ಇದೊಂದು ವಿಡಿಯೋ ಗೇಮ್, ಮತ್ತೇನು ಇಲ್ಲ; ಶಾರುಖ್ 'ಪಠಾಣ್' ಸಿನಿಮಾ ಟೀಕಿಸಿದ ಪಾಕ್ ಮಂದಿ

Published : Mar 28, 2023, 06:05 PM IST
ಇದೊಂದು ವಿಡಿಯೋ ಗೇಮ್, ಮತ್ತೇನು ಇಲ್ಲ; ಶಾರುಖ್ 'ಪಠಾಣ್' ಸಿನಿಮಾ ಟೀಕಿಸಿದ ಪಾಕ್ ಮಂದಿ

ಸಾರಾಂಶ

ಇದೊಂದು ವಿಡಿಯೋ ಗೇಮ್, ಮತ್ತೇನು ಇಲ್ಲ ಎಂದು ಪಾಕಿಸ್ತಾನದ ಬರಹಗಾರ ಶಾರುಖ್ ಖಾನ್ 'ಪಠಾಣ್' ಸಿನಿಮಾವನ್ನು ಟೀಕಿಸಿದ್ದಾರೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಕ್ಸಸ್‌ನಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ತೆರೆಮೇಲೆ ಬಂದಿದ್ದು ದೊಡ್ಡ ಮಟ್ಟದ ಸಕ್ಸಸ್ ಗಳಿಸಿದ್ದಾರೆ. ಪಠಾಣ್ ಗೆಲುವು ಶಾರುಖ್ ಮಾತ್ರವಲ್ಲದೇ ಇಡೀ ಬಾಲಿವುಡ್‌ಗೂ ಮುಖ್ಯವಾಗಿತ್ತು. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ದೊಡ್ಡ ಬ್ರೇಕ್ ನೀಡಿದೆ. ಜನವರಿ 25ರಂದು ಪಠಾಣ್ ಸಿನಿಮಾ ರಿಲೀಸ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪಠಾಣ್ ಸೂಪರ್ ಸಕ್ಸಸ್ ಬಳಿಕ ಶಾರುಖ್ ದುಬಾರಿ ಕಾರು ಕೂಡ ಖರೀದಿ ಮಾಡಿದ್ದಾರೆ. ಈ ನಡುವೆ ಪಾಕ್ ಮಂದಿ ಶಾರುಖ್ ಪಠಾಣ್ ಸಿನಿಮಾವನ್ನು ಟೀಕಿಸುತ್ತಿದ್ದಾರೆ. 

ಪಾಕಿಸ್ತಾನಿ ನಟ-ಚಿತ್ರಕಥೆಗಾರ ಯಾಸಿರ್ ಹುಸೇನ್ ಪಠಾಣ್ ಸಿನಿಮಾದ ವಿಮರ್ಶೆ ಮಾಡಿದ್ದು ಇದೊಂದು ಕಥೆ ಇಲ್ಲದ ವಿಡಿಯೋ ಗೇಮ್ ಎಂದು ಜರಿದಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾ ವೀಕ್ಷಿಸಿದ ಯಾಸಿರ್, ಶಾರುಖ್ ಸಿನಿಮಾವನ್ನು ಟೀಕಿಸಿದ್ದಾರೆ. ಯಾಸಿರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ನೀವು ಫಸ್ಟ್ ಮಿಷನ್ ಇಂಪಾಸಿಬಲ್ ಅನ್ನು ನೋಡಿದ್ರೆ ಶಾರುಖ್ ಖಾನ್ ಅವರ ಪಠಾಣ್ ಕಥೆ ಹೆಚ್ಚು ಕಡಿಮೆ ವಿಡಿಯೋ ಗೇಮ್‌ನಂತ ಇದೆ. ಹೆಚ್ಚೇನು ಇಲ್ಲ' ಎಂದು ಹೇಳಿದ್ದಾರೆ. 

ಪಠಾಣ್ ಸಿನಿಮಾ ಮಾರ್ಚ್ 22ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಪಠಾಣ್‌ಗಿಂದ ಒಟಿಟಿಯಲ್ಲಿ ಬಂದ ಪಠಾಣ್ ನಲ್ಲಿ 5 ದೃಶ್ಯಗಳು ಹೆಚ್ಚಾಗಿ ಇದೆ. ಶಾರುಖ್ ಸಿನಿಮಾದಲ್ಲಿ ರಾ ಏಜೆಂಟ್ ಪಾತ್ರದಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ. 

ಪಠಾಣ್ ಸಕ್ಸಸ್ ಬಳಿಕ 10 ಕೋಟಿ ಮೌಲ್ಯದ ಕಾರು ಖರೀದಿಸಿದ ಶಾರುಖ್ ಖಾನ್

ಪಾಕ್‌ನ  ಯಾಸಿರ್ ಬಗ್ಗೆ  

ಹಮ್ ಟಿವಿಯಲ್ಲಿ ದಿ ಆಫ್ಟರ್ ಮೂನ್ ಶೋನ ನಿರೂಪಕರಾಗಿ ಯಾಸಿರ್ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಟಿವಿ ಮತ್ತು ರಂಗಭೂಮಿ ಕಲಾವಿದ ಕರಾಚಿ ಸೆ ಲಾಹೋರ್ (2015) ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ವಜಾಹತ್ ರೌಫ್ ನಿರ್ದೇಶನದ ಚಿತ್ರಕ್ಕೆ ಯಾಸಿರ್ ಕಥೆ ಬರೆದಿದ್ದಾರೆ. ಟಿವಿ ನಟ ಇಕ್ರಾ ಅಜೀಜ್ ಅವರನ್ನು ವಿವಾಹವಾದ ಯಾಸಿರ್ ಸದ್ಯ ಬಾಂಡಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

JAWAN: ಶಾರುಖ್​ಗಾಗಿ 16 ವರ್ಷದ ರೂಲ್ಸ್​ ಬ್ರೇಕ್​- ಬಿಕಿನಿಯಲ್ಲಿ ನಟಿ ನಯನತಾರಾ?

ಶಾರುಖ್ ಬಳಿ ಇರುವ ಸಿನಿಮಾಗಳು 

ಶಾರುಖ್ ಖಾನ್ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಂಕಿ ಮತ್ತು ಜವಾನ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ತಮಿಳು ನಿರ್ದೇಶಕ ಅಟ್ಲೀ ಕುಮಾರ್ ಸಾರಥ್ಯದಲ್ಲಿ ಜವಾನ್ ಸಿನಿಮಾ ಮೂಡಿ ಬರುತ್ತಿದೆ. ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಯನತಾರಾ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೌತ್ ಸಿನಿಮಾರಂಗದ ಖ್ಯಾತ ನಟ ವಿಜಯ್ ಸೇತುಪತಿ ಕೂಡ ನಟಿಸುತ್ತಿದ್ದಾರೆ. ಇನ್ನೂ ಡಂಕಿ ಸಿನಿಮಾಗೆ ರಾಜ್ ಕುಮಾರ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Charu Asopa: 'ಆಕೆಯನ್ನ ಬಿಟ್ಟು ಇರಲು ಆಗಲ್ಲ'..: ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಚಾರು!
K Bhagyaraj Kannada remakes list: ಕೆ. ಭಾಗ್ಯರಾಜ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆದ್ದಿರುವ ಕನ್ನಡದ ಹೀರೋಗಳು ಇವರೇ ನೋಡಿ; ಇದು ಆ ಚಿತ್ರಗಳ ಲಿಸ್ಟ್!‌