ಸಿದ್ಧಾರ್ಥ್-ಕಿಯಾರಾ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

Published : Feb 07, 2023, 01:41 PM ISTUpdated : Feb 07, 2023, 01:45 PM IST
ಸಿದ್ಧಾರ್ಥ್-ಕಿಯಾರಾ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

ಸಾರಾಂಶ

 ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ವೈವಾಹಿಕ ಜೀವನದ ಬಗ್ಗೆ ಖ್ಯಾತ ಜ್ಯೋತಿಷಿ ಆಚಾರ್ಯ ವಿನೋದಕುಮಾರ್ ಭವಿಷ್ಯ ನುಡಿದಿದ್ದಾರೆ.

ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾಣಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಇಬ್ಬರ ಮದುಲವೆ ಸಮಾರಂಭ ನಡೆಯುತ್ತಿದೆ. ಜೈಪುರದ ಅರಮನೆಯಲ್ಲಿ ಅದ್ದೂರಿಯಾಗಿ ಇಬ್ಬರೂ ಹಸೆಮಣೆ ಏರುತ್ತಿದ್ದಾರೆ. ಇಬ್ಬರ ಮದುವೆಗೆ ಬಾಲಿವುಡ್‌ನ ಅನೇಕ ಗಣ್ಯರು ಹಾಜರಾಗುತ್ತಿದ್ದಾರೆ. ಒಂಟಿ ಜೀವನಕ್ಕೆ ಗುಡ್ ಬೈ ಹೇಳಿ ಜಂಟಿ ಆಗುತ್ತಿರುವ ಕಿಯಾರಾ ಮತ್ತು ಸಿದ್ಧಾರ್ಥ್ ಕಳೆದ ಒಂದು ವಾರಗಳಿಂದ ಟ್ರೆಂಡಿಂಗ್‌ನಲ್ಲಿದ್ದಾರೆ. ಈಗಾಗಲೇ ಅನೇಕ ಬಾಲಿವುಡ್ ಗಣ್ಯರು ಕಿಯಾರಾ ಮತ್ತು ಸಿದ್ಧಾರ್ಥ್ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದುವರೆಗೂ ಇಬ್ಬರ ಮದುವೆ ಫೋಟೋಗಳು ರಿವೀಲ್ ಆಗಿಲ್ಲ. ಹಾಗಾಗಿ ಇಬ್ಬರ ಫೋಟೋವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಈ ನಡುವೆ ಖ್ಯಾತ ಜ್ಯೋತಿಷಿ ಆಚಾರ್ಯ ವಿನೋದಕುಮಾರ್ ಅವರು ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆ ಜೀವನದ ಬಗ್ಗೆ ನುಡಿದ ಭವಿಷ್ಯ ವೈರಲ್ ಆಗಿದೆ. ಆಚಾರ್ಯ ವಿನೋದಕುಮಾರ್  ಭವಿಷ್ಯವಾಣಿಯ ಪ್ರಕಾರ, ಸಿದ್ಧಾರ್ಥ್ ಬದ್ಧತೆ ಮತ್ತು ಕುಟುಂಬದ ಭಾವನೆಗಳಿಗೆ ಬೆಲೆ ಕೊಡುವ ಮತ್ತು ಸಂಬಂಧವನ್ನು ಗೌರವಿಸುವ ವ್ಯಕ್ತಿ. ಸಿದ್ಧಾರ್ಥ್ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕಿಯಾರಾವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಬ್ಬರೂ ತಮ್ಮ ಹಿರಿಯರ ಮಾತುಗಳನ್ನು ಕೇಳಬೇಕು. ಇವುಗಳನ್ನು ಅನುಸರಿಸಿದರೆ, ಸಿದ್ಧಾರ್ಥ್-ಕಿಯಾರಾ ಅಡ್ವಾಣಿ ಸಂಬಂಧವು ಗಟ್ಟಿಯಾಗುತ್ತದೆ ಮತ್ತು ಅವರ ಜೀವನದಲ್ಲಿ ಯಾವುದೇ ತೊಡಕುಗಳಿಲ್ಲದೆ ಮದುವೆ ಜೀವನ ಸುಮಯವಾಗಿ ಸಾಗುತ್ತದೆ. ಸಿದ್ಧಾರ್ಥ್ ಹಾಗೂ ಕಿಯಾರಾ ಅವರ ಜೋಡಿಯ ಸಂಬಂಧ ತುಂಬ ಗಟ್ಟಿಯಾಗಿದೆ' ಎಂದು ಹೇಳಿದ್ದಾರೆ. 

ನಟಿ ಕಿಯಾರಾಳನ್ನು ಮದ್ವೆ ಆಗ್ತೀನಿ ಎಂದು ಪೇಚಿಗೆ ಸಿಲುಕಿದ್ದ ಖ್ಯಾತ ಉದ್ಯಮಿ ಅಶ್ನೀರ್ ಗ್ರೋವರ್

ಅನೇಕ ವರ್ಷಗಳ ಡೇಟಿಂಗ್ ನಂತರ ಸಿದ್ ಮತ್ತು ಕಿಯಾರಾ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಫೆಪ್ರಬವರಿ 4ರಿಂದಲೇ ವಿವಾಹ ಪೂರ್ವ ಸಿದ್ಧತೆಗಳು ನಡೆಯುತ್ತಿದೆ. ಮಂಗಳವಾರ (ಫೆಬ್ರವರಿ 7) ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. ರಾಜಸ್ಥಾನದ ಜೈಸಲ್ಮೇರ್‌ ಅರಮನೆಯಲ್ಲಿ ಅದ್ದೂರಿಯಾಗಿ ಮದುವೆಯಾಗಲಿದೆ. 

ಇಬ್ಬರ ಮದುವೆಗೆ ಕೇವಲ 100-150 ಅತಿಥಿಗಳ ಹಾಜರಾಗುತ್ತಿದ್ದಾರೆ. ಕಿಯಾರಾ-ಸಿದ್ಧರ್ಥ್ ನಿಕಟ  ಸ್ನೇಹಿತರಾದ ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ್, ಇಶಾ ಅಂಬಾನಿ ಮತ್ತು ವರುಣ್ ಧವನ್ ಈಗಾಗಲೇ ಮದುವೆಗೆ ರಾಜಸ್ಥಾನ ತಲುಪಿರುವ ಫೋಟೋಗಳು ವೈರಲ್ ಅಗಿವೆ. ಅತಿಥಿಗಳಿಗಾಗಿ ಸುಮಾರು 80 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಮತ್ತು ಮರ್ಸಿಡಿಸ್ ಬೆಂಜ್, ಜಾಗ್ವಾರ್ ಮತ್ತು ಬಿಎಂಡಬ್ಲ್ಯು ಸೇರಿದಂತೆ 70 ಕಾರುಗಳನ್ನು ವಿಮಾನ ನಿಲ್ದಾಣದಿಂದ ಅತಿಥಿಗಳನ್ನು ಸ್ವಾಗತಿಸಲು ಬಳಸಲಾಗುತ್ತದೆ. ವಿವಾಹದ ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಸಹ ಏರ್ಪಾಟು ಮಾಡಲಾಗಿದೆ.

ಸಿದ್ಧಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಅವರ ರಾಯಲ್ ವೆಡ್ಡಿಂಗ್ ಅಪ್ಡೇಟ್ಸ್!

ಮದುವೆ  ಬಗ್ಗೆ ಹೆಚ್ಚಿನ ಅಪ್ ಡೇಟ್ ಬಹಿರಂಗವಾಗಿಲ್ಲ. ಇಬ್ಬರ ಮದುವೆ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಷೇರ್‌ಷಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ನಿಜಜೀವನದಲ್ಲೂ ಒಂದಾಲಿ ಎಂದು ಅಭಿಮಾನಿಗಳು ಹಾರೈಸಿದ್ದರು. ಇದೀಗ ಇಬ್ಬರೂ ಹಸೆಮಣೆ ಏರುತ್ತಿರುವುದು ಅಭಿಮಾನಿಗಳಿಗೂ ಸಂತಸ ತಂದಿದೆ. ಈ ಜೋಡಿ ಸಂತೋಷವಾಗಿ ಇರಲಿ ಅಭಿಮಾನಿಗಳು ಹಾರೈಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್