ಆಪ್ ನಾಯಕನ ಜೊತೆ ಮದುವೆ; ಕೊನೆಗೂ ಮೌನ ಮುರಿದ ನಟಿ ಪರಿಣೀತಿ ಚೋಪ್ರಾ

Published : Apr 19, 2023, 04:06 PM IST
ಆಪ್ ನಾಯಕನ ಜೊತೆ ಮದುವೆ; ಕೊನೆಗೂ ಮೌನ ಮುರಿದ ನಟಿ ಪರಿಣೀತಿ ಚೋಪ್ರಾ

ಸಾರಾಂಶ

ಆಪ್ ನಾಯಕನ ರಾಘವ್ ಚಡ್ಡಾ ಜೊತೆ ಮದುವೆ ವದಂತಿ ಬಗ್ಗೆ ನಟಿ ಪರಿಣೀತಿ ಚೋಪ್ರಾ  ಕೊನೆಗೂ ಮೌನ ಮುರಿದಿದ್ದಾರೆ. 

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ಮದುವೆ ವಿಚಾರ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಬ್ಬರೂ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇತ್ತೀಚೆಗೆ ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಆದರೆ ಇಬ್ಬರೂ ಎಲ್ಲಿಯೂ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಇಬ್ಬರೂ ಮುಂಬೈ ವಿನಾ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದರು. ಇದೀಗದ ನಟಿ ಪರಿಣೀತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪರಿಣೀತಿ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೀವನದ ಬಗ್ಗೆ ಚರ್ಚೆ ಮಾಡುವುದು ಮತ್ತು ತೀರ ವೈಯಕ್ತಿಕ ವಿಚಾರ ಚರ್ಚೆ ಮಾಡುವ ಬಗ್ಗೆ ಒಂದು ಗೆರೆ ಇದೆ ಎಂದು ಹೇಳಿದ್ದಾರೆ. ಕಲ್ಪನೆಗೆ ಕಾರಣವಾದರೆ ಮಾತ್ರ ನಾನು ಸ್ಪಷ್ಟೀಕಣ ನೀಡುತ್ತೇನೆ. ಅನಗತ್ಯವಾಗಿ ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.  

'ಮಾಧ್ಯಮಗಳು ನನ್ನ ಜೀವನವನ್ನು ಚರ್ಚಿಸುವ ಮತ್ತು ಕೆಲವೊಮ್ಮೆ ತೀರಾ ವೈಯಕ್ತಿಕವಾಗಿ ಚರ್ಚೆ ಮಾಡುವ ನಡುವೆ ತೆಳುವಾದ ಗೆರೆ ಇದೆ. ಅಗೌರವ ಸಂಭವಿಸಿದಲ್ಲಿ, ಯಾವುದೇ ತಪ್ಪು ಕಲ್ಪನೆಗಳಿದ್ದರೆ ನಾನು ಸ್ಪಷ್ಟಪಡಿಸುತ್ತೇನೆ, ಅನಗತ್ಯವಾಗಿ ಸ್ಪಷ್ಟೀಕರಣ ನೀಡಲು ನಾನು ಹೋಗಲ್ಲ' ಎಂದು ಹೇಳಿದ್ದಾರೆ. 

ನಾನು ರಾಜಕಾರಣಿಯನ್ನ ಮದುವೆಯಾಗಲ್ಲ: ಮದುವೆ ವದಂತಿ ಬೆನ್ನಲ್ಲೇ ಪರಿಣೀತಿ ಚೋಪ್ರಾ ಹಳೆ ಸಂದರ್ಶನ ವೈರಲ್

ಪರಿಣೀತಿ ಮತ್ತು ರಾಘವ್ ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಇದು ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಲು ಕಾರಣವಾಗಿದೆ. ಈ ಬಗ್ಗೆ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸದಿದ್ದರೂ ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಇತ್ತೀಚಿಗಷ್ಟೆ ಪಾಪರಾಜಿಗಳು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪರಿಣೀತಿ ನಗುತ್ತಾ ಯಾವುದೇ ಪ್ರತಿಕ್ರಿಯೆ ನೀಡಿದೆ ಹಾಗೆ ಹೊರಟು ಹೋಗಿದ್ದರು. ಇದೀಗ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲೂ ಮದುವೆ ವಿಚಾರ ತಳ್ಳಿ ಹಾಕಿಲ್ಲ. 

ಪರಿಣೀತಿ 2009 ರಲ್ಲಿ ಪರಿಣೀತಿ, ಯಶ್ ರಾಜ್ ಫಿಲ್ಮ್ಸ್ ನ ಮಾರ್ಕೆಟಿಂಗ್ ವಿಭಾಗಕ್ಕೆ ಕೆಲಸಕ್ಕೆ ಸೇರಿದರು. ಬಳಿಕ ಅವರು ರಣ್‌ವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ನಟನೆಯ ರೊಮ್-ಕಾಮ್ ಲೇಡೀಸ್ ವರ್ಸಸ್ ರಿಕಿ ಬಹ್ಲ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡರು. ಅಲ್ಲಿಂದ ನಟನೆ ವೃತ್ತಿ ಜೀವನ ಪ್ರಾರಂಭಿಸಿದ ಪರಿಣಿತಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Parineeti weds Raghav: ಪರಿಣಿತಿ ಚೋಪ್ರಾ- ರಾಘವ್​ ಚಡ್ಡಾ ಎಂಗೇಜ್​ಮೆಂಟ್​ ಡೇಟ್​ ಫಿಕ್ಸ್​?

ಪರಿಣೀತಿ ಕೊನೆಯದಾಗಿ ಸೂರಜ್ ಬರ್ಜಾತ್ಯಾ ಅವರ ಅಮಿತಾಬ್ ಬಚ್ಚನ್ ಮತ್ತು ಅನುಪಮ್ ಖೇರ್ ಜೊತೆ ಊಂಚೈನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ನಟ ಅಕ್ಷಯ್ ಕುಮಾರ್ ಜೊತೆ ಕ್ಯಾಪ್ಸುಲ್ ಗಿಲ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಜೊತೆಗೆ ಮತ್ತೊಂದು ಸಿನಿಮಾದಲ್ಲೂ ನಟಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪರಿಣೀತಿ, ರಾಘವ್ ಜೊತೆ ಸದ್ಯದಲ್ಲೇ ಹಸಮೆಣೆ ಏರುವ ಸಾಧ್ಯತೆ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?