Akash Bathija: ಪಠಾಣ್​ ಚಿತ್ರಕ್ಕಾಗಿ 44 ಕೆ.ಜಿ ತೂಕ ಇಳಿಸಿಕೊಂಡ 'ರಾ' ಏಜೆಂಟ್​!

By Suvarna NewsFirst Published Feb 7, 2023, 3:03 PM IST
Highlights

ಪಠಾಣ್​ ಚಿತ್ರದಲ್ಲಿ ರಾ ಏಜೆಂಟ್​ ಆಗಿ ಪಾತ್ರ ನಿರ್ವಹಿಸಲು ನಟ ಆಕಾಶ್​ ಬಥೀಜಾ 44 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಅವರು ಹೇಳಿದ್ದೇನು? 
 

ಒಂದು ಚಿತ್ರ ಯಶಸ್ಸು ಕಾಣಿಸಬೇಕು ಎಂದರೆ ಅದರ ಹಿಂದೆ ನಾಯಕ ನಾಯಕಿ ಮಾತ್ರವಲ್ಲದೇ ಚಿತ್ರದರಲ್ಲಿರುವ ಪ್ರತಿಯೊಬ್ಬ ನಟರ ಶ್ರಮವೂ ಇರುತ್ತದೆ. ಹೆಚ್ಚಿನ ನಾಯಕರು ಒಂದು ಚಿತ್ರದ ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳುವುದು, ಹೆಚ್ಚಿಸಿಕೊಳ್ಳುವುದು, ಸಿಕ್ಸ್​ ಪ್ಯಾಕ್​ ಮಾಡಿಕೊಳ್ಳುವುದು ಎಲ್ಲವೂ ಸರ್ವೇ ಸಾಮಾನ್ಯವಾಗಿದೆ. ಕೇವಲ ನಾಯಕರಲ್ಲದೇ ಸಹ ನಟರೂ ಹೀಗೆ ಮಾಡಿಕೊಂಡರೂ ಅದು ಹೆಚ್ಚು ಸುದ್ದಿಯಾಗುವುದೇ ಇಲ್ಲ. ಅಂಥದ್ದೇ ಒಂದು ಚಿತ್ರ ಪಠಾಣ್​. ಭರ್ಜರಿ ಯಶಸ್ಸಿನತ್ತ ಸಾಗಿರುವ ಪಠಾಣ್​ ಚಿತ್ರದಲ್ಲಿ 57 ವರ್ಷದ ಶಾರುಖ್​ ಖಾನ್ ​(Shah Rukh Khan) ತಮಗಿಂತ 20 ವರ್ಷ ಚಿಕ್ಕವಳಾಗಿರುವ 37 ವರ್ಷದ ದೀಪಿಕಾ ಪಡುಕೋಣೆ ಜೊತೆ ನಾಯಕನಾಗಿ ನಟಿಸಲು ತುಂಬಾ ವರ್ಕ್​ಔಟ್​ (Workout) ಮಾಡಿ ಅದರಲ್ಲಿ ಭರ್ಜರಿ ಯಶಸ್ಸನ್ನೂ ಕಂಡಿದ್ದಾರೆ. ಯುವ ನಾಯಕರನ್ನೂ ನಾಚಿಸುವ ರೀತಿಯಲ್ಲಿ ಸಿಕ್ಸ್​ಪ್ಯಾಕ್​ನೊಂದಿಗೆ ಷರ್ಟ್​ಲೆಸ್​ ಶೂಟಿಂಗ್​ (Shooting) ಮಾಡಿಸಿಕೊಂಡು, ಯುವಕನಂತೆ  ಮಿಂಚಿದ್ದಾರೆ. ಬಾಲಿವುಡ್​ನ ಹಲವಾರು ದಾಖಲೆಗಳನ್ನು ಪುಡಿಪುಡಿ ಮಾಡಿ ಪಠಾಣ್​ ಮುನ್ನುಗ್ಗುತ್ತಿದೆ. ನಾಲ್ಕು ವರ್ಷಗಳ ಬಳಿಕ ಕಮ್​ಬ್ಯಾಕ್​  ಆಗಿರೋ ಶಾರುಖ್​ಗೆ ಪಠಾಣ್​ ಭರ್ಜರಿ ಯಶಸ್ಸನ್ನು ತಂದುಕೊಟ್ಟಿದೆ, ಅಂತೆಯೇ ದೀಪಿಕಾ ಪಡುಕೋಣೆಗೂ (Deepika Padukone) ಕೂಡ.

