ಹಾರ್ದಿಕ್ ಪಾಂಡ್ಯಾ – ನತಾಶಾ ಪ್ಯಾಚಪ್ ಕನ್ಫರ್ಮ್, ನಾಯಿ ಮೂಲಕ ಸಿಕ್ತು ಹಿಂಟ್!

By Roopa Hegde  |  First Published Jun 6, 2024, 4:14 PM IST

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸದ್ಯ ಬಿಸಿಬಿಸಿ ಚರ್ಚೆಯಲ್ಲಿರುವ ಜೋಡಿ. ಇಬ್ಬರಿಗೂ ಡಿವೋರ್ಸ್ ಆಗ್ತಿದೆ ಎಂಬ ಸುದ್ದಿ ಹರಿದಾಡ್ತಿದ್ದರೂ ಅದು ಖಚಿತವಾಗಿರಲಿಲ್ಲ. ಈಗ ಇಬ್ಬರೂ ಮತ್ತೆ ಒಂದಾಗ್ತಿರುವ ಸುಳಿವು ಸಿಕ್ಕಿದೆ. ನತಾಶಾ ಹೊಸ ಪೋಸ್ಟ್ ಸದ್ದು ಮಾಡಿದೆ. 
 


ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್ (Indian Cricketer Hardik Pandya and wife Natasa Stankovic Patch Up)  ಬೇರೆಯಾಗ್ತಿದ್ದಾರೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ, ಬೇರೆ ವಾಸವಾಗಿದ್ದಾರೆ ಎಂಬೆಲ್ಲ ಸುದ್ದಿ ಹರಡಿತ್ತು. ಮುದ್ದು ಮುದ್ದಾಗಿರುವ ಜೋಡಿ ದೂರವಾಗ್ತಿರುವ ಸುದ್ದಿ ಅಭಿಮಾನಿಗಳಲ್ಲಿ ಬೇಸರತರಿಸಿದ್ದು ಸುಳ್ಳಲ್ಲ. ಈಗ ಅಭಿಮಾನಿಗಳಿಗೆ ನೆಮ್ಮದಿಯಾಗುವ ವಿಷ್ಯವೊಂದು ಹೊರಬಿದ್ದಿದೆ. ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಹಾರ್ದಿಕ್ ಹಾಗೂ ನತಾಶಾ ಬೇರ್ಪಡುವ ಬಗ್ಗೆ ಎಷ್ಟೇ ಸುದ್ದಿ ಬಂದ್ರೂ ದಂಪತಿ ಮಾತ್ರ ಬಾಯಿ ಬಿಟ್ಟಿಲ್ಲ. ಈ ಬಗ್ಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಕೆಲ ಪೋಸ್ಟ್ ಹಾಕುವ ಮೂಲಕ ಮತ್ತೆ ಒಂದಾದ ಹಿಂಟ್ ನೀಡಿದ್ದಾರೆ. 

ಈ ಹಿಂದೆ ನತಾಶಾ (Natasha) , ಸಾಮಾಜಿಕ ಜಾಲತಾಣದಲ್ಲಿದ್ದ ಹಾರ್ದಿಕ್ (Hardik) ಹಾಗೂ ತಮ್ಮ ಮದುವೆ (Marriage) ಫೋಟೋಗಳನ್ನು ತೆಗೆದಿದ್ದರು. ಆದ್ರೆ ಕೆಲ ದಿನಗಳ ಹಿಂದೆ ಅದನ್ನು ರೀ ಸ್ಟೋರ್ ಮಾಡಿದ್ದರು. ಈಗ ನಮ್ಮಿಬ್ಬರ ಮಧ್ಯೆ ಎಲ್ಲ ಸರಿಯಾಗಿದೆ ಎನ್ನುವ ಕುರಿತು ನತಾಶಾ ಮತ್ತೊಂದು ಸುಳಿವು ನೀಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳ ಮುಖದಲ್ಲಿ ನಗು ಮೂಡಿದೆ.

Tap to resize

Latest Videos

ಡಿವೋರ್ಸ್ ವದಂತಿಗೆ ಬ್ರೇಕ್‌ ಹಾಕಲು ಹಾರ್ದಿಕ್ ಪತ್ನಿ ಮಾಡಿದ್ದೇನು ಗೊತ್ತಾ?

