250 ಕೋಟಿಗೂ ಅಧಿಕ ಬೆಲೆ ಬಾಳುವ ಬಂಗಲೆಯ ಒಡತಿಯಾಗುವ ಮೂಲಕ ಈ ಪುಟಾಣಿ ಕಿರಿಯ ಶ್ರೀಮಂತ ಸ್ಟಾರ್ ಕಿಡ್ ಎನಿಸಿದ್ದಾಳೆ. ಇವಳ್ಯಾರು ಗೊತ್ತಾ?
ಬಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರದ್ದು. ಆಲಿಯಾ ಭಟ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು. ವೃತ್ತಿಜೀವನದುದ್ದಕ್ಕೂ, ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆಲಿಯಾ ಭಟ್ ಎರಡು ವರ್ಷಗಳ ಹಿಂದೆ ರಣಬೀರ್ ಕಪೂರ್ ಅವರನ್ನು ಮದುವೆಯಾಗಿದ್ದು, ಸುಂದರವಾದ ಹೆಣ್ಣು ಮಗುವಿಗೆ ರಾಹಾಗೆ ಅಮ್ಮನಾಗಿದ್ದಾರೆ. ಇದರ ಹೊರತಾಗಿಯೂ ಈಕೆ ಈಗಲೂ ಮೋಸ್ಟ್ ವಾಂಟೆಡ್ ನಟಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆಗಿನ ತಮ್ಮ ಪ್ರೇಮ ಸಂಬಂಧದ ಬಗ್ಗೆ ಕೆಲ ವರ್ಷಗಳ ಹಿಂದೆ ಹೇಳಿದ್ದ ಆಲಿಯಾ ಭಟ್, ನನ್ನ 11ನೇ ವಯಸ್ಸಿನಲ್ಲಿ ನಾನು ರಣಬೀರ್‌ರನ್ನು ಭೇಟಿಯಾಗಿದ್ದೆ. ಬ್ಲ್ಯಾಕ್ ಸಿನಿಮಾದ ಆಡಿಷನ್‌ನಲ್ಲಿ ಅವರ ಪರಿಚಯವಾಗಿತ್ತು. ಅಂದಿನಿಂದಲೇ ನನಗೆ ಅವರ ಮೇಲೆ ಕ್ರಶ್ ಆಗಿತ್ತು ಎಂದು ವಿವರಿಸಿದ್ದರು. ನಂತರ ಮದುವೆಯಾದ ಏಳೇ ತಿಂಗಳಿಗೆ ರಾಹಾ ಎಂಬ ಪುಟಾಣಿಗೆ ಜನ್ಮ ನೀಡಿ ಸಕತ್ ಸದ್ದು ಮಾಡಿದ್ದರು. ಇದೀಗ ರಾಹಾ ಕಪೂರ್ ಸಕತ್ ಸದ್ದು ಮಾಡುತ್ತಿದ್ದಾಳೆ. ಇದಕ್ಕೆ ಕಾರಣ, ʻಕಿರಿಯ ಮತ್ತು ಶ್ರೀಮಂತ ಸ್ಟಾರ್ ಕಿಡ್ʼ ಎಂಬ ಖ್ಯಾತಿಯನ್ನು ಈಕೆ ಗಳಿಸಿದ್ದಾಳೆ. 2022ರ ನವೆಂಬರ್ 6ರಂದು ಹುಟ್ಟಿರೋ ರಾಹಾಗೆ ಈಗ ಸರಿಸುಮಾರು ಎರಡೂವರೆ ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೇ ಈಕೆ ಇಂಥದ್ದೊಂದು ಖ್ಯಾತಿ ಪಡೆದುಕೊಂಡಿದ್ದಾಳೆ. ಅಷ್ಟಕ್ಕೂ ಈ ರೀತಿ ಖ್ಯಾತಿ ಗಳಿಸಲು ಕಾರಣ ಏನೆಂದರೆ, ರಣಬೀರ್ ಮತ್ತು ಆಲಿಯಾ ಮಗಳು ರಾಹಾ ಕಪೂರ್ ಅವರ ಹೆಸರಿನಲ್ಲಿ ಭರ್ಜರಿ ಬಂಗಲೆಯೊಂದು ನೋಂದಣಿಯಾಗಿದೆ! ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್ ಬಚ್ಚನ್ ಅವರ ‘ಜಲ್ಸಾ’ ಸಮೀಪವೇ ಇರುವ ಅತ್ಯಂತ ದುಬಾರಿ ಸೆಲೆಬ್ರಿಟಿ ಬಂಗಲೆಯೊಂದರ ಒಡತಿಯಾಗಿದ್ದಾಳೆ ರಾಹಾ.