ಇದೀಗ ಪಠಾಣ್​ ಚಿತ್ರದಲ್ಲಿನ ಪಾತ್ರವೊಂದಕ್ಕೆ ಸಕತ್​ ವರ್ಕ್​ಔಟ್​ ಮಾಡಿರೋ ಸಹನಟನೊಬ್ಬನ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಪಾತ್ರ ಚಿಕ್ಕದಿದ್ದರೂ ಅದನ್ನು ಚೊಕ್ಕದಾಗಿ ನಿರ್ವಹಿಸಲು ಸಹನಟನೊಬ್ಬ ಬರೋಬ್ಬರಿ 44 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಎಂದರೆ ನಂಬಲೇಬೇಕು! ಒಂದೆರಡು ಕೆ.ಜಿ. ತೂಕ ಇಳಿಸಿಕೊಳ್ಳಲು ಹೆಣಗಾಡುವ ಈ ಹೊತ್ತಿನಲ್ಲಿ ಸಹನಟನ ಪಾತ್ರಕ್ಕೆ ಇಷ್ಟೆಲ್ಲಾ ವರ್ಕ್​ಔಟ್​ ಮಾಡಿರುವ ನಟನೆಂದರೆ  ಆಕಾಶ್ ಬಥಿಜಾ. ಇವರು ಎಷ್ಟರಮಟ್ಟಿಗೆ ವರ್ಕೌಟ್​ ಮಾಡಿದ್ದಾರೆ ಎಂದರೆ 44 ಕೆ.ಜಿ. ತೂಕವನ್ನು ಇಳಿಸಿಕೊಂಡರಂತೆ! ಈ ಚಿತ್ರದಲ್ಲಿ  ಶಾರುಖ್ ಖಾನ್, ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಅವರ ಜೊತೆಗೆ ಕಾಣಿಸಿಕೊಂಡಿರೋ ಆಕಾಶ್​ ಬಥಿಜಾ (Akash Batheeja) ಅವರು ಪಠಾಣ್​  ಚಿತ್ರದಲ್ಲಿ ರಾ  ಏಜೆಂಟ್ (RAW Agent) ಪಾತ್ರದಲ್ಲಿ ನಟಿಸಿದ್ದಾರೆ. 

Pathaan: ಪಾಕಿಗಳಿಗೂ ಇಷ್ಟವಾಯ್ತು ಪಠಾಣ್! ಕಂಗನಾ ಮಾತು ನಿಜವಾಯ್ತು ಅಂತಿದ್ದಾರೆ ನೆಟ್ಟಿಗರು

ಪಠಾಣ್ ಚಿತ್ರಕ್ಕಾಗಿ ಎರಡು ವರ್ಷಗಳಲ್ಲಿ ತಮ್ಮ ತೂಕವನ್ನು 44 ಕೆಜಿಯಷ್ಟು ಕಡಿಮೆ ಮಾಡಿಕೊಂಡಿದ್ದಾರೆ. ಪಠಾಣ್​ (Pathaan) ಚಿತ್ರಕ್ಕೆ ಆಫರ್​ ಬಂದಾಗ ನನ್ನ ತೂಕ 126 ಕೆ.ಜಿ. ಇತ್ತು. ನಂತರ ವರ್ಕೌಟ್ ಮಾಡಲು ಆರಂಭಿಸಿದೆ.  ಕಠಿಣ ಪರಿಶ್ರಮದಿಂದ ಎರಡು ವರ್ಷಗಳಲ್ಲಿ 44 ಕೆ.ಜಿ. ತೂಕ ಇಳಿಸಿದ್ದೇನೆ ಎಂದು ಆಕಾಶ್ ಹೇಳಿದ್ದಾರೆ. ತಮಗೆ ಶಾರುಖ್​ ಖಾನ್​ ಅವರೇ ಸ್ಫೂರ್ತಿ ಎಂದೂ ಅವರು ಹೇಳಿಕೊಂಡಿದ್ದಾರೆ. 4 ವರ್ಷಗಳ ವಿರಾಮದ ನಂತರ ಬೆಳ್ಳಿತೆರೆಗೆ ಮರಳಿದ ಶಾರುಖ್​ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದ ಆಕಾಶ್​ ಅವರು,  'ಪಠಾಣ್​  ಚಿತ್ರದ ಮೊದಲ ದಿನ ಚಿತ್ರೀಕರಣ ಮಾಡುವಾಗ ಶಾರುಖ್​ ಸರ್​ ಅವರು ಭೇಟಿಯಾದರೆ ಹೇಗೆ ಮಾತನಾಡಬೇಕು ಎಂದು ಪ್ರಾಕ್ಟೀಸ್​ ಮಾಡಿಕೊಂಡಿದ್ದೆ. ಆದರೆ ಮೊದಲ ದಿನ ಅವರು,  ತಮ್ಮ ಪರಿವಾರದೊಂದಿಗೆ (family) ಪ್ರವೇಶಿಸಿದಾಗ ನಾನು ಮೂಕವಿಸ್ಮಿತನಾದೆ. ನನ್ನನ್ನು ನೋಡಿದ ಕೂಡಲೇ  ಅವರೇ ಮೊದಲಿಗರಾಗಿ ಕೈ ಚಾಚಿ, ನನ್ನ ಕೈ ಕುಲುಕಿ, ಅಪ್ಪಿಕೊಂಡರು. ಜನರು ಒಬ್ಬ ನಟನ ಮೇಲೆ ಇಷ್ಟೆಲ್ಲಾ ಅಭಿಮಾನ ಹೇಗೆ ಹೊಂದುತ್ತಾರೆ ಎಂದು ಅಂದೇ ನನಗೆ ಗೊತ್ತಾಯಿತು. ಅಷ್ಟೇ ಅಲ್ಲದೇ ಒಂದು ಚಿತ್ರಕ್ಕಾಗಿ ಅವರು ಎಷ್ಟೆಲ್ಲಾ ಶ್ರಮವಹಿಸಿ ಕೆಲಸ ಮಾಡುತ್ತಾರೆ ಎಂಬ ಅರಿವೂ ನನಗಾಯಿತು. ಶಾರುಖ್ ಖಾನ್ ಪಕ್ಕದಲ್ಲಿ ಫ್ಯಾಟಿಯಾಗಿ ಕಾಣಿಸಿಕೊಳ್ಳಲು ಇಷ್ಟಪಡದೆ ತನ್ನನ್ನು ತಾನು ಬದಲಾಯಿಸಿಕೊಂಡಿದ್ದೇನೆ' ಎಂದು ಆಕಾಶ್ ಹೇಳಿದ್ದಾರೆ. 
 
 ಈ ಚಿತ್ರಕ್ಕಾಗಿ ಆಕಾಶ್ ಎರಡು ವರ್ಷ ಇತರ ಕೆಲಸಕ್ಕೆ ಬ್ರೇಕ್ (Break) ಕೊಟ್ಟು ಫಿಟ್​ನೆಸ್​​ನತ್ತ ಗಮನಹರಿಸಿರುವುದಾಗಿ ಅವರು ಹೇಳಿದ್ದಾರೆ.  ಪಠಾಣ್ ಚಿತ್ರದಲ್ಲಿ ಚಾನ್ಸ್ ಸಿಕ್ಕಿದ್ದು ಹೇಗೆ ಎಂದೂ ಆಕಾಶ್ ಹೇಳಿದ್ದಾರೆ. ಆಕಾಶ್​ ಚಿತ್ರದ ಕಾಸ್ಟಿಂಗ್ ನಿರ್ದೇಶಕ ಶಾನು ಶರ್ಮಾ ಆಡಿಷನ್ (audition) ಮಾಡಿದ್ದಾರೆ. ಆಕಾಶ್ ಆಡಿಷನ್ ಹೊರತುಪಡಿಸಿ 30-35 ನಟರು ಆಡಿಷನ್​​ಗೆ ಬಂದಿದ್ದರು, ಆದರೆ ಕೆಲವು ಸುತ್ತಿನ ಸ್ಕ್ರೀನ್ ಟೆಸ್ಟ್ ನಂತರ ಆಯ್ಕೆ ಮಾಡಲಾಗಿದೆ ಎಂದು ಆಕಾಶ್ ಹೇಳಿದರು. 

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್
 

click me!