Critics Choice Awards 2023: ಗೋಲ್ಡನ್​ ಅವಾರ್ಡ್​ ಬೆನ್ನಲ್ಲೇ 'RRR' ಚಿತ್ರಕ್ಕೆ ಇನ್ನೊಂದು ಗರಿ

By Suvarna NewsFirst Published Jan 16, 2023, 6:43 PM IST
Highlights

'ಗೋಲ್ಡನ್‌ ಗ್ಲೋಬ್‌ ಅವಾರ್ಡ್‌' ಪ್ರಶಸ್ತಿಯ ಬೆನ್ನಲ್ಲೇ ಎಸ್​.ಎಸ್​. ರಾಜಮೌಳಿ ಅವರ ಬ್ಲಾಕ್​ಬಸ್ಟರ್​ ಚಿತ್ರ ಆರ್​ಆರ್​ಆರ್​ ಮತ್ತೊಮ್ಮೆ ಸೌಂಡ್​​ ಮಾಡಿದೆ. ಏನದು?
 

ಎಸ್​.ಎಸ್​. ರಾಜಮೌಳಿ ಅವರ ಬ್ಲಾಕ್​ಬಸ್ಟರ್​ ಚಿತ್ರ 'RRR' ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ.  ಚಿತ್ರದ 'ನಾಟು ನಾಟು' ( Natu Natu) ಹಾಡಿಗೆ ಜಾಗತಿಕ ಪ್ರಶಸ್ತಿಯಾದ 'ಗೋಲ್ಡನ್‌ ಗ್ಲೋಬ್‌ ಅವಾರ್ಡ್‌' ಇತ್ತೀಚೆಗೆ ಸಿಕ್ಕಿದೆ. 1920ರ ಬ್ರಿಟಿಷ್ ಆಕ್ರಮಿತ ಭಾರತದ ಕತೆಯನ್ನು ಚಿತ್ರ ಆಧರಿಸಿರುವ ಈ ಚಿತ್ರವೀಗ ಆಸ್ಕರ್‌ ರೇಸ್‌ನಲ್ಲಿ ಕೂಡ ಇದೆ.  ಲಾಸ್​ ಏಂಜಲಿಸ್​ನಲ್ಲಿ ಇತ್ತೀಚೆಗೆ ನಡೆದಿದ್ದ ಅದ್ದೂರಿ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಗೋಲ್ಡನ್ ಗ್ಲೋಬ್‌ ಪ್ರಶಸ್ತಿ (Golden Globe Awards) ಸ್ವೀಕರಿಸಿದ್ದರು.

ಈಗ ಈ ಚಿತ್ರ ಮತ್ತೊಮ್ಮೆ ಸುದ್ದಿಯಲ್ಲಿದೆ. ಅದೇನೆಂದರೆ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಆರ್​ಆರ್​ಆರ್​ 2023 ರ ವಿಮರ್ಶಕರ ಆಯ್ಕೆ ಪ್ರಶಸ್ತಿ  (Best critic award) ಗೆದ್ದುಕೊಂಡಿದೆ.  ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ ವಿಭಾಗದಲ್ಲಿ 28ನೇ ವಿಮರ್ಶಕರ ಆಯ್ಕೆ ಪ್ರಶಸ್ತಿ ಗೆದ್ದುಕೊಂಡಿದೆ.  ಈ ಮೂಲಕ ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಆಲಿಯಾ ಭಟ್ (Alia Bhat) ಮತ್ತು ಅಜಯ್ ದೇವಗನ್ (Ajay Devagan) ಅಭಿನಯದ ಆರ್‌ಆರ್‌ಆರ್ ಚಿತ್ರ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. 

ಉಕ್ರೇನ್‌ನಲ್ಲಿ ನಡೆದಿತ್ತು 'ನಾಟು ನಾಟು' ಚಿತ್ರೀಕರಣ, ಶ್ರಮವಿತ್ತು ಪೂರ್ಣ

ಈ ಚಿತ್ರ ಬಿಡುಗಡೆಯಾದ ದಿನದಿಂದಲೂ  ಸುದ್ದಿಯಲ್ಲಿದೆ. ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು ಚಿತ್ರ. ವಿಶ್ವಾದ್ಯಂತ  ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿಗೂ ಹೆಚ್ಚು ಗಳಿಸಿದೆ ಆರ್​ಆರ್​ಆರ್​. ನಿನ್ನೆ ಲಾಸ್​ ಏಂಜಲೀಸ್​ನಲ್ಲಿ (Los Angeles) ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ ಈ ಕುರಿತು ಟ್ವಿಟರ್​ನಲ್ಲಿ ಚಂದ್ರಮೌಳಿ ಅವರು ಸಂತಸ ಹಂಚಿಕೊಂಡಿದ್ದಾರೆ. ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ (James Camaroon) ಅವರು ಈ ಚಿತ್ರಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಬಗ್ಗೆ ಹೆಮ್ಮೆಯಿಂದ ರಾಜಮೌಳಿ ಹೇಳಿಕೊಂಡಿದ್ದಾರೆ. 'ಟೈಟಾನಿಕ್ ಮತ್ತು ಅವತಾರ್ ನಂತಹ ಸಿನಿಮಾಗಳನ್ನು ನಿರ್ದೇಶಿಸಿದ ಜೇಮ್ಸ್ ಕ್ಯಾಮರೂನ್‌ ಅವರು 'RRR' ವೀಕ್ಷಿಸಿದರು. ಚಿತ್ರವನ್ನು ಅವರು  ತುಂಬಾ ಇಷ್ಟಪಟ್ಟರು ಮತ್ತು ಅವರು ತಮ್ಮ ಪತ್ನಿ ಸುಜಿಗೆ ಚಿತ್ರ ನೋಡುವಂತೆ ಶಿಫಾರಸು ಮಾಡಿದರು. ಬಳಿಕ ದಂಪತಿ ಚಿತ್ರ  ವೀಕ್ಷಿಸಿದರು' ಎಂದು ಬರೆದುಕೊಂಡಿರುವ ರಾಜಮೌಳಿ ಅವರು, 'ಸರ್ ನೀವು ನಮ್ಮೊಂದಿಗೆ ಚಲನಚಿತ್ರವನ್ನು ವಿಶ್ಲೇಶಿಸಲು ಸಂಪೂರ್ಣ 10 ನಿಮಿಷಗಳನ್ನು ಕಳೆದಿದ್ದೀರಿ ಎಂಬುದನ್ನು ನನಗಿನ್ನೂ ನಂಬಲಾಗುತ್ತಿಲ್ಲ. ನೀವು ಹೇಳಿದಂತೆ ನಾನು ಪ್ರಪಂಚದ ಅಗ್ರಸ್ಥಾನದಲ್ಲಿದ್ದೇನೆ. ಇಬ್ಬರಿಗೂ ಧನ್ಯವಾದಗಳು' ಎಂದಿದ್ದಾರೆ. 

ನಂತರ ಇನ್ನೊಂದು ಟ್ವೀಟ್​ನಲ್ಲಿ ತಮ್ಮ ಈ ಶ್ರೇಯಸ್ಸಿಗೆ ತಮ್ಮ ಜೀವನದಲ್ಲಿ ಬಂದ ಇಬ್ಬರು ಮಹಿಳೆಯರು ಕಾರಣ ಎಂದು ಬರೆದುಕೊಂಡಿದ್ದಾರೆ. ಒಬ್ಬರು ತಾಯಿ ಮತ್ತು ಇನ್ನೊಬ್ಬರು ಪತ್ನಿ. 'ಶಾಲಾ ಶಿಕ್ಷಣ ಮಕ್ಕಳಿಗೆ ನಿಲುಕದ್ದು ಎಂದು ನನ್ನ ತಾಯಿ ಹೇಳುತ್ತಿದ್ದರು. ಅವರು  ಸದಾ  ಕಾಮಿಕ್ಸ್ ಬುಕ್ (Comics books) ಓದುವಂತೆ, ಕಥೆ ಪುಸ್ತಕ ಓದುವಂತೆ ನನ್ನನ್ನು  ಪ್ರೋತ್ಸಾಹಿಸುತ್ತಿದ್ದರು. ನನ್ನ ಸ್ವಂತಿಕೆಯನ್ನು ಅವರು ಉತ್ತೇಜಿಸುತ್ತಿದ್ದರು. ಇದೇ ನನಗೆ ಇಂಥದ್ದೊಂದು ಚಿತ್ರ ಮಾಡಲು ಪ್ರೋತ್ಸಾಹ ನೀಡಿತು. ಇನ್ನು ಪತ್ನಿಯ ಬಗ್ಗೆ ಹೇಳುವುದಾದರೆ, ಪತ್ನಿ  ಕಾಸ್ಟ್ಯೂಮ್ ಡಿಸೈನರ್ (Constume Designer) ರಮಾ. ಆಕೆ ಬಟ್ಟೆ ಡಿಸೈನರ್ ಗಿಂತ ಹೆಚ್ಚಾಗಿ ಆಕೆ ನನ್ನ ಜೀವನದ ಡಿಸೈನರ್'  ಎಂದು ರಾಜಮೌಳಿ ಹೇಳಿದ್ದಾರೆ.

RRR ಬಾಲಿವುಡ್ ಸಿನಿಮಾವಲ್ಲ, ದಕ್ಷಿಣ ಭಾರತದ ತೆಲುಗು ಚಿತ್ರ; ಅಮೆರಿಕಾದಲ್ಲಿ ರಾಜಮೌಳಿ ಹೇಳಿಕೆ ವೈರಲ್

ಅಂದಹಾಗೆ ನಾಟು ನಾಟು  ಚಿತ್ರೀಕರಣ ನಡೆದಿರುವುದು ರಷ್ಯಾ, ಉಕ್ರೇನ್​ (Russia-Ukrain) ಮೇಲೆ ದಾಳಿ ಮಾಡುವುದಕ್ಕೂ  ಸ್ವಲ್ಪ ಮುಂಚೆ. ಉಕ್ರೇನ್​ ರಣಭೂಮಿಯಾಗಿ ನೆತ್ತರು ಚೆಲ್ಲುವ ಸ್ವಲ್ಪ ಮೊದಲು ‘ಆರ್​ಆರ್​ಆರ್​’ ಚಿತ್ರತಂಡ ಅದೇ ಭೂಮಿಯಲ್ಲಿ ಇತ್ತು ಎಂದು ಶೂಟಿಂಗ್​ನ ದಿನಗಳನ್ನು ನೆನಪಿಸಿಕೊಂಡಿದ್ದರು ರಾಮ್​ ಚರಣ್​ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ. 
 

Cheers on a well deserved win 🥂! pic.twitter.com/f3JGfEitjE

— Critics Choice Awards (@CriticsChoice)
click me!