಿಷಯ ಅಂತೂ ಸುಖಾಂತ್ಯಗೊಂಡ ಬೆನ್ನಲ್ಲೇ ಅಭಿಮಾನಿಯೊಬ್ಬರಿಗೆ ನಟಿ ಆಡಿದ ಮಾತು ವೈರಲ್​ ಆಗಿದೆ. ಅದೇನದು?
 


ನಟಿ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್​ ಖಾನ್​ರನ್ನು ಮದ್ವೆ ಆಗಿದ್ದಾರೋ ಇಲ್ವೋ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಮದುವೆ ಏಳು ತಿಂಗಳ ಹಿಂದೆಯೇ ಆಗಿದ್ದು ಎಂದು ರಾಖಿ ಎಲ್ಲರ ಎದುರು ಹೇಳುತ್ತಿದ್ದರೆ, ಆದಿಲ್​ ಮಾತ್ರ ಅದನ್ನು ನಿರಾಕರಿಸುತ್ತಲೇ ಬಂದರು. ಕೊನೆಗೆ ಮೈಸೂರಿನಲ್ಲಿ (Mysore) ಇತ್ತೀಚೆಗೆ ತಮ್ಮ ಮದುವೆಯ ನೋಂದಣಿ ಪತ್ರವನ್ನು ರಾಖಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಣ್ಣೀರು ಹಾಕಿದ್ದು ಈಗ ಇತಿಹಾಸ. 'ಆದಿಲ್ ಖಾನ್​ ನನ್ನನ್ನು ಸುಲಭದಲ್ಲಿ ಒಪ್ಪಿಕೊಳ್ಳುತ್ತಿಲ್ಲ. ಅವರ ಮನೆಯವರು ನನ್ನನ್ನು ಒಪ್ಪುತ್ತಿಲ್ಲ. ಯಾರಾದರೂ ಸಹಾಯ ಮಾಡಿ' ಎಂದು ರಾಖಿ ಸಾವಂತ್​ ಗೋಳೋ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಕಣ್ಣೀರು ಹಾಕಿದ್ದಾರು. 

ತಮ್ಮ ಪತಿ ಆದಿಲ್  ಖಾನ್​ ದುರ್ರಾನಿ (Adil Khan Durrani) ತಮಗೆ ಭಾರಿ ಮೋಸ ಮಾಡಿರುವುದಾಗಿ ರಾಖಿ ಹೇಳಿಕೊಂಡಿದ್ದರು. ಮದುವೆಯ ಬಗ್ಗೆ ಬಾಯಿ ಬಿಡದಂತೆ ಆದಿಲ್​ ತಮ್ಮನ್ನು ಬೆದರಿಸಿದ್ದರು ಎಂದು ರಾಖಿ ಸಾವಂತ್​ (Rakhi Sawanth) ಹೇಳಿದ್ದರು. 'ಆತನನ್ನು ನಾನು ವರ್ಷಗಳ ಹಿಂದೆಯೇ ಭೇಟಿಯಾಗಿದ್ದೆ. ನಂತರ ಮದುವೆಯ ವಿಚಾರ ನಡೆಯಿತು.  ಕಳೆದ ವರ್ಷ ಜುಲೈನಲ್ಲಿ ಮದುವೆಯಾದ್ವಿ (Marriage). ಆದರೆ ಮದ್ವೆ ಬಗ್ಗೆ ಹೇಳದಂತೆ ಪತಿ ಬೆದರಿಕೆ ಹಾಕಿದ್ದ' ಎಂದು ರಾಖಿ ಹೇಳಿದ್ದಾರೆ. 'ಮದುವೆ ಬಗ್ಗೆ ತಿಳಿದರೆ ಅವನ  ತಂಗಿಗೆ ಹುಡುಗ ಸಿಗುವುದಿಲ್ಲ ಎನ್ನುವ ಕಾರಣ ನೀಡಿ ವಿಷಯ ಬಹಿರಂಗಪಡಿಸಬೇಡಿ ಎಂದಿದ್ದ. ನನ್ನ ಹೆಸರು ಹೇಳುವುದು ಅವನಿಗೆ ನಾಚಿಕೆ ಅಂತೆ. ಅದಕ್ಕೇ ಹೇಳಬೇಡ' ಎಂದು ಹೇಳಿರುವುದಾಗಿ ರಾಖಿ ಹೇಳಿಕೊಂಡಿದ್ದರು.

Tap to resize

Latest Videos

ರಾಖಿ ಸಾವಂತ್​ ಮೈಸೂರಿನ ಸೊಸೆಯೇ! ಅಂತೂ ಮದ್ವೆ ಗಲಾಟೆಗೆ ಬಿತ್ತು ಬ್ರೇಕ್​...

