ಪಾಕ್​ನಲ್ಲಿ ಎಲ್ಲವೂ ಚೆನ್ನಾಗಿದೆ, ಕಂಗನಾಗೆ ಕಪಾಳಮೋಕ್ಷ ಮಾಡುವೆ ಎಂದ ಲಾಲಿವುಡ್​ ನಟಿ

By Suvarna News  |  First Published Sep 8, 2023, 4:50 PM IST

ಪಾಕಿಸ್ತಾನದ ನಟಿ ನೌಶಿನ್​ ಷಾ ಅವರು ಕಂಗನಾ ರಣಾವತ್​ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಸಾಧ್ಯವಾದರೆ ಆಕೆಯ ಕಪಾಳ ಮೋಕ್ಷ ಮಾಡುವೆ, ಆಕೆಯೊಬ್ಬ ತಿಳಿಗೇಡಿ ಹೆಂಗಸು ಎಂದಿದ್ದಾರೆ. 
 


ಕಾಂಟ್ರವರ್ಸಿ ಕ್ವೀನ್​ ಎಂದೇ ಪ್ರಸಿದ್ಧರಾದವರು ನಟಿ ಕಂಗನಾ ರಣಾವತ್ (Kangana Ranaut). ಮನಸ್ಸಿಗೆ ಕಂಡದ್ದನ್ನು ನೇರಾನೇರ ಹೇಳಿ ಕಾಂಟ್ರವರ್ಸಿಗೆ ಸಿಲುಕುವುದರಲ್ಲಿ ಇವರದ್ದು ಎತ್ತಿದ ಕೈ. ಅದರಲ್ಲಿಯೂ ದೇಶ, ಧರ್ಮದ ವಿಚಾರದಲ್ಲಿ ಅವರು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುತ್ತಲೇ ವಿವಾದಕ್ಕೆ ಈಡಾಗುತ್ತಾರೆ.  ಪಠಾಣ್​ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪಾಕಿಸ್ತಾನದ ಕುರಿತು ಮಾತನಾಡಿ ಬಹಳ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು ಕಂಗನಾ.  ಪಠಾಣ್​ ಯಶಸ್ವಿಯಾಯಿತು ಎಂದರೆ ಇದು ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನ  ಹಾಗೂ ಐಎಸ್​ಐ (ISI) ಯಶಸ್ವಿಯಾಗಿ ಚಾಲನೆಯಲ್ಲಿದೆ ಎಂದರ್ಥ ಎಂದಿದ್ದರು. ಇದಕ್ಕೆ  ಕಾರಣ ನೀಡಿದ್ದ ಅವರು, ಪಠಾಣ್​  ಚಿತ್ರದಲ್ಲಿನ ನಾಯಕಿ ಐಎಸ್​ಐನ ಏಜೆಂಟ್​ ಎಂದಿದ್ದರು. ಅದಾದ ಬಳಿಕ  ಪಾಕಿಸ್ತಾನದಲ್ಲಿ (Pakistan) ಈ ಚಿತ್ರವನ್ನು ಅಕ್ರಮವಾಗಿ ನೋಡುತ್ತಿರುವ ಸುದ್ದಿ ಹೊರಬೀಳುತ್ತಲೇ ತಮ್ಮ ವಿರುದ್ಧ ಕಿಡಿ ಕಾರಿದವರಿಗೆ ಮಾತಿನಿಂದಲೇ ತಿವಿದಿದ್ದರು ನಟಿ.  ಅದಾದ ಬಳಿಕ ಪಾಕಿಸ್ತಾನದ ಸೇನೆಯ ಕುರಿತೂ ಮಾತನಾಡಿದ್ದರು. ಅಲ್ಲಿ ಜನರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದೂ ಹೇಳಿದ್ದರು.

ಇದೀಗ ಇವರ ವಿರುದ್ಧ ಪಾಕಿಸ್ತಾನದ ನಟಿಯೊಬ್ಬರು (Lollywood) ತಿರುಗಿ ಬಿದ್ದಿದ್ದಾರೆ. ತಮಗೇನಾದರೂ ಅವಕಾಶ  ಸಿಕ್ಕರೆ ಕಂಗನಾ ಕೆನ್ನೆಗೆ ಹೊಡೆಯುತ್ತೇನೆ ಎಂದು ಹೇಳಿದ್ದಾರೆ ಈ ನಟಿ. ಅಷ್ಟಕ್ಕೂ ಇಂಥದ್ದೊಂದು ಹೇಳಿಕೆ ನೀಡಿರುವ ನಟಿಯೆಂದರೆ, ಪಾಕಿಸ್ತಾನದ  ನೌಶೀನ್ ಷಾ (Nausheen Shah). ಕಂಗನಾಗೆ ಇತರರ ಬಗ್ಗೆ ಗೌರವವಿಲ್ಲ. ಆಕೆಯೊಬ್ಬ ತಿಳಿಗೇಡಿ ಹೆಂಗಸು. ಆಕೆಗೆ ಹೇಗೆ ಮಾತನಾಡಬೇಕು ಎಂಬ ಸಾಮಾನ್ಯ ಅರಿವೂ ಇಲ್ಲ. ಹಾಗಾಗಿ ಆಕೆ ನನ್ನ ಕೈಗೆ ಸಿಕ್ಕರೆ ಕಪಾಳಮೋಕ್ಷ ಮಾಡಬೇಕಿದೆ ಎಂದು ನೌಶಿನ್‌ ಷಾ ಹೇಳಿದ್ದಾರೆ. ಪಾಕಿಸ್ತಾನದ ಹದ್ ಕರ್ ದಿ ಚಾಟ್ ಶೋನಲ್ಲಿ ಭಾಗವಹಿಸಿದ್ದ ವೇಳೆ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

