ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರ ರಿಸೆಪ್ಷನ್ ಕಾರ್ಡ್ ವೈರಲ್ ಆಗಿದೆ. ಆದರೆ ಪ್ರೀತಿಯ ಬಗ್ಗೆ ಮಾತ್ರ ರಾಘವ್ ಮೌನವಾಗಿದ್ದಾರೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದು, ಅವರ ಮದುವೆಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದರು. ಎಂಗೇಜ್ಮೆಂಟ್ಗೂ ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ, ಜೋಡಿ ಮಾತ್ರ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ನಂತರ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದಾಗ ಸುದ್ದಿ ಮತ್ತಷ್ಟು ಹರಡಿತ್ತು. ಕೊನೆಗೆ ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜೀವ್ ಅರೋರಾ ಟ್ವೀಟ್ ಮಾಡಿ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದರೂ ಜೋಡಿ ಮಾತ್ರ ಮೌನ ತಾಳಿತ್ತು. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು.
ಇದೀಗ ಈ ಜೋಡಿ ಮದುವೆಯ ಡೇಟ್ ಕೊನೆಗೂ ಅನೌನ್ಸ್ ಆಗಿದೆ. ಸೆಪ್ಟೆಂಬರ್ 23 ಮತ್ತು 24 ರಂದು ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. 30ನೇ ತಾರೀಖಿನಂದು ತಾಜ್ ಚಂಡೀಗಢದಲ್ಲಿ ರಿಸೆಪ್ಷನ್ ನಡೆಯಲಿದ್ದು, ಅದರ invitation card ವೈರಲ್ ಆಗಿದೆ. ಸರೋವರದ ಮೇಲೆ ನಿರ್ಮಿಸಲಾದ ಐಷಾರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆಯಲಿದೆ. ಈ ಹೋಟೆಲ್ನ ದಿನದ ಬಾಡಿಗೆ ಗರಿಷ್ಠ 10 ಲಕ್ಷದವರೆಗೆ ಇದೆ. ಈ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ. ಪರಿಣಿತಿ ಚೋಪ್ರಾ ಅವರ ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ವಿವಾಹದ ಭಾಗವಾಗಲಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಅದ್ದೂರಿ ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಕೌಂಟರ್ ಭಗವಂತ್ ಮಾನ್ ಮತ್ತು ಇತರರು ಭಾಗವಹಿಸುವ ಸಾಧ್ಯತೆ ಇದೆ.
ಸರೋವರದ ಮೇಲಿನ ಐಷಾರಾಮಿ ಹೋಟೆಲ್‌ನಲ್ಲಿ ನಟಿ ಪರಿಣಿತಿ- ರಾಘವ್ ಮದ್ವೆಗೆ ಡೇಟ್ ಫಿಕ್ಸ್
ಮದುವೆಯ ಡೇಟ್ ಅನೌನ್ಸ್ ಆಗುತ್ತದೆ. ರಾಘವ್ ಅವರು ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಜೊತೆಗೆ ಇದರ ಬಗ್ಗೆ ಮಾತನಾಡಿದ್ದಾರೆ. ನೀವಿಬ್ಬರೂ ಭೇಟಿಯಾದದ್ದು ಹೇಗೆ ಎಂಬ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದ ರಾಘವ್, ನಾವು ಹೇಗೆಯೇ ಭೇಟಿಯಾಗಿದ್ದರೂ, ಅದು ತುಂಬಾ ಮಾಂತ್ರಿಕ ಸಮಯವಾಗಿತ್ತು ಎಂದಷ್ಟೇ ಹೇಳಿದ್ದಾರೆ. ಪ್ರೀತಿ ಶುರುವಾಗಿದ್ದು ಹೇಗೆ ಎಂಬ ಪ್ರಶ್ನೆಗೆ ಮೌನವಾಗಿದ್ದಾರೆ. ನನಗೆ ಪರಿಣಿತಿಯನ್ನು ನೀಡಿದ್ದಕ್ಕಾಗಿ ನಾನು ಪ್ರತಿದಿನ ದೇವರಿಗೆ ಧನ್ಯವಾದ ಹೇಳುತ್ತೇನೆ. ಇದು ನನಗೆ ಸಿಕ್ಕಿರುವ ದೊಡ್ಡ ಆಶೀರ್ವಾದ. ನಾನು ಅವಳನ್ನು ನನ್ನ ಸಂಗಾತಿಯಾಗಿ ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಹೇಳಿದಂತೆ, ಅವಳನ್ನು ನನಗೆ ಕೊಟ್ಟಿದ್ದಕ್ಕಾಗಿ ನಾನು ಪ್ರತಿದಿನ ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಇಡೀ ದೇಶ ನಿಮ್ಮ ಮದುವೆಯನ್ನು ಎದುರು ನೋಡುತ್ತಿದೆ ಎಂದು ಯೂಟ್ಯೂಬರ್ ಹೇಳಿದಾಗ, ಅದೇನೋ ನನಗೆ ಗೊತ್ತಿಲ್ಲ. ಆದರೆ ನಾನು ದೇಶಕ್ಕಿಂತ ಹೆಚ್ಚು ಸಂತೋಷವಾಗಿದ್ದೇನೆ ಎಂದಿದ್ದಾರೆ. ಅಂದಹಾಗೆ ನಟಿ (Parineeti Chopra), ಈ ಮೊದಲು ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದಿದ್ದರು. ಅದರ ವಿಡಿಯೋ ಈಚೆಗೆ ಸಕತ್ ವೈರಲ್ ಆಗಿತ್ತು. ಸಿನಿಮಾವೊಂದರ ಪ್ರಚಾರದ ಸಂದರ್ಭದಲ್ಲಿ ಪತ್ರಕರ್ತರು ಮದುವೆಯ ಕುರಿತು ಕೇಳಿದ್ದ ಪ್ರಶ್ನೆಗೆ ನಟಿ ಪರಿಣಿತಿ, ಒಬ್ಬ ರಾಜಕಾರಣಿ ನನ್ನ ಗಂಡನಾಗಲು ಸಾಧ್ಯವಿಲ್ಲ. ಅದು ನನ್ನ ಮೊದಲ ಆಯ್ಕೆಯಾಗುವುದಿಲ್ಲ ಎಂದಿದ್ದರು. ನಾನು ರಾಜಕಾರಣಿಯನ್ನು ಮದುವೆಯಾಗಲು ಬಯಸುವುದಿಲ್ಲ. ಹಲವು ಉತ್ತಮ ಆಯ್ಕೆಗಳು ಇರುವಾಗ ರಾಜಕಾರಣಿಯನ್ನು ಯಾರು ಮದುವೆಯಾಗುತ್ತಾರೆ ಎಂದಿದ್ದರು. ಸ್ವಯಂ ನಿರ್ಮಿತ ಪುರುಷನನ್ನು ಜೀವನ ಸಂಗಾತಿಯನ್ನಾಗಿ ಬಯಸುತ್ತೇನೆ. ನಾನು ಸ್ವಾಭಿಮಾನ ಹೊಂದಿರುವ, ತಮ್ಮನ್ನು ತಾವು ರೂಪಿಸಿಕೊಂಡ ಪುರುಷರನ್ನು ಇಷ್ಟಪಡುತ್ತೇನೆ. ರಾಜಕಾರಣಿ ನನ್ನ ಆಯ್ಕೆಯಾಗಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಮದುವೆ ಸ್ವರ್ಗದಲ್ಲಿಯೇ ಆಗಿರುತ್ತದೆ ಎನ್ನುವ ಮಾತಿನಂತೆ ಈಗ ರಾಜಕಾರಣಿಗೇ ನಟಿ ಒಲಿದಿದ್ದಾರೆ.
ಮಾಲೆ ಧರಿಸಿ ಮಹಾಕಾಲ್ ದೇಗುಲದಲ್ಲಿ ಮಂತ್ರಘೋಷಗಳ ನಡುವೆ ಪರಿಣಿತಿ-ರಾಘವ್ ಜೋಡಿ!