ಹೌದು. ಕೆಲ ದಿನಗಳ ಹಿಂದಷ್ಟೇ, ರಣಬೀರ್ ಕಪೂರ್, ಆಲಿಯಾ ಭಟ್ ದಂಪತಿ ಮತ್ತು ರಣಬೀರ್ ತಾಯಿ, ನಟಿ ನೀತು ಕಪೂರ್ ಮುಂಬೈನ ಬಾಂದ್ರಾದಲ್ಲಿ ನಿರ್ಮಾಣ ಹಂತದ ಬಂಗಲೆಗೆ ಭೇಟಿ ಕೊಟ್ಟಿದ್ದರು. ಅದಾಗಲೇ ಆ ಬಂಗಲೆ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಅದನ್ನು ದಂಪತಿ ಖರೀದಿ ಮಾಡುತ್ತಾರೆ ಎಂದು ವರದಿಯಾಗಿತ್ತು. ಇದೀಗ ಅದೇ ಬಂಗಲೆ ರಾಹಾ ಹೆಸರಿಗೆ ಆಗಿರುವುದಾಗಿ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಬಂಗಲೆಯ ಬೆಲೆ 250 ಕೋಟಿ ರೂಪಾಯಿಗೂ ಅಧಿಕ ಎನ್ನಲಾಗಿದೆ. ಇದೇ ಕಾರಣಕ್ಕೆ ರಾಹಾ ಸದ್ಯ ಈ ಐಷಾರಾಮಿ ಬಂಗಲೆಯ ಒಡತಿಯಾಗಿದ್ದು, ʻಕಿರಿಯ ಮತ್ತು ಶ್ರೀಮಂತ ಸ್ಟಾರ್ ಕಿಡ್ʼ (youngest and richest star kid) ಎನಿಸಿದ್ದಾಳೆ.
ವೀರ್ ಸಾವರ್ಕರ್ ಚಿತ್ರಕ್ಕೆ ಸಂಭಾವನೆ ಬೇಡವೆಂದ ಬಿಗ್ಬಾಸ್ ಖ್ಯಾತಿಯ ಅಂಕಿತಾ ಲೋಖಂಡೆ: ಮಾಹಿತಿ ರಿವೀಲ್
ಅಷ್ಟಕ್ಕೂ ಈ ಮನೆಗೂ ಈ ಕುಟುಂಬಕ್ಕೂ ಒಂದು ಸಂಬಂಧವೂ ಇದೆ. ಅದೇನೆಂದರೆ, 2020ರಲ್ಲಿ ರಿಷಿ ಕಪೂರ್ ಸಾಯುವ ಮೊದಲು, ಅವರು ಈ ಸೈಟ್‌ಗೆ ಭೇಟಿ ನೀಡಿದ್ದರು. ಆಲಿಯಾ ಮತ್ತು ರಣಬೀರ್ ಸೆಪ್ಟೆಂಬರ್ 2022ರಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಲಿಯಾ ಗರ್ಭಿಣಿಯಾಗಿದ್ದರು. ಈ ಬಂಗಲೆ ಜತೆಗೆ ಆಲಿಯಾ ಮತ್ತು ರಣಬೀರ್ ಇಬ್ಬರೂ ಬಾಂದ್ರಾ ಪ್ರದೇಶದಲ್ಲಿ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 60 ಕೋಟಿ ರೂ.ಗಿಂತ ಹೆಚ್ಚು. ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಇತ್ತೀಚೆಗೆ ಬಾಂದ್ರಾದಲ್ಲಿ 15 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬಂಗಲೆ ಪೂರ್ಣವಾದ ಬಳಿಕ ಇಡೀ ಕಪೂರ್ ಕುಟುಂಬ, ನೀತು ಸೇರಿದಂತೆ ಇದೇ ಬಂಗಲೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.
ಆಲಿಯಾ ಈಗ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಎರಡನೆಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿ ಈಕೆಯದ್ದು. ಅವರ ಒಂದು ಚಿತ್ರಕ್ಕೆ ಸುಮಾರು 20-25 ಕೋಟಿ ರೂ. ಇದೆ. 'ಗಂಗೂಬಾಯಿ ಕಥಿವಾಡಿ' ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಣಬೀರ್ ಕಪೂರ್ ಅನಿಮಲ್ ಚಿತ್ರದ ಬಳಿಕ ಸಾಕಷ್ಟು ಹೆಸರು ಗಳಿಸಿದ್ದು, ದಂಪತಿ ಕೈಯಲ್ಲಿ ಹಲವಾರು ಚಿತ್ರಗಳಿವೆ. ಆಲಿಯಾ ಒಬ್ಬರ ವಿಷಯವೇ ಹೇಳುವುದಾದರೆ, ಈಕೆಗೆ 31 ವರ್ಷ ವಯಸ್ಸು. ಇದಾಗಲೇ ಇವರೊಬ್ಬರೇ 550 ಕೋಟಿಗೂ ಅಧಿಕ ಆಸ್ತಿಯ ಒಡತಿಯಾಗಿದ್ದಾರೆ.
ರಾಹುಲ್, ಪ್ರಿಯಾಂಕಾರನ್ನು ಒಂದೇ ಶಬ್ದದಲ್ಲಿ ಬಣ್ಣಿಸಿ ಎಂದಾಗ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ಹೇಳಿದ್ದೇನು?