ಇವೆಲ್ಲ ಡ್ರಾಮಾಗಳ ನಡುವೆ ಮೊನ್ನೆ, ಆದಿಲ್​ ಖಾನ್​ ಕೊನೆಗೂ ತಾವು ರಾಖಿಯನ್ನು ಮದುವೆಯಾಗಿರುವುದಾಗಿ ಒಪ್ಪಿಕೊಂಡರು. ಹೌದು, ರಾಖಿ ಮತ್ತು ನಾನು ಮದುವೆಯಾಗಿದ್ದೇವೆ. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ ಮತ್ತು ಸಂತೋಷವಾಗಿದ್ದೇವೆ" ಎಂದು ಅವರು ಕೆಲವು ಗಂಟೆಗಳ ಹಿಂದೆ ETimes ಟಿವಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇವರ ಮದುವೆಯ ಗಲಾಟೆ ಸದ್ಯಕ್ಕೆ ಬ್ರೇಕ್​ ಆಗಿತ್ತು. ಇಬ್ಬರೂ ಮದುವೆಯನ್ನು ಒಪ್ಪಿಕೊಂಡಿದ್ದರಿಂದ ರಾಖಿ ಸಾವಂತ್​ ಮೈಸೂರಿನ ಸೊಸೆಯಾಗಿದ್ದಾರೆ ಎಂದು ಕನ್ನಡಿಗ ಫ್ಯಾನ್ಸ್​ (Fans) ಕೂಡ ಸಂತೋಷಪಟ್ಟರು.

ಇದರ ನಡುವೆಯೇ ಇದೀಗ ಮತ್ತೆ ರಾಖಿ ಸಾವಂತ್​ ಸುದ್ದಿಯೊಂದು ವೈರಲ್​ ಆಗಿದೆ. ಅದೇನೆಂದರೆ ತಾವು ಈಗ ಅಪ್ಪಟ ಭಾರತೀಯ ಗೃಹಿಣಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಅಭಿಮಾನಿಯೊಬ್ಬ ರಾಖಿ ಅವರ ಬಳಿ ಬಂದು  ಸೆಲ್ಫಿ (Selfie) ತೆಗೆದುಕೊಳ್ಳಲು ಮುಂದಾಗಿದ್ದ. ಆತ ರಾಖಿ ಸಾವಂತ್​ ಅವರ ತೀರಾ ಸಮೀಪ ಬಂದಾಗ ರಾಖಿ, 'ಥೋಡಾ ದೂರ್​ ಸೇ ಭಾಯಿ... ಮೈ ಶಾದೀ ಶುದಾ ಹೂಂ.. (ಸ್ವಲ್ಪ ದೂರ ನಿಲ್ಲು ಅಣ್ಣ... ನಾನೀಗ ಮದುವೆಯಾದವಳು) ಎಂದಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ರಾಖಿ ಸಾವಂತ್  ಮುಂಬೈಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಬಂದ ಅಭಿಮಾನಿಗಳಿಗೆ ಅವರು ಹೀಗೆ ಹೇಳಿದ್ದಾರೆ. ತಾವೀಗ ವಿವಾಹಿತೆ ಆಗಿದ್ದರಿಂದ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ.

ಭಾರತದ ಟಾಪ್​ 10 ಚಿತ್ರಗಳ ಪಟ್ಟಿ ಬಿಡುಗಡೆ: ಬಾಲಿವುಡ್​ಗೆ ಬಿಗ್​ ಶಾಕ್​!

ಈ ವಿಡಿಯೋ ವೈರಲ್​ (Viral) ಆಗುತ್ತಲೇ ಅನೇಕ ಮಂದಿ ರಾಖಿಯ ಕಾಲೆಳೆಯುತ್ತಿದ್ದಾರೆ. ಹಾಗಿದ್ದರೆ ನಿಮ್ಮನ್ನು ಇಷ್ಟು ದಿನ ಯಾರು ಬೇಕಾದರೂ ಮುಟ್ಟಬಹುದಿತ್ತೆ? ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ನಿಮ್ಮ ಮದುವೆಯಾಗಿ ತುಂಬಾ ವರ್ಷವಾಯ್ತುಲ್ಲ, ಹಾಗಿದ್ದರೆ ಇಷ್ಟು ದಿನ...? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ತರ್ಲೆ ನೆಟ್ಟಿಗ, ಮೇಡಂ ಇದು ಮೊದಲೇ ಗೊತ್ತಿದ್ದರೆ ನಿಮ್ಮ ಮದುವೆಗಿಂತ ಮುಂಚೆಯೇ ಬರುತ್ತಿದ್ವಿಯಲ್ಲಾ ಎಂದಿದ್ದಾನೆ. 

 

click me!