ಶೋಭಿತಾ ಜೊತೆ ಲಂಡನ್ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ನಟ ನಾಗಚೈತನ್ಯ; ಫೋಟೋ ವೈರಲ್

Published : Mar 28, 2023, 05:44 PM IST
ಶೋಭಿತಾ ಜೊತೆ ಲಂಡನ್ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ನಟ ನಾಗಚೈತನ್ಯ; ಫೋಟೋ ವೈರಲ್

ಸಾರಾಂಶ

ಶೋಭಿತಾ ಜೊತೆ ಲಂಡನ್ ಹೋಟೆಲ್‌ನಲ್ಲಿ ಡಿನ್ನರ್ ಮಾಡಿದ ನಟ ನಾಗಚೈತನ್ಯ ಫೋಟೋ ವೈರಲ್ ಸಾಮಾಜಿಕ ಜಾಲತಿಣದಲ್ಲಿ ವೈರಲ್ ಆಗಿದೆ.  

ಟಾಲಿವುಡ್ ಸ್ಟಾರ್ ನಾಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ,    ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಆದರೆ ಈ ಬಗ್ಗೆ ಕೇಳಿದ್ದಕ್ಕೆ ನಾಗಚೈತನ್ಯ ಮತ್ತು ಶೋಭಿತಾ ಇಬ್ಬರೂ ತಳ್ಳಿ ಹಾಕಿದ್ದರು. ಇದೀಗ ಇಬ್ಬರೂ ಲಂಡನ್ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. 

ಶೋಭಿತಾ ಜೊತೆ ಡಿನ್ನರ್‌ಗೆ ತೆರಳಿದ್ದ ನಾಗಚೈತನ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಇಬ್ಬರ ಡೇಟಿಂಗ್ ಸುದ್ದಿ ಕನ್ಫರ್ಮ್ ಎಂದು ಹೇಳುತ್ತಿದ್ದಾರೆ. ನಾಗಚೈತನ್ಯ ಮತ್ತು ಶೋಭಿತಾ ಇಬ್ಬರೂ ಲಂಡನ್‌ನಲ್ಲಿ ಡಿನ್ನರ್ ಎಂಜಾಯ್ ಮಾಡಿದ್ದಾರೆ. ಅಂದಹಾಗೆ ಇಬ್ಬರೂ ಸಿಕ್ಕಿಬೀಳಲು ಕಾರಣವಾಗಿದ್ದು ಹೋಟೆಲ್ ಬಾಣಸಿಗ ಸುರೇಂದರ್ ಮೋಹನ್ ಅವರು ಶೇರ್ ಮಾಡಿರುವ ಫೋಟೋದಲ್ಲಿ. ನಾಗಚೈತನ್ಯ ಜೊತೆ ಬಾಣಸಿಗ ಸುರೇಂದರ್ ಮೋಹನ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋದಲ್ಲಿ ಶೋಭಿತಾ ಕೂಡ ಸೆರೆಯಾಗಿದ್ದಾರೆ. ಈ ಫೋಟೋವನ್ನು ಸುರೇಂದರ್ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಅಂದಹಾಗೆ ಕಳೆದ ವರ್ಷ  ನವೆಂಬರ್ ನಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಲಂಡಲ್‌ನಲ್ಲಿರುವ ಫೋಟೋ ವೈರಲ್ ಆಗಿತ್ತು. ಆ ಫೋಟೋಗಳು ಡೇಟಿಂಗ್ ವದಂತಿಗೆ ಪುಷ್ಠಿ ನೀಡಿತ್ತು. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿತ್ತು. ಆದರೆ ಇದು ಫೇಕ್ ಎನ್ನುವ ಮಾತು ಕೇಳಿಬಂದಿತ್ತು. ಆದರೀಗ ಇಬ್ಬರೂ ಲಂಡನ್ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿರುವುದು ಅಚ್ಚರಿ ಅಚ್ಚರಿ ಮೂಡಿಸಿದೆ. 

ಡೇಟಿಂಗ್ ವದಂತಿ ಬೆನ್ನಲ್ಲೇ ಶೋಭಿತಾ ಜೊತೆ ನಾಗ ಚೈತನ್ಯ ಫೋಟೋ ವೈರಲ್; ಕನ್ಫರ್ಮ್ ಎಂದ ನೆಟ್ಟಿಗರು

ಈ  ಹಿಂದೆ ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಡೇಟಿಂಗ್ ರೂಮರ್‌ಗೆ ಪ್ರತಿಕ್ರಿಯೆ ನೀಡಿದ್ದರು. ನಿರೂಪಕರು ಶೋಭಿತಾ ಬಗ್ಗೆ ಕೇಳಿದ ಪ್ರಶ್ನೆಗೆ ನಾಗಚೈತನ್ಯ ಜೋರಾಗಿ ನಗಲು ಪ್ರಾರಂಭಿಸಿದರು. 'ಇದಕ್ಕೆ ನನ್ನ ನಗುವೆ ಉತ್ತರ' ಎಂದು ಹೇಳಿದ್ದರು. ಶೋಭಿತಾ ಕೂಡ ಪರೋಕ್ಷವಾಗಿ ಡೇಟಿಂಗ್ ವದಂತಿಯನ್ನು ತಳ್ಳಿ ಹಾಕಿದ್ದರು. 

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಹಬ್ಬಿಸಿದವರಿಗೆ ಶೋಭಿತಾ ಹೀಗ್ ಹೇಳೋದಾ.!

ನಾಗಚೈತನ್ಯ ಸದ್ಯ ಕಸ್ಟಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ನಾಗಚೈತನ್ಯ ಬಾಲಿವುಡ್‌ನ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದು ನಾಗಚೈತನ್ಯ ನಟನೆಯ ಮೊದಲ ಹಿಂದಿ ಸಿನಿಮಾವಾಗಿತ್ತು. ಆಮೀರ್ ಖಾನ್ ಜೊತೆ ನಾಗಚೈತನ್ಯ ತೆರೆಹಂಚಿ ಕೊಂಡಿದ್ದರು. ಸದ್ಯ ಕಸ್ಟಡಿ ಮೂಲಕ ಪೊಲೀಸ್ ಆಧಿಕಾರಿಯಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ನಾಗಚೈತನ್ಯ. 

  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್