Tap to resize

Latest Videos

Pathaan: ಪಾಕಿಗಳಿಗೂ ಇಷ್ಟವಾಯ್ತು ಪಠಾಣ್! ಕಂಗನಾ ಮಾತು ನಿಜವಾಯ್ತು ಅಂತಿದ್ದಾರೆ ನೆಟ್ಟಿಗರು
 
ಅಷ್ಟಕ್ಕೂ ಕಂಗನಾ ವಿರುದ್ಧ ಈ ನಟಿಗೆ ಇಷ್ಟೊಂದು ಕೋಪ ಏಕೆ ಎಂದರೆ ಮೊದಲೇ ಹೇಳಿದಂತೆ, ನಟಿ ಕಂಗನಾ ನೇರಾನೇರ ಮಾತನಾಡುವ ನಟಿ. ಪಾಕಿಸ್ತಾನದ ಕುತಂತ್ರದ ಬಗ್ಗೆ ಇದಾಗಲೇ ಕಂಗನಾ ಸಾಕಷ್ಟು ಬಾರಿ ಮಾತನಾಡಿದ್ದಾರೆ. ನಮ್ಮ ದೇಶದಲ್ಲಿಯೇ  ಇದ್ದುಕೊಂಡು ಪಾಕಿಗಳ ಪರವಾಗಿ ಮಾತನಾಡುವವರ ಬಗ್ಗೆಯೂ ಕಂಗನಾ ಕಿಡಿ ಕಾರಿದ್ದಾರೆ. ಇದು ಪಾಕಿಸ್ತಾನದ ನಟಿ ನೌಶಿನ್‌ ಷಾಗೆ ಸಹಿಸಿಕೊಳ್ಳಲು ಆಗಲಿಲ್ಲ. ಇದೇ ಕಾರಣಕ್ಕೆ ಈಕೆ ಕಂಗನಾರಿಗೆ ಕಪಾಳಮೋಕ್ಷ ಮಾಡುವ ಬಗ್ಗೆ ಮಾತನಾಡಿದ್ದು, ಅತ್ಯಂತ ಕೀಳು ಮಟ್ಟದ ಪದಗಳನ್ನೂ ಬಳಸಿದ್ದಾರೆ. 
 
'ಪಾಕಿಸ್ತಾನ ನನ್ನ ದೇಶ.  ಪಾಕಿಸ್ತಾನದ (Pakistan) ಸೇನೆಯ ಬಗ್ಗೆ ಅವಳು ತುಂಬಾ ಕೆಟ್ಟದಾಗಿ ಹೇಳಿದ್ದಾಳೆ. ಹೀಗೆ ಹೇಳುವ ಅವಳ ದಿಟ್ಟತನಕ್ಕೆ ಮೊದಲಿಗೆ ಸೆಲ್ಯೂಟ್ ಮಾಡುತ್ತೇನೆ. ಆದರೆ ಈಕೆ ತಿಳಿಗೇಡಿ ಹೆಂಗಸು. ಅವಳಿಗೆ ಸ್ವಲ್ಪವೂ ಜ್ಞಾನವಿಲ್ಲ. ಅಂಥವರು ಬೇರೊಂದು ದೇಶದ ಬಗ್ಗೆ  ಮಾತನಾಡುತ್ತಾಳೆ, ಮೊದಲು ನಿನ್ನ  ಸ್ವಂತ ದೇಶದ ಮೇಲೆ ಕೇಂದ್ರೀಕರಿಸು,  ನಿನ್ನ ನಟನೆ, ನಿನ್ನ ನಿರ್ದೇಶನದ ಮೇಲೆ ಕೇಂದ್ರೀಕರಿಸು. ಇದನ್ನು ಹೊರತುಪಡಿಸಿ,  ನಿನ್ನ ವಿವಾದಗಳು ಮತ್ತು ಮಾಜಿ ಗೆಳೆಯರ ಮೇಲೆ ಕೇಂದ್ರೀಕರಿಸು, ಅದೆಲ್ಲಾ ಬಿಟ್ಟು ಪಾಕಿಸ್ತಾನದ ಸುದ್ದಿಗೆ ಬರಬೇಡ' ಎಂದಿದ್ದಾರೆ  ನೌಶಿನ್​. ನಂತರ ಪಾಕಿಸ್ತಾನದ ಬಗ್ಗೆ ಹಾಡಿ ಹೊಗಳಿಕೊಂಡಿರುವ ನಟಿ,  'ಪಾಕಿಸ್ತಾನದಲ್ಲಿ ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ನಿನಗೆ ಹೇಗೆ ಗೊತ್ತು? ನಮ್ಮ ಏಜೆನ್ಸಿಗಳ ಬಗ್ಗೆ ನಿಮಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದ್ದಾರೆ.  ಸೇನೆ ನಮ್ಮ ದೇಶದದ್ದು, ಅವರು ಈ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲ. ಅವು ರಹಸ್ಯಗಳು, ಅಲ್ಲವೇ ಎಂದಿದ್ದಾರೆ. 

ಕಂಗನಾರ ಚಂದ್ರಮುಖಿ 2 ಟ್ರೈಲರ್ ರಿಲೀಸ್​: ಜವಾನ್​ಗೆ ಕೊಡಲಿದೆಯೇ ಠಕ್ಕರ್​?
 

click me!