ನತಾಶಾ ನೀಡಿದ ಹೊಸ ಸುಳಿವು ಏನು? : ಹಿಂದೆ ಫೋಟೋ ರಿಸ್ಟೋರ್ ಮಾಡಿದ್ದ ನತಾಶಾ ಈಗ ಇನ್ಸ್ಟಾ ಪೋಸ್ಟ್ ನಲ್ಲಿ ತಮ್ಮ ಪ್ರೀತಿಯ ಡಾಗ್ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾಯಿಗೆ ಸ್ವೆಟರ್ ಹಾಕಲಾಗಿದೆ. ಸ್ವೆಟರ್ ಮೇಲೆ ಪಾಂಡಾ ಚಿತ್ರ ಇರೋದನ್ನು ನೀವು ನೋಡ್ಬಹುದು. ನಾಯಿಯ ಸುಂದರ ಫೋಟೋವನ್ನು ಪೋಸ್ಟ್ ಮಾಡಿದ ನತಾಶಾ, ಬೇಬಿ ರೋವರ್ ಪಾಂಡ್ಯ ಎಂದು ಶೀರ್ಷಿಕೆ ಹಾಕಿದ್ದಾರೆ. ವಿಚ್ಛೇದನದ ಚರ್ಚೆ ಮಧ್ಯೆ ನತಾಶಾ, ಪಾಂಡ್ಯ ಸರ್ನೇಮ್ ಬಳಸಿದ್ದು ಅಭಿಮಾನಿಗಳಿಗೆ ಸಂತೋಷ ನೀಡಿದೆ. ನತಾಶಾ, ಪಾಂಡ್ಯರಿಂದ ದೂರವಾಗಿಲ್ಲ ಎಂದು ಅಭಿಮಾನಿಗಳು ಹೇಳ್ತಿದ್ದಾರೆ. 

ನತಾಶಾ ಇನ್ನೂ ಹಾರ್ದಿಕ್ ಮನೆ ತೊರೆದಿಲ್ಲ. ಅವರು ಹಾರ್ದಿಕ್ ಮನೆಯಲ್ಲೇ ಇದ್ದಾರೆಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನತಾಶಾ, ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದಾರೆ. ಅವರು ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲ ಲಿಫ್ಟ್ ಫೋಟೋವನ್ನು ಅವರು ಹಂಚಿಕೊಂಡಿದ್ದು, ಅದು ಹಾರ್ದಿಕ್ ಮನೆ ಲಿಫ್ಟ್ ಎಂದು ಬಳಕೆದಾರರು ಹೇಳಿದ್ದಾರೆ. 

ನತಾಶಾ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾಂಡ್ಯ ಸರ್ನೇಮ್ ತೆಗೆದಿದ್ದರು. ಅಲ್ಲದೆ ಹಾರ್ದಿಕ್ ಜೊತೆಗಿರುವ ಅನೇಕ ಫೋಟೋಗಳನ್ನು ತೆಗೆದಿದ್ದರು. ಇದನ್ನು ನೋಡಿದ ಜನರು, ಹಾರ್ದಿಕ್ ಮತ್ತು ನತಾಶಾ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲ ಇಬ್ಬರು ವಿಚ್ಛೇದನ ಪಡೆಯುತ್ತಾರೆ, ಡಿವೋರ್ಸ್ ನಂತ್ರ ಹಾರ್ದಿಕ್ ಪಾಂಡ್ಯ, ನತಾಶಾಗೆ ಶೇಕಡಾ 70ರಷ್ಟು ಸಂಪತ್ತನ್ನು ನೀಡ್ಬೇಕೆಂಬ ಚರ್ಚೆ ಕೂಡ ಆಗಿತ್ತು. ಇಬ್ಬರ ಮಧ್ಯೆ ಏನಾಗ್ತಿದೆ ಅನ್ನೋದನ್ನು ಅವರೇ ಹೇಳಬೇಕು. ಸಂಬಂಧದ ಬಗ್ಗೆ ಹಾರ್ದಿಕ್ ಅಥವಾ ನತಾಶಾ ಹೇಳ್ತಾರೆಂಬ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.

ಅಮೃತಧಾರೆ ಫಸ್ಟ್ ನೈಟ್ ಸೀನ್‌ ಪ್ರೋಮೋಗೆ 35 ಲಕ್ಷಕ್ಕೂ ಅಧಿಕ ವೀಕ್ಷಣೆ!

2020ರಲ್ಲಿ ನಡೆದಿತ್ತು ಮದುವೆ : ಹಾರ್ದಿಕ್ ಪಾಂಡ್ಯ ಜನವರಿ 2020 ರಲ್ಲಿ ಸರ್ಬಿಯಾದ ಮಾಡೆಲ್ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಸಮಯದಲ್ಲಿ ನತಾಶಾ ಗರ್ಭಿಣಿಯಾಗಿದ್ದರು. ಇಬ್ಬರೂ ಅಂತಿಮವಾಗಿ ಮೇ 31, 2020 ರಂದು ಮದುವೆಯಾದ್ರು. ಅದಾದ ಸುಮಾರು ಎರಡು ತಿಂಗಳ ನಂತರ ಅಂದರೆ ಜುಲೈ 30 ರಂದು ಹಾರ್ದಿಕ್-ನತಾಶಾ ಮನೆಗೊಂದು ಮಗು ಬಂದಿತ್ತು.  ಸದ್ಯ ಹಾರ್ದಿಕ್ ಪಾಂಡ್ಯ ಟಿ- 20 ವಿಶ್ವಕಪ್ ಆಡ್ತಿದ್ದು, ವೈಯಕ್ತಿಕ ವಿಷ್ಯ ಅವರ ಆಟದ ಮೇಲೆ ಪರಿಣಾಮ ಬೀರದಿರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. 
 